ಸ್ಯಾಮ್‌ಸಂಗ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್; ಬೆಲೆ ಕೇಳಿದ್ರೆ, ಶಾಕ್!
ಮೊಬೈಲ್ ಮಾರುಕಟ್ಟೆಗೆ ಸ್ಯಾಮ್‌ಸಂಗ್ ನೂತನವಾಗಿ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ತಯಾರಿ ನಡೆಸಿದೆ. ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F ಸರಣಿಯಲ್ಲಿ ಹಲವು ಭಿನ್ನ ದರದ ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ಸಾಲಿಗೆ ಈಗ ಹೊಸದಾಗಿ 'ಗ್ಯಾಲಕ್ಸಿ F54 5G' (Galaxy F54 5G) ಸ್ಮಾರ್ಟ್‌ಫೋನ್ ಸೇರ್ಪಡೆ ಮಾಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಮಾದರಿಯಲ್ಲಿ ಇರಲಿದೆ.
ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಸದ್ಯದಲ್ಲೇ ನೂತನವಾಗಿ 'ಗ್ಯಾಲಕ್ಸಿ F54 5G' (Galaxy F54 5G) ಸ್ಮಾರ್ಟ್‌ಫೋನ್ ಅನಾವರಣ ಮಾಡಲಿದ್ದು, ಈ ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ Exynos 1380 ಪ್ರೊಸೆಸರ್ ಒಳಗೊಂಡಿರಲಿದ್ದು, ಇತ್ತೀಚಿಗಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿರಲಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ.

ಹಾಗೆಯೇ ಈ ನೂತನ ಫೋನ್ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇನ್ನು ಈ ಫೋನ್ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇರಲಿದೆ. ಅಂದಹಾಗೆ ಇದೇ ಏಪ್ರಿಲ್ ಕೊನೆಯ ವಾರದಲ್ಲಿ ಅನಾವರಣ ಆಗುವ ನಿರೀಕ್ಷೆಗಳು ಇವೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗ್ಯಾಲಕ್ಸಿ F54 5G ಡಿಸ್‌ಪ್ಲೇ ಮತ್ತು ಪ್ರೊಸೆಸರ್ : ಈ ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.67 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಯನ್ನು ಪಡೆದಿರಲಿದೆ. ಇನ್ನು ಈ ಫೋನ್ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಜೊತೆಗೆ 6GB RAM + 128GB ಮತ್ತು 8GB RAM + 256GB ಆಯ್ಕೆಗಳಲ್ಲಿ ಬರಲಿದೆ ಎನ್ನಲಾಗಿದೆ.
ಗ್ಯಾಲಕ್ಸಿ F54 5G ಕ್ಯಾಮೆರಾ ರಚನೆ : ಗ್ಯಾಲಕ್ಸಿ F54 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಪಡೆದಿರಲಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರುವ ನಿರೀಕ್ಷೆಗಳಿವೆ.

ಗ್ಯಾಲಕ್ಸಿ F54 5G ಬ್ಯಾಟರಿ ಬ್ಯಾಕ್‌ಅಪ್ : ಈ ಫೋನ್ 6,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇರಲಿವೆ. ವರದಿಯ ಪ್ರಕಾರ 199g ತೂಗುತ್ತದೆ (6,000mAh ಬ್ಯಾಟರಿಯ ಹೊರತಾಗಿಯೂ) ಮತ್ತು 8.4mm ತೆಳುವಾಗಿದೆ.
ಗ್ಯಾಲಕ್ಸಿ F54 5G ಲಭ್ಯತೆ : ಗ್ಯಾಲಕ್ಸಿ F54 5G ಫೋನ್ ಇದೇ ಏಪ್ರಿಲ್ 2023 ರ ಕೊನೆಯ ವಾರದಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 25,000 ರೂ. ಗಳ ಆಸುಪಾಸು ಇರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








