Subscribe to Gizbot

ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌ ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ ವಾಚ್‌ ಬೆಲೆ ಇಳಿಕೆಯಾಗಿದೆ. 22,990 ಬೆಲೆಯಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ವಾಚ್‌ ಬೆಲೆ ಆರು ಸಾವಿರ ರೂಪಾಯಿ ಕಡಿಮೆಯಾಗಿ 15,290 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಜನವರಿ ಮಧ್ಯ ಭಾಗದಲ್ಲಿ ಈ ಸ್ಮಾರ್ಟ್‌ವಾಚ್‌ಗೆ 19,075 ರೂಪಾಯನ್ನು ಸ್ಯಾಮ್‌ಸಂಗ್‌ ನಿಗದಿ ಮಾಡಿತ್ತು.ಈಗ ಸ್ಯಾಮ್‌ಸಂಗ್‌ ಮತ್ತಷ್ಟು ಬೆಲೆಯನ್ನು ಇಳಿಕೆ ಮಾಡಿದೆ. ಹೀಗಾಗಿ ಸ್ಯಾಮ್‌ಸಂಗ್‌‌ ಹೊಸ ಸ್ಮಾರ್ಟ್‌ವಾಚ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ? ಉಳಿದ ವಾಚ್‌ಗಿಂತ ಹೇಗೆ ಭಿನ್ನ? ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ವಿವರ ಇಲ್ಲಿ ನೀಡಲಾಗಿದೆ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

ಇದನ್ನೂ ಓದಿ: ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಯಾಕೆ ಖರೀದಿಸಬೇಕು?
ಇದನ್ನೂ ಓದಿ: ಮೋಟೋ ಜಿ ಸ್ಮಾರ್ಟ್‌ಫೋನ್‌ನ್ನು ಈಗಲೇ ಯಾಕೆ ಖರೀದಿಸಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌

1


ವಿಶೇಷತೆ:
800 MHz ಪ್ರೊಸೆಸರ್‌
1.63 ಇಂಚಿನ ಸುಪರ್‌ AMOLED ಸ್ಕ್ರೀನ್(320 x 320 ಪಿಕ್ಸೆಲ್‌)
1.9 ಎಂಪಿ ಕ್ಯಾಮೆರಾ,ಆಟೋ ಫೋಕಸ್‌ ಕ್ಯಾಮೆರಾ
2 ಮೈಕ್ರೋಫೋನ್‌‌,1 ಸ್ಪೀಕರ್‌
4GB ಆಂತರಿಕ ಮೆಮೊರಿ
512 MB RAM
73.8 ಗ್ರಾಂ ತೂಕ
ಬ್ಲೂಟೂತ್‌,ಎನ್‌ಎಫ್‌ಸಿ,ಗೈರೋಸ್ಕೋಪ್‌,ಎಕ್ಸಲರೋಮೀಟರ್‌
315mAh ಬ್ಯಾಟರಿ

 ಸಪೋರ್ಟ್‌ ಮಾಡುವ ಸ್ಯಾಮ್‌ಸಂಗ್‌ ಸಾಧನಗಳು:

2


ಸ್ಯಾಮ್‌ಸಂಗ್‌ ಎಲ್ಲಾ ಸಾಧನಗಳು ಈ ಸ್ಮಾರ್ಟ್‌‌ವಾಚ್‌‌ಗೆ ಬೆಂಬಲ ನೀಡುವುದಿಲ್ಲ.ಬದಲಾಗಿ ದುಬಾರಿಯ ಬೆಲೆಯ ಆಂಡ್ರಾಯ್ಡ್‌ 4.3 ಓಎಸ್‌‌ ಒಳಗೊಂಡಿರುವ ಸ್ಮಾರ್ಟ್‌‌ಫೋನ್‌ಗಳಾದ ಗೆಲಾಕ್ಸಿ ನೋಟ್‌3‌ ,ನೋಟ್‌2, ಗೆಲಾಕ್ಸಿ ಎಸ್‌ 4 ಎಸ್‌3, ಎಸ್‌ 4 ಮಿನಿ,ಎಸ್‌ 4 ಝೂಮ್‌ ಮತ್ತು ನೋಟ್‌ 10.1(2014) ಟ್ಯಾಬ್ಲೆಟ್‌ ಈ ಸ್ಮಾರ್ಟ್‌ವಾಚ್‌ಗೆ ಬೆಂಬಲ ನೀಡುತ್ತವೆ.

 ಸ್ಮಾರ್ಟ್‌ ವಾಚ್‌ ವಿನಾಃ ಸ್ಮಾರ್ಟ್‌‌‌ಫೋನಲ್ಲ:

3


ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌‌ ವಿನಾಃ ಸ್ಮಾರ್ಟ್‌‌ಫೋನಲ್ಲ.ಇದರಲ್ಲಿ ಸಿಮ್‌ ಕಾರ್ಡ್‌‌ ಹಾಕಲು ಸಾಧ್ಯವಿಲ್ಲ.ಇನ್‌ ಬಿಲ್ಟ್‌ ಸ್ಪೀಕರ್‌ ಮತ್ತು ಮೈಕ್ರೋಫೋನ್‌ ವಾಚ್‌‌ನಲ್ಲಿದೆ. ಹೀಗಾಗಿ ಬ್ಲೂಟೂತ್‌ ಮೂಲಕ ಕಾಂಟಾಕ್ಟ್‌ ಸಿಂಕ್‌ ಮಾಡಿಕೊಂಡು ವಾಚ್‌ನಲ್ಲಿರುವ ಡಯಲರ್‌ ಮೂಲಕ ಆಪ್ತರಿಗೆ ಕಾಲ್‌ ಮಾಡಬಹುದು.

ಮೀಡಿಯಾ ಕಂಟ್ರೋಲರ್‌‌:

4

ಈ ವಾಚ್‌ನ ಇನ್ನೊಂದು ವಿಶೇಷತೆ ಏನೆಂದರೆ ಇದನ್ನು ಮೀಡಿಯಾ ಕಂಟ್ರೋಲ್‌ ಆಗಿಯೂ ಬಳಸಬಹುದು. ಸಂಗೀತಾವನ್ನು ವಾಚ್‌‌ನಿಂದಲೇ 'pause' 'play' ಜೊತೆಗೆ
ಮುಂದಿನ ಹಾಡಿಗೂ ಹೋಗಬಹುದು.

 ಫೋಟೋ ಕ್ಲಿಕ್‌ ಮಾಡಬಹುದು:

5


ಗೆಲಾಕ್ಸಿ ಗೇರ್‌ ಬೆಲ್ಟ್‌ನಲ್ಲಿ 1.9 ಎಂಪಿ ಕ್ಯಾಮೆರಾವಿದ್ದು ಫೋಟೋ ತೆಗೆಯಬಹುದು.ಇದರ ಸಮಸ್ಯೆ ಏನೆಂದರೆ ನಿಮ್ಮ ಕೈಯನ್ನು ಮೇಲಕ್ಕೆ ಎತ್ತಿ ಫೋಟೋ ಕ್ಲಿಕ್‌ ಮಾಡಬೇಕಾಗುತ್ತದೆ. ಇದು ಸ್ವಲ್ಪ ಕಷ್ಟ. ಹೀಗಾಗಿ ಚೆನ್ನಾಗಿರುವ ಫೋಟೋ ತೆಗೆಯಬೇಕಾದರೆ ಸ್ವಲ್ಪ ಪ್ರಯತ್ನಪಡಬೇಕಾಗುತ್ತದೆ.

ನೋಟಿಫಿಕೇಶನ್‌‌

6


ಸ್ಯಾಮ್‌ಸಂಗ್‌ ಸಾಧನದಲ್ಲಿರುವ ಆಪ್‌ಗೆ ಬರುವ ನೋಟಿಫಿಕೇಶನ್‌‌ಗಳು ಈ ವಾಚ್‌ನಲ್ಲಿ ತಿಳಿಯುತ್ತದೆ.ಆದರೆ ನೋಟಿಫಿಕೇಶನ್‌ ಓಪನ್‌ ಮಾಡಲು ಸಾಧ್ಯವಿಲ್ಲ.ಓಪನ್‌ ಮಾಡಬೇಕಿದ್ದಲ್ಲಿ ಸ್ಮಾರ್ಟ್‌‌ಫೋನ್‌‌ ಅಥವಾ ಟ್ಯಾಬ್ಲೆಟ್‌ ಮೂಲಕವೇ ಓಪನ್‌ ಮಾಡಬೇಕಾಗುತ್ತದೆ.

7


ಈ ಸ್ಮಾರ್ಟ್‌ವಾಚ್‌ನಲ್ಲಿ ಧರಿಸಿ ವ್ಯಾಯಾಮ ಮಾಡುವವರಿಗೆ ಸ್ಯಾಮ್‌ಸಂಗ್‌ ವಾಚ್‌ ಬಿಲ್ಟ್‌ ಇನ್‌‌ ಪೆಡೋಮೀಟರ್‌ ಇದೆ. ಎಷ್ಟು ಹೊತ್ತು ನಡೆದಿದ್ದೀರಿ, ಎಷ್ಟು ಕ್ಯಾಲೋರಿ ಖರ್ಚಾಯಿತು ಎಂಬುದನ್ನು ಈ ವಾಚ್‌ನಲ್ಲಿರುವ ಆಪ್‌ ಮೂಲಕ ತಿಳಿಯಬಹುದಾಗಿದೆ.

 ಬ್ಯಾಟರಿ:

8


ಗೆಲಾಕ್ಸಿ ಗೇರ್‌ ಸ್ಮಾರ್ಟ್ ವಾಚ್‌ 315mAh ಬ್ಯಾಟರಿಯನ್ನು ಹೊಂದಿದೆ.ಸ್ಟ್ಯಾಂಡ್‌ ಬೈ ಟೈಂ 150 ಗಂಟೆ, 25 ಗಂಟೆ ನಿರಂತರವಾಗಿ ಬಳಸಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ. ಹೀಗಾಗಿ ಒಂದು ಬಾರಿ ಪೂರ್ಣ‌ವಾಗಿ ಚಾರ್ಜ್ ಮಾಡಿದರೆ ಎರಡು ದಿನಗಳ ಕಾಲ ಈ ವಾಚ್‌‌‌ ಧರಿಸಿ ಓಡಾಡಬಹುದು.

9


ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್ ಬೇರೆ ಯಾವುದೇ ಕಂಪೆನಿಯ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ಗೆ ಬೆಂಬಲ ನೀಡುವುದಿಲ್ಲ. ಹೀಗಾಗಿ ಈ ವಾಚನ್ನು ಖರೀದಿಸಬೇಕಿದ್ದಲ್ಲಿ ಮೊದಲಿನ ಪುಟದಲ್ಲಿ ತಿಳಿಸಿರುವ ಸ್ಯಾಮ್‌ಸಂಗ್‌ ಸಾಧನಗಳು ನಿಮ್ಮಲ್ಲಿರಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot