Samsung Galaxy S24 FE ಪ್ರಿ-ಬುಕಿಂಗ್ ಶುರು; ಗ್ರಾಹಕರಿಗೆ ಭರ್ಜರಿ ಕೊಡುಗೆ ಲಭ್ಯ!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯ ಇತ್ತೀಚಿಗೆ ನೂತನವಾಗಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE (Samsung Galaxy S24 FE) ಸ್ಮಾರ್ಟ್‌ಫೋನ್ ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಈ ಹೊಸ Samsung Galaxy S24 FE ಫೋನ್ ಇದೀಗ ಭಾರತದಲ್ಲಿ ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 (Samsung Galaxy S24 FE) ಸ್ಮಾರ್ಟ್‌ಫೋನ್ ಸರಣಿ ಪ್ರಿ-ಬುಕಿಂಗ್ ಶುರುವಾಗಿದ್ದು, ಇದೇ ಅಕ್ಟೋಬರ್ 3 ರಿಂದ ಭಾರತದಲ್ಲಿ ಫೋನ್ ಖರೀದಿಗೆ ಲಭ್ಯವಿರುತ್ತದೆ. ಗ್ರಾಹಕರು ಸ್ಯಾಮ್‌ಸಂಗ್ ನ ಅಧಿಕೃತ ವೆಬ್‌ಸೈಟ್ ಪ್ರಿ-ಬುಕಿಂಗ್ ಮಾಡಬಹುದಾಗಿದೆ. ಮುಂಗಡ ಬುಕಿಂಗ್ ಖರೀದಿದಾರರಿಗೆ ಕೆಲವು ಆಫರ್ ಕೂಡಾ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೋನ್‌ಗಳ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE - ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ 6.7 ಇಂಚಿನ FHD+ ಇನ್ಫಿನಿಟಿ-O ಡೈನಾಮಿಕ್ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸೌಲಭ್ಯ ಹಾಗೂ 1900 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ ಸಹ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ 3.1GHz GPU ಡೆಕಾ-ಕೋರ್ ಸ್ಯಾಮ್‌ಸಂಗ್ Exynos 2400e 4nm ಪ್ರೊಸೆಸರ್ ಜೊತೆಗೆ ಸ್ಯಾಮ್‌ಸಂಗ್ Xclipse 940 GPU ಅನ್ನು ಹೊಂದಿದೆ. ಇದು One UI 6.1.1 ಜೊತೆಗೆ ಆಂಡ್ರಾಯ್ಡ್ 14 ಸಪೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB / 256GB / 512GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಪಡೆದಿದ್ದು, ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 10 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 25W ವೈರ್ಡ್ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಪವರ್ ಶೇರ್ ಬೆಂಬಲವನ್ನು ಹೊಂದಿದೆ. ಇದಲ್ಲದೆ ನೀರು-ನಿರೋಧಕ (IP68) ರೇಟಿಂಗ್ ಆಯ್ಕೆ ಸಹ ಪಡೆದಿದೆ.
ಲಭ್ಯತೆ ಮತ್ತು ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಫೋನ್ 8GB + 128GB ವೇರಿಯಂಟ್ ಬೆಲೆ 59,999ರೂ.ಹಾಗೂ 8GB + 256GB ವೇರಿಯಂಟ್ ಬೆಲೆ 65,999ರೂ. ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಗಾಗಿ ಪ್ರೀ ಬುಕಿಂಗ್ ಸೆಪ್ಟೆಂಬರ್ 27, 2024 ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 3 ರಿಂದ ಭಾರತದಲ್ಲಿ ಫೋನ್ ಖರೀದಿಗೆ ಲಭ್ಯವಿರುತ್ತದೆ. ಇದು ಬ್ಲೂ, ಗ್ರ್ಯಾಫೈಟ್ ಮತ್ತು ಮಿಂಟ್ ಎಂಬ ಬಣ್ಣಗಳಲ್ಲಿ ಲಭ್ಯ. ಗ್ರಾಹಕರು Samsung.com ನಲ್ಲಿ ಮತ್ತು ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಅನ್ನು ಪ್ರೀ ಬುಕ್ ಮಾಡಬಹುದು.
ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ 4799ರೂ. ಮೌಲ್ಯದ ಸ್ಯಾಮ್‌ಸಂಗ್ ಕೇರ್+ ಪ್ಯಾಕೇಜ್ ಕೇವಲ 999ರೂ. ಗಳಿಗೆ ದೊರೆಯುತ್ತದೆ. ಇದರ ಜೊತೆಗೆ 12 ತಿಂಗಳವರೆಗಿನ (ಸ್ಯಾಮ್‌ಸಂಗ್ ಫೈನಾನ್ಸ್+) ನೋ-ಕಾಸ್ಟ್ ಇಎಂಐ ಆಯ್ಕೆ ಲಭ್ಯ.


Click it and Unblock the Notifications








