Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ಜುಲೈನಲ್ಲಿ ಲಾಂಚ್ ಆಗುವ ಸಾಧ್ಯತೆ! ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಂತೆ (Samsung Galaxy Smartphone) ಸ್ಮಾರ್ಟ್‌ವಾಚ್ ಸಹ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್‌ಸಂಗ್ ತನ್ನ ಮುಂದಿನ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್‌ಗೆ ಸಜ್ಜಾಗಿದ್ದು, ಇಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 (Samsung Galaxy Watch 7) ಅನ್ನು ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ಜುಲೈನಲ್ಲಿ ಲಾಂಚ್ ಆಗುವ ಸಾಧ್ಯತೆ ಇದ್ದು, ಈ ವಾಚ್ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಲೀಕ್ ಆಗಿವೆ. ಈ ಸಮಾರಂಭದಲ್ಲಿ, ದಕ್ಷಿಣ ಕೊರಿಯಾದ ಟೆಕ್ ದೈತ್ಯ ತನ್ನ ಇತ್ತೀಚಿನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಸಹ ಅನಾವರಣಗೊಳಿಸಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ಈ ಮುಂಬರುವ ವಾಚ್‌ನ ಕೆಲವು ಲೀಕ್ ಫೀಚರ್ಸ್ ಏನು ಅನ್ನೋ ಮಾಹಿತಿ ಬಗ್ಗೆ ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7: ಸ್ಯಾಮ್‌ಸಂಗ್ ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ಬ್ಲೂಟೂತ್ SIG ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರಮಾಣೀಕರಣ ಪಟ್ಟಿಯ ಪ್ರಕಾರ, ಗ್ಯಾಲಕ್ಸಿ ವಾಚ್ 7 ಹಿಂದಿನ ವರ್ಷದ ಗ್ಯಾಲಕ್ಸಿ ವಾಚ್ 6 ನಂತೆಯೇ ಬ್ಲೂಟೂತ್ ಆವೃತ್ತಿ 5.3 ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದರ ಜೊತೆಗೆ ಈ ಸ್ಮಾರ್ಟ್ ವಾಚ್ 32GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಸ್ಯಾಮ್‌ಸಂಗ್‌ನ 3nm ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಗ್ಯಾಲಕ್ಸಿ ವಾಚ್ 6 ನಲ್ಲಿ ಬಳಸಲಾದ ಚಿಪ್‌ಸೆಟ್‌ಗೆ ಹೋಲಿಸಿದರೆ ಇದರ ದಕ್ಷತೆ 50% ಹೆಚ್ಚಾಗುವ ಭರವಸೆ ಇರಲಿದೆ. ಅಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ಸರಣಿಗೆ ಆಯತಾಕಾರದ ವಿನ್ಯಾಸವನ್ನು ಅಳವಡಿಸಿಕೊಳ್ಳಬಹುದು ಎಂದು ಸ್ಯಾಮ್‌ಮೊಬೈಲ್‌ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಮೂಲಕ ಈ ಸ್ಮಾರ್ಟ್‌ವಾಚ್ ಪೂರ್ವವರ್ತಿ ವೃತ್ತಾಕಾರದ ವಿನ್ಯಾಸದಿಂದ ನಿರ್ಗಮಿಸುತ್ತದೆ ಎನ್ನಲಾಗಿದೆ. ಈ ಬದಲಾವಣೆಗೆ ಕಾರಣ ಏನು ಅನ್ನೋ ಮಾಹಿತಿ ಅಸ್ಪಷ್ಟವಾಗಿ ಉಳಿದಿದ್ದರೂ, ಸ್ಯಾಮ್‌ಸಂಗ್‌ನ ನಿರ್ಧಾರವು ಆಪಲ್ ವಾಚ್‌ನೊಂದಿಗೆ ಹೆಚ್ಚು ನೇರವಾಗಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕಾರಣಕ್ಕಾಗಿಯೇ ಈ ವಾಚ್ ಆಯತಾಕಾರದ ಶೈಲಿ ಪಡೆದಿರಲಿದೆ ಎನ್ನಲಾಗಿದೆ.
ಇನ್ನು ಆಪರೇಟಿಂಗ್ ಸಿಸ್ಟಮ್ ವೇರ್ ಓಎಸ್ ಈ ವಾಚ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದ್ದು, ಸ್ಯಾಮ್‌ಸಂಗ್‌ನ ಒನ್ ಯುಐ ಸೇರಿದಂತೆ ಹೆಚ್ಚಿನ ಆಪ್‌ಗಳು ವೃತ್ತಾಕಾರದ ಲೇಔಟ್‌ಗಳಿಗೆ ಹೊಂದುವಂತೆ ಮಾಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಇನ್ನು ಸ್ಯಾಮ್‌ಸಂಗ್‌ನ ನಿರ್ಧಾರವು ಕೇವಲ ಸೌಂದರ್ಯಶಾಸ್ತ್ರವನ್ನು ಮೀರಿದ ಪರಿಗಣನೆಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

ನಂಬರ್ ಒನ್ ಪಟ್ಟಕ್ಕೇರಿದ ಸ್ಯಾಮ್‌ಸಂಗ್: ಈ ನಡುವೆ 2024 ರ ಮೊದಲ ತ್ರೈಮಾಸಿಕದಲ್ಲಿ ಆಪನ್‌ನ ಐಫೋನ್ ಸೇಲ್ 10% ರಷ್ಟು ಕಡಿಮೆಯಾಗಿದ್ದು, ಇದು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮೊದಲ ಸ್ಥಾನವನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಈ ವರದಿ ನೀಡಿದೆ.
ಆಪಲ್‌ನ ಆವೇಗದ ನಷ್ಟವು ಹೆಚ್ಚಿದ ಸ್ಪರ್ಧೆ, ರಾಷ್ಟ್ರೀಯತೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ ಕಂಪನಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಚೀನಾದಲ್ಲಿ ಸವಾಲಿನ ಆರ್ಥಿಕ ವಾತಾವರಣ ಸೇರಿದಂತೆ ಹಲವಾರು ಅಂಶಗಳಿಗೆ ಕಾರಣವೆಂದು ತಿಳಿದುಬಂದಿದ್ದು, ಚೀನಾದಲ್ಲಿ ರಿಯಾಯಿತಿಗಳ ಮೂಲಕ ಮಾರಾಟವನ್ನು ಹೆಚ್ಚಿಸಲು ಆಪಲ್‌ನ ಪ್ರಯತ್ನಗಳ ಹೊರತಾಗಿಯೂ, ಗ್ರಾಹಕರು ಹೆಚ್ಚಾಗಿ ಹುವಾವೇ, ಶಿಯೋಮಿ, ಒಪ್ಪೋ ಹಾಗೂ ಒನ್‌ಪ್ಲಸ್ ಫೋನ್‌ಗಳ ಕಡೆ ಹೆಚ್ಚು ಮುಖ ಮಾಡಿದ್ದಾರೆ.


Click it and Unblock the Notifications








