Samsung: ಇನ್ನೇನು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ ಸ್ಯಾಮ್‌ಸಂಗ್‌ನ ಈ ರಗಡ್ ಫೋನ್! ಫೀಚರ್ಸ್ ಏನು?
ಸ್ಯಾಮ್‌ಸಂಗ್ ಫೋನ್‌ಗಳು (Samsung phone) ಎಂದಾಕ್ಷಣ ಉತ್ತಮ ಕಾರ್ಯಕ್ಷಮತೆ, ವಿಶೇಷ ಕ್ಯಾಮೆರಾ ಫೀಚರ್ಸ್ ಹಾಗೂ ಭದ್ರತಾ ಫೀಚರ್ಸ್‌ಗೆ ಹೆಸರುವಾಸಿ. ಅದರಂತೆ ಕೆಲವು ದಿನಗಳ ಹಿಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ s24 ಸ್ಮಾರ್ಟ್‌ಫೋನ್ (Samsung Galaxy S24 Smartphone) ಅನ್ನು ಅನಾವರಣ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದೆ. ಈ ಬೆಳವಣಿಗೆ ನಡುವೆ ಸ್ಯಾಮ್‌ಸಂಗ್ ರಗಡ್ ಫೋನ್‌ವೊಂದನ್ನು ಅನಾವರಣ ಮಾಡಲಿದೆ.
ಹೌದು, ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಸ್ಮಾರ್ಟ್‌ಫೋನ್ (Samsung Galaxy XCover 7) ಬಿಡುಗಡೆ ಸನ್ನಿಹಿತವಾಗಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಬೇರೆ ಮಾರುಕಟ್ಟೆಯಲ್ಲಿ ಅನಾವರಣ ಆಗಿದ್ದು, ಭಾರತೀಯರು ಈ ಫೋನ್ ಯಾವಾಗ ಭಾರತದಲ್ಲಿ ಲಾಂಚ್ ಆಗಲಿದೆ ಎಂದು ಕಾದುಕುಳಿತಿದ್ದರು. ಆದರೆ, ಕೊನೆಗೂ ಈಗ ಈ ಫೋನ್ ಅನಾವರಣದ ಬಗ್ಗೆ ಸುಳಿವು ನೀಡಿದೆ. ಹಾಗಿದ್ರೆ, ಈ ವಿಶೇಷ ರಗಡ್ ಫೋನ್‌ನ ಫೀಚರ್ಸ್ ಏನು?, ಇದರ ಬೆಲೆ ಭಾರತದಲ್ಲಿ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಸ್ಮಾರ್ಟ್‌ಫೋನ್: ರಗಡ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸ್ಯಾಮ್‌ಸಂಗ್ ಸಜ್ಜಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ಈಗಾಗಲೇ ಈ ಫೋನ್ ಅನಾವರಣ ಆಗಿದ್ದು, ಈ ಡಿವೈಸ್‌ನ ಬೆಂಬಲ ಪೇಜ್ ಅನ್ನು ಈಗ ಸ್ಯಾಮ್‌ಸಂಗ್‌ನ ಅಧಿಕೃತ ಭಾರತೀಯ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಲಾಗಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಈ ಫೋನ್ ಅನಾವರಣ ಆಗಲಿದೆ ಎಂಬ ಮಾಹಿತಿ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಮಾದರಿ ಸಂಖ್ಯೆ 'SM-G556B' ಯಾಗಿದ್ದು, ನವೆಂಬರ್ 2023 ರಲ್ಲಿ BIS ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಈ ಪ್ರಮಾಣೀಕರಣವು ಭಾರತದಲ್ಲಿ ಸ್ಮಾರ್ಟ್‌ಫೋನ್‌ನ ಮುಂಬರುವ ಲಭ್ಯತೆಯ ಬಗ್ಗೆ ಸುಳಿವು ನೀಡಿದೆ. ಜೊತೆಗೆ ಸ್ಮಾರ್ಟ್‌ಫೋನ್ ಮಲೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಪ್ರಮಾಣೀಕರಣಗಳನ್ನು ಸಹ ಹೊಂದಿದ್ದು, ಅಲ್ಲೂ ಸಹ ಅನಾವರಣ ಆಗಲಿದೆ. ಇನ್ನು ಬೆಂಬಲ ಪೇಜ್ ಲೈವ್‌ನೊಂದಿಗೆ, ಸ್ಯಾಮ್‌ಸಂಗ್ ನಿಂದ ಅಧಿಕೃತ ಪ್ರಕಟಣೆಯನ್ನು ಶೀಘ್ರದಲ್ಲೇ ಭಾರತದಲ್ಲಿ ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಫೀಚರ್ಸ್:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 7 ಸ್ಮಾರ್ಟ್‌ಫೋನ್ ಅನ್ನು ದೀರ್ಘ ಬಾಳಿಕೆಗಾಗಿ ವಿನ್ಯಾಸಗೊಳಿಸಲಾಗಿದೆ. IP68 ಜಲ-ನಿರೋಧಕ ರೇಟಿಂಗ್ ಅನ್ನು ಹೊಂದಿದ್ದು, MIL-STD-810H ಮಾನದಂಡಗಳನ್ನು ಈ ಫೋನ್ ಅನುಸರಿಸುತ್ತದೆ. ಇದರ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲ್ಪಟ್ಟಿದೆ, ಯಾವುದೇ ಹಾನಿಯನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ ಇದಕ್ಕಿದೆ.
ಅದರಂತೆ 6.6 ಇಂಚಿನ FHD + TFT ಡಿಸ್‌ಪ್ಲೇಯನ್ನು ಈ ಫೋನ್ ಹೊಂದಿದ್ದು, ಇದು 6nm ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದು ಡೈಮೆನ್ಸಿಟಿ 6100+ ಪ್ರೊಸೆಸರ್ ಎಂದು ನಂಬಲಾಗಿದೆ. ಅಲ್ಲದೆ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಈ ಫೋನ್ ಪಡೆದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ಗೆ ವಿಸ್ತರಿಸಬಹುದಾದ ಸೌಲಭ್ಯ ಕಲ್ಪಿಸಿಕೊಡಲಿದೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಅಲ್ಲದೆ ಗ್ರಾಹಕೀಯಗೊಳಿಸಬಹುದಾದ ಎಕ್ಸ್ ಕವರ್ ಕೀ ಕೀ, ನಾಕ್ಸ್ ಕ್ಯಾಪ್ಚರ್‌ನೊಂದಿಗೆ ಬಾರ್‌ಕೋಡ್ ಸ್ಕ್ಯಾನಿಂಗ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊ ಬೆಂಬಲವನ್ನು ಈ ಫೋನ್ ಹೊಂದಿರಲಿದೆ.
ಜೊತೆಗೆ ಫೋನ್ ಬಳಕೆದಾರರಿಗೆ ಬದಲಾಯಿಸಬಹುದಾದ 4,050mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಒಟ್ಟಾರೆ 240g ತೂಗುತ್ತದೆ. ಅಲ್ಲದೆ 169 x 80.1 x 10.2 mm ಅಳತೆಯನ್ನು ಹೊಂದಿದ್ದು, 3.5mm ಆಡಿಯೋ ಜ್ಯಾಕ್, POGO ಪಿನ್‌ಗಳು ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಸಹ ಒಳಗೊಂಡಿದೆ. ಇದೆಲ್ಲದರ ಜೊತೆಗೆ ಈ ಫೋನ್ ಆಂಡ್ರಾಯ್ಡ್ ಓಎಸ್ 14 ಮತ್ತು One UI 6 ನಲ್ಲಿ ರನ್ ಆಗಲಿದೆ.


Click it and Unblock the Notifications








