Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ರಗಡ ಲುಕ್‌ನ ಮೊಬೈಲ್‌ ಬಿಡುಗಡೆ!..ಇದು ಗಟ್ಟಿಮುಟ್ಟಾದ ಫೋನ್‌!

ದಕ್ಷಿಣ ಕೊರಿಯಾದ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ ಇದೀಗ ರಗಡ್ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಿದೆ. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 (Samsung Galaxy XCover 7) ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಿದೆ. ಇದು ಭಾರತದಲ್ಲಿ ಸ್ಯಾಮ್‌ಸಂಗ್‌ನ ಮೊದಲ ಉದ್ಯಮ-ಕೇಂದ್ರಿತ ಮತ್ತು ರಗಡ್‌ ಸ್ಮಾರ್ಟ್‌ಫೋನ್ ಆಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ನೂತನವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 (Samsung Galaxy XCover 7) ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ ರಗಡ್ ರಚನೆ ಅನ್ನು ಪಡೆದಿದ್ದು, MIL-STD-810H ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಈ ಫೋನ್‌ ಮೀಡಿಯಾ ಟೆಕ್ 6100+ SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ನಿಂದ ರಗಡ ಲುಕ್‌ನ ಮೊಬೈಲ್‌ ಬಿಡುಗಡೆ!..ಇದು ಗಟ್ಟಿಮುಟ್ಟಾದ ಫೋನ್‌!

ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಪಡೆದಿದ್ದು, 4,050mAh ಸಾಮರ್ಥ್ಯದ ತೆಗೆಯಬಹುದಾದ ಬ್ಯಾಟರಿ ಸೌಲಭ್ಯ ಪಡೆದಿದೆ. ಈ ಫೋನ್ IP68 ನೀರು ಮತ್ತು ಧೂಳು ನಿರೋಧಕ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ನಿಂದ ರಗಡ ಲುಕ್‌ನ ಮೊಬೈಲ್‌ ಬಿಡುಗಡೆ!..ಇದು ಗಟ್ಟಿಮುಟ್ಟಾದ ಫೋನ್‌!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೀಚರ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೋನ್‌ 6.6 ಇಂಚಿನ TFT LCD ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು ಪೂರ್ಣ HD+ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 60Hz ರಿಫ್ರೆಶ್ ರೇಟ್‌ ಪಡೆದಿದ್ದು, 20:9 ಆಕಾರ ಅನುಪಾತ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ ಕೂಡಾ ಪಡೆದಿದೆ.

ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಪವರ್‌ ಪಡೆದಿದ್ದು, ಮಾಲಿ G57 GPU ಒಳಗೊಂಡಿದೆ. ಅಲ್ಲದೇ ಈ ಫೋನ್ 6GB RAM, 128GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದುಕೊಂಡಿದ್ದು, ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಣೆಗೆ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ ಆಂಡ್ರಾಯ್ಡ್‌ 14 ಓಎಸ್‌ ಆಧಾರಿತ OneUI ಸಪೋರ್ಟ್ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೋನ್‌ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, f/1.8 ಮತ್ತು LED ಫ್ಲ್ಯಾಷ್‌ ಪಡೆದಿದೆ. ಅಲ್ಲದೇ ಈ ಫೋನ್‌ ಮುಂಭಾಗದಲ್ಲಿ f/2.0 ದ್ಯುತಿರಂಧ್ರದೊಂದಿಗೆ 5 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೋನ್‌ 4,050mAh ಬದಲಾಯಿಸಬಹುದಾದ ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 15W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಕೂಡಾ ಒಳಗೊಂಡಿದೆ. ಅಲ್ಲದೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್-ಸಿಮ್ (ನ್ಯಾನೊ + eSIM), 5G, WiFi 5 802.11a/b/g/n/ac, Wi-Fi ಡೈರೆಕ್ಟ್, ಬ್ಲೂಟೂತ್ 5.3, NFC, GPS, GLONASS, ಗೆಲಿಲಿಯೋ, BeiDou ಆಯ್ಕೆ ಪಡೆದುಕೊಂಡಿದೆ.

ಬೆಲೆ ಮಾಹಿತಿ ಹಾಗೂ ಲಭ್ಯತೆ

ಸ್ಯಾಮ್‌ಸಂಗ್‌ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಎಂಟರ್‌ಪ್ರೈಸ್ ಆವೃತ್ತಿಗಳಲ್ಲಿ ಈ ಫೋನ್‌ ಅನ್ನು ಲಾಂಚ್ ಮಾಡಿದೆ. ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು 27,208ರೂ ಆಗಿದೆ. ಅದೇ ರೀತಿ ಎಂಟರ್‌ಪ್ರೈಸ್ ಆವೃತ್ತಿಯ ಬೆಲೆಯು 27,530ರೂ. ಆಗಿದೆ. ಈ ಸ್ಯಾಮ್‌ಸಂಗ್‌ ಫೋನ್‌ ಅನ್ನು ಗ್ರಾಹಕರು ಆನ್‌ಲೈನ್ ಸ್ಟೋರ್ ಮತ್ತು ಸ್ಯಾಮ್‌ಸಂಗ್ ಕಾರ್ಪೊರೇಟ್ ಸ್ಟೋರ್ ಮೂಲಕ ಲಭ್ಯ.

Best Mobiles in India

English summary
Samsung Galaxy XCover 7 Launched in India. Price and Specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+