Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7 ಮತ್ತು ಬಡ್ಸ್‌ 3 ಈಗ ಪ್ರೀ-ಆರ್ಡರ್‌ಗೆ ಲಭ್ಯ; ಆಫರ್‌ ಸಹ ಇದೆ!

ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗೆ ಹೊಸದಾಗಿ ಲಾಂಚ್ ಮಾಡಿರುವ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್‌ವಾಚ್‌ಗಳನ್ನು ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ ಗಳು ಗ್ಯಾಲಕ್ಸಿ AI ಆಧರಿತವಾದ ಧರಿಸಬಹುದಾದ ಡಿವೈಸ್‌ಗಳಾಗಿದ್ದು, ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿ ವಹಿಸಲು ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ - ಗ್ಯಾಲಕ್ಸಿ ವಾಚ್ ಉತ್ಪನ್ನಗಳ ಶ್ರೇಣಿಗೆ ಹೊಸತಾದ ಮತ್ತು ಅತ್ಯಂತ ಶಕ್ತಿಯುತ ಸೇರ್ಪಡೆಯಾಗಿದೆ. ಅಪಾರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಉಳ್ಳ ಈ ವಾಚ್ ಅತ್ಯುತ್ತಮ ಫಿಟ್ ನೆಸ್ ಅನುಭವಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಈ ಮೂಲಕ ಹೆಚ್ಚು ಫಿಟ್ ನೆಸ್ ಸಾಧನೆ ಮಾಡಲು ಪ್ರೇರೇಪಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 7 ಮತ್ತು ಬಡ್ಸ್‌ 3 ಈಗ ಪ್ರೀ-ಆರ್ಡರ್‌ಗೆ ಲಭ್ಯ!

ಹೊಸದಾಗಿ ಕ್ವಿಕ್ ಬಟನ್‌ ಅನ್ನು ಸೇರಿಸಲಾಗಿದೆ. ಈ ಬಟನ್ ಅನ್ನು ಬಳಸಿ ನೀವು ತಕ್ಷಣವೇ ವರ್ಕೌಟ್‌ ಪ್ರಾರಂಭಿಸಬಹುದು ಮತ್ತು ನಿಯಂತ್ರಿಸಬಹುದು. ಜೊತೆಗೆ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಇತರ ಕಾರ್ಯಗಳನ್ನು ಪ್ಲಾನ್ ಮಾಡಬಹುದು. ಹೆಚ್ಚುವರಿಯಾಗಿ ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತೆಗಾಗಿ ನೀವು ಇದರಲ್ಲಿರುವ ಎಮರ್ಜೆನ್ಸಿ ಸೈರನ್ ಅನ್ನು ಬಳಸಬಹುದು.

ವ್ಯಾಯಾಮದ ನಂತರ ಗ್ಯಾಲಕ್ಸಿ ವಾಚ್ ಅಲ್ಟ್ರಾದಲ್ಲಿರುವ ವಾಚ್ ಫೇಸ್‌ನಲ್ಲಿ ಅವತ್ತಿನ ವ್ಯಾಯಾಮಗಳ ಅಂಕಿಅಂಶಗಳನ್ನು ಪರಿಶೀಲಿಸಬಹುದು. 3,000 ನಿಟ್‌ಗಳಷ್ಟು ಗರಿಷ್ಠ ಬ್ರೈಟ್ ನೆಸ್ ಹೊಂದಿರುವ ಗ್ಯಾಲಕ್ಸಿ ವಾಚ್ ಅಲ್ಟ್ರಾ ಅತ್ಯಂತ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಸುಲಭವಾಗಿ ಓದುವ ಸಾಮರ್ಥ್ಯ ಹೊಂದಿದೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ ಗ್ಯಾಲಕ್ಸಿ ವಾಚ್ ಶ್ರೇಣಿಯಲ್ಲಿಯೇ ದೀರ್ಘವಾದ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಗ್ರಾಹಕರು ದೀರ್ಘ ಕಾಲ ಸಾಹಸ ಕ್ರೀಡೆಗಳನ್ನು ಆಡಲು ಅನುವು ಮಾಡಿಕೊಡುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ ಅಲ್ಟ್ರಾ ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್ ಮತ್ತು ಟೈಟಾನಿಯಂ ಸಿಲ್ವರ್‌ ಬಣ್ಣದಲ್ಲಿ ದೊರೆಯುತ್ತದೆ. 47 ಎಂಎಂ ಗಾತ್ರದಲ್ಲಿ ಲಭ್ಯ ಇರುತ್ತದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ ಅಲ್ಟ್ರಾ 3ಎನ್ಎಂ ಚಿಪ್‌ಸೆಟ್‌ ಸೌಲಭ್ಯ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್7 ನಲ್ಲಿ ನೀವು 100ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಕರೆಕ್ಟಾಗಿ ಟ್ರ್ಯಾಕ್ ಮಾಡಬಹುದು. ಅಲ್ಲದೇ ನಿದ್ರಾ ಸಮಯದ ವಿಶ್ಲೇಷಣೆಗಾಗಿ ಹೊಸ ಗ್ಯಾಲಕ್ಸಿ ಎಐ ಅಲ್ಗಾರಿದಮ್ ಜೊತೆಗೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮತ್ತು ರಕ್ತದೊತ್ತಡ (BP) ಮೇಲ್ವಿಚಾರಣೆ ಮಾಡಬಹುದಾಗಿರುವುದು ವಿಶೇಷ. ಈ ಮೂಲಕ ಗ್ರಾಹಕರು ತಮ್ಮ ಹೃದಯದ ಆರೋಗ್ಯದ ಕುರಿತು ವಿಸ್ತೃತ ತಿಳುವಳಿಕೆಯನ್ನು ಪಡೆಯಬಹುದು.

ಪ್ರಿ ಬುಕಿಂಗ್ ಆಫರ್‌ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್7 ಅನ್ನು ಪ್ರೀ ಬುಕ್ ಮಾಡುವ ಗ್ರಾಹಕರು 8000ರೂ. ಮೌಲ್ಯದ ಬಹು-ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 8000ರೂ. ಮೌಲ್ಯದ ಬೋನಸ್ ಅನ್ನು ಅಪ್‌ಗ್ರೇಡ್ ಪಡೆಯುತ್ತಾರೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ ಅನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು 10000ರೂ. ಮೌಲ್ಯದ ಬಹು- ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 10000ರೂ. ಮೌಲ್ಯದ ಬೋನಸ್ ಅನ್ನು ಪಡೆಯಬಹುದಾಗಿದೆ.

ಬೆಲೆ ಮಾಹಿತಿ

ವಾಚ್7 40 ಎಂಎಂ BT 29999ರೂ. ಆಗಿದೆ
ವಾಚ್7 40 ಎಂಎಂ BTE 33999ರೂ. ಆಗಿದೆ
ವಾಚ್7 44 ಎಂಎಂ BT 32999ರೂ. ಆಗಿದೆ
ವಾಚ್7 44 ಎಂಎಂ BTE 36999ರೂ. ಆಗಿದೆ
ವಾಚ್ ಅಲ್ಟ್ರಾ ಬೆಲೆಯು 59999ರೂ. ಆಗಿದೆ

ಗ್ಯಾಲಕ್ಸಿ ಬಡ್ಸ್3 ಬೆಲೆ 14999ರೂ. ಆಗಿದೆ
ಗ್ಯಾಲಕ್ಸಿ ಬಡ್ಸ್3 ಪ್ರೊ ಬೆಲೆ 19999ರೂ. ಆಗಿದೆ

Best Mobiles in India

English summary
Samsung Galaxy Watch 7 Series, Buds 3 Series are now available for pre order in India. check out all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+