Samsung: ಸ್ಯಾಮ್‌ಸಂಗ್ HW-LS60D ಮ್ಯೂಸಿಕ್ ಫ್ರೇಮ್ ವೈರ್‌ಲೆಸ್ ಸ್ಪೀಕರ್ ಲಾಂಚ್!
ಸ್ಯಾಮ್‌ಸಂಗ್ (Samsung) ಯಾವಾಗಲೂ ಸಹ ವಿಶೇಷ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುತ್ತದೆ. ಯಾವುದೇ ಹೊಸ ಡಿವೈಸ್‌ಗಳು ಲಾಂಚ್ ಆದರೂ ಸಹ ಅದರಲ್ಲಿ ಏನಾದರೂ ಒಂದು ವಿಶೇಷತೆಯನ್ನು ಕಾಣಬಹುದಾಗಿದೆ. ಅದರಂತೆ ಈಗ ಸ್ಯಾಮ್‌ಸಂಗ್ HW-LS60D ಮ್ಯೂಸಿಕ್ ಫ್ರೇಮ್ ವೈರ್‌ಲೆಸ್ ಸ್ಪೀಕರ್ (Samsung HW-LS60D Music Frame Wireless Speaker) ಅನ್ನು ಲಾಂಚ್ ಮಾಡಿದೆ.
ಹೌದು, ಕೊರಿಯನ್ ಟೆಕ್ ದೈತ್ಯ ಸ್ಯಾಮ್‌ಸಂಗ್ ಮ್ಯೂಸಿಕ್ ಫ್ರೇಮ್ HW-LS60D ವೈರ್‌ಲೆಸ್ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. ಇದರ ಹೆಸರು ಭಿನ್ನವಾಗಿರುವಂತೆ ಈ ಡಿವೈಸ್ ಸಹ ಭಿನ್ನವಾಗಿದೆ. ಈ ಮೂಲಕ ನೀವು ಈವರೆಗೂ ಪಡೆದಿರುವ ವಿಶೇಷ ಮ್ಯೂಸಿಕ್ ಅನುಭವವನ್ನು ಈ ಡಿವೈಸ್ ಮೂಲಕ ಪಡೆಯಬಹುದಾಗಿದೆ. ಹಾಗಿದ್ರೆ, ಇದರ ವಿನ್ಯಾಸ ಹೇಗಿದೆ?, ಇದರ ಪ್ರಮುಖ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಮ್ಯೂಸಿಕ್ ಫ್ರೇಮ್ HW-LS60D ವೈರ್‌ಲೆಸ್ ಸ್ಪೀಕರ್: ಹೊಸ ಸ್ಯಾಮ್‌ಸಂಗ್ ಆಡಿಯೊ ಪ್ರೊಡಕ್ಟ್ 6 ಸ್ಪೀಕರ್ ಸಿಸ್ಟಮ್ ಆಗಿದ್ದು, ಡಾಲ್ಬಿ ಅಟ್ಮಾಸ್, ಸ್ಪಾಟಿಫೈ ಮತ್ತು ಟೈಡಲ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ. ಈ ಡಿವೈಸ್ ಅನ್ನು ಈ ಮೊದಲು 2024 ರ ವರ್ಲ್ಡ್ ಆಫ್ ಸ್ಯಾಮ್‌ಸಂಗ್ ಈವೆಂಟ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಫೋಟೋ ಫ್ರೇಮ್ ವಿನ್ಯಾಸ ಪಡೆದಿದ್ದು, ಟಿವಿಗಳು, ಸ್ಮಾರ್ಟ್‌ಫೋನ್, ಡಿಜಿಟಲ್ ಆಡಿಯೊ ಪ್ಲೇಯರ್, ಕಂಪ್ಯೂಟರ್‌ಗಳು ಮತ್ತು ಗೇಮ್ ಕನ್ಸೋಲ್‌ಗಳು ಸೇರಿದಂತೆ ವಿವಿಧ ಇನ್‌ಪುಟ್ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ. ಈ ಮೂಲಕ ಬಳಕೆದಾರರು ಆಡಿಯೊ ಕಂಟೆಂಟ್ ಅನ್ನು ವಿಶೇಷ ರೀತಿಯಲ್ಲಿ ಸ್ಟ್ರೀಮಿಂಗ್ ಮಾಡಬಹುದಾಗಿದೆ.
ಇದರ ಇತರೆ ಫೀಚರ್ಸ್ ಕಡೆ ಗಮನ ಹರಿಸುವುದಾದರೆ ಈ ಮ್ಯೂಸಿಕ್ ಫ್ರೇಮ್ ರೂಂನ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸಲಿದೆ. ಇದನ್ನು ಸುಲಭವಾಗಿ ಗೋಡೆಯ ಮೇಲೆ ಜೋಡಿಸಬಹುದಾಗಿದೆ. ಅಲ್ಲದೆ ಮೇಜಿನ ಮೇಲೆ ಇರಿಸಬಹುದಾಗಿದೆ. ಇದರಲ್ಲಿ 8 x 8 ಇಂಚಿನ ಮ್ಯಾಟೆಡ್ ಫೊಟೋಗಳನ್ನು ಬಳಕೆದಾರರು ಮನಬಂದಂತೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಇದರ ಜೊತೆಗೆ ಈ ಡಿವೈಸ್ ಟಿವಿಗೆ ಸಂಪರ್ಕಗೊಂಡಾಗ ಎಲ್ಲಾ ವಾಲ್ಯೂಮ್ ಸ್ಟೇಜ್‌ಗಳಲ್ಲಿ ಸ್ಪಷ್ಟವಾದ ಸಂಭಾಷಣೆಯನ್ನು ನೀಡಲು ಶಕ್ತಗೊಳಿಸುವ ಅಡಾಪ್ಟಿವ್ ಸೌಂಡ್ ಕಾರ್ಯವನ್ನು ಈ ಫ್ರೇಮ್ ಹೊಂದಿದೆ. ಇದು ಟಿವಿಗೆ ಪ್ರಾಥಮಿಕ ಬಾಹ್ಯ ಸ್ಪೀಕರ್ ಆಗಿ ಅಥವಾ ಅಸ್ತಿತ್ವದಲ್ಲಿರುವ ಸ್ಯಾಮ್‌ಸಂಗ್ ಟಿವಿ ಸ್ಪೀಕರ್‌ಗಳು ಮತ್ತು ಸೌಂಡ್ ಬಾರ್‌ಗಳೊಂದಿಗೆ ಸಂಯೋಜಿಸಿದಾಗ ಹೆಚ್ಚುವರಿ ಸ್ಪೀಕರ್ ಆಗಿ ಕೆಲಸ ಮಾಡುತ್ತದೆ. ಇದರೊಂದಿಗೆ ತಲ್ಲೀನಗೊಳಿಸುವ ಅನುಭವಕ್ಕಾಗಿ ಇದರಲ್ಲಿ ಆಟೋಮ್ಯಾಟಿಕ್ ರೂಂ ಆಪ್ಟಿಮೈಸೇಶನ್ ಫೀಚರ್ಸ್ ಅನ್ನು ಸಹ ಪಡೆದುಕೊಂಡಿದೆ.
ಇದರ ಜೊತೆಗೆ ಈ ಆಡಿಯೋ ಕಂಟೆಂಟ್ ಅನ್ನು ಸ್ಟ್ರೀಮಿಂಗ್ ಮಾಡಲು ಸ್ಪಾಟಿಫೈ ಮತ್ತು ಟೈಡಲ್ ಹೈ-ಫೈ ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಇದು ಹೈ-ರೆಸ್ ಮತ್ತು MP3 ಗೆ FLAC AV ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಇದು ಬ್ಲೂಟೂತ್ ಆವೃತ್ತಿ 5.2 ಸಂಪರ್ಕವನ್ನು ಸಹ ಬೆಂಬಲಿಸಲಿದ್ದು, ತಡೆರಹಿತ ಮತ್ತು ತ್ವರಿತ ಆಡಿಯೊ ಸ್ಟ್ರೀಮಿಂಗ್‌ಗಾಗಿ ಸ್ಯಾಮ್‌ಸಂಗ್ ಫೋನ್‌ಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ.

ಆಪ್ಟಿಕಲ್ ಟೋಸ್ಲಿಂಕ್ ಕೇಬಲ್ ಮೂಲಕ ಸ್ಪೀಕರ್ ಹೋಮ್ ಥಿಯೇಟರ್ ಸಿಸ್ಟಮ್‌ಗಳಿಗೂ ಸಹ ಸಂಪರ್ಕಗೊಳ್ಳಲಿದ್ದು, ಅಲೆಕ್ಸಾ, ಏರ್‌ಪ್ಲೇ ಮತ್ತು ಕ್ರೋಮ್‌ಕಾಸ್ಟ್‌ನಂತಹ ಸ್ಮಾರ್ಟ್ ಅಸಿಸ್ಟೆಂಟ್‌ಗಳು ಮ್ಯೂಸಿಕ್ ಫ್ರೇಮ್ ವೈರ್‌ಲೆಸ್ ಸ್ಪೀಕರ್‌ನಲ್ಲಿ ಕಾಣಿಸಿಕೊಂಡಿವೆ. ಇದರಿಂದ ಬಳಕೆದಾರರು ಈವರೆಗೂ ಯಾವ ಡಿವೈಸ್ ನಲ್ಲೂ ಪಡೆಯಲಾಗದ ವಿಶೇಷ ಅನುಭವವನ್ನು ಇದರಲ್ಲಿ ಪಡೆಯುವ ಮೂಲಕ ಇನ್ನಷ್ಟು ಹೆಚ್ಚಿನ ಮನರಂಜನೆ ಸಿಗಲಿದೆ.
ಸ್ಯಾಮ್‌ಸಂಗ್ HW-LS60D ಬೆಲೆ ಮತ್ತು ಲಭ್ಯತೆ: ಈ ಡಿವೈಸ್ $399 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಸರಿ ಸುಮಾರು 33,286 ರೂ.ಗಳು. ಈ ಡಿವೈಸ್ ಅನ್ನು ನೀವು ಅಮೆಜಾನ್ ಹಾಗೂ ಬೆಸ್ಟ್ ಬೈ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








