Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಗೆ 46% ಡಿಸ್ಕೌಂಟ್‌! 43 ಸಾವಿರದ ವರೆಗೆ ಉಳಿತಾಯ

ಸ್ಯಾಮ್‌ಸಂಗ್‌ (Samsung) ಫೋನ್‌ಗಳಲ್ಲಿ ವಿಭಿನ್ನ ಸ್ಮಾರ್ಟ್‌ಫೋನ್‌ಗಳು ಎಂದರೆ ಫೋಲ್ಡಬಲ್ ಹಾಗೂ ಫ್ಲಿಪ್‌ ಸ್ಮಾರ್ಟ್‌ಫೋನ್‌ಗಳು. ಆರಂಭದಲ್ಲಿ ಈ ಫೋನ್‌ಗಳು ದೊಡ್ಡ ಸಂಚಲವನ್ನೇ ಉಂಟುಮಾಡಿದ್ದವು. ಪರಿಣಾಮ ಎಲ್ಲಾ ಕಂಪೆನಿಗಳು ಇದೀಗ ಈ ರೀತಿಯ ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿದ್ದು, ಈ ಬೆಳವಣಿಗೆ ನಡುವೆ Z ಫ್ಲಿಪ್‌ 3 5G ಫೋನ್‌ಗೆ ದೊಡ್ಡ ಮಟ್ಟದ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G (Samsung Galaxy Z Flip 3 5G) ಸ್ಮಾರ್ಟ್‌ಫೋನ್‌ಗೆ ಬೃಹತ್‌ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ಗ್ರಾಹಕರು ಬರೋಬ್ಬರಿ 43 ಸಾವಿರದ ವರೆಗೆ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 12 ಮೆಗಾಪಿಕ್ಸೆಲ್‌ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್‌ ಹಾಗೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂದು ನೋಡೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಗೆ 46% ಡಿಸ್ಕೌಂಟ್‌!

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಈ ಆಫರ್ ಬೆಲೆಗೆ ಇದು ಯೋಗ್ಯವೇ ಎಂದು ತಿಳಿದುಕೊಳ್ಳಲು ಇದರ ಪ್ರಮುಖ ಫೀಚರ್ಸ್‌ ಕಡೆ ಗಮನಹರಿಸಿದರೆ ಉತ್ತಮ. ಈ ಫೋನ್ 426PPI ನ ಸ್ಯಾಚುರೇಟೆಡ್ ಪಿಕ್ಸೆಲ್ ಸಾಂದ್ರತೆ ಮತ್ತು 10802640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಆಯ್ಕೆಯೊಂದಿಗೆ 6.7 ಇಂಚಿನ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಪ್ರೊಸೆಸರ್ ಮಾಹಿತಿ: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ನಲ್ಲಿ(Qualcomm Snapdragon 888) ಕಾರ್ಯನಿರ್ವಹಿಸಲಿದ್ದು, ಇದು ಅಕ್ಟಾ ಕೋರ್‌ ಕ್ರಿಯೋ 680 ಸಿಪಿಯು ಜೊತೆಗೆ 2.84GHz ಗರಿಷ್ಠ ಗಡಿಯಾರದ ವೇಗ ಪಡೆದಿದೆ. ಇದರೊಂದಿಗೆ ಅಡ್ರಿನೋ 660 GPU ಬಲ ಹೊಂದಿದ್ದು, ಈ ಮೂಲಕ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಉಳಿದಂತೆ ಈ ಫೋನ್ 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಗೆ 46% ಡಿಸ್ಕೌಂಟ್‌!

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, f/2.2 ಅಪರ್ಚರ್ ಹೊಂದಿರುವ 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು f/1.8 ಅಪರ್ಚರ್ ಮತ್ತು 10x ಡಿಜಿಟಲ್ ಜೂಮ್‌ನೊಂದಿಗೆ 12 ಮೆಗಾಪಿಕ್ಸೆಲ್‌ ಕ್ಯಾಮೆರಾ. ಈ ಸೆನ್ಸರ್‌ಆಟೋಫೋಕಸ್, ಎಕ್ಸ್‌ಪೋಶರ್ ಕಾಂಪೆನ್ಸೇಶನ್, ಡಿಜಿಟಲ್ ಜೂಮ್ ಮತ್ತು ಹೆಚ್‌ಡಿಆರ್‌ ಮೋಡ್‌ನಂತಹ ಹಲವು ಫೀಚರ್ಸ್‌ ಪಡೆದಿದೆ. ಉಳಿದಂತೆ ಈ ಫೋನ್ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಹೊಂದಿದೆ. ಹಾಗೆಯೇ 3,300mAh ಸಾಮರ್ಥ್ಯ ಬ್ಯಾಟರಿ ಆಯ್ಕೆ ಇದ್ದು, ಇದು 15W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಆಫರ್ ವಿವರ: ಈ ಫೋನ್‌ನ ಆಫರ್ ವಿಚಾರಕ್ಕೆ ಬಂದರೆ ಇದು 95,499 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 51,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ 43 ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದಾಗಿದೆ. ಈ ಫೋನ್‌ಗೆ ಅಮೆಜಾನ್ 46% ರಿಯಾಯಿತಿ ಘೋಷಣೆ ಮಾಡಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಹಾಗೂ ಇತರೆ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ 3 5G ಗೆ 46% ಡಿಸ್ಕೌಂಟ್‌!

ಈ ಫೋನ್ ಖರೀದಿ ವೇಳೆ ಗ್ರಾಹಕರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 10% ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೂ 10% ತ್ವರಿತ ರಿಯಾಯಿತಿ, ಐಡಿಎಫ್‌ಸಿ ಮೊದಲ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದೊಂದಿಗೆ 5% ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ 2,521ರೂ.ಗಳಿಂದ ಪ್ರಾರಂಭವಾಗುವ ಇಎಮ್‌ಐ ಆಯ್ಕೆ ಸಹ ಲಭ್ಯ ಇದೆ.

Best Mobiles in India

English summary
Samsung Galaxy Z Flip 3 5G smartphone has got best discount in amazon. through which customers can save up to 43 thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+