Home
ಸುದ್ದಿಜಾಲ

Samsung; ಸ್ಯಾಮ್‌ಸಂಗ್‌ನ ಈ ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೇಲೆ 25 ಸಾವಿರ ಬೆಲೆ ಇಳಿಕೆ! ಭರ್ಜರಿ ಆಫರ್

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು (Samsung smartphones) ಇಂದು ಹೆಚ್ಚಿನ ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಅದರಲ್ಲೂ ಫೋಲ್ಡಬಲ್‌ ಫೋನ್‌ಗಳು ಮತ್ತು ಫ್ಲಿಪ್‌ (Flip) ಮಾದರಿಯ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದು, ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 4 ಸ್ಮಾರ್ಟ್‌ಫೋನ್‌ಗೆ (Samsung Galaxy Z Flip 4 Smartphone) ಭಾರೀ ಆಫರ್ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ Z ಫ್ಲಿಪ್‌ 4 ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಈ ಮೂಲಕ ನೀವು ಬರೋಬ್ಬರಿ 25,000 ರೂಪಾಯಿಗಳಷ್ಟು ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಈಗಿನ ಬೆಲೆ ಎಷ್ಟು?, ಇತರೆ ಆಫರ್ ಏನಾದರೂ ಇದೆಯಾ?, ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಈ ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೇಲೆ 25 ಸಾವಿರ ಬೆಲೆ ಇಳಿಕೆ! ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 4 ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ: ಆಗಸ್ಟ್ 2022 ರಲ್ಲಿ ಲಾಂಚ್‌ ಆಗಿರುವ ಈ ಫ್ಲಿಪ್‌ ಸ್ಮಾರ್ಟ್‌ಫೋನ್ ಅನ್ನು ಎರಡು ವೇರಿಯಂಟ್‌ ಆಯ್ಕೆಯಲ್ಲಿ ಲಾಂಚ್‌ ಮಾಡಲಾಗಿದೆ. ಅದರಲ್ಲಿ ಒಂದು 8GB+128GB ಹಾಗೂ 8GB+256GB ಸ್ಟೋರೇಜ್‌ ವೇರಿಯಂಟ್‌. ಇವು ಕ್ರಮವಾಗಿ 89,999ರೂ.ಗಳು ಮತ್ತು 94,999ರೂ.ಗಳ ಬೆಲೆ ಹೊಂದಿದ್ದು, 25,000ರೂ.ಗಳ ಬೆಲೆ ಕಡಿತದ ನಂತರ 64,999ರೂ.ಗಳು ಮತ್ತು 69,999ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 4 ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 1.9 ಇಂಚಿನ ಸೂಪರ್ ಅಮೋಲೆಡ್‌ ಕವರ್‌ ಡಿಸ್‌ಪ್ಲೇ ಹೊಂದಿದ್ದು, 6.7 ಇಂಚಿನ FHD+ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇಯೊಂದಿಗೆ ಕಾನಿಸಿಕೊಂಡಿದೆ. ಇದು 2640 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 120Hz ರಿಫ್ರೆಶ್ ರೇಟ್ ಮತ್ತು ಅಡಾಪ್ಟಿವ್ ರಿಫ್ರೆಶ್ ರೇಟ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಬಲದೊಂದಿಗೆ 8GB LPDDR5 RAM ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ನ ಈ ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೇಲೆ 25 ಸಾವಿರ ಬೆಲೆ ಇಳಿಕೆ! ..

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸರ್‌ನೊಂದಿಗೆ 12 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಅಂದರೆ ಡ್ಯುಯಲ್ ರಿಯರ್‌ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ನೋಡಬಹುದಾಗಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 10 ಮೆಗಾಪಿಕ್ಸೆಲ್‌ ಶೂಟರ್ ಆಯ್ಕೆ ನೀಡಲಾಗಿದ್ದು, ಅತ್ಯುತ್ತಮ ಅನುಭವ ನೀಡಲಿದೆ.

ಈ ಸ್ಮಾರ್ಟ್‌ಫೋನ್ ಒನ್‌ಯುಐ 4.1 ನೊಂದಿಗೆ ಸಂಯೋಜಿಸಲಾದ ಅಂಡ್ರಾಯ್ಡ್‌ 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗಲಿದ್ದು, 3700mAh ಸಾಮರ್ಥ್ಯದ ಬ್ಯಾಟರಿ ಮೂಲಕ ಉತ್ತಮ ಬ್ಯಾಕಪ್‌ ನೀಡಲಿದೆ. ಅದರಲ್ಲೂ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಿಂದ ಅಂದರೆ 25W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಕೇವಲ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 50% ವರೆಗೆ ಚಾರ್ಜ್ ಆಗಲಿದೆ. ಅಲ್ಲದೆ 15W ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯವನ್ನು ಈ ಫೋನ್‌ನಲ್ಲಿ ನೀಡಲಾಗಿದೆ.

ಸ್ಯಾಮ್‌ಸಂಗ್‌ನ ಈ ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೇಲೆ 25 ಸಾವಿರ ಬೆಲೆ ಇಳಿಕೆ! ..

ಈ ಸ್ಮಾರ್ಟ್‌ಫೋನ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ 32-ಬಿಟ್/384kHz ಆಡಿಯೋ ಅನುಭವ ನೀಡಲಿದ್ದು, ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್ ಬ್ಲೂಟೂತ್ ಆವೃತ್ತಿ 5.2, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ, ಯುಎಸ್‌ಬಿ ಟೈಪ್-ಸಿ 2.0, ಓಟಿಜಿ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

Best Mobiles in India

English summary
Samsung has reduced the price of its Galaxy Z Flip 4 smartphone. By this you will save Rs 25,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+