ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌ ಬೆಲೆ ದಿಢೀರ್‌ ಇಳಿಕೆ

Written By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌ವಾಚ್‌ನ ಬೆಲೆ ದಿಢೀರ್‌ ಇಳಿಕೆಯಾಗಿದೆ. 22,990 ಬೆಲೆಯಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ವಾಚ್‌ ಬೆಲೆ ಆರು ಸಾವಿರ ರೂಪಾಯಿ ಕಡಿಮೆಯಾಗಿ 15,290 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಜನವರಿ ಮಧ್ಯ ಭಾಗದಲ್ಲಿ ಈ ಸ್ಮಾರ್ಟ್‌ವಾಚ್‌ಗೆ 19,075 ರೂಪಾಯಿ ನಿಗದಿ ಸ್ಯಾಮ್‌ಸಂಗ್‌ ಮಾಡಿತ್ತು.ಈಗ ಮತ್ತಷ್ಟು ಬೆಲೆಯನ್ನು ಇಳಿಕೆ ಮಾಡಿದ್ದು ಸ್ಯಾಮ್‌ಸಂಗ್‌ ಇಸ್ಟೋರ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌1.63 ಇಂಚಿನ OLED ಸ್ಕ್ರೀನ್‌,800 MHz ಪ್ರೊಸೆಸರ್‌,1.9ಎಂಪಿ ಕ್ಯಾಮೆರಾ,4GB ಆಂತರಿಕ ಮೆಮೋರಿ 315mAh ಬ್ಯಾಟರಿಯನ್ನು ಹೊಂದಿದೆ.ಬ್ಲೂಟೂತ್‌ ಮೂಲಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನನ್ನು ಸಿಂಕ್‌ ಮಾಡಿಕೊಂಡು ಮೆಸೇಜ್‌,ಕಾಲ್‌,ಇಮೇಲ್‌‌ಗಳನ್ನು ಮಾಡಬಹುದಾಗಿದೆ. ಇದರಲ್ಲೇ MP4 HD(720p) ಗುಣಮಟ್ಟ ವೀಡಿಯೋ ವೀಕ್ಷಿಸಬಹುದು ಜೊತೆಗೆ ವೀಡಿಯೋವನ್ನು ರೆಕಾರ್ಡ್‌ ಮಾಡಬಹುದು.ಎಸ್‌ ವಾಯ್ಸ್‌,ಮೆಮೋಗ್ರಾಫರ್‌,ವಾಯ್ಸ್‌ಮೆಮೋ,ಆಟೋಲಾಕ್‌,ಫೈಡ್‌ ಮೈ ಡಿವೈಸ್‌, ಮೀಡಿಯಾ ಕಂಟ್ರೋಲರ್‌,ಪೆಡೋಮೀಟರ್‌,ಸ್ಟಾಪ್‌ ವಾಚ್‌,ಟೈಮರ್‌ ವಿಶೇಷತೆಗಳು ಈ ಸ್ಮಾರ್ಟ್‌ವಾಚ್‌‌ನಲ್ಲಿದೆ.ಜೊತಗೆ 70 ಪ್ರಿಲೋಡೆಡ್‌ ಅಪ್ಲಿಕೇಶನ್‌ಗಳಿವೆ.

 ಸ್ಯಾಮ್‌ಸಂಗ್‌ ಸ್ಮಾರ್ಟ್‌ವಾಚ್‌ ಬೆಲೆ ದಿಢೀರ್‌ ಇಳಿಕೆ

ಗೆಲಾಕ್ಸಿ ಗೇರ್‌
ವಿಶೇಷತೆ:
800 MHz ಪ್ರೊಸೆಸರ್‌
1.63 ಇಂಚಿನ ಸುಪರ್‌ AMOLED ಸ್ಕ್ರೀನ್(320 x 320 ಪಿಕ್ಸೆಲ್‌)
1.9 ಎಂಪಿ ಕ್ಯಾಮೆರಾ,ಆಟೋ ಫೋಕಸ್‌ ಕ್ಯಾಮೆರಾ
2 ಮೈಕ್ರೋಫೋನ್‌‌,1 ಸ್ಪೀಕರ್‌
4GB ಆಂತರಿಕ ಮೆಮೊರಿ
512 MB RAM
73.8 ಗ್ರಾಂ ತೂಕ
ಬ್ಲೂಟೂತ್‌,ಎನ್‌ಎಫ್‌ಸಿ,ಗೈರೋಸ್ಕೋಪ್‌,ಎಕ್ಸಲರೋಮೀಟರ್‌
315mAh ಬ್ಯಾಟರಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot