Home
ಸುದ್ದಿಜಾಲ

ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ತನ್ನ ಗುಣಮಟ್ಟದ ಉತ್ಪನ್ನಗಳಿಂದ ಗ್ರಾಹಕರ ಮನಗೆದ್ದಿದ್ದು, ಅವುಗಳಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಮತ್ತು ಗೃಹ ಉಪಯೋಗಿ ಉತ್ಪನ್ನಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಆದ್ರೆ ಇದೀಗ ಕಂಪನಿಯು ತನ್ನ ಸ್ಮಾರ್ಟ್‌ಟಿವಿ ವ್ಯಾಪ್ತಿಗೆ ಮತ್ತೊಂದು ಹೊಸ ಟಿವಿಯನ್ನು ಸೇರ್ಪಡೆ ಮಾಡಿದ್ದು, ಈ ಸ್ಮಾರ್ಟ್‌ಟಿವಿ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರುವುದು ವಿಶೇಷ.

ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ 32 ಇಂಚಿನ 7-ಇನ್‌-1 ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದ್ದು, ಟಿವಿಯ ಮಾಡೆಲ್ ನಂಬರ್ UA32N4305ARXXL ಆಗಿದೆ. ಈ ಸ್ಮಾರ್ಟ್‌ಟಿವಿಯನ್ನು ಪಿಸಿಯಾಗಿಯು ಬಳಸಬಹುದಾಗ ಆಯ್ಕೆ ನೀಡಲಾಗಿದ್ದು, ಹೈಪರ್ ರಿಯಲ್ ಪಿಚ್ಚರ್ ಇಂಜಿನ್ ಮತ್ತು ಪ್ಯೂರ್‌ಕಲರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಡಾಲ್ಬಿ ಡಿಜಿಟಲ್ ಆಡಿಯೊ ಸೌಂಡ್‌ ಸಿಸ್ಟಮ್ ಪಡೆದಿದೆ.

ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!

ಸ್ಮಾರ್ಟ್‌ ಟಿವಿಯನ್ನು ಪರ್ಸನಲ್ ಕಂಪ್ಯೂಟರ್ ಆಗಿಯೂ ಬಳಸಬಹುದಾಗಿದ್ದು, ಅದಕ್ಕೆ ಕೀಬೋರ್ಡ್‌, ಮೌಸ್‌, ಸಹ ಕನೆಕ್ಟ್‌ ಮಾಡಬಹುದಾಗಿದ್ದು, ಪ್ರಸ್ತುತ ಜನಪ್ರಿಯವಾಗಿರುವ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳ ಇನ್‌ಬಿಲ್ಟ್‌ ನೀಡಲಾಗಿದೆ. ಹಾಗಾದರೇ ಸ್ಯಾಮ್‌ಸಂಗ್‌ನ ಹೊಸ 32 ಇಂಚಿನ ಸ್ಮಾರ್ಟ್‌ ಟಿವಿಯು ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಈ ಸ್ಮಾರ್ಟ್‌ ಟಿವಿಯು 32 ಇಂಚಿನ ಹೆಚ್‌ಡಿ ರೆಡಿ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1366 x 768 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಡಿಸ್‌ಪ್ಲೇಯ ಅನುಪಾತವು 16:9ರಷ್ಟಾಗಿದ್ದು, 178 ° ಡಿಗ್ರಿ ವೀಕ್ಷಣೆಯ ಆಂಗಲ್‌ನಲ್ಲಿದೆ. ಹಾಗೆಯೇ ಡಿಸ್‌ಪ್ಲೇ ರೀಫ್ರೇಶ್ ರೇಟ್ 50 hz ಸಾಮರ್ಥ್ಯದಲ್ಲಿದ್ದು, ಅತ್ಯುತ್ತಮ ವೀಕ್ಷಣೆಗೆ ಅನುಕೂಲ ಲಭ್ಯವಾಗಲಿದೆ.

ಪ್ರಮುಖ ಸೌಲಭ್ಯಗಳು

ಪ್ರಮುಖ ಸೌಲಭ್ಯಗಳು

ಟಿವಿಗೆ ಕೀಬೋರ್ಡ್‌ ಮತ್ತು ಮತ್ತು ಮೌಸ್‌ ಕನೆಕಟ್‌ ಮಾಡಿ ಕಂಪ್ಯೂಟರ್‌ ಆಗಿಯು ಬಳಸುವ ಅವಕಾಶ, ಸ್ಮಾರ್ಟ್‌ಟಿವಿ ಫೀಚರ್ಸ್‌, ವೈ-ಫೈ, ಸ್ಕ್ರೀನ್ ಮೀರಾಕಾಸ್ಟ್‌, ಒಂದು ಯುಎಸ್‌ಬಿ ಪೋರ್ಟ್‌, ಎರಡು HDMI ಪೋರ್ಟ್‌, ಐದರನೆಟ್‌ ಬೆಂಬಲ್, AC 100 - 240 V ಓಲ್ಟಜ್ ಬೇಡುತ್ತದೆ ಮತ್ತು 48 w ವಿದ್ಯುತ್ಯ ವ್ಯಯಸುತ್ತದೆ. ಹಾಗೆಯೇ ಬ್ಲೂಟೂತ್ ಸೌಲಭ್ಯವು ಸಹ ಒಳಗೊಂಡಿದೆ.

ಮನರಂಜನೆಯ ಅಡ್ಡಾ

ಮನರಂಜನೆಯ ಅಡ್ಡಾ

ಸ್ಯಾಮ್‌ಸಂಗ್ ಈ ಬಜೆಟ್‌ ಸ್ಮಾರ್ಟ್‌ಟಿವಿಯು ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳನ್ನು ಇನ್‌ಬಿಲ್ಟ್‌ ಆಗಿ ಹೊಂದಿದೆ. ನೆಟ್‌ಫ್ಲೆಕ್ಸ್‌, ಅವುಗಳಲ್ಲಿ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್, ಅಮೆಜಾನ್ ವಿಡಿಯೊ, ಯೂಟ್ಯೂಬ್, ಗೂಗಲ್ ಪ್ಲೇ ಮೂವೀಸ್‌ ಮತ್ತು ಟಿವಿ, ಜಿಯೋ ಸಿನಿಮಾ, ಜೀ5, ಎರೊಸ್‌ ನವ್, ಸೋನಿ ಲೈವ್, ಸನ್ ನೆಕ್ಸ್‌, ಮತ್ತು ಯೂಟ್ಯೂಬ್ ಕಿಡ್ಸ್ ಆಪ್ಸ್‌ಗಳು ಸೇರಿವೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ ಟಿವಿಯು ಲೈವ್ ಕಾಸ್ಟ್‌, ಸ್ಮಾರ್ಟ್‌ಫೋನ್‌ ಟಿವಿಗೆ ಕನೆಕ್ಟ್‌ ಮಾಡುವ, ಸ್ಕ್ರೀನ್‌ ಮೀರರಿಂಗ್ ಸೌಲಭ್ಯಗಳನ್ನು ಹೊಂದಿದ್ದು, ಡಿಸ್‌ಪ್ಲೇ ವರ್ಚುವಲ್ ಮ್ಯೂಸಿಕ್ ಸಿಸ್ಟಮ್, ಪ್ಲೇ ಮ್ಯೂಸಿಕ್, ಹೋಮ್ ಕ್ಲೌಡ್‌ ಫೀಚರ್ ಇದ್ದು, ಫೋಟೊಗಳನ್ನು ಟಿವಿಗೆ ಸೇಂಡ್ ಮಾಡಬಹುದಾಗಿದೆ. ಸೋಶಿಲ್ ಮೀಡಿಯಾ ಬ್ರಾಡ್‌ಕಾಸ್ಟಿಂಗ್ ಆಯ್ಕೆಗಳನ್ನು ಕಾಣಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಕಂಪನಿಯ 32 ಇಂಚಿನ UA32N4305ARXXL 7-ಇನ್‌-1 ಸ್ಮಾರ್ಟ್‌ ಟಿವಿಯ ಆರಂಭಿಕ ಬೆಲೆಯು 17,990ರೂ. ಆಗಿದ್ದು, ಗ್ರಾಹಕರ ಖರೀದಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರಿಗೆ ನೋಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ದೊರೆಯಲಿದ್ದು, ಹದಿನೆಂಟು ತಿಂಗಳ ಅವಧಿಗೆ ಇಎಮ್‌ಐ ಆಯ್ಕೆಯು ಸಹ ಲಭ್ಯವಾಗಲಿದೆ.

Best Mobiles in India

English summary
Samsung has just added a new 32-inch Smart TV to its line-up, and this is priced at Rs 17,990. The model number is UA32N4305ARXXL and this has now gone on sale. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+