ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 ಫೋನ್ ಲಾಂಚ್; ಅಂಡರ್ ಡಿಸ್‌ಪ್ಲೇ ಕ್ಯಾಮೆರಾ!
ದಕ್ಷಿಣ ಕೊರಿಯಾ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ನ ಬಹುನಿರೀಕ್ಷಿತ ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಹೊಸ ಗ್ಯಾಲಕ್ಸಿ ಫೋಲ್ಡ್ 3 ಫೋನ್ ಗ್ಯಾಲಕ್ಸಿ ಫೋಲ್ಡ್ 2 ಫೋನ್ ಆವೃತ್ತಿಯ ಉತ್ತರಾಧಿಕಾರಿ ಆಗಿದೆ. ಹೈ ಎಂಡ್ ಫ್ಲ್ಯಾಗ್‌ಶಿಫ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಈ ಫೊನ್ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಅನ್ನು ಯುಎಸ್‌ನಲ್ಲಿ ಲಾಂಚ್ ಮಾಡಿದೆ. ಇದು UDC- ಅಂಡರ್ ಡಿಸ್‌ಪ್ಲೇ ಕ್ಯಾಮೆರಾ ಹೊಂದಿದ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಹಾಗೆಯೇ 12GB RAM ವೇರಿಯಂಟ್‌ನ ಆಯ್ಕೆಯನ್ನು ಪಡೆದಿದೆ. ಹಾಗಾದರೇ ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್
ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಡ್ಯುಯಲ್ ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. 7.6 ಇಂಚಿನ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಪಡೆದಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಡಿಸ್‌ಪ್ಲೇ ಅನುಪಾತವು 22.5:18 ಆಗಿದೆ. ಹಾಗೆಯೇ ಫೋನಿನ ಕವರ್ ಸ್ಕ್ರೀನ್ 6.2-ಇಂಚಿನ HD+ (832x2,268 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಡಿಸ್‌ಪ್ಲೇ 120Hz ರಿಫ್ರೆಶ್ ದರದಲ್ಲಿದೆ.

ಪ್ರೊಸೆಸರ್ ಬಲವೇನು
ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI ಬೆಂಬಲಿತ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 12GB + 256GB ಮತ್ತು 12GB + 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.

ಸ್ಪೆಷಲ್ ಕ್ಯಾಮೆರಾ
ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾ (ಕವರ್ ಕ್ಯಾಮೆರಾ) 10 ಎಂಪಿ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ ಲೈಫ್
ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ 4,400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಇದು ಎಸ್ ಪೆನ್ ಪ್ರೊ ಸೌಲಭ್ಯ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್‌ಫೋನ್ 12GB + 256GB ಹಾಗೂ 12GB + 512GB ಸ್ಟೋರೇಜ್‌ನ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. US ನಲ್ಲಿ ಈ ಫೋನ್ ಬೆಲೆಯು $ 1,799.99 (ಭಾರತದಲ್ಲಿ ಅಂದಾಜು 1,33,600ರೂ) ಆಗಿದೆ. ಇನ್ನು ಈ ಫೋನ್ ಫ್ಯಾಂಟಮ್ ಬ್ಲಾಕ್, ಫ್ಯಾಂಟಮ್ ಗ್ರೀನ್ ಮತ್ತು ಫ್ಯಾಂಟಮ್ ಸಿಲ್ವರ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.


Click it and Unblock the Notifications








