Samsung smart Tvಯಲ್ಲಿ ಹೊಸ ಫೀಚರ್ಸ್: ಕಣ್ಣಿನ ದೋಷ ಇರುವವರಿಗೆ ಸಹಾಯಕ!
ಸ್ಮಾರ್ಟ್‌ಟಿವಿಗಳು ಇಂದು ಬಳಕೆದಾರರಿಗೆ ವಿವಿಧ ರೀತಿಯ ಹೊಸ ಅನುಭವ ನೀಡುತ್ತಾ ಬರುತ್ತಿವೆ. ಈ ಟಿವಿಗಳ ವೀಕ್ಷಣೆಯನ್ನು ಹೆಚ್ಚಿನ ಮಾಡಲು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ಬೆನ್ನೆಲುಬಾಗಿವೆ. ಈ ನಡುವೆ ಸ್ಯಾಮ್‌ಸಂಗ್ ಕಂಪೆನಿಯು ವಯಸ್ಸಾದವರು ಹಾಗೂ ಕಣ್ಣಿನ ಸಮಸ್ಯೆ ಇರುವರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು, ಸ್ಯಾಮ್‌ಸಂಗ್ (Samsung) ಇದೀಗ ಸೀಕಲರ್ಸ್ (SeeColours) ಮೋಡ್ ಎಂಬ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಮೂಲಕ ಬಣ್ಣ ದೃಷ್ಟಿ ಕೊರತೆಯಿಂದ ಬಳಲುವ ಜನರು ಈ ಸ್ಮಾರ್ಟ್‌ಟಿವಿಯಲ್ಲಿ ಮಾತ್ರ ಅತ್ಯುತ್ತಮವಾದ ಬಣ್ಣಗಳನ್ನು ಸುಲಭವಾಗಿ ಗುರುತಿಸಬಹುದು. ಹಾಗಿದ್ರೆ ಏನಿದು ಹೊಸ ಫೀಚರ್ಸ್, ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಈ ಲೇಖನ ಓದಿರಿ.

ವಯಸ್ಸಾದವರಿಗೆ ಸ್ಯಾಮ್ಸಂಗ್ ಟಿವಿ ಅತ್ಯುತ್ತಮ ಆಯ್ಕೆ: ಸಾಮಾನ್ಯವಾಗಿ ಜನರು ವೃದ್ಧಾಪ್ಯದಲ್ಲಿ ಮನೆಯಲ್ಲೇ ಕೂತು ಟಿವಿ ನೋಡುವ ಮೂಲಕ ಕಾಲ ಕಳೆಯುತ್ತಾರೆ. ಆದರೆ ಈಗ ಲಭ್ಯ ಇರುವ ಟಿವಿಗಳು ಸಾಮನ್ಯ ಜನರಿಗೆ ಆಕರ್ಷಕ ಹಾಗೂ ವಿಭಿನ್ನವಾದರೂ ವಯಸ್ಸಾದವರಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ. ಯಾಕೆಂದರೆ ಅವರು ವಯಸ್ಸಾದಂತೆ ಕಣ್ಣಿನ ಸಮಸ್ಯೆ ಎದುರಿಸುತ್ತಿರುತ್ತಾರೆ. ಇದರಿಂದಾಗಿ ಟಿವಿಯಲ್ಲಿ ಆನಂದದಿಂದ ನೋಡಲು ಸಾಧ್ಯ ಆಗುವುದಿಲ್ಲ. ಆದರೆ ಸ್ಯಾಮ್‌ಸಂಗ್ ಈ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ವಯಸ್ಸಾದವರೂ ಮಾತ್ರವಲ್ಲದೆ ಇಂದಿನ ಜೀವನ ಶೈಲಿ ಹಿನ್ನೆಲೆ ಕೆಲವು ವಯಸ್ಕ ಜನರೂ ಸಹ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಇವರಿಗೂ ಸಹ ಈ ಸ್ಮಾರ್ಟ್‌ಟಿವಿ ಹೊಸ ಫೀಚರ್ಸ್ ಸಹಾಯಕವಾಗಲಿದೆ. ಅದರಂತೆ ಸೀಕಲರ್ಸ್ ಮೋಡ್ ಫೀಚರ್ಸ್ ಪರಿಚಯಿಸಿದ ಮೊದಲ ಸ್ಮಾರ್ಟ್‌ಟಿವಿಯಾಗಿ ಈ ಸ್ಯಾಮ್‌ಸಂಗ್ ಗುರುತಿಸಿಕೊಳ್ಳಲಿದೆ. ಅದರಂತೆ 2023 ರಲ್ಲಿ ಲಾಂಚ್ ಆಗಿರುವ QLED, QLED, OLED ಟಿವಿಗಳು ಮತ್ತು ಮಾನಿಟರ್‌ಗಳು ಹಾಗೂ G95SC ಗೇಮಿಂಗ್ ಮಾನಿಟರ್ ಈ ಸೀಕಲರ್ಸ್ ಮೋಡ್ ಫೀಚರ್ಸ್ ಅನ್ನು ಪಡೆದುಕೊಳ್ಳಲಿವೆ.
ಇದು ಹೇಗೆ ಕೆಲಸ ಮಾಡುತ್ತದೆ?: ಈ ಹೊಸ ಫೀಚರ್ಸ್‌ನಿಂದಾಗಿ ವಯಸ್ಸಾದವರು ಹಾಗೂ ದೃಷ್ಟಿ ಸಮಸ್ಯೆ ಇರುವವರು ಇನ್ಮುಂದೆ ಕನ್ನಡಕದ ಸಹಾಯವಿಲ್ಲದೆ ಸ್ಮಾರ್ಟ್‌ಟಿವಿ ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ ವಿವಿಧ ರಂಗನ್ನು ನೋಡುವ ಮೂಲಕ ತಮ್ಮಿಷ್ಟದ ವಿಡಿಯೋಗಳನ್ನು ಆನಂದಭಾವವನ್ನು ಪಡೆದುಕೊಳ್ಳಬಹುದು. ಅದರಂತೆ ಈ ಸೀಕಲರ್ಸ್ ಮೋಡ್ ಫೀಚರ್ಸ್ ಟಿವಿ ಡಿಸ್‌ಪ್ಲೇನಲ್ಲಿ ಕೆಂಪು, ಹಸಿರು ಮತ್ತು ನೀಲಿ ಮಟ್ಟವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಇದರಿಂದ ಸಮಸ್ಯೆ ಏನಾದರೂ ಇದೆಯೇ?: ಈ ಫೀಚರ್ಸ್ ಅನ್ನು ಈ ಹಿಂದೆ ಅಂದರೆ 2017 ರಲ್ಲಿ ಆಪ್ ರೂಪದಲ್ಲಿ ಪರಿಚಯಿಸಲಾಗಿತ್ತು. ಆದರೆ, ಈಗ ಸ್ಮಾರ್ಟ್‌ಟಿವಿಗಳಲ್ಲೂ ನೀಡಿರುವುದರಿಂದ ಬಹಳಷ್ಟು ಮಂದಿಗೆ ಸಂತಸದ ವಿಷಯವಾಗಿದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆ ಸೀಕಲರ್ಸ್ ಮೋಡ್ ಫೀಚರ್ಸ್ ಸೆಟ್ಟಿಂಗ್‌ಗಳ ಮೆನುವಿನಲ್ಲಿಯೇ ಕಾಣಿಸಿಕೊಂಡಿದೆ. ಅದರಂತೆ ಈ ಫೀಚರ್ಸ್ ಬಳಕೆದಾರರ ಬಣ್ಣ ದೋಷಗಳನ್ನು ಸರಿಪಡಿಸುವುದಿಲ್ಲ. ಜೊತೆಗೆ ಅವರಿಗೆ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟುಮಾಡುವುದಿಲ್ಲವಂತೆ.

ನಮ್ಮ 2023 ರಲ್ಲಿ ಲಾಂಚ್ ಆದ ಟಿವಿಯಲ್ಲಿ ಸೀಕಲರ್ಸ್ ಮತ್ತು ರೆಲುಮಿನೋ ಮೋಡ್ ಸೇರಿದಂತೆ ಹೆಚ್ಚುವರಿ ಹೊಸ ಫೀಚರ್ಸ್ ಅನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಅದರಲ್ಲೂ ಬಣ್ಣ ಕುರುಡುತನ ಮತ್ತು ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಇದು ಸಹಾಯಕ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಷುಯಲ್ ಡಿಸ್‌ಪ್ಲೇ ವ್ಯವಹಾರದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಿಯೋಕ್ವೂ ಜೇಸನ್ ಯೋಂಗ್ ಹೇಳಿದ್ದಾರೆ.
ಈ ನಡುವೆ ಸ್ಯಾಮ್‌ಸಂಗ್ ಎಲ್‌ಜಿ ಡಿಸ್ಪ್ಲೇ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಸ್ಯಾಮ್‌ಸಂಗ್ ತನ್ನ ಭವಿಷ್ಯದ OLED ಟಿವಿಗಳಿಗಾಗಿ ಎಲ್‌ಜಿ ಡಿಸ್ಪ್ಲೇಯಿಂದ WRGB OLED ಟಿವಿ ಪ್ಯಾನೆಲ್‌ಗಳನ್ನು ಖರೀದಿಸುತ್ತದೆ. ಈಗ ಎಲ್ ಸ್ಯಾಮ್‌ಸಂಗ್‌ಗೆ ಸಣ್ಣ ಪ್ರಮಾಣದ WRGB OLED ಪ್ಯಾನೆಲ್‌ಗಳನ್ನು ಪೂರೈಸಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ಇನ್ನು ಈ ಪ್ಯಾನೆಲ್‌ಗಳನ್ನು ಆಧರಿಸಿದ ಸ್ಮಾರ್ಟ್‌ಟಿವಿಗಳನ್ನು ಸ್ಯಾಮ್‌ಸಂಗ್ ಈ ವರ್ಷದ ಕೊನೆಯಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಆದ್ದರಿಂದ, ದಕ್ಷಿಣ ಕೊರಿಯಾದ ಸಂಸ್ಥೆಯು ಅದರ 2023 ಶ್ರೇಣಿಯಲ್ಲಿ WRGB OLED ಮತ್ತು QD-OLED ಟಿವಿ ಮಾದರಿಗಳ ಉತ್ತಮ ಮಿಶ್ರಣವನ್ನು ಹೊಂದಿರುತ್ತದೆ ಎನ್ನಲಾಗಿದೆ.


Click it and Unblock the Notifications








