Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ 10 ಹೊಸ AI ವಾಶಿಂಗ್ ಮೆಷಿನ್‌ ಬಿಡುಗಡೆ!..ಬೆಲೆ ಮಾಹಿತಿ ಇಲ್ಲಿದೆ!

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ 10 ಫ್ರಂಟ್ ಲೋಡ್ ವಾಶಿಂಗ್ ಮೆಷಿನ್‌ಗಳನ್ನು ಬಿಡುಗಡೆ ಮಾಡಿದೆ. ಈ ನೂತನ ವಾಶಿಂಗ್ ಮೆಷಿನ್‌ಗಳು AI ಆಧರಿತ ಆಗಿದ್ದು, ಲಾಂಡ್ರಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದ್ದು, ಗ್ರಾಹಕರಿಗೆ AI ಫೀಚರ್‌ಗಳು ಒದಗಿಸುವ ಮೂಲಕ ಬಟ್ಟೆ ತೊಳೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಿವೆ. ಇನ್ನು ಈ ವಾಶಿಂಗ್ ಮೆಷಿನ್‌ಗಳು 12 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು, ಗ್ರಾಹಕರು ಬಹುತೇಕ ಎಲ್ಲಾ ದಿರಿಸುಗಳನ್ನು ಒಂದೇ ಸಲ ತೊಳೆಯಲು ಅನುವು ಮಾಡಿಕೊಡುತ್ತದೆ.

ಹೌದು, ಸ್ಯಾಮ್‌ಸಂಗ್‌ ಹೊಸದಾಗಿ AI ಸೌಲಭ್ಯದ ವಾಶಿಂಗ್ ಮೆಷಿನ್‌ಗಳನ್ನು (Bespoke AI Washing Machines) ಪರಿಚಯಿಸಿದೆ. ಇನ್ನು ಈ ಅತ್ಯಾಧುನಿಕ ಹೊಸ ವಾಶಿಂಗ್ ಮೆಷಿನ್‌ಗಳು ಫ್ಲಾಟ್ ಗ್ಲಾಸ್ ಡೋರ್ ರಚನೆ ಹೊಂದಿದ್ದು, ಬೀಸ್ಪೋಕ್ ವಿನ್ಯಾಸವನ್ನು ಪಡೆದಿವೆ. ಅಲ್ಲದೇ AI ವಾಶ್, AI ಎನರ್ಜಿ ಮೋಡ್, AI ಕಂಟ್ರೋಲ್ ಮತ್ತು AI ಇಕೋಬಬಲ್‌ನಂತಹ ಕೆಲವು ಆಧುನಿಕ AI ಫೀಚರ್ ಗಳನ್ನು ಒಳಗೊಂಡಿವೆ.

ಸ್ಯಾಮ್‌ಸಂಗ್‌ನಿಂದ 10 ಹೊಸ AI ವಾಶಿಂಗ್ ಮೆಷಿನ್‌ ಬಿಡುಗಡೆ!..ಬೆಲೆ ಮಾಹಿತಿ

AI ವಾಶಿಂಗ್ ಮೆಷಿನ್‌ಗಳ ಜೊತೆ ಸ್ಮಾರ್ಟ್ ಥಿಂಗ್ಸ್ ಆಪ್ ಅನ್ನು ಸಂಯೋಜಿಸಲಾಗಿದ್ದು, 2.8 ಮಿಲಿಯನ್ ಮಾಹಿತಿಗಳನ್ನು ಬಳಸಿಕೊಂಡು ಅತ್ಯುತ್ತಮ ಮತ್ತು ಪರಿಣಾಮಕಾರಿ ವಾಶಿಂಗ್ ಆಯ್ಕೆಗಳನ್ನು ಒದಗಿಸುತ್ತದೆ. ಇನ್ನು ಸ್ಯಾಮ್‌ಸಂಗ್‌ ಸಂಸ್ಥೆಯ ಈ ಹೊಸ 12 ಕೆಜಿ ಸಾಮರ್ಥ್ಯದ ವಾಶಿಂಗ್ ಮೆಷಿನ್‌ ಶ್ರೇಣಿಯ ಆರಂಭಿಕ ಬೆಲೆಯು 52990ರೂ. ಗಳು ಆಗಿದೆ. ಇನ್ನುಳಿದಂತೆ ಈ ನೂತ ವಾಶಿಂಗ್‌ ಮೆಷಿನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬೀಸ್ಪೋಕ್ AI ವಾಶಿಂಗ್ ಮೆಷಿನ್‌ಗಳಲ್ಲಿ ಇರುವ AI ಚಾಲಿತ ಫೀಚರ್ ಗಳು ಬಟ್ಟೆ ಒಗೆಯುವ ಪ್ರಕ್ರಿಯೆಯ ಶ್ರಮ ಕಡಿಮೆ ಮಾಡುತ್ತಿದ್ದು, ಹೆಚ್ಚು ಬುದ್ಧಿವಂತ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಅನುಭವವನ್ನು ಒದಗಿಸುವ ಮೂಲಕ ಬಳಕೆದಾರರ ಜೀವನಶೈಲಿಯನ್ನು ಉತ್ತಮ ಗೊಳಿಸುತ್ತದೆ. ಹಾಗೆಯೇ ಇದರ AI ಎನರ್ಜಿ ಮೋಡ್ ಶೇ.70 ರಷ್ಟು ವಿದ್ಯುತ್ ಉಳಿತಾಯ ಮಾಡಲು ನೆರವಾಗುವ ಮೂಲಕ ಗ್ರಾಹಕರ ವಿದ್ಯುತ್ ಬಿಲ್‌ ಬಹಳಷ್ಟು ಕಡಿಮೆ ಮಾಡುತ್ತದೆ.

ಇದರಲ್ಲಿರುವ AI ವಾಶ್ ಫೀಚರ್ ಬಟ್ಟೆಯ ತೂಕ ಮತ್ತು ಮೃದುತ್ವವನ್ನು ಪತ್ತೆಹಚ್ಚಲು ಅತ್ಯಾಧುನಿಕ ಸೆನ್ಸರ್ ಅನ್ನು ಬಳಸುತ್ತದೆ. ಜೊತೆಗೆ ಸಾಯಿಲ್ ಲೆವೆಲ್ ಟ್ರ್ಯಾಕಿಂಗ್ ವ್ಯವಸ್ಥೆಯು ನೀರಿನ ಪ್ರಕ್ಷುಬ್ಧತೆಯ ಮಟ್ಟದ ಆಧಾರದ ಮೇಲೆ ಪ್ರಸ್ತುತ ಇರುವ ಮಣ್ಣಿನ ಅಂಶದ ಮೇಲೆ ನಿಗಾ ವಹಿಸಿ ಉತ್ತಮವಾಗಿ ಬಟ್ಟೆಯನ್ನು ತೊಳೆಯಲು ಅವಶ್ಯ ಇರುವ ನೀರು ಮತ್ತು ಡಿಟರ್ಜೆಂಟ್ ಅನ್ನು ಬಳಕೆ ಮಾಡುತ್ತದೆ.

ಇದರ ಸೂಪರ್‌ಸ್ಪೀಡ್ ಆಯ್ಕೆಯು ಬಟ್ಟೆ ತೊಳೆಯುವ ಕಾರ್ಯ ನಿರ್ವಹಣೆಯಲ್ಲಿ ರಾಜಿ ಮಾಡಿಕೊಳ್ಳದೆ ಬಟ್ಟೆ ತೊಳೆಯುವ ಸಮಯವನ್ನು 39 ನಿಮಿಷಗಳಿಗೆ ಇಳಿಸುತ್ತದೆ. ಜೊತೆಗೆ ಕ್ಯೂ-ಬಬಲ್ ಮತ್ತು ಸ್ಪೀಡ್ ಸ್ಪ್ರೇಯಂತಹ ಹೊಸ ಫೀಚರ್ ಗಳು ಅತ್ಯುತ್ತಮವಾಗಿ ಶುಚಿಗೊಳಿಸುವಿಕೆಯ ಪ್ರಕ್ರಿಯೆ ಉಂಟಾಗುವಂತೆ ನೋಡಿಕೊಳ್ಳುತ್ತದೆ ಮತ್ತು ಉತ್ತಮ ಬಟ್ಟೆ ತೊಳೆಯುವಿಕೆಯನ್ನು ಸಾಧ್ಯವಾಗಿಸುತ್ತದೆ. ಇದರ ಫ್ರಂಟ್ ಟೆಂಪರ್ಡ್ ಗ್ಲಾಸ್ ಡೋರ್‌ ಮೂಲಕ ದೀರ್ಘ ಬಾಳಿಕೆ ಮತ್ತು ಸೊಗಸು ಎರಡೂ ಲಭ್ಯವಾಗುತದೆ.

ಬೆಲೆ ಹಾಗೂ ಲಭ್ಯತೆ ಮಾಹಿತಿ

ಸ್ಯಾಮ್‌ಸಂಗ್‌ನ ಈ ವಾಶಿಂಗ್‌ ಮೆಷಿನ್‌ನ ಸರಣಿಯ ಆರಂಭಿಕ 12ಕೆಜಿ (ಐನಾಕ್ಸ್‌) ಮಾಡೆಲ್‌ ಬೆಲೆ 52990ರೂ. ಗಳು ಆಗಿದೆ. ಈ ನೂತನ ವಾಶಿಂಗ್ ಮೆಷಿನ್‌ಗಳು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ Samsung.com, ಸ್ಯಾಮ್ ಸಂಗ್ ಶಾಪ್ ಆಪ್, ರಿಟೇಲ್ ಅಂಗಡಿಗಳು ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ.

Best Mobiles in India

English summary
Samsung launches 10 Bespoke AI Washing Machines in India. Check Price, AI features and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+