Home
ಸುದ್ದಿಜಾಲ

Android 14: ಸ್ಯಾಮ್‌ಸಂಗ್‌ನ ಈ ಎಲ್ಲಾ ಫೋನ್‌ಗಳಿಗೆ ಆಂಡ್ರಾಯ್ಡ್‌ 14! ಗ್ರಾಹಕರಿಗೆ ಭರ್ಜರಿ ಖುಷಿ

ಸ್ಯಾಮ್‌ಸಂಗ್ (Samsung) ಗ್ಯಾಲಕ್ಸಿ ಫೋನ್‌ಗಳೆಂದರೆ ಭದ್ರತೆಗೆ ಹಾಗೂ ದೀರ್ಘಬಾಳಿಕೆ ಜೊತೆಗೆ ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ. ಈ ನಡುವೆ ಸ್ಯಾಮ್‌ಸಂಗ್‌ ಭಿನ್ನ ವಿಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದೆ. ಈ ನಡುವೆ ಈ ಎಲ್ಲಾ ಫೋನ್‌ಗಳಿಗೆ ಆಂಡ್ರಾಯ್ಡ್‌ 14 ಪರಿಚಯಿಸಲು ಮುಂದಾಗಿದ್ದು, ಈ ಮೂಲಕ ಗ್ರಾಹಕರ ಮುಖದಲ್ಲಿ ಸಂತಸ ಹೆಚ್ಚಿಸಿದೆ.

ಹೌದು, ಸ್ಯಾಮ್‌ಸಂಗ್ ಇದೀಗ ಆಂಡ್ರಾಯ್ಡ್ 14 (Android 14 OS) ರೋಲ್‌ಔಟ್ ಅನ್ನು ವಿವಿಧ ಡಿವೈಸ್‌ಗಳಿಗೆ ವಿಸ್ತರಿಸಿದೆ. ಈ ಮೂಲಕ ಈ ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಿವಿಧ ಫೋನ್‌ಗಳು ರನ್ ಆಗಲಿವೆ. ಅವುಗಳಲ್ಲಿ ಪ್ರಮುಖವಾದ ಫೋನ್‌ಗಳು ಎಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54, ಗ್ಯಾಲಕ್ಸಿ S23 FE, ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಗ್ಯಾಲಕ್ಸಿ Z ಫೋಲ್ಡ್ 5 ಸಹ ಸೇರಿವೆ. ಹಾಗಿದ್ರೆ, ಉಳಿದಂತೆ ಯಾವೆಲ್ಲಾ ಫೋನ್‌ಗಳಲ್ಲಿ ಈ ಓಎಸ್‌ ಇರಲಿದೆ?, ಇದರ ವಿಶೇಷತೆ ಏನು ಅನ್ನೋದನ್ನು ತಿಳಿದುಕೊಳ್ಳಿ.

ಸ್ಯಾಮ್‌ಸಂಗ್‌ನ ಈ ಎಲ್ಲಾ ಫೋನ್‌ಗಳಿಗೆ ಆಂಡ್ರಾಯ್ಡ್‌ 14!ಗ್ರಾಹಕರಿಗೆ ಭರ್ಜರಿ ಖುಷಿ

ಸ್ಯಾಮ್‌ಸಂಗ್ ಫೋನ್‌ಗಳಿಗೆ ಆಂಡ್ರಾಯ್ಡ್ 14 : ಸ್ಯಾಮ್‌ಸಂಗ್‌ ಇತರೆ ಬ್ರ್ಯಾಂಡ್‌ಗಳಂತೆ ಅಲ್ಲಾ. ಅಂದರೆ ಎಲ್ಲರೂ ಮಾಡಿದ ಮೇಲೆ ನಮ್ಮದೂ ಒಂದು ಇರಲಿ ಎನ್ನುವ ಮನಸ್ಥಿತಿಯನ್ನು ಹೊಂದಿಲ್ಲ. ಬದಲಾಗಿ ನಾವೇ ಮುಂದೆ ಇರಬೇಕು ಎನ್ನುವುದರ ಮೂಲಕ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಇದರ ಭಾಗವಾಗಿಯೇ ಈಗ ಸರಣಿ ಸರಣಿಯಾಗಿ ಫೋನ್‌ಗಳಿಗೆ ಆಂಡ್ರಾಯ್ಡ್ 14 ಸೌಲಭ್ಯ ನೀಡುತ್ತಿದೆ.

ನವೀಕರಣದ ಭಾಗವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A54, ಗ್ಯಾಲಕ್ಸಿ S23 FE, ಗ್ಯಾಲಕ್ಸಿ Z ಫ್ಲಿಪ್‌ 5, ಮತ್ತು ಗ್ಯಾಲಕ್ಸಿ Z ಫೋಲ್ಡ್‌ 5 ಸಹ ಇದ್ದು, ಇವುಗಳೊಂದಿಗೆ S23 ಮತ್ತು S22 ಫೋನ್‌ಗಳು ಸಹ ಇವೆ. ಜತೆಗೆ ಗ್ಯಾಲಕ್ಸಿ A54 ನ ಅಪ್‌ಡೇಟ್ ಯುನೈಟೆಡ್ ಸ್ಟೇಟ್ಸ್‌ನ AT&T ನಲ್ಲಿ ಪ್ರಾರಂಭವಾಗಿದೆ. ಜೊತೆಗೆ ಗ್ಯಾಲಕ್ಸಿ Z ಫೋಲ್ಡ್‌ 5 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 5 ಯು.ಎಸ್‌ನಲ್ಲಿ ವೆರಿಝೋನ್ ಮೂಲಕ ನವೀಕರಣ ಮಾಡಲಾಗುತ್ತಿದೆ. ಇದರೊಂದಿಗೆ ಗ್ಯಾಲಕ್ಸಿ S23 FE ಅನ್ನೂ ಭಾರತವೂ ಸೇರಿದಂತೆ ಎಲ್ಲಾ ಕಡೆ ಅಪ್‌ಡೇಟ್‌ ಮಾಡುತ್ತಿದ್ದಾರೆ.

ಇನ್ನು ಸ್ಯಾಮ್‌ಸಂಗ್‌ನ ಎಕ್ಸಿನೋಸ್‌ SoC, ಸ್ನಾಪ್‌ಡ್ರಾಗನ್ 8 ಜನ್‌ 1 ಅನ್ನು ಹೊಂದಿರುವ ಯುಎಸ್‌ ಮಾಡೆಲ್‌ಗಳು ಶೀಘ್ರದಲ್ಲೇ ನವೀಕರಣ ಪಡೆಯಲಿವೆ ಎಂದು ತಿಳಿಸಲಾಗಿದ್ದು, ವಾಡಿಕೆಯಂತೆ ಹಂತಹಂತವಾಗಿ ಇದನ್ನು ಮಾಡಬಹುದು ಮತ್ತು ಬಳಕೆದಾರರು ಇನ್ನೂ ಈ ಸಂಬಂಧ ಯಾವುದೇ ನೋಟಿಫಿಕೇಶನ್‌ ಅನ್ನು ಸ್ವೀಕರಿಸದಿದ್ದರೆ ಭಯಪಡಬೇಡಿ ಎಂದು ಸಲಹೆ ನೀಡಿದೆ.

ಸ್ಯಾಮ್‌ಸಂಗ್‌ನ ಈ ಎಲ್ಲಾ ಫೋನ್‌ಗಳಿಗೆ ಆಂಡ್ರಾಯ್ಡ್‌ 14!ಗ್ರಾಹಕರಿಗೆ ಭರ್ಜರಿ ಖುಷಿ

ಹಾಗೆಯೇ ಗ್ಯಾಲಕ್ಸಿ S23 FE ಸೇರಿದಂತೆ ಹೊಸದಾಗಿ ನವೀಕರಿಸಲಾದ ಡಿವೈಸ್‌ಗಳು ಸ್ಥಿರವಾದ ಆಂಡ್ರಾಯ್ಡ್‌ 14 ನಿರ್ಮಾಣದೊಂದಿಗೆ ಪರಿಚಯಿಸಲಾದ ಇತ್ತೀಚಿನ ಒನ್‌ UI 6 ಫೀಚರ್ಸ್‌ನಿಂದ ಪ್ರಯೋಜನ ಪಡೆಯುತ್ತವೆ. ಒನ್ UI 6 ತ್ವರಿತ ಸೆಟ್ಟಿಂಗ್‌ಗಳ ಪ್ಯಾನೆಲ್, ಸ್ಯಾಮ್‌ಸಂಗ್‌ DeX, ಲಾಕ್ ಸ್ಕ್ರೀನ್ ಕಸ್ಟಮೈಸೇಶನ್ ಮತ್ತು ಸುಧಾರಿತ ಕ್ಯಾಮರಾ ಫೀಚರ್ಸ್‌ಗೆ ವರ್ಧನೆಗಳನ್ನು ನೀಡುತ್ತದೆ. ಇದರೊಂದಿಗೆ ಬಳಕೆದಾರರು ಸ್ಯಾಮ್‌ಸಂಗ್ ಕೀಬೋರ್ಡ್‌ನಲ್ಲಿ ಹೊಸ ವಿಜೆಟ್‌ಗಳು ಮತ್ತು ವಿಶೇಷ ಎಮೋಜಿ ಶೈಲಿಯನ್ನು ಪಡೆಯಬಹುದು ಎನ್ನಲಾಗಿದೆ.

ಗ್ಯಾಲಕ್ಸಿ A52, ಗ್ಯಾಲಕ್ಸಿ A52s 5G, ಗ್ಯಾಲಕ್ಸಿ S21 FE 5G, ಗ್ಯಾಲಕ್ಸಿ A72, ಗ್ಯಾಲಕ್ಸಿ A13, ಗ್ಯಾಲಕ್ಸಿ A23 5G, ಗ್ಯಾಲಕ್ಸಿ Z ಫ್ಲಿಪ್‌ 3, ಮತ್ತು ಗ್ಯಾಲಕ್ಸಿ Z ಫೋಲ್ಡ್‌ 3 ನಂತಹ ಡಿವೈಸ್‌ಗಳು ಈ ತಿಂಗಳು ಅಂದರೆ ನವೆಂಬರ್ 1 ರಿಂದ U30 6 ಅಪ್‌ಡೇಟ್‌ನ ನಂತರ ಹೊಸ ಓಎಸ್‌ ಪಡೆದುಕೊಳ್ಳುತ್ತಿದ್ದು, ಗ್ಯಾಲಕ್ಸಿ A04s, ಗ್ಯಾಲಕ್ಸಿ ಎಕ್ಸ್‌ಕವರ್‌ 5 ಮತ್ತು ಗ್ಯಾಲಕ್ಸಿ A25 5G ಫೋನ್‌ಗಳು ಡಿಸೆಂಬರ್ ಮೊದಲ ಮತ್ತು ಎರಡನೇ ವಾರಗಳಲ್ಲಿ ನವೀಕರಣಗಳನ್ನು ಪಡೆಯಲಿವೆ ಎಂದು ಸ್ಯಾಮ್‌ಸಂಗ್‌ ಮಾಹಿತಿ ನೀಡಿದೆ.

ನವೀಕರಣ ಮಾಡುವುದು ಹೇಗೆ ?: ಅರ್ಹ ಫೋನ್‌ಗಳನ್ನು ಒನ್‌ UI 6 ಗೆ ನವೀಕರಿಸಲು ಉತ್ಸುಕರಾಗಿರುವ ಬಳಕೆದಾರರು ತಮ್ಮ ಫೋನ್‌ ಬ್ಯಾಟರಿಯನ್ನು ಮೊದಲು ಭರ್ತಿ ಮಾಡಿಕೊಳ್ಳಬೇಕಿದೆ. ಅಥವಾ ಶೇಕಡಾ 50 ಕ್ಕಿಂತ ಹೆಚ್ಚು ಬ್ಯಾಟರಿ ಭರ್ತಿ ಆಗಿರಬೇಕು. ಇದರೊಂದಿಗೆ ಸ್ಥಿರ ವೈ-ಫೈ ಅಥವಾ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ.

ಸ್ಯಾಮ್‌ಸಂಗ್‌ನ ಈ ಎಲ್ಲಾ ಫೋನ್‌ಗಳಿಗೆ ಆಂಡ್ರಾಯ್ಡ್‌ 14!ಗ್ರಾಹಕರಿಗೆ ಭರ್ಜರಿ ಖುಷಿ

ಇದಾದ ನಂತರದಲ್ಲಿ ನಿಮ್ಮ ಡಿವೈಸ್‌ ಅನ್ನು ನವೀಕರಣ ಮಾಡಲು ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ ಅಲ್ಲಿ 'ಸಾಫ್ಟ್‌ವೇರ್ ಅಪ್‌ಡೇಟ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಬೇಕು. ಇದಾದ ಬಳಿಕ ಡೌನ್‌ಲೋಡ್ ಮಾಡಲು ಹಾಗೂ ಇನ್‌ಸ್ಟಾಲ್‌ ಮಾಡಲು ನ್ಯಾವಿಗೇಟ್ ಮಾಡಿ. ಇಷ್ಟು ಮಾಡಿದ್ರೆ ನೀವು ನಿಮ್ಮ ಹೊಸ ಫೋನ್‌ನಲ್ಲಿ ಮತ್ತಷ್ಟು ಹೊಸ ಸೌಲಭ್ಯ ಸಿಗಲಿದೆ.

Best Mobiles in India

English summary
Samsung has now extended the rollout of Android 14 (Android 14 OS) to various devices. Through this, various phones will run on this operating system. Notable phones include the Samsung Galaxy A54, Galaxy S23 FE, Galaxy Z Flip 5 and Galaxy Z Fold 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+