Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನಿಂದ ಎಐ ಬೆಂಬಲಿತ ಗೃಹೋಪಯೋಗಿ ಉಪಕರಣ ಲಾಂಚ್: ವೈ-ಫೈ, ಕ್ಯಾಮೆರಾ ಫೀಚರ್ಸ್‌

ಸ್ಯಾಮ್‌ಸಂಗ್‌ (Samsung) ಈಗಾಗಲೇ ಭಿನ್ನ ಫೀಚರ್ಸ್‌ ಆಯ್ಕೆಯ ಸಾಕಷ್ಟು ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಈ ಸಾಲಿಗೆ ಈಗ ಎಐ ಆಧಾರಿತ ಸ್ಮಾರ್ಟ್‌ ಗೃಹೋಪಯೋಗಿ ವಸ್ತುಗಳನ್ನು ಲಾಂಚ್ ಮಾಡಿದೆ. ಈ ಮೂಲಕ ಬಳಕೆದಾರರಿಗೆ ವಿಶೇಷವಾದ ಪ್ರಯೋಜನ ಕಲ್ಪಿಸಿಕೊಡಲಿದೆ.

ಹೌದು, ಸ್ಯಾಮ್‌ಸಂಗ್ ಇದೀಗ ಮುಂಬೈನಲ್ಲಿರುವ ತನ್ನ ಬಿಕೆಸಿ ಸ್ಟೋರ್‌ನಲ್ಲಿ ಎಐ ಚಾಲಿತ ಗೃಹೋಪಯೋಗಿ ವಸ್ತುಗಳನ್ನು (AI powered home appliances) ಅನಾವರಣಗೊಳಿಸಿದೆ. ಈ ಇಂಟರ್ನೆಟ್ ಸಂಪರ್ಕಿತ ವಸ್ತುಗಳು ಸ್ಯಾಮ್‌ಸಂಗ್‌ನ ಭಾರತದ ಮಾರಾಟಕ್ಕೆ ಶೇಕಡಾ 70 ರಷ್ಟು ಕೊಡುಗೆ ನೀಡುತ್ತವೆ ಸ್ಯಾಮ್‌ಸಂಗ್‌ ಹೇಳಿಕೆ ನೀಡಿದೆ. ಹಾಗಿದ್ರೆ, ಯಾವೆಲ್ಲಾ ವಸ್ತುಗಳನ್ನು ಲಾಂಚ್‌ ಮಾಡಲಾಗಿದೆ?, ಇವು ಹೇಗೆ ಕೆಲಸ ಮಾಡುತ್ತವೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ನಿಂದ ಎಐ ಬೆಂಬಲಿತ ಗೃಹೋಪಯೋಗಿ ಉಪಕರಣ ಲಾಂಚ್..

ಸ್ಯಾಮ್‌ಸಂಗ್‌ನಿಂದ ಎಐ ಚಾಲಿತ ಗೃಹೋಪಯೋಗಿ ವಸ್ತುಗಳು: ಸ್ಯಾಮ್‌ಸಂಗ್‌ ಇದೀಗ ವಾಷಿಂಗ್‌ ಮೆಷಿನ್‌, ರೆಫ್ರಿಜರೇಟರ್‌, ಮೈಕ್ರೋವೇವ್‌ ಮತ್ತು ಎಸಿಯಂತಹ (Washing machine, refrigerator, microwave and AC) ಎಐ ಆಧಾರಿತ ಡಿವೈಸ್‌ಗಳನ್ನು ಲಾಂಚ್‌ ಮಾಡಿದೆ. ಮೊದಲೇ ತಿಳಿಸಿದಂತೆ ಈ ವಸ್ತುಗಳು ಇನ್‌ಬಿಲ್ಟ್‌ ವೈ-ಫೈ, ಇನ್‌ಬಿಲ್ಟ್‌ ಕ್ಯಾಮೆರಾ ಮತ್ತು ಎಐ ಚಿಪ್‌ಗಳೊಂದಿಗೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲಿವೆ.

ಅದರಲ್ಲೂ ರೆಫ್ರಿಜರೇಟರ್ ವಿಭಾಗದಲ್ಲಿ ನೀಡಲಾದ ಎಐ ವಿಷನ್ ಕ್ಯಾಮೆರಾ 33 ಆಹಾರ ಪದಾರ್ಥಗಳನ್ನು ಆಟೋಮ್ಯಾಟಿಕ್‌ ಆಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ರೆಫ್ರಿಜರೇಟರ್‌ನಲ್ಲಿ ಸ್ಟೋರ್‌ ಮಾಡಲಾದ ವಸ್ತುಗಳ ಆಧಾರದ ಮೇಲೆ ಊಟಕ್ಕೆ ಏನು ಬೇಯಿಸಬಹುದು, ಯಾವೆಲ್ಲಾ ಪದಾರ್ಥಗಳಿಗೆ ಅನ್ನೋ ಮಾಹಿತಿಯನ್ನು ಇದು ನೀಡುತ್ತದೆ. ಇದರಿಂದ ರಾತ್ರಿಗೆ ಏನು ತಯಾರು ಮಾಡಬೇಕು?, ಬೆಳಗ್ಗೆಗೆ ಏನು ಅಡುಗೆ ಮಾಡಬೇಕು ಅನ್ನೋ ಮಹಿಳೆಯರ ದೊಡ್ಡ ಚಿಂತೆ ಈ ಮೂಲಕ ಕಡಿಮೆ ಆಗಲಿದೆ.

ಸ್ಯಾಮ್‌ಸಂಗ್‌ನಿಂದ ಎಐ ಬೆಂಬಲಿತ ಗೃಹೋಪಯೋಗಿ ಉಪಕರಣ ಲಾಂಚ್..

ಇನ್ನು ಎಸಿ ವಿಚಾರಕ್ಕೆ ಬಂದರೆ ಈ ಎಐ ಚಾಲಿತ ಎಸಿ ಮೂಲಕ ಬಳಕೆದಾರರು ವಿವಿಧ ಸೌಲಭ್ಯ ಪಡೆಯಬಹುದಾಗಿದೆ. ಅಂದರೆ ಸ್ಮಾರ್ಟ್‌ ಥಿಂಗ್ಸ್‌ ಆಪ್‌ ಮೂಲಕ ವ್ಯಾಪ್ತಿಯಿಂದ ದೂರ ಇರುವಾಗ ಎಸಿಯನ್ನು ಆನ್‌ ಮಾಡಬಹುದು ಅಥವಾ ಆಫ್‌ ಮಾಡಬಹುದಾಗಿದೆ. ಇದರ ಜೊತೆಗೆ ಮೈಕ್ರೊವೇವ್ ಆಟೋಮ್ಯಾಟಿಕ್‌ ಆಗಿ ಪಾಕವಿಧಾನವನ್ನು ಲೋ ಫ್ಯಾಟ್‌ ವರ್ಷನ್‌ಗೆ ಕಸ್ಟಮೈಸ್ ಮಾಡಲು ಸಹಾಯ ಮಾಡುತ್ತದೆ.

ವಾಷಿಂಗ್‌ ಮೆಷಿನ್‌ ವಿಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಸಿಗಲಿದೆ. ಎಐ ವಾಶ್‌ ಫೀಚರ್ಸ್‌ ಕಸ್ಟಮ್ ವಾಶ್ ವಿಧಾನವನ್ನು ತಂತಾನೇ ನಿರ್ಧಿಸಿಕೊಳ್ಳುತ್ತದೆ. ಅಂದರೆ ಲೋಡ್‌ನ ತೂಕ, ಬಟ್ಟೆಗಳ ಪ್ರಕಾರ ಮತ್ತು ಅವುಗಳ ಮೃದುತ್ವ, ನೀರಿನ ಮಟ್ಟ, ಡಿಟರ್ಜೆಂಟ್ ಮಟ್ಟವನ್ನು ಗ್ರಹಿಸಿಕೊಂಡು ತಂತಾನೇ ಬಟ್ಟೆಯನ್ನು ಯಾವ ವಿಧಾನದಲ್ಲಿ ಒಗೆಯಬೇಕು ಅನ್ನೋದನ್ನು ನಿರ್ಧಾರ ಮಾಡಿಕೊಳ್ಳುತ್ತದೆ.

ಈ ಸಂಬಂಧ ಸ್ಯಾಮ್‌ಸಂಗ್‌ನ ನೈಋತ್ಯ ಏಷ್ಯಾ ಸಿಇಓ ಜೆಬಿ ಪಾರ್ಕ್ ಮಾಹಿತಿ ನೀಡಿ, ನಾವು ಬೆಸ್ಪೋಕ್ ಎಐ ಅನ್ನು ಪರಿಚಯಿಸುತ್ತಿದ್ದೇವೆ. ಗೃಹೋಪಯೋಗಿ ಉಪಕರಣಗಳಲ್ಲಿ ನಮ್ಮ ಮುಂದಿನ ದೊಡ್ಡ ಆವಿಷ್ಕಾರವು ಭಾರತೀಯ ಮನೆಗಳಿಗೆ ಉತ್ತಮ ಜೀವನವನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ ವಿವಿಧ ರೀತಿಯ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಪರಿಸರಕ್ಕೆ ಕೊಡುಗೆ ನೀಡಲಾಗುತ್ತದೆ ಎಂದಿದ್ದಾರೆ.

ಸ್ಯಾಮ್‌ಸಂಗ್‌ನಿಂದ ಎಐ ಬೆಂಬಲಿತ ಗೃಹೋಪಯೋಗಿ ಉಪಕರಣ ಲಾಂಚ್..

ಅಲ್ಲದೆ ನಮ್ಮ ಬೆಸ್ಪೋಕ್ ಎಐ ಚಾಲಿತ ಗೃಹೋಪಯೋಗಿ ಉಪಕರಣಗಳೊಂದಿಗೆ, ಗ್ರಾಹಕರು ತಮ್ಮ ಆಯ್ಕೆಗಳನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ. ಹಿರಿಯರು ಮತ್ತು ಮಕ್ಕಳಿಗಾಗಿ ಸುಲಭವಾದ ಕಂಟ್ರೋಲ್‌ ಆಯ್ಕೆಯನ್ನು ಈ ಮೂಲಕ ಪಡೆಯಬಹುದಾಗಿದೆ. ಬೆಸ್ಪೋಕ್ ಎಐ ಭಾರತದಲ್ಲಿನ ಡಿಜಿಟಲ್ ಉಪಕರಣಗಳ ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಬಲಪಡಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

Best Mobiles in India

English summary
Samsung has now unveiled AI powered home appliances at its BKC store in Mumbai. These are internet connected tools.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+