Samsung: ನವ ದಂಪತಿಗಳಿಗೆ ಮದುವೆಯ ಉಡುಗೊರೆಯಾಗಿ ಸ್ಯಾಮ್‌ಸಂಗ್‌ನಿಂದ ವಿಶೇಷ ಕೊಡುಗೆ: ಭಾರೀ ಹಣ ಉಳಿತಾಯ!
ಸ್ಯಾಮ್‌ಸಂಗ್ (Samsung) ತನ್ನ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ ಗ್ಯಾಜೆಟ್‌ಗಳ ಮೂಲಕ ಸ್ಮಾರ್ಟ್ ಗ್ಯಾಜೆಟ್ ಲೋಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಈ ನಡುವೆ ಹೊಸದಾಗಿ ಮದುವೆಯಾದ ಜೋಡಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದ್ದು, ಈ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳಿಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸುತ್ತಿದೆ.
ಹೌದು, ಸ್ಯಾಮ್‌ಸಂಗ್ ಇದೀಗ ವಿಶೇಷ ಸೇಲ್ ಅನ್ನು ಆಯೋಜನೆ ಮಾಡಿದ್ದು, ಇದಕ್ಕೆ ನ್ಯೂ ಬಿಗ್‌ಇನ್ನಿಂಗ್ಸ್ ಪ್ರೋಗ್ರಾಂ (New BigInnings program) ಎಂದು ಕರೆದಿದೆ. ಈ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳಿಗೆ ಮನೆಗೆ ಅಗತ್ಯವಾದ ಸ್ಮಾರ್ಟ್ ಡಿವೈಸ್‌ಗಳನ್ನು ಆಫರ್ ಬೆಲೆಗೆ ನೀಡುತ್ತಿದೆ. ಅಂದರೆ ಕಡಿಮೆ ದರದಲ್ಲಿ ಅತ್ಯುತ್ತಮವಾದ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಸೇಲ್‌ನಲ್ಲಿ ಏನೆಲ್ಲಾ ಲಭ್ಯ ಇವೆ?, ಆಫರ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನ್ಯೂ ಬಿಗ್‌ಇನ್ನಿಂಗ್ಸ್ ಪ್ರೋಗ್ರಾಂ: ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್ ಫೋನ್‌ಗಳು, ಧರಿಸಬಹುದಾದ ಗ್ಯಾಜೆಟ್‌ಗಳು, ಟಿವಿಗಳು, ರೆಫ್ರಿಜರೇಟರ್, ಮೈಕ್ರೋವೇವ್, ಸೌಂಡ್‌ಬಾರ್‌ಗಳು, ವಾಷಿಂಗ್ ಮೆಷಿನ್ ಮತ್ತು ಎಸಿಗಳಂತಹ ಅನೇಕ ಡಿವೈಸ್ ಅನ್ನು ಖರೀದಿ ಮಾಡಬಹುದಾಗಿದೆ. ಹೊಸ ಖರೀದಿದಾರರಿಗೆ ವಿಶೇಷ ಪ್ಯಾಕೇಜ್ ರೀತಿಯಲ್ಲಿ ಈ ಆಫರ್ ನೀಡುತ್ತಿದೆ. ಹೊಸದಾಗಿ ಮದುವೆಯಾದ ದಂಪತಿಗಳು ಒಂದೇ ಸಮಯದಲ್ಲಿ ಮೂರಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಖರೀದಿಸಿದರೆ ಈ ಕೊಡುಗೆಯ ಭಾಗವಾಗಬಹುದು ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಈ ವಿಶೇಷ ಸೇಲ್‌ನ ಭಾಗವಾಗಿ ಸ್ಯಾಮ್‌ಸಂಗ್ ಸುಮಾರು 7% ಹೆಚ್ಚುವರಿ ರಿಯಾಯಿತಿಯನ್ನು ಸಹ ಘೋಷಿಸಿದೆ. ದಂಪತಿಗಳಿಗಾಗಿ ಸ್ಮಾರ್ಟ ಲಿವಿಂಗ್, ಎಂಟರ್‌ಟೈನ್‌ಮೆಂಟ್ ಮತ್ತು ಹಿಸ್ ಅಂಡ್ ಹರ್ ಎಂಬ ಮೂರು ಪ್ಯಾಕೇಜ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಇದರೊಂದಿಗೆ ಪ್ರೀಮಿಯಂ, ಎಲಿಗಂಟ್ ಮತ್ತು ಮಾಡರ್ನ್ ನಂತಹ ಆಯ್ಕೆಗಳನ್ನೂ ಸಹ

ಸ್ಮಾರ್ಟರ್ ಲಿವಿಂಗ್ ಥೀಮ್: ಈ ವಿಭಾಗದಲ್ಲಿ ನೀವು ನಿಯೋ ಕ್ಯೂಎಲ್‌ಇಡಿ ಟಿವಿ, ಕ್ಯೂಎಲ್‌ಇಡಿ ಟಿವಿ, ಫ್ರೇಮ್ ಟಿವಿ, ಫ್ಯಾಮಿಲಿ ಹಬ್ ರೆಫ್ರಿಜರೇಟರ್, ಬೆಸ್ಪೋಕ್ ಸೈಡ್-ಬೈ-ಸೈಡ್ ರೆಫ್ರಿಜರೇಟರ್ ಮತ್ತು ಹೆಚ್ಚಿನ ಸಾಮರ್ಥ್ಯದ ಫ್ರಂಟ್-ಲೋಡ್ ವಾಷಿಂಗ್ ಮೆಷಿನ್‌ಗಳಂತಹ ಎಐ ಸಕ್ರಿಯಗೊಳಿಸಿದ ಪ್ರೀಮಿಯಂ ಪ್ರೊಡಕ್ಟ್‌ಗಳನ್ನು ಖರೀದಿ ಮಾಡಬಹುದಾಗಿದೆ.
ಎಂಟರ್‌ಟೈನ್‌ಮೆಂಟ್ ಥೀಮ್: ಈ ವಿಭಾಗದಲ್ಲಿ ಗ್ರಾಹಕರು ನಿಯೋ ಕ್ಯೂಎಲ್‌ಇಡಿ ಟಿವಿ, ಕ್ಯೂಎಲ್‌ಇಡಿ 4K ಟಿವಿ, ಎಐ ಸಕ್ರಿಯಗೊಳಿಸಿದ ವಿಂಡ್‌ಫ್ರೀ ಎಸಿ, ಸ್ಯಾಮ್‌ಸಂಗ್‌ನ ಪ್ರೀಮಿಯಂ ಸೌಂಡ್‌ಬಾರ್‌ಗಳು, ಮೈಕ್ರೋವೇವ್‌ಗಳು, ಗ್ಯಾಲಕ್ಸಿ ಬಡ್ಸ್ ಸೇರಿದಂತೆ ಇನ್ನೂ ಅನೇಕ ರೀತಿಯಾದ ಸ್ಮಾರ್ಟ್ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇಲ್ಲಿ ಮನರಂಜನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಹಿಸ್ ಅಂಡ್ ಹರ್ ಥೀಮ್: ಈ ಪ್ಯಾಕೇಜ್‌ನಲ್ಲಿ ಗ್ರಾಹಕರು ಗ್ಯಾಲಕ್ಸಿ Z ಫೋಲ್ಡ್ 5, ಗ್ಯಾಲಕ್ಸಿ Z ಫ್ಲಿಪ್ 5, ಗ್ಯಾಲಕ್ಸಿ ಚಾಚ್ 6 ಕ್ಲಾಸಿಕ್, ಗ್ಯಾಲಕ್ಸಿ ವಾಚ್ 6, ಗ್ಯಾಲಕ್ಸಿ ಬಡ್ಸ್ 2 ಸೇರಿದಂತೆ ಇನ್ನಿತರೆ ವಿಶೇಷ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.
ಈ ವಿಶೇಷ ಖರೀದಿಗಳ ಭಾಗವಾಗಿ ಬಳಕೆದಾರರು 15,000ರೂ.ಮೌಲ್ಯದ ಉಡುಗೊರೆಗಳನ್ನು ಪಡೆಯಬಹುದಾಗಿದೆ. ನ್ಯೂ ಬಿಗ್‌ಇನ್ನಿಂಗ್ಸ್ ಕಾರ್ಯಕ್ರಮದ ಮೂಲಕ ಮೂರು ಉತ್ಪನ್ನಗಳ ಖರೀದಿಗೆ 7% ರಷ್ಟು ರಿಯಾಯಿತಿ ಮತ್ತು ಎರಡು ಉತ್ಪನ್ನಗಳ ಖರೀದಿಗೆ 5 % ರಿಯಾಯಿತಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈ ಸೇಲ್‌ನಲ್ಲಿ ಬಳಕೆದಾರರು 24 ತಿಂಗಳ ಇಎಮ್‌ಐ ಆಯ್ಕೆಯನ್ನು ಸಹ ಪಡೆಯುತ್ತಾರೆ. ಇದು ತಿಂಗಳಿಗೆ 6,999ರೂ.ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ.
ಇದರೊಂದಿಗೆ 8,999 ರೂ.ಗಳು ಮತ್ತು 10,999 ರೂ.ಗಳ ವಿಶೇಷ ಪ್ಯಾಕೇಜ್ ಆಯ್ಕೆ ಸಹ ಇದ್ದು, ನವವಿವಾಹಿತರು ಈ ಕೊಡುಗೆಯನ್ನು ಸಹ ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿದೆ. ಈ ಪ್ಯಾಕೇಜ್‌ಗಳು ಫೆಬ್ರವರಿ 9, 2024 ರವರೆಗೆ ಮಾನ್ಯವಾಗಿರುತ್ತವೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಹಾಗಿದ್ರೆ ಮತ್ಯಾಕೆ ತಡ ನೀವು ನವ ವಿವಾಹಿತರಾದ್ದಲ್ಲಿ ಈ ವಿಶೇಷ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಿ.


Click it and Unblock the Notifications








