ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022: ಲೈವ್ ವೀಕ್ಷಣೆ ಹೇಗೆ?..ನಿರೀಕ್ಷೆಗಳೆನು?
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಬಹುನಿರೀಕ್ಷಿತ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022' (Samsung Galaxy Unpacked 2022) ಕಾರ್ಯಕ್ರಮವು ಇದೇ (ನಾಳೆ) ಫೆಬ್ರುವರಿ 9 ರಂದು ಭಾರತೀಯ ಕಾಲಮಾನ ಸಂಜೆ 8:30 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ ನೋಟ್ 22 ಸ್ಮಾರ್ಟ್‌ಫೋನ್ ಸರಣಿ ಜೊತೆಗೆ ಕೆಲವು ಇತರೆ ಉತ್ಪನ್ನಗಳನ್ನು ಅನಾವರಣ ಮಾಡುವ ನಿರೀಕ್ಷೆ ಇದೆ.

ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ ನೋಟ್ 22 ಸರಣಿಯನ್ನು ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022 ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದೆ. ಇನ್ನು ಈ ಕಾರ್ಯಕ್ರಮವು ಫೆ. 9 ರಂದು ಸಂಜೆ 8:30 ಗಂಟೆಗೆ ನಡೆಯಲಿದೆ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲು ಸ್ಯಾಮ್‌ಸಂಗ್ ತನ್ನ ವರ್ಚುವಲ್ ಸ್ಟ್ರೀಮ್ ಅನ್ನು (ಕಾರ್ಯಕ್ರಮ ಅಲ್ಲ) ಪ್ರಾರಂಭಿಸಬಹುದು. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022 ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು ಮತ್ತು ಲೈವ್ ಈವೆಂಟ್ ವೀಕ್ಷಣೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022 ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ
ಫೆಬ್ರವರಿ 9 ರಂದು ಸ್ಯಾಮ್‌ಸಂಗ್ ಅಧಿಕೃತವಾಗಿ ಈವೆಂಟ್ ಸ್ಟ್ರೀಮ್ ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರನ್ ಮಾಡುತ್ತದೆ. ಆದಾಗ್ಯೂ, ಸ್ಯಾಮ್‌ಸಂಗ್ ಕಂಪನಿಯು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈವೆಂಟ್ ಅನ್ನು ವೀಕ್ಷಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಈ ಬಗ್ಗೆ ಸಂಸ್ಥೆಯು ಆನ್‌ಲೈನ್‌ನಲ್ಲಿ ವೀಕ್ಷಿಸಲು ಕ್ಯಾಲೆಂಡರ್ ಆಹ್ವಾನವನ್ನು ಹಂಚಿಕೊಂಡಿದೆ.

ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022 : ಏನನ್ನು ನಿರೀಕ್ಷಿಸಬಹುದು?
ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2022 ಕಾರ್ಯಕ್ರಮವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು Exynos 2200 SoC ಪ್ರೊಸೆಸರ್ ಯೊಂದಿಗೆ ಬಿಡುಗಡೆ ಮಾಡುತ್ತದೆ. ಈ ಸರಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ S22, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಮಾದರಿಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಸರಣಿ ಅನಾವರಣ ಆಗಲಿದ್ದು, ಗ್ಯಾಲಕ್ಸಿ ಟ್ಯಾಬ್ S8, ಗ್ಯಾಲಕ್ಸಿ ಟ್ಯಾಬ್ S8 ಪ್ಲಸ್ ಹಾಗೂ ಗ್ಯಾಲಕ್ಸಿ ಟ್ಯಾಬ್ S8 ಅಲ್ಟ್ರಾ ಮಾದರಿಗಳನ್ನು ಹೊಂದಿರುವ ನಿರೀಕ್ಷೆಗಳಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್ 6.1 ಇಂಚಿನ 1080 x 2340 AMOLED ಪರದೆಯನ್ನು 120Hz ರಿಫ್ರೆಶ್ ರೇಟ್, ಗ್ಲಾಸ್ ಬ್ಯಾಕ್ ಇರಲಿದೆ. ಇನ್ನು ಈ ಫೋನ್ 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ, 12 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್, ಮತ್ತು 10 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರಲಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಸ್ಮಾರ್ಟ್‌ಫೋನ್ ಬಹುತೇಕ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಗೆ ಹೋಲುತ್ತದೆ. ಆದರೆ ಗ್ಯಾಲಕ್ಸಿ S22 ಪ್ಲಸ್ ಫೋನ್ 6.6 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಜೊತೆಗೆ 4,500mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಯೊಂದಿಗೆ ವೇಗವಾದ 45W ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ.
ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ ಬಾಗಿದ 6.8 ಇಂಚಿನ ಸ್ಕ್ರೀನ್ ಹೊಂದಿರುವ ಸಾಧ್ಯತೆಗಳು ಇವೆ. ಇನ್ನು ಈ ಫೋನಿನ ಸ್ಕ್ರೀನ್ 1440 x 3080 AMOLED ಪರದೆಯನ್ನು ಹೊಂದಿರಲಿದೆ. ಜೊತೆಗೆ 108 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ, 12 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಒನ್, 10 ಮೆಗಾ ಪಿಕ್ಸಲ್ ಟೆಲಿಫೋಟೋ 3 ಮತ್ತು 10 ಮೆಗಾ ಪಿಕ್ಸಲ್ ಪೆರಿಸ್ಕೋಪ್ ಒಂದು ಹೊಂದಿರುವ ಸಾಧ್ಯತೆಗಳಿವೆ.


Click it and Unblock the Notifications








