ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ

Posted By:

ಸ್ಯಾಮ್‌ಸಂಗ್‌ ತನ್ನ ಎರಡನೇ ಸ್ಮಾರ್ಟ್‌‌ವಾಚ್‌ನ್ನು ಮೊಬೈಲ್‌ ವರ್ಲ್ಡ್‌‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್‌‌ ವಾಚ್‌ ಎರಡು ಹೆಸರಿನಲ್ಲಿ ಬೇರೆ ವಿಶೇಷತೆಯೊಂದಿಗೆ ಬಿಡುಗಡೆಯಾಗಿದೆ.

ಗೇರ್‌ 2 ಮತ್ತು ಗೆಲಾಕ್ಸಿ ಗೇರ್‌ ನಿಯೋ ಹೆಸರಿನಲ್ಲಿ ಬಿಡುಗಡೆಯಾಗಿದ್ದು ಕೆಲ ಹಾರ್ಡ್‌‌ವೇರ್‌,ಸಾಫ್ಟ್‌ವೇ‌ರ್‌ ವಿಶೇಷತೆಗಳು ಈ ಸ್ಮಾರ್ಟ್‌ವಾಚ್‌ನಲ್ಲಿ ಬದಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಗೇರ್‌ಗಿಂತ ಈ ಸ್ಮಾರ್ಟ್‌ವಾಚ್‌ ಭಿನ್ನವಾಗಿದ್ದು ಸ್ಯಾಮ್‌ಸಂಗ್‌‌ನ ಟೈಜನ್‌ ಓಎಸ್‌ನಲ್ಲಿ ಕಾರ್ಯ‌ನಿರ್ವ‌ಹಿಸುತ್ತದೆ.

ಸ್ಯಾಮ್‌ಸಂಗ್‌ ಗೇರ್‌ 2
ವಿಶೇಷತೆ:
1.63 ಇಂಚಿನ ಸುಪರ್‌ ಅಮೊಲೆಡ್‌ ಸ್ಕ್ರೀನ್‌(320 x 320 ಪಿಕ್ಸೆಲ್‌)
1.0 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ಟೈಜನ್‌ ಓಎಸ್
2 ಎಂಪಿ ಕ್ಯಾಮೆರಾ
512 ಎಂಬಿ ರ್‍ಯಾಮ್‌
4ಜಿಬಿ ಆಂತರಿ ಮೆಮೊರಿ
ಎಕ್ಸಲರೋ ಮೀಟರ್‌,ಗೈರೋ ಸ್ಕೋಪ್‌,ಹಾರ್ಟ್ ರೇಟ್‌ ಮಾನಿಟರ್‍
300mAh ಬ್ಯಾಟರಿ

ಹೊಸ ಸ್ಮಾರ್ಟ್‌ವಾಚ್‌ನ ವಿಶೇಷತೆ ಜೊತೆಗೆ ಈ ಹಿಂದಿನ ವಾಚ್‌‌ಗಿಂತ ಈ ವಾಚ್‌ ಹೇಗೆ ಭಿನ್ನ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌ ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪರೇಟಿಂಗ್‌ ಸಿಸ್ಟಂ:

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಹಿಂದೆ ಬಿಡುಗಡೆಯಾಗಿದ್ದ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್ ಓಎಸ್‌ನಲ್ಲಿದ್ದರೆ,ಈ ಸ್ಮಾರ್ಟ್‌ವಾಚ್‌ಗೆ ಸ್ಯಾಮ್‌ಸಂಗ್‌ ತನ್ನದೇ ಆದ ಹೊಸ ಟೈಜನ್‌ ಓಎಸ್‌ ನೀಡಿದೆ.

ಪ್ರೊಸೆಸರ್‌:

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಈ ಹಿಂದೆ ಬಿಡುಗಡೆಯಾಗಿದ್ದ ಸ್ಮಾರ್ಟ್‌ವಾಚ್‌ 800 MHz ಪ್ರೊಸೆಸರ್‌,1.9 ಎಂಪಿ ಕ್ಯಾಮೆರಾ,73.8 ಗ್ರಾಂ ತೂಕವನ್ನು ಹೊಂದಿದ್ದರೆ, ಈ ಗೇರ್‌2 ಸ್ಮಾರ್ಟ್‌ವಾಚ್‌ 1.0 GHz ಪ್ರೊಸೆಸರ್‌,2 ಎಂಪಿ ಕ್ಯಾಮೆರಾ, 68 ಗ್ರಾಂ ತೂಕವನ್ನು ಹೊಂದಿದ್ದರೆ, ಗೇರ್‌ 2 1.0 GHz ಪ್ರೊಸೆಸರ್‌ 55 ಗ್ರಾಂ ತೂಕವನ್ನು ಹೊಂದಿದೆ.ಆದರೆ ಈ ಸ್ಮಾರ್ಟ್‌‌ವಾಚ್‌ಗೆ ಸ್ಯಾಮ್‌ಸಂಗ್‌ ಕ್ಯಾಮೆರಾ ಸೌಲಭ್ಯವನ್ನು ನೀಡಿಲ್ಲ.

 ಸೆನ್ಸರ್‌:

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಹೊಸ ಎರಡು ಸ್ಮಾರ್ಟ್‌ವಾಚ್‌ ಎಕ್ಸಲರೋ ಮೀಟರ್‌, ಗೈರೋಸ್ಕೋಪ್‌,ಹಾರ್ಟ್‌ ರೇಟ್‌ ಮಾನಿಟರ್‌ ಸೆನ್ಸರ್‌ಗಳನ್ನು ಒಳಗೊಂಡಿದೆ. ಈ ಹಿಂದೆ ಬಿಡುಗಡೆಯಾದ ಸ್ಮಾರ್ಟ್‌ವಾಚ್‌ ಎಕ್ಸಲರೋ ಮೀಟರ್‌, ಗೈರೋಸ್ಕೋಪ್‌ ಸೆನ್ಸರ್‌ಗಳನ್ನು ಒಳಗೊಂಡಿತ್ತು.

 ರ್‍ಯಾಮ್‌ ಮತ್ತು ಆಂತರಿಕ ಮೆಮೊರಿ:

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಈ ಹಿಂದೆ ಬಿಡುಗಡೆಯಾಗಿದ್ದ ಸ್ಮಾರ್ಟ್‌ವಾಚ್‌ನಲ್ಲಿದ್ದಂತೆ ಈ ವಾಚ್‌ಗೆ 512 ಎಂಬಿ ರ್‍ಯಾಮ್‌,4 ಜಿಬಿ ಆಂತರಿಕ ಮೆಮೊರಿಯನ್ನು ಸ್ಯಾಮ್‌ಸಂಗ್‌ ನೀಡಿದೆ.

 ಏನು ಮಾಡಬಹುದು:

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಬ್ಲೂಟೂತ್‌ ಕಾಲ್‌‌, ನೋಟಿಫಿಕೇಶನ್‌(ಎಸ್‌ಎಂಎಸ್‌‌,ಇಮೇಲ್‌,ಆಪ್ಸ್‌‌‌)ಮೀಡಿಯಾ ಕಂಟ್ರೋಲರ್‌,ಎಸ್‌ ವಾಯ್ಸ್‌,ಸ್ಟಾಪ್‌ ವಾಚ್‌‌,ಹವಾಮಾನ,ಟೈಮರ್‌ ಇದೆ.

 ಎಷ್ಟು ಸಾಧನಗಳಿಗೆ ಬೆಂಬಲ ನೀಡುತ್ತದೆ?

ಸ್ಯಾಮ್‌ಸಂಗ್‌ ಗೇರ್‌-2 ಸ್ಮಾರ್ಟ್‌ವಾಚ್‌ ಬಿಡುಗಡೆ


ಸ್ಯಾಮ್‌ಸಂಗ್‌ ಹೇಳುವಂತೆ 20ಕ್ಕೂ ಹೆಚ್ಚು ಸ್ಯಾಮ್‌ಸಂಗ್‌ ಸಾಧನಗಳಿಗೆ ಸ್ಮಾರ್ಟ್‌ವಾಚ್‌‌‌‌ ಬೆಂಬಲ ನೀಡುತ್ತದೆ ಎಂದು ತಿಳಿಸಿದೆ. ಯಾವೆಲ್ಲಾ ಸಾಧನಗಳನ್ನು ಎಂಬುದನ್ನು ಸ್ಯಾಮ್‌ಸಂಗ್‌ ತಿಳಿಸಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot