Home
ಸುದ್ದಿಜಾಲ

Samsung: ಮಿಲಿಟರಿ ದರ್ಜೆಯ ಫೋನ್‌ ಲಾಂಚ್‌ ಮಾಡಿದ ಸ್ಯಾಮ್‌ಸಂಗ್! 128GB ಸ್ಟೋರೇಜ್‌, ಬೆಲೆ ಎಷ್ಟು?

ಸ್ಯಾಮ್‌ಸಂಗ್‌ (Samsung) ಭಿನ್ನ ಹಾಗೂ ವಿಶೇಷ ಫೋನ್‌ಗಳನ್ನು ಅನಾವರಣ ಮಾಡುವ ಅಗ್ರ ಟೆಕ್‌ದೈತ್ಯ ಎನಿಸಿಕೊಂಡಿದೆ. ಈ ಕಂಪೆನಿಯ ಎಲ್ಲಾ ರೀತಿಯ ಡಿವೈಸ್‌ಗಳೂ ಸಹ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿವೆ. ಈ ಮೂಲಕ ಜಾಗತಿಕವಾಗಿ ದೊಡ್ಡಮಟ್ಟದಲ್ಲಿ ಗ್ರಾಹಕರನ್ನು ಸೆಳೆದಿದೆ. ಈ ಬೆಳವಣಿಗೆ ನಡುವೆ ಹೊಸ ಫೋನ್ ಅನ್ನು ಅನಾವರಣ ಮಾಡಲಾಗಿದೆ.

ಹೌದು, ಸ್ಯಾಮ್‌ಸಂಗ್ ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ (Samsung Galaxy XCover 7 Smartphone) ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಯುಎಸ್‌ ಮಿಲಿಟರಿ ಸ್ಟ್ಯಾಂಡರ್ಡ್ MIL-STD-810H ಪಡೆದಿದ್ದು, ಎಲ್ಲಾ ರೀತಿಯ ತಾಪಮಾನದಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮಿಲಿಟರಿ ದರ್ಜೆಯ ಫೋನ್‌ ಲಾಂಚ್‌ ಮಾಡಿದ ಸ್ಯಾಮ್‌ಸಂಗ್! 128GB ಸ್ಟೋರೇಜ್‌...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.6 ಇಂಚಿನ ಫುಲ್‌ ಹೆಚ್‌ಡಿ+ TFT LCD ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ 20:9 ಆಕಾರ ಅನುಪಾತದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮವಾದ ವೀಕ್ಷಣೆ ಅನುಭವ ನೀಡುವ ಕೆಲಸ ಮಾಡುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಮಾಲಿ G57 GPU ಗ್ರಾಫಿಕ್ಸ್ ಕಾರ್ಡ್ ಬಲ ನೀಡಲಾಗಿರುವುದರಿಂದ ಬಳಕೆದಾರರು ಗೇಮಿಂಗ್ ಹಾಗೂ ಇತರೆ ವಿಭಾಗದಲ್ಲಿ ಯಾವುದೇ ಅಡೆ ತಡೆ ಇಲ್ಲದ ಅನುಭವ ಪಡೆಯಬಹುದಾಗಿದೆ. ಹಾಗೂ OneUI ಆಧಾರಿತ ಆಂಡ್ರಾಯ್ಡ್‌ 14 ಅನ್ನು ರನ್‌ ಮಾಡಲಿದೆ. 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಈ ಫೋನ್‌ನಲ್ಲಿ ಇದ್ದು, ಸ್ಟೋರೇಜ್ ವಿಸ್ತರಣೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲ ಸಹ ಇದೆ.

ಮಿಲಿಟರಿ ದರ್ಜೆಯ ಫೋನ್‌ ಲಾಂಚ್‌ ಮಾಡಿದ ಸ್ಯಾಮ್‌ಸಂಗ್! 128GB ಸ್ಟೋರೇಜ್‌...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಎಲ್‌ಇಡಿ ಫ್ಲಾಶ್‌ ಲೈಟ್‌ ಆಯ್ಕೆ ಬೆಂಬಲ ಇದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್‌ನಲ್ಲಿ 5 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಈ ಸೆನ್ಸರ್‌ಗಳು ಭಿನ್ನ ಫೀಚರ್ಸ್‌ ಅನ್ನು ಬೆಂಬಲಿಸಲಿವೆ. ಈ ಮೂಲಕ ಉತ್ತಮ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 4050mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 15 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ವೈ-ಫೈ 5 802.11, ವೈ-ಫೈ, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ, ಜಿಪಿಎಸ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್‌ 7 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಅನ್ನು ಕೊರಿಯಾದಲ್ಲಿ ಮಾತ್ರ ಅನಾವರಣ ಮಾಡಲಾಗಿದೆ. ಅದರಂತೆ ಈ ಫೋನ್ ಈ ತಿಂಗಳ ಕೊನೆಯಲ್ಲಿ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದ್ದು, ಈ ವರೆಗೂ ಈ ಫೋನ್‌ನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಅಲ್ಲದೆ ಭಾರತದಲ್ಲೂ ಈ ಫೋನ್ ಕೆಲವೇ ವಾರಗಳಲ್ಲಿ ಅನಾವರಣ ಆಗಲಿದೆ ಎನ್ನಲಾಗಿದೆ.

ಮಿಲಿಟರಿ ದರ್ಜೆಯ ಫೋನ್‌ ಲಾಂಚ್‌ ಮಾಡಿದ ಸ್ಯಾಮ್‌ಸಂಗ್! 128GB ಸ್ಟೋರೇಜ್‌...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 5: ಈ ಮೇಲೆ ತಿಳಿಸಿದ ಫೋನ್‌ ಜೊತೆಗೆ ಸ್ಯಾಮ್‌ಸಂಗ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 5 ಟ್ಯಾಬ್‌ (Samsung Galaxy Tab Active 5) ಅನ್ನೂ ಸಹ ಅನಾವರಣ ಮಾಡಿದೆ. ಇದು 120Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 8 ಇಂಚಿನ WUXGA TFT ಡಿಸ್‌ಪ್ಲೇ ಹೊಂದಿದ್ದು, ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಟ್ಯಾಬ್‌ 6GB +128GB ಮತ್ತು 8GB + 256GB RAM ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇರಲಿದ್ದು, 1TB ವರೆಗೆ ಸ್ಟೋರೇಜ್‌ ವಿಸ್ತರಣೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಈ ಟ್ಯಾಬ್‌ ಯಾವುದೇ ಆಕಸ್ಮಿಕ ಆಘಾತಗಳು, ನೀರಿನ ಹನಿ, ಮಳೆ ಮತ್ತು ಧೂಳಿನ ವಿರುದ್ಧ ರಕ್ಷಣೆ ಪಡೆಯಲಿದೆ. ಅಂದ್ರೆ ಇದೂ ಸಹ MIL-STD-810H ಪ್ರಮಾಣೀಕೃತ ಮತ್ತು IP68 ರೇಟಿಂಗ್ ಅನ್ನು ಹೊಂದಿದೆ. ಇದು ಕಸ್ಟಮೈಸೇಶನ್, ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳು ಮತ್ತು ಸ್ಯಾಮ್‌ಸಂಗ್ ನಾಕ್ಸ್‌ಗಾಗಿ ಸಕ್ರಿಯ ಕೀಲಿಯನ್ನು ಹೊಂದಿದ್ದು, ಒಟ್ಟಾರೆ ಈ ಟ್ಯಾಬ್‌ 433 ಗ್ರಾಂ ತೂಕ ಹೊಂದಿದೆ.

Best Mobiles in India

English summary
Samsung has unveiled the Samsung Galaxy XCover 7 Smartphone. The smartphone is built on the US military standard MIL-STD-810H.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+