Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಈಗ ಹಳದಿ ಬಣ್ಣದಲ್ಲೂ ಲಭ್ಯ, 14 ಸಾವಿರ ಡಿಸ್ಕೌಂಟ್!
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Samsung smartphone) ವಿವಿಧ ಸುಧಾರಿತ ಫೀಚರ್ಸ್ ಆಯ್ಕೆಯನ್ನು ಪಡೆಯುವ ಮೂಲಕ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡುತ್ತಲೇ ಬಂದಿವೆ. ಅದರಲ್ಲೂ ಇತ್ತೀಚಿಗೆ ಲಾಂಚ್ ಆದ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 (Samsung Galaxy Z Flip 5) ಸ್ಮಾರ್ಟ್‌ಫೋನ್‌ಗೆ ಬಹಳ ಬೇಡಿಕೆ ಇದ್ದು, ಈ ಫೋನ್ ಇದೀಗ ಹಳದಿ (Yellow) ಬಣ್ಣದಲ್ಲೂ ಲಭ್ಯ ಇದೆ.
ಹೌದು, ಸ್ಯಾಮ್‌ಸಂಗ್ ಸಾಮಾನ್ಯವಾಗಿ ನೂತನ ವಿನ್ಯಾಸಕ್ಕೆ ಹಾಗೂ ಹೊಸ ಹೊಸ ಫೀಚರ್ಸ್ ಪರಿಚಯಿಸುವುದಕ್ಕೆ ಸದಾ ಹಾತೊರೆಯುತ್ತಿರುತ್ತವೆ. ಈ ವಿಷಯದಲ್ಲಿ ಆಪಲ್ ಸಹ ಸ್ಯಾಮ್‌ಸಂಗ್ ಅನ್ನು ಬೀಟ್ ಮಾಡಲು ಸಾಧ್ಯವಿಲ್ಲ. ಈ ಬೆಳವಣಿಗೆ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡುತ್ತಿದ್ದು, ಈಗ ಗ್ರಾಹಕರು ಈ ಫೋನ್ ಖರೀದಿ ವೇಳೆ ಬಹಳಷ್ಟು ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5: ತನ್ನ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಫೋಲ್ಡ್ ಮಾಡಬಹುದಾದ Z ಫ್ಲಿಪ್ 5 ಮತ್ತು Z ಫೋಲ್ಡ್ 5 ಅನ್ನು ಲಾಂಚ್ ಮಾಡಿತ್ತು. ಸದ್ಯ ಈ ಫೋನ್ ಈಗ ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ಸಂಬಂಧ ಸ್ಯಾಮ್‌ಸಂಗ್ ತನ್ನ ಅಧಿಕೃತ ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಈ ಮೊದಲು ಮಿಂಟ್, ಗ್ರ್ಯಾಫೈಟ್, ಲ್ಯಾವೆಂಡರ್ ಮತ್ತು ಕ್ರೀಮ್ ಕಲರ್‌ನಲ್ಲಿ ಈ ಫೋನ್‌ಗಳು ಲಭ್ಯ ಇದ್ದವು.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಫೀಚರ್ಸ್: ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ (foldable smartphone) 8.61 ಇಂಚಿನ ಫ್ಲೆಕ್ಸ್ ವಿಂಡೋವನ್ನು ಹೊಂದಿದ್ದು, ಈ ಮೂಲಕ ಅತಿ ದೊಡ್ಡ ಕವರ್ ಸ್ಕ್ರೀನ್ ಎಂದು ಹೇಳಲಾಗುತ್ತದೆ. ಇದು ಫ್ಲೆಕ್ಸ್ ಹಿಂಜ್‌ನೊಂದಿಗೆ ಪ್ಯಾಕ್ ಆಗಿದೆ. ಅಷ್ಟೇ ಅಲ್ಲದೆ ಇದನ್ನು ಸುಲಭವಾಗಿ ಪಾಕೆಟ್‌ಗೆ ಸ್ಲೈಡ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ.
ಇದರೊಂದಿಗೆ ಕೈಗಳನ್ನು ಬಳಕೆ ಮಾಡದೆಯೇ ವಿವಿಧ ಕೋನಗಳಿಂದ ಫೋಟೋಗಳನ್ನು ಕ್ಲಿಕ್ ಮಾಡಲು ಇದು ಫ್ಲೆಕ್ಸ್ ಕ್ಯಾಮ್ ಫೀಚರ್ಸ್ ಆಯ್ಕೆಯನ್ನೂ ಸಹ ಹೊಂದಿದೆ. ಹಾಗೆಯೇ ಈ ಫೋನ್ 3700mAh ಸಾಮರ್ಥ್ಯ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಸ್ನಾಪ್ಡ್ರಾಗನ್® 8 ಜನ್ 2 ಪ್ರೊಸೆಸರ್ (Snapdragon® 8 Gen 2 processor) ಬಲ ಪಡೆದುಕೊಂಡಿದೆ. ಅದರಲ್ಲೂ ಉತ್ತಮ ಗ್ರಾಫಿಕ್ಸ್, ವೇಗವಾದ ಎಐ ಮತ್ತು ಸುಧಾರಿತ ಬ್ಯಾಟರಿ ಈ ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಗೆ ಮಾಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಬೆಲೆ ವಿವರ: ಇನ್ನು ಈ ಫೋನ್ ಪ್ರಮುಖ ವಿಚಾರಕ್ಕೆ ಬರೋಣ. ಅದರಂತೆ ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಅಂದರೆ 256GB+8GB ಇಂಟರ್ ಸ್ಟೋರೇಜ್ ಹೊಂದಿರುವ ಫೋನ್ 99,999 ರೂ.ಗಳ ಬೆಲೆ ಹೊಂದಿದ್ದರೆ 512GB+8GB ಇಂಟರ್ ಸ್ಟೋರೇಜ್ ಸ್ಮಾರ್ಟ್‌ಫೋನ್ 1,09,999ರೂ.ಗಳ ಬೆಲೆ ಹೊಂದಿದೆ.
ಆದರೆ ನೀವು ಈ ಸ್ಮಾರ್ಟ್‌ಫೋನ್ ಅನ್ನು ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದು. ಇದಕ್ಕಾಗಿ ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ (HDFC Bank Credit) ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ 7,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಸಿಗಲಿದೆ. ಹಾಗೆಯೇ 7,000 ರೂ.ಗಳ ವಿನಿಮಯ ಡಿಸ್ಕೌಂಟ್ ಅನ್ನು ಸಹ ನೀಡುತ್ತದೆ. ಇದನ್ನು ಬ್ಯಾಂಕ್ ರಿಯಾಯಿತಿಯೊಂದಿಗೆ ಸೇರಿಸಬಹುದು. ಈ ಮೂಲಕ ಒಟ್ಟಾರೆ 14 ಸಾವಿರದ ಹಣ ಉಳಿತಾಯ ಮಾಡಬಹುದಾಗಿದೆ.

ಇನ್ನು ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಮಾರಾಟವಾದ ಸ್ಯಾಮ್‌ಸಂಗ್‌ನ ಉನ್ನತ-ಮಟ್ಟದ ಡಿವೈಸ್‌ಗಳಲ್ಲಿ ಅದರಲ್ಲೂ ಫೋಲ್ಡಬಲ್ ಡಿವೈಸ್ ವಿಭಾಗ ಸುಮಾರು 40% ನಷ್ಟು ಭಾಗವನ್ನು ಹೊಂದಿವೆ. ಈ ವಿಭಾಗದಲ್ಲಿನ ಸ್ಮಾರ್ಟ್‌ಫೋನ್ ಸಂಬಂಧ ಷೇರು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸ್ಯಾಮ್‌ಸಂಗ್‌ನ ಮೊಬೈಲ್ ವ್ಯವಹಾರದ ಮುಖ್ಯಸ್ಥ ಟಿಎಂ ರೋಹ್ ಮಾಹಿತಿ ನೀಡಿದ್ದಾರೆ.


Click it and Unblock the Notifications








