Home
ಸುದ್ದಿಜಾಲ

Samsung: ದೊಡ್ಡ ಬ್ಯಾಟರಿಯೊಂದಿಗೆ ಬರಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 6

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 6 (Samsung Galaxy Z Flip 6) ಸಂಬಂಧ ಹೊಸ ವಿಷಯ ತಿಳಿದುಬಂದಿದೆ. ಇನ್ನು ಈ ಫೋನ್‌ ಜೊತೆಗೆ ಗ್ಯಾಲಕ್ಸಿ Z ಫೋಲ್ಡ್‌ 6 ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಈ ಫೋನ್‌ಗಳ ಬಗ್ಗೆ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ. ಅದರಲ್ಲಿ ಪ್ರಮುಖವಾದುದು ಬ್ಯಾಟರಿ. ಅಂದರೆ ಈ ಗ್ಯಾಲಕ್ಸಿ Z ಫ್ಲಿಪ್‌ 6 ಫೋನ್‌ ದೊಡ್ಡ ಬ್ಯಾಟರಿ ಆಯ್ಕೆಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದರ ಜೊತೆಗೆ ಹಿಂದಿನ ಮಾದರಿಗಿಂತ ಸಾಕಷ್ಟು ನವೀಕರಣಗಳನ್ನು ಕಾಣಬಹುದು ಎಂದು ತಿಳಿದುಬಂದಿದೆ.

ಹೌದು, ಇತ್ತೀಚಿನ ಕೆಲವು ಲೀಕ್‌ ಮಾಹಿತಿ ಪ್ರಕಾರ, ಗ್ಯಾಲಕ್ಸಿ Z ಫ್ಲಿಪ್‌ 6 ಉತ್ತಮ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿರಬಹುದು ಎಂದು ಎಫ್‌ಸಿಸಿ ದಾಖಲೆಗಳ ಸ್ಕ್ರೀನ್‌ಶಾಟ್‌ಗಳು ತೋರಿಸುತ್ತವೆ. ಅದರ ಪೂರ್ವವರ್ತಿಯಾದ ಗ್ಯಾಲಕ್ಸಿ Z ಫ್ಲಿಪ್‌ 5 ಗೆ ಹೋಲಿಸಿದರೆ ಗ್ಯಾಲಕ್ಸಿ Z ಫ್ಲಿಪ್‌ 6 ಗಾಗಿ ಬ್ಯಾಟರಿ ಸಾಮರ್ಥ್ಯದಲ್ಲಿ ಸೂಕ್ಷ್ಮವಾದ ಹಾಗೂ ಸಂಭಾವ್ಯವಾಗಿ ಗಮನಾರ್ಹವಾದ ಅಪ್‌ಗ್ರೇಡ್ ಅನ್ನು ಡಾಕ್ಯುಮೆಂಟ್‌ಗಳು ಸೂಚಿಸುತ್ತವೆ. ಹಿಂದಿನ ಸ್ಯಾಮ್‌ಸಂಗ್ ಫೋಲ್ಡ್ ಮತ್ತು ಫ್ಲಿಪ್ ಫ್ಲ್ಯಾಗ್‌ಶಿಪ್‌ಗಳ ಯಶಸ್ಸಿನ ನಂತರ, ಬಳಕೆದಾರರು ಮುಂಬರುವ ಡಿವೈಸ್‌ಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದು, ಖರೀದಿ ಮಾಡಲು ಸಹ ಕಾತುರರರಾಗಿದ್ದಾರೆ.

ದೊಡ್ಡ ಬ್ಯಾಟರಿಯೊಂದಿಗೆ ಬರಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 6

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 6 ಲೀಕ್‌ ಮಾಹಿತಿ: ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿಶೇಷಣಗಳ ಆವಿಷ್ಕಾರಕ್ಕಾಗಿ ಫ್ಲ್ಯಾಗ್‌ಶಿಪ್ ಮೆಚ್ಚುಗೆ ಪಡೆದಿದೆ. ಅದಾಗ್ಯೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್‌ನ ಲೈನ್-ಅಪ್‌ನಲ್ಲಿನ ಬ್ಯಾಟರಿ ವಿಚಾರಕ್ಕೆ ಬಳಕೆದಾರರಿಗೆ ಸ್ವಲ್ಪ ಬೇಸರ ಇತ್ತು. ಅಂದರೆ ಗ್ಯಾಲಕ್ಸಿ Z ಫ್ಲಿಪ್‌ 5 ಫೋನ್‌ 3,700 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರುವುದನ್ನು ನೀವು ಕಾಣಬಹುದು.ಆದರೆ ಮುಂದಿನ ಸರಣಿಯ ಫೋನ್‌ಗಳಲ್ಲಿ ಈ ಸಮಸ್ಯೆ ಕಂಡುಬರುವುದಿಲ್ಲ ಅನ್ನೋದು ಈ ಲೀಕ್‌ ಮಾಹಿತಿ ಮೂಲಕ ದೃಢವಾಗಿದೆ.

ಮುಂಬರುವ ಫ್ಲಿಪ್ ಫ್ಲ್ಯಾಗ್‌ಶಿಪ್ ಉತ್ತಮ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಬಹುದು ಎಂದು ವದಂತಿಗಳಿವೆ. ಊಹಾಪೋಹಗಳೆಂದರೆ ಗ್ಯಾಲಕ್ಸಿ Z ಫ್ಲಿಪ್‌ 6 4,000 mAH ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡಬಹುದಾಗಿದ್ದು, ಎಫ್‌ಸಿಸಿ ಪ್ರಮಾಣೀಕರಣದ ಮೂಲಕ ಈ ಮಾಹಿತಿ ತಿಳಿದುಬಂದಿದೆ. ಹೆಚ್ಚುವರಿಯಾಗಿ, ಪ್ರಮಾಣೀಕರಣವು ಡ್ಯುಯಲ್-ಬ್ಯಾಟರಿ ರಚನೆ ಪಡೆದಿರಲಿದೆ ಎನ್ನಲಾಗಿದೆ.

ಆದರೂ ಸಹ ಡಿವೈಸ್‌ನ ವೇಗವರ್ಧಿತ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಅದರ ಹಿಂದಿನ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ಇದೇ ಪ್ರಯೋಜನ ಮುಂದಿನ ಫೋನ್‌ಗಳಲ್ಲೂ ಇರಲಿದೆ ಎನ್ನಲಾಗಿದೆ. ಇನ್ನು ಮುಂಬರುವ ಸ್ಮಾರ್ಟ್‌ಫೋನ್ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಮತ್ತು ಆಪ್ಟಿಮೈಸ್ಡ್ ಡಿಸ್‌ಪ್ಲೇ ಘಟಕಗಳನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಪ್ರಮಾಣೀಕರಣವು ಸೂಚಿಸುತ್ತದೆ. ಇದರಿಂದಾಗಿ ಬಳಕೆದಾರರು ಪ್ರೀಮಿಯಂ ಅನುಭವವನ್ನು ಪಡೆಯಬಹುದಾಗಿದೆ.

ಈ ಬಗ್ಗೆ 91ಮೊಬೈಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡಿವೈಸ್‌ ಅನ್ನು ಬಿಐಎಸ್‌ ಮತ್ತು ಕ್ಯಾಮೆರಾ FV-5 ಪ್ರಮಾಣೀಕರಣಗಳಲ್ಲಿ ಗುರುತಿಸಲಾಗಿದೆ. ಪ್ರಾಥಮಿಕ ಸೆನ್ಸರ್‌ 12.5-ಮೆಗಾಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಇರುತ್ತದೆ ಎಂದು ಪಟ್ಟಿಯಲ್ಲಿ ಕಂಡುಬಂದಿದ್ದು, ಇದು ಪಿಕ್ಸೆಲ್ ಬಿನ್ನಿಂಗ್‌ನೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಉಲ್ಲೇಖಿಸುತ್ತದೆ ಎಂದು ಹೇಳಲಾಗುತ್ತದೆ. ಈ ಸೆನ್ಸತ್‌ 5.4mm ನಾಭಿದೂರವನ್ನು ಹೊಂದಿರಬಹುದು ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅನ್ನು ಬೆಂಬಲಿಸುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.

ದೊಡ್ಡ ಬ್ಯಾಟರಿಯೊಂದಿಗೆ ಬರಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 6

ಗ್ಯಾಲಕ್ಸಿ Z ಫ್ಲಿಪ್‌ 5 ನ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾಕ್ಕೆ ಹೋಲಿಸಿದರೆ, 50 ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮರಾವನ್ನು ಪರಿಗಣಿಸುವ ಫೀಚರ್ಸ್‌ಗಳು ಈ ಡಿವೈಸ್‌ಗೆ ಗಮನಾರ್ಹವಾದ ಅಪ್‌ಗ್ರೇಡ್ ಆಗಿರಲಿದೆ. ಹಾಗೆಯೇ ಈ ಫೋನ್‌ ಡಿಸ್‌ಪ್ಲೇಯು 3.4 ಇಂಚಿನ ಕವರ್ ಡಿಸ್‌ಪ್ಲೇ ಜೊತೆಗೆ ಒಳಗಿನ ಮಡಿಸುವ ಡಿಸ್‌ಪ್ಲೇಯನ್ನು 6.7 ಇಂಚಿನಷ್ಟು ನಿರೀಕ್ಷಿಸಲಾಗಿದೆ.

ಲೀಕ್‌ ಮಾಹಿತಿಗಳ ಪ್ರಕಾರ ಈ ಫೋನ್ ಬಾಡಿ ಹಿಂದಿನ ಆವೃತ್ತಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ. ಗ್ಯಾಲಕ್ಸಿ ಫ್ಲಿಪ್‌ 6 ಬಣ್ಣಗಳ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದ್ದು, ಇದರಲ್ಲಿ ತಿಳಿ ನೀಲಿ, ತಿಳಿ ಹಸಿರು, ಬೆಳ್ಳಿ ಮತ್ತು ಹಳದಿ ಒಳಗೊಂಡಿರಬಹುದು ಎಂದು ತಿಳಿದುಬಂದಿದೆ. ಈ ಫೋನ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯ ಇದ್ದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಿ.

Best Mobiles in India

English summary
According to some recent leaks, the screenshots of the FCC documents show that the Samsung Galaxy Z Flip 6 might have a better battery backup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+