ಪ್ರೀ-ಆರ್ಡರ್‌ನಲ್ಲಿ ದಾಖಲೆ ಬರೆದ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಪೋಲ್ಡ್ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್ 6!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಇತ್ತೀಚಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಪೋಲ್ಡ್ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಭರ್ಜರಿ ಫೀಚರ್ಸ್ ಜೊತೆಗೆ ಫೋನ್ ಪ್ರಿಯರನ್ನು ಆಕರ್ಷಿಸಿದೆ. ಸಂಸ್ಥೆಯು ಈ ಎರಡು ಫೋನ್‌ಗಳು ಇದೀಗ ಪ್ರೀ-ಆರ್ಡರ್ (Pre-Orders) ನಲ್ಲಿ ಹೊಸ ದಾಖಲೆ ಬರೆದಿವೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಅಂದಹಾಗೆ ಭಾರತದಲ್ಲಿ ಮಾರಾಟವಾಗುವ ಗ್ಯಾಲಕ್ಸಿ Z ಫ್ಲಿಪ್ 6 (Galaxy Z Flip 6) ಮತ್ತು ಗ್ಯಾಲಕ್ಸಿ Z ಪೋಲ್ಡ್ 6 (Galaxy Z Fold 6) ಫೋನ್‌ಗಳನ್ನು ನೋಯ್ಡಾದಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಪೋಲ್ಡ್ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್‌ಗಳು ರೆಕಾರ್ಡ್ ಬ್ರೇಕಿಂಗ್ ಪ್ರಿ-ಆರ್ಡರ್‌ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿದೆ. ಇನ್ನು ಪ್ರೀ-ಆರ್ಡರ್‌ನ ಮೊದಲ 24 ಗಂಟೆಗಳಲ್ಲಿ, ಗ್ಯಾಲಕ್ಸಿ Z ಪೋಲ್ಡ್ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್ 6 ಫೋನ್‌ಗಳು ಹಿಂದಿನ ಆವೃತ್ತಿಯ ಫೋಲ್ಡಬಲ್‌ಗಳಿಗಿಂತ ಶೇ 40% ರಷ್ಟು ಅಧಿಕ ಆರ್ಡರ್ ಪಡೆದಿವೆ. ಈ ಬೆಳವಣಿಗೆ ಹೊಸ Z ಸರಣಿಯನ್ನು ಭಾರತದಲ್ಲಿ ಹೆಚ್ಚು ಯಶಸ್ವಿಯಾಗುವಂತೆ ಮಾಡಿದೆ.

ಗ್ಯಾಲಕ್ಸಿ Z ಫೋಲ್ಡ್ 6 - ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಮಾರ್ಟ್‌ಫೋನ್ 7.6 ಇಂಚಿನ ಡೈನಾಮಿಕ್ AMOLED 2X ಮುಖ್ಯ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಕವರ್ ಸ್ಕ್ರೀನ್ 6.2 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಸಾಮರ್ಥ್ಯದಲ್ಲಿ ಇದೆ. ಕವರ್ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ 2 ರಕ್ಷಣೆ ಪಡೆದಿದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು, ಜೊತೆಗೆ 12 GB RAM + 256 GB, 12 GB RAM + 512 GB, ಮತ್ತು 12 GB RAM + 1 TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಿದೆ.
ಗ್ಯಾಲಕ್ಸಿ Z ಫ್ಲಿಪ್ 6 - ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, 2640 x 1080 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇನ್ನು ಕವರ್ ಸ್ಕ್ರೀನ್ 3.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಸಾಮರ್ಥ್ಯದಲ್ಲಿ ಇದೆ. ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ 2 ರಕ್ಷಣೆ ಪಡೆದಿದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು, ಜೊತೆಗೆ 4000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಗ್ಯಾಲಕ್ಸಿ Z ಪೋಲ್ಡ್ 6 ಫೋನ್ 1,64,999ರೂ.ಗಳ (12GB+256GB) ಪ್ರಾರಂಭಿಕ ಬೆಲೆಯಲ್ಲಿ ಇದೆ. ಇನ್ನು ಗ್ಯಾಲಕ್ಸಿ Z ಫ್ಲಿಪ್ 6 ಫೋನ್ 1,09,999ರೂ. ಗಳ (12GB+256GB) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇನ್ನು ಗ್ಯಾಲಕ್ಸಿ ವಾಚ್ ಬೆಲೆಯು 29,999ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆಯು 59,999ರೂ. ಗಳು ಆಗಿದೆ. ಇನ್ನು ಗ್ಯಾಲಕ್ಸಿ ಬಡ್ಸ್ 3 ಬೆಲೆ 14999ರೂ. ಆಗಿದ್ದು, ಗ್ಯಾಲಕ್ಸಿ ಬಡ್ಸ್ 3 ಪ್ರೊ ದರವು 19,999ರೂ.ಗಳು ಆಗಿದೆ.
ಗ್ಯಾಲಕ್ಸಿ Z ಪೋಲ್ಡ್ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್ 6 ಫೋನ್‌ಗಳನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು HDFC ಬ್ಯಾಂಕ್ ಕಾರ್ಡ್‌ಗಳಲ್ಲಿ 8000ರೂ. ಗಳ ಕ್ಯಾಶ್‌ಬ್ಯಾಕ್ ಜೊತೆಗೆ 9 ತಿಂಗಳ ನೋ-ಕಾಸ್ಟ್ ಬ್ಯಾಂಕ್ EMI ಅಥವಾ 8000ರೂ. ಗಳ ಅಪ್‌ಗ್ರೇಡ್ ಬೋನಸ್ ಜೊತೆಗೆ 9 ತಿಂಗಳವರೆಗೆ ನೊ-ಕಾಸ್ಟ್ EMI ಅನ್ನು ಪಡೆಯಬಹುದಾಗಿದೆ. ಇನ್ನು ಅಸ್ತಿತ್ವದಲ್ಲಿರುವ ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ರಾಹಕರು 15000ರೂ. ಗಳ ಅಪ್‌ಗ್ರೇಡ್ ಬೋನಸ್ ಅನ್ನು ಪಡೆದುಕೊಳ್ಳಲು ಆಯ್ಕೆ ಮಾಡಬಹುದು.


Click it and Unblock the Notifications








