Home
ಸುದ್ದಿಜಾಲ

ಭಾರತದಲ್ಲಿ ಸ್ಯಾಮ್‌ಸಂಗ್‌ನ ಹೊಸ IoT ಆಯ್ಕೆ ಇರುವ ಏರ್ ಪ್ಯೂರಿಫೈಯರ್‌ ಲಾಂಚ್‌

ಸ್ಯಾಮ್‌ಸಂಗ್ ಗ್ರಾಹಕ ಎಲೆಕ್ಟ್ರಾನಿಕ್ ಡಿವೈಸ್‌ಗಳ ತಯಾರಿಕಾ ವಿಭಾಗದಲ್ಲಿ ಪ್ರಮುಖವಾಗಿದೆ. ಅದರಲ್ಲೂ ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದ್ದು, ಡಿಜಿಟಲ್ ಮೀಡಿಯಾಗೆ ಸಂಬಂಧಿಸಿದ ಗ್ಯಾಜೆಟ್‌ಗಳು, ಸೆಮಿಕಂಡಕ್ಟರ್‌ಗಳು, ಚಿಪ್‌ಗಳು ಸೇರಿದಂತೆ ಇನ್ನಿತರೆ ಡಿವೈಸ್‌ಗಳನ್ನು ಪರಿಚಯಿಸಿ ಜನಪ್ರಿಯತೆ ಗಳಿಸಿಕೊಂಡಿದೆ. ಇದರ ನಡುವೆ ಈಗ ಭಾರತದಲ್ಲಿ IoT ಆಯ್ಕೆ ಸಕ್ರಿಯಗೊಳಿಸಲಾದ ಏರ್ ಪ್ಯೂರಿಫೈಯರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಸ್ಯಾಮ್‌ಸಂಗ್

ಹೌದು, ಗುರುವಾರ(03.11.2022) ಬಿಡುಗಡೆಗೊಳಿಸಲಾದ ಈ ಹೊಸ ಸ್ಯಾಮ್‌ಸಂಗ್ ಏರ್ ಪ್ಯೂರಿಫೈಯರ್‌ಗಳು ಅಲ್ಟ್ರಾಫೈನ್ ಧೂಳನ್ನು ಸಹ ಸೆಳೆದುಕೊಂಡು ಗಾಳಿಯನ್ನು ಸ್ವಚ್ಛಮಾಡುವ ಮಲ್ಟಿ-ಲೇಯರ್ಡ್ ಹೈ-ಎಫಿಷಿಯನ್ಸಿ ಪ್ಯೂರಿಫಿಕೇಶನ್ ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಪ್ಯೂರಿಫೈಯರ್‌ ಅನ್ನು ರಿಮೋಟ್‌ ಮೂಲಕವೂ ನಿಯಂತ್ರಣ ಮಾಡಬಹುದಾಗಿದ್ದು, ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಲಿದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಏನು? ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೀಚರ್ಸ್‌ ಏನು?

ಫೀಚರ್ಸ್‌ ಏನು?

ಈ ಹೊಸ ಪ್ಯೂರಿಫೈಯರ್ 645 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶಕ್ಕೆ ಶುದ್ಧಗಾಳಿ ಪಸರಿಸಲಿದೆ. ಹಾಗೆಯೇ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಕ್ರಿಯಗೊಳಿಸಲಾಗಿರುವ ಏರ್ ಪ್ಯೂರಿಫೈಯರ್‌ ಇವಾಗಿದ್ದು, ಈ ಪ್ಯೂರಿಫೈಯರ್‌ ಅನ್ನು ಮಾಸ್ಟರ್ ಬೆಡ್‌ರೂಮ್‌ಗಳು, ಫಿಟ್‌ನೆಸ್ ಸ್ಟುಡಿಯೋಗಳು, ಆಸ್ಪತ್ರೆ ಕೊಠಡಿಗಳು ಮತ್ತು ಇತರ ದೊಡ್ಡ ಸ್ಥಳಗಳನ್ನು ಗುರಿಯಾಗಿಸಿಕೊಂಡು ತಯಾರು ಮಾಡಲಾಗಿದೆ.

ಸಂಭಾವ್ಯ ಸೋಕು ತಡೆ

ಸಂಭಾವ್ಯ ಸೋಕು ತಡೆ

ಈ ಏರ್‌ ಪ್ಯೂರಿಫೈಯರ್‌ ಫಾರ್ಮಾಲ್ಡಿಹೈಡ್ ಸೇರಿದಂತೆ ಸಂಭಾವ್ಯ ಅಪಾಯಕಾರಿ ವೊಲಟೈಲ್ ಆರ್ಗಾನಿಕ್ ಕಂಪೌಂಡ್ಸ್ (VOCs) ಅನ್ನು ನಾಶಪಡಿಸುತ್ತವೆ. ಈ ಮೂಲಕ ಬಳಕೆದಾರರು ಶುದ್ಧ ಗಾಳಿಯನ್ನು ಉಸಿರಾಡಬಹುದಾಗಿದೆ. ಜೊತೆಗೆ ಸ್ಮಾರ್ಟ್ ಥಿಂಗ್ಸ್ ಆಪ್‌ ಮೂಲಕ ಏರ್ ಪ್ಯೂರಿಫೈಯರ್ ಅನ್ನು ಬೇಕಾದ ಸಮಯದಲ್ಲಿ ಆನ್ ಮತ್ತು ಆಫ್ ಮಾಡಬಹುದಾಗಿದೆ. ಹಾಗೆಯೇ ಇದು ನಿಮ್ಮ ಮನೆಯ ವಿದ್ಯುತ್‌ ಅನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲಿದ್ದು, ಹೆಚ್ಚಿನ ಮಟ್ಟದ ಪವರ್‌ ಅನ್ನು ಇದು ಬೇಡುವುದಿಲ್ಲ. ಇನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಮೂಲಕ ಯಾವುದೇ ಸಮಯದಲ್ಲಿ ಹಾಗೆಯೇ ಎಲ್ಲಿಯಾದರೂ ಗಾಳಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಿ ಏರ್ ಪ್ಯೂರಿಫೈಯರ್‌ನ ಇತರ ಕಾರ್ಯಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ.

ಮಲ್ಟಿ-ಲೇಯರ್ಡ್ ಹೈ-ಎಫಿಷಿಯನ್ಸಿ ಪ್ಯೂರಿಫಿಕೇಶನ್ ಸಿಸ್ಟಮ್

ಮಲ್ಟಿ-ಲೇಯರ್ಡ್ ಹೈ-ಎಫಿಷಿಯನ್ಸಿ ಪ್ಯೂರಿಫಿಕೇಶನ್ ಸಿಸ್ಟಮ್

ಇನ್ನು ಈ ಏರ್ ಪ್ಯೂರಿಫೈಯರ್‌ ಅಲ್ಟ್ರಾಫೈನ್ ಧೂಳನ್ನು ಗಾಳಿಯಿಂದ ತೆಗೆದುಹಾಕಲು ಮಲ್ಟಿ-ಲೇಯರ್ಡ್ ಹೈ-ಎಫಿಷಿಯನ್ಸಿ ಪ್ಯೂರಿಫಿಕೇಶನ್ ಸಿಸ್ಟಮ್ ಆಯ್ಕೆ ಪಡೆದುಕೊಂಡಿದ್ದು, ಇದನ್ನು ಬಳಕೆದಾರರು ಸ್ಮಾರ್ಟ್ ಥಿಂಗ್ಸ್‌ ಆಪ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ. ಇದರ ಜೊತೆಗೆ ಕೇವಲ ಒಂದು ಸಿಂಗಲ್ ಬಟನ್ ನಿಯಂತ್ರಣದೊಂದಿಗೆ ಹೊಸ ಏರ್ ಪ್ಯೂರಿಫೈಯರ್‌ 99.97 ಪ್ರತಿಶತ ನ್ಯಾನೊಪರ್ಟಿಕಸಲ್‌ಗಳು, ಅಲ್ಟ್ರಾಫೈನ್ ಧೂಳು, ಬ್ಯಾಕ್ಟೀರಿಯಾ ಮತ್ತು ಅಲರ್ಜಿನ್‌ಗಳನ್ನು ಪರಿಣಾಮಕಾರಿಯಾಗಿ ನಾಶ ಮಾಡಿ, ಶುದ್ಧಗಾಳಿಯನ್ನು ಪಸರಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಆಟೋ ಮೋಡ್‌ ಆಯ್ಕೆ

ಆಟೋ ಮೋಡ್‌ ಆಯ್ಕೆ

ಇದರ ಜೊತೆಗೆ ಈ ಪ್ಯೂರಿಫೈಯರ್ ಆಟೋ ಮೋಡ್ ಫೀಚರ್ಸ್‌ ಸಹ ಪಡೆದುಕೊಂಡಿದ್ದು, ಆಟೋಮ್ಯಾಟಿಕ್‌ ಆಗಿ ವಾತಾವರಣಕ್ಕೆ ತಕ್ಕಂತೆ ಯಾವ ರೀತಿ ಕೆಲಸ ಮಾಡಬೇಕೆಂದು ತಾನೇ ಹೊಂದಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಸ್ಲೀಪ್‌ ಮೋಡ್‌ ಸಹ ಇದ್ದು, ರಾತ್ರಿ ವೇಳೆ ಶಾಂತವಾಗಿ ಹಾಗೂ ಆರಾಮದಾಯಕ ನಿದ್ದೆ ಮಾಡುವ ಹಾಗೆ ಅನುಕೂಲ ವಾತಾವರಣ ನಿರ್ಮಾಣ ಮಾಡಿಕೊಡುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಹೊಸ ಏರ್ ಪ್ಯೂರಿಫೈಯರ್ ಎರಡು ವೇರಿಯಂಟ್‌ನಲ್ಲಿ ಲಭ್ಯ ಇವೆ. ಇದರಲ್ಲಿ AX32 ವೇರಿಯಂಟ್‌ಗೆ 12,990ರೂ. ಗಳನ್ನು ನಿಗದಿ ಮಾಡಲಾಗಿದ್ದು, AX46ವೇರಿಯಂಟ್‌ಗೆ 32,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಪ್ಯೂರಿಫೈಯರ್ ಬೀಜ್ ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯ ಇವೆ. ಇದರ ಜೊತೆಗೆ ಕಂಪೆನಿಯು ಒಂದು ವರ್ಷದ ವಾರಂಟ ನೀಡಿದೆ. ಹಾಗೆಯೇ ಏನಾದರೂ ಸಮಸ್ಯೆ ಉಂಟಾದರೆ ಸ್ಯಾಮ್‌ಸಂಗ್‌ನ ಉದ್ಯೋಗಿಗಳೇ ಕಸ್ಟಮರ್‌ಗಳ ಮನೆಗೆ ಬಂದು ರಿಪೇರಿ ಮಾಡಿ ಹೋಗುವ ಸೌಲಭ್ಯವನ್ನೂ ಸಹ ಒದಗಿಸಲಾಗಿದೆ.

Best Mobiles in India

English summary
Samsung is a leader in the manufacturing segment of consumer electronic devices. Meanwhile, Samsung has now launched an air purifier with a new IoT option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+