Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ 2024 ಕಾರ್ಯಕ್ರಮ ಯಾವಾಗ?..ನಿರೀಕ್ಷೆಗಳು ಏನು?

ಸ್ಯಾಮ್‌ಸಂಗ್‌ ಸಂಸ್ಥೆಯ ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ ಈವೆಂಟ್‌ (Samsung Galaxy Unpacked 2024) ಇದೇ ಜುಲೈ 10 ರಂದು ಪ್ರಾರಂಭವಾಗಲಿದೆ ಎಂದು ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆ. ಅಂದಹಾಗೆ ಈ ಬಾರಿಯ ಕಾರ್ಯಕ್ರಮ ಪ್ಯಾರಿಸ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಕಂಪನಿಯ ಸ್ಯಾಮ್‌ಸಂಗ್‌ ಅನ್‌ಪ್ಯಾಕ್ಡ್‌ ಈವೆಂಟ್‌ 2024 ಕಾರ್ಯಕ್ರಮವು ಜುಲೈ 10 ರಂದು ವರದಿಗಳಾಗಿವೆ. ಇನ್ನು ಈ ಬಹುನಿರೀಕ್ಷಿತ ಕಾರ್ಯಕ್ರಮದಲ್ಲಿ ಫೋಲ್ಡೆಬಲ್‌ ಫೋನ್‌ಗಳು, ಹೊಸ ವಾಚ್‌ಗಳು, ಗ್ಯಾಲಕ್ಸಿ ರಿಂಗ್‌ ಸೇರಿದಂತೆ ಮತ್ತಷ್ಟು ಕುತೂಹಲಕಾರಿ ಉತ್ಪನ್ನಗಳು ಅನಾವರಣ ಆಗುವ ನಿರೀಕ್ಷೆಗಳು ಹೆಚ್ಚಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ 2024 ಕಾರ್ಯಕ್ರಮ ಯಾವಾಗ?

ಸ್ಯಾಮ್‌ಸಂಗ್‌ ಕಂಪನಿಯ ಈ ಈವೆಂಟ್‌ನಲ್ಲಿ ಹೊಸ ಗ್ಯಾಲಕ್ಸಿ Z ಫೋಲ್ಡ್‌ 6 ಮತ್ತು Z ಫ್ಲಿಪ್‌ 6 ಫೋಲ್ಡೆಬಲ್‌ ಮಾದರಿಯ ಫೋನ್‌ಗಳು ಲಾಂಚ್‌ ಆಗಲಿವೆ. ಅಲ್ಲದೇ ಹೊಸ ಗ್ಯಾಲಕ್ಸಿ ವಾಚ್‌ 7 ಸರಣಿಗಳು ಮತ್ತು ಬಹು ನಿರೀಕ್ಷಿತ ಗ್ಯಾಲಕ್ಸಿ ರಿಂಗ್‌ ಡಿವೈಸ್‌ ಅನಾವರಣಕ್ಕೆ ಈ ಕಾರ್ಯಕ್ರಮ ವೇದಿಕೆ ಆಗಲಿದೆ. ಹಾಗಾದರೇ ಈ ಕಾರ್ಯಕ್ರಮದಲ್ಲಿ ಯಾವೆಲ್ಲಾ ಡಿವೈಸ್‌ಗಳ ಲಾಂಚ್‌ ಆಗಲಿವೆ? ಅವುಗಳ ನಿರೀಕ್ಷಿತ ಫೀಚರ್ಸ್‌ ಏನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7 ಕ್ಲಾಸಿಕ್‌, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7 ಪ್ರೊ ಮತ್ತು ಹೊಸ ಆವೃತ್ತಿಯನ್ನು ನಿರೀಕ್ಷಿಸುತ್ತಿದ್ದೇವೆ. ಈ ಹೊಸ ಮಾದರಿಯನ್ನು ಗ್ಯಾಲಕ್ಸಿ ವಾಚ್ ಫ್ಯಾನ್ ಆವೃತ್ತಿ (FE) ಅಥವಾ ಗ್ಯಾಲಕ್ಸಿ ವಾಚ್ 4 (2024) ಎಂದು ನಾಮಕರಣ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7 ಸರಣಿಯು 3nm ಚಿಪ್‌ನ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಗ್ಯಾಲಕ್ಸಿ ವಾಚ್‌ 6 ಸರಣಿಯಲ್ಲಿನ ಚಿಪ್‌ಗಿಂತ ಶೇ 50% ಹೆಚ್ಚು ಶಕ್ತಿಯ ದಕ್ಷತೆಯನ್ನು ಒದಗಿಸಲಿದೆ. ಹಾಗೆಯೇ ಸ್ಟೋರೇಜ್‌ ಸಾಮರ್ಥ್ಯವನ್ನು 32GB ಗೆ ಅಪ್‌ಗ್ರೇಡ್ ಮಾಡಬಹುದು ಎನ್ನಲಾಗಿದೆ ಜೊತೆಗೆ ಇದು ವೈ ಫೈ ಓನ್ಲಿ ಮತ್ತು ವೈ ಫೈ+ eSIM (ಸೆಲ್ಯುಲಾರ್) ಆವೃತ್ತಿಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 6 ಹಾಗೂ ಗ್ಯಾಲಕ್ಸಿ Z ಫೋಲ್ಡ್ 6

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 6 ಫೋನ್‌ ಲೈಟ್‌ ಬ್ಲೂ, ಲೈಟ್‌ ಗ್ರೀನ್, ಸಿಲ್ವರ್ ಶ್ಯಾಡೋ, ಯಲ್ಲೋ, ಬ್ಲ್ಯಾಕ್‌, ಪೀಚ್ ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 6 ವಿಶಾಲ ಕವರ್ ಡಿಸ್‌ಪ್ಲೇ, ಅಪ್‌ಡೇಟ್‌ ಹಿಂಜ್ ಮತ್ತು ಇತರ ನವೀಕರಣಗಳನ್ನು ಪಡೆದಿರಲಿದೆ.

ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 6 ಹಾಗೂ ಗ್ಯಾಲಕ್ಸಿ Z ಫೋಲ್ಡ್ 6 ಫೋನ್‌ಗಳು ಎರಡೂ ಒಂದೇ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಲಾಂಚ್‌ ಆಗವ ನಿರೀಕ್ಷೆಗಳು ಹೆಚ್ಚಿವೆ. ಇದಲ್ಲದೇ ಸಾಮಾನ್ಯ Z ಫೋಲ್ಡಬಲ್‌ ಫೋನ್‌ಗಳ ಜೊತೆಗೆ ಎರಡು ಹೊಸ ಫ್ಯಾನ್ ಆವೃತ್ತಿ ಮಾದರಿಗಳನ್ನು (FE ಸರಣಿ) ಸಹ ನಿರೀಕ್ಷಿಸಲಾಗುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 6 FE ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 2 SoC ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಗ್ಯಾಲಕ್ಸಿ Z ಫೋಲ್ಡ್‌ 6 FE ಸ್ನಾಪ್‌ಡ್ರಾಗನ್ ಮತ್ತು Exynos (Exynos 2300 ಅಥವಾ 2200) ಚಿಪ್‌ಸೆಟ್‌ ಪ್ರೊಸೆಸರ್‌ಗಳಿಂದ ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3

ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3 (Galaxy Buds 3) (SM-R630) ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ (SM-R530) ಡಿವೈಸ್‌ಗಳನ್ನು ಸಹ ಅನಾವರಣ ಮಾಡುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಅಲ್ಲದೇ ಗ್ಯಾಲಕ್ಸಿ AI ಫೀಚರ್ಸ್‌ಗಳ ಅನಾವರಣ ಸಹ ಮಾಡಲಿದೆ ಎನ್ನಲಾಗಿದೆ.

Best Mobiles in India

English summary
Samsung Galaxy Unpacked Event 2024 tipped for July 10. what to expect and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+