SAMSUNG SmartTV: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರೀ ಇಳಿಕೆ! ಬೆಜೆಲ್ ಲೆಸ್ ವಿನ್ಯಾಸ
ಸ್ಯಾಮ್‌ಸಂಗ್ (Samsung) ಕಂಪೆನಿ ಕೇವಲ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಇತರೆ ಸ್ಮಾರ್ಟ್ ಡಿವೈಸ್‌ಗಳ ಮೂಲಕವೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಈ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ (SmartTV) ಎಲ್ಲಿಲ್ಲದ ಬೇಡಿಕೆ ಇದೆ. ಅದರಂತೆ ಈಗ ಸ್ಯಾಮ್‌ಸಂಗ್‌ನ ಟಿವಿಯೊಂದಕ್ಕೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಸ್ಮಾರ್ಟ್‌ಟಿವಿಯೊಂದಕ್ಕೆ ಭಾರೀ ಆಫರ್ ನೀಡಲಾಗಿದ್ದು, ಈ ಸ್ಮಾರ್ಟ್‌ಟಿವಿ ಬೆಜೆಲ್ ಲೆಸ್ ವಿನ್ಯಾಸ ಹೊಂದಿದೆ. ಜೊತೆಗೆ 50 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ, ಹಾಗಿದ್ರೆ, ಯಾವ ವೇರಿಯಂಟ್ ಟಿವಿಗೆ ಆಫರ್ ನೀಡಲಾಗಿದೆ? ಇದರ ಪ್ರಮುಖ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಗೆ ಆಫರ್: ಸ್ಯಾಮ್‌ಸಂಗ್ 80 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಟೈಜೆನ್ ಟಿವಿ 2022 ಆವೃತ್ತಿ ಸ್ಮಾರ್ಟ್‌ಟಿವಿ (UA32T4380AKXXL) ಇದೀಗ ಭರ್ಜರಿ ಆಫರ್‌ನೊಂದಿಗೆ ಲಭ್ಯ ಇದೆ. ಅಂದರೆ ಈ ಸ್ಮಾರ್ಟ್‌ಟಿವಿ 18,900 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 12,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಗೆ ಬರೋಬ್ಬರಿ 31% ರಿಯಾಯಿತಿ ನೀಡಲಾಗಿದೆ.
ಇದರೊಂದಿಗೆ ಇನ್ನೂ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ. ಅಂದರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವ್ಯವಹಾರದ ಮೇಲೆ 10% ರಿಯಾಯಿತಿ, ಬ್ಯಾಂಕ್ ಆಫರ್ ಯುಪಿಐ ವ್ಯವಹಾರದ ಮೇಲೆ ಹೆಚ್ಚುವರಿ 1% ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್ ಸೇರಿದಂತೆ ವಿಶೇಷ ಬೆಲೆಗೆ ಹೆಚ್ಚುವರಿ 7% ರಿಯಾಯಿತಿಯನ್ನು ಈ ಟಿವಿಯಲ್ಲಿ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 1366 x 768ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಉತ್ತಮ ಎನಿಸಿದೆ. ಅಲ್ಲದೆ 16:09 ಕಾಂಟ್ರಾಸ್ಟ್ ಅನುಪಾತ, 178 ಡಿಗ್ರಿ ವೀಕ್ಷಣೆ ಅನುಭವ, 50 Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಸಿನಿಮಾ ಅಥವಾ ಇನ್ನಿತರೆ ಕಂಟೆಂಟ್ ವೀಕ್ಷಣೆಯಲ್ಲಿ ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿ ಫೀಚರ್ಸ್: ಇನ್ನೂ ಈ ಸ್ಮಾರ್ಟ್‌ಟಿವಿಯ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಕ್ರಿಸ್ಟಲ್ ಪ್ರೊಸೆಸರ್ 4K ನಲ್ಲಿ ಕಾರ್ಯನಿರ್ವಹಿಸಲಿದ್ದು, 1.5 RAM ಸ್ಟೋರೇಜ್ ಮೂಲಕ ಸುಲಲಿತವಾಗಿ ಕೆಲಸ ಮಾಡಲಿದೆ. ಜೊತೆಗೆ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್, ಫ್ರೈಮ್ ವಿಡಿಯೋ ಸೇರಿದಂತೆ ಅನೇಕ ಆಪ್‌ಗಳಿಗೆ ಇದು ಬೆಂಬಲ ನೀಡಲಿದ್ದು, ಪೂರ್ವ ಸ್ಥಾಪಿತ ಬ್ರೌಸರ್ ಅನ್ನು ಈ ಟಿವಿಯಲ್ಲಿ ಕಾಣಬಹುದಾಗಿದೆ.
ಇನ್ನು ಎರಡು ಹೆಚ್‌ಡಿಎಮ್‌ಐ ಪೋರ್ಟ್, ಒಂದು ಯುಎಸ್‌ಬಿ ಪೋರ್ಟ್, ಸುಧಾರಿತ ವೈ-ಫೈ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಈ ಟಿವಿಯ ಸೌಂಡ್ ವಿಚಾರಕ್ಕೆ ಬಂದರೆ 2 ಸ್ಪೀಕರ್ ಆಯ್ಕೆಯೊಂದಿಗೆ ಈ ಸ್ಮಾರ್ಟ್‌ಟಿವಿ ಕಾಣಿಸಿಕೊಂಡಿದ್ದು, 20 W ಸೌಂಡ್ ಔಟ್‌ಪುಟ್ ನೀಡಲಿದೆ. ಈ ಸ್ಪೀಕರ್‌ಗಳು ಡಾಲ್ಬಿ ಡಿಜಿಟಲ್ ಪ್ಲಸ್ ಸರೌಂಡಿಂಗ್ ಸೌಂಡ್ ಫೀಚರ್ಸ್ ಆಯ್ಕೆ ಪಡೆದಿದ್ದು, ಸಿನಿಮಾ ಥಿಯೇಟರ್ ಅನುಭವ ಪಡೆಯಬಹುದಾಗಿದೆ.

ಈ ಸ್ಮಾರ್ಟ್‌ಟಿವಿ ಆಟೋ ಆಫ್ ಫೀಚರ್ಸ್ ಹೊಂದಿದ್ದು, ಈ ಮೂಲಕ ವಿದ್ಯುತ್ ಬಿಲ್ ಮೇಲೆ ಪರಿಣಾಮಕಾರಿ ಪ್ರಾಭಾವ ಬೀರಲಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿ 723.3 mm x 425.1 mm x 85.7 mm ನ ಸುತ್ತಳತೆ ಹೊಂದಿದ್ದು, ಒಟ್ಟಾರೆ 3.8 ಕೆ.ಜಿ ತೂಕ ಪಡೆದಿದ್ದು, ಹಗುರವಾಗಿದೆ. ಇದರಿಂದ ಸುಲಭವಾಗಿ ಎಲ್ಲಿ ಬೇಕೋ ಅಲ್ಲಿ ಟಿವಿಯನ್ನು ಇಟ್ಟು ನಿಮ್ಮಿಷ್ಟದ ಮನರಂಜನೆ ಪಡೆಯಬಹುದಾಗಿದೆ.


Click it and Unblock the Notifications








