Just In
- 9 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 10 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 11 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 12 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Movies
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾವ ದೇಶದಲ್ಲಿ ಯಾವ ಸ್ಮಾರ್ಟ್‌ಫೋನ್ ಸಂಸ್ಥೆ 'ನಂಬರ್ ಒನ್' ಗೊತ್ತಾ?
ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಸಾಗಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪನಿಗಳ ಅಬ್ಬರ ಜೋರಾಗಿದ್ದು, ಅಗ್ಗದ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿವೆ. ಆದರೆ ಇತರೆ ದೇಶಗಳಲ್ಲಿ ಯಾವ ಬ್ರ್ಯಾಂಡ್ ಮುಂಚೂಣಿಯಲ್ಲಿದೆ ಎಂಬುದನ್ನು ಬಲ್ಲಿರಾ?

ಹೌದು, ವಿಶ್ವದ ಇತರೆ ರಾಷ್ಟ್ರಗಳಲ್ಲಿಯೂ ಮೊಬೈಲ್ ಕ್ಷೇತ್ರದಲ್ಲಿ ಪೈಪೋಟಿ ಇದ್ದು, ಕೇಲವು ರಾಷ್ಟ್ರಗಳಲ್ಲಿ ಚೀನಾ ಆಪಲ್, ಹುವಾವೆ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಮುಂಚೂಣಿಯಲ್ಲಿವೆ. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಚೀನಾ ಮೂಲದ ಶಿಯೋಮಿ, ಒಪ್ಪೊ, ವಿವೋ ಮತ್ತು ರಿಯಲ್ ಮಿ ಕಂಪನಿಗಳು ಜನಪ್ರಿಯತೆಯನ್ನು ಪಡೆದಿವೆ. ಹಾಗಾದರೇ ಯಾವ ರಾಷ್ಟ್ರದಲ್ಲಿ ಯಾವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಂಬರ್ ಒನ್ ಆಗಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಯುಎಸ್
ಯುಎಸ್ ರಾಷ್ಟ್ರದಲ್ಲಿ ಆಪಲ್ ಸಂಸ್ಥೆಯ ಐಫೋನ್‌ಗಳು ಮುಂಚೂಣಿಯಲ್ಲಿದ್ದು, ಆಪಲ್ ನಂತರದ ಸ್ಥಾನದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಗುರುತಿಸಿಕೊಂಡಿವೆ. ಹಾಗೆಯೇ ಎಲ್‌ಜಿ ಮತ್ತು ಮೊಟೊರೊಲಾ ಸಂಸ್ಥೆಗಳು ಸಹ ಲೀಡ್‌ನಲ್ಲಿವೆ.

ಕೆನಡಾ
ಕೆನಡಾದಲ್ಲಿಯೂ ಆಪಲ್ ಸಂಸ್ಥೆ ನಂಬರ್ ಒನ್ ಸ್ಥಾನದಲ್ಲಿದೆ. ಇದರೊಂದಿಗೆ ಕೆನಡಾ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮತ್ತು ಹುವಾವೆ ಬ್ರ್ಯಾಂಡ್‌ಗಳು ಗ್ರಾಹಕರನ್ನು ಸೆಳೆದಿವೆ. ಚೀನಾ ಮೂಲದ ಅಬ್ಬರ ಇಲ್ಲಿ ಕಡಿಮೆ ಎನ್ನಬಹುದು.

ಪಾಕಿಸ್ತಾನ
ಪಾಕಿಸ್ತಾನ್ ರಾಷ್ಟ್ರದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಆನಂತರದಲ್ಲಿ ಹುವಾವೆ ಸ್ಥಾನ ಪಡೆದಿದೆ. ಇನ್ನುಳಿದಂತೆ ಚೀನಾ ಮೂಲದ ಒಪ್ಪೊ, ಮೊಟೊರೊಲಾ ಉತ್ತಮ ಜನಪ್ರಿಯತೆ ಗಳಿಸಿವೆ.

ಆಸ್ಟ್ರೇಲಿಯಾ
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಅಗ್ರಪಟ್ಟ ಧರಿಸಿದೆ. ಸ್ಯಾಮ್‌ಸಂಗ್ ನಂತರದ ಸ್ಥಾನದಲ್ಲಿ ಆಪಲ್ ಐಫೋನ್ ಮತ್ತು ಹುವಾವೆ ಸ್ಮಾರ್ಟ್‌ಫೋನ್‌ಗಳು ಗುರುತಿಸಿಕೊಂಡಿವೆ.

ಥೈಲ್ಯಾಂಡ್
ಥೈಲ್ಯಾಂಡ್ ರಾಷ್ಟ್ರದಲ್ಲಿ ಚೀನಾ ಮೂಲದ ಒಪ್ಪೊ ಸ್ಮಾರ್ಟ್‌ಫೋನ್ ಸಂಸ್ಥೆಯು ನಂಬರ್ ಒನ್ ಸ್ಥಾನ ಪಡೆದಿದೆ. ಹಾಗೆಯೇ ಒಪ್ಪೊ ನಂತರದ ಸ್ಥಾನದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿವೆ.

ಯುಕೆ
ಯುಕೆ ರಾಷ್ಟ್ರದಲ್ಲಿಯೂ ಆಪಲ್ ನಂಬರ್ ಒನ್ ಸ್ಥಾನದಲ್ಲಿಯೇ ಗುರುತಿಸಿಕೊಂಡಿದೆ. ಆಪಲ್ ಸಂತರದಲ್ಲಿ ಸ್ಯಾಮ್‌ಸಂಗ್ ಮತ್ತು ಹುವಾವೆ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿವೆ. ಚೀನಾದ ಹವಾ ಇಲ್ಲಿ ಬಹುತೇಕ ಕಡಿಮೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086