Home
ಸುದ್ದಿಜಾಲ

Samsung: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಅಗ್ರಸ್ಥಾನ!

ಸ್ಯಾಮ್‌ಸಂಗ್‌ (Samsung) ಸ್ಮಾರ್ಟ್‌ ಡಿವೈಸ್‌ಗಳಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಸ್ಯಾಮ್‌ಸಂಗ್‌ ಹಾಗೂ ಆಪಲ್‌ (Samsung and Apple) ತಮ್ಮದೇ ಆದ ರೀತಿಯಲ್ಲಿ ಸ್ಪರ್ಧೆ ನೀಡುತ್ತಲೇ ಇರುತ್ತವೆ. ಈ ನಡುವೆ ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅಗ್ರಸ್ಥಾನ ಲಭಿಸಿದ್ದು, ಈ ಮೂಲಕ ದಾಖಲೆ ಮಟ್ಟದಲ್ಲಿ ಲಾಭ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಭಾರತದಲ್ಲಿ ಮೂರನೇ ತ್ರೈಮಾಸಿಕದಲ್ಲಿನ (Q3) ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಅಂದರೆ ಹೊಸ ವರದಿಯ ಪ್ರಕಾರ 18 % ಮಾರುಕಟ್ಟೆ ಪಾಲು ಮತ್ತು 7.9 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ವರದಿ ಮಾಡಿದೆ. ಹಾಗಿದ್ರೆ, ಇತರೆ ಬ್ರ್ಯಾಂಡ್‌ಗಳು ಯಾವ ಸ್ಥಾನದಲ್ಲಿವೆ?, ಯಾವೆಲ್ಲಾ ಫೋನ್‌ಗಳು ಹೆಚ್ಚು ಸೇಲ್‌ ಆಗಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಅಗ್ರಸ್ಥಾನ!

ಅಗ್ರ ಸ್ಥಾನ ಪಡೆದ ಸ್ಯಾಮ್‌ಸಂಗ್‌: ಸ್ಯಾಮ್‌ಸಂಗ್ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು Q3 ನಲ್ಲಿ 18% ಷೇರುಗಳೊಂದಿಗೆ ಮುನ್ನಡೆಸಿದೆ. ಅಂದರೆ ಭಾರತವು Q3 2023 ರಲ್ಲಿ ಒಟ್ಟಾರೆ 43 ಮಿಲಿಯನ್ ಸಾಗಣೆಗಳನ್ನು ದಾಖಲಿಸಿದ್ದು, ಇದರಲ್ಲಿ ಸ್ಯಾಮ್‌ಸಂಗ್‌ ಅಗ್ರಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಈ ವಿಭಾಗದಲ್ಲಿ ಮಾರುಕಟ್ಟೆಯು ಚೇತರಿಕೆಯತ್ತ ಮುನ್ನಡೆದಿದೆ.

ಹೊಸ ವರದಿಯ ಪ್ರಕಾರ 18 ಶೇಕಡಾ ಮಾರುಕಟ್ಟೆ ಪಾಲು ಹಾಗೂ 7.9 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ಸ್ಯಾಮ್‌ಸಂಗ್‌ ಮೊದಲ ಸ್ಥಾನ ಪಡೆದುಕೊಂಡರೆ, ಶಿಯೋಮಿ ಭಾರತದಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಬರೋಬ್ಬರಿ 7.6 ಮಿಲಿಯನ್ ಯೂನಿಟ್‌ಗಳನ್ನು ರವಾನಿಸಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಕೈಗೆಟುಕುವ 5G ಮಾದರಿಗಳ ಬಿಡುಗಡೆಯಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಈ ಪರಿಯಲ್ಲಿ ಉತ್ತೇಜಿಸಲ್ಪಟ್ಟಿದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ ಈ ಸಂಬಂಧ ವರದಿ ಮಾಡಿದ್ದು, ವಿವೋ ಮೂರನೇ ಸ್ಥಾನಕ್ಕೆ ಇಳಿದಿದ್ದು, 7.2 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ. ಹಾಗೆಯೇ ರಿಯಲ್‌ಮಿ ಮತ್ತು ಒಪ್ಪೋ ಕ್ರಮವಾಗಿ 5.8 ಮಿಲಿಯನ್ ಮತ್ತು 4.4 ಮಿಲಿಯನ್ ಯುನಿಟ್‌ಗಳನ್ನು ವಿತರಿಸುವ ಮೂಲಕ ಅಗ್ರ ಟಾಪ್‌ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ. ಈ ಮೂಲಕ ಒಟ್ಟಾರೆ ಭಾರತವು Q3 2023 ನಲ್ಲಿ 43 ಮಿಲಿಯನ್ ಸಾಗಣೆಗಳನ್ನು ದಾಖಲಿಸಿದೆ.

ಇನ್ನು ಈ ಸಾಗಣೆಯಲ್ಲಿ ವರ್ಷದಿಂದ ವರ್ಷಕ್ಕೆ 3 ಪ್ರತಿಶತದಷ್ಟು ಕುಸಿತ ಕಂಡುಬಂದರೂ, ಆದರೆ ಈ ತ್ರೈಮಾಸಿಕವು ಮಾತ್ರ ಸುಧಾರಿಸಿಕೊಂಡಿದೆ. ಜೊತೆಗೆ ಈ ವೇಳೆ ಮಾರಾಟಗಾರರು ಹೊಸದಾಗಿ ಪರಿಚಯಿಸಲಾದ ಡಿವೈಸ್‌ಗಳ ಮೂಲಕ ಲಾಭ ಮಾಡಿಕೊಳ್ಳಲು ಸಾಕಷ್ಟು ಅವಕಾಶವನ್ನೂ ಸಹ ನೀಡಿದ್ದು, ಇದಕ್ಕೆ ಕಾರಣವಾಗಿದೆ ಎಂದು ವರದಿಗಳು ಉಲ್ಲೇಖ ಮಾಡಿವೆ

ಇದರೊಂದಿಗೆ Q3 ರಲ್ಲಿ, ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ತಮ್ಮ ಹಬ್ಬದ ಉತ್ಪನ್ನ ಶ್ರೇಣಿಯನ್ನು ಆಯಕಟ್ಟಿನ ರೀತಿಯಲ್ಲಿ ಪ್ರಚಾರ ಮಾಡಿದ್ದರಿಂದ ಜೊತೆಗೆ ಬಜೆಟ್ ಸ್ನೇಹಿ 5G ಆಯ್ಕೆಗಳ ಸುತ್ತ ಬಲವಾದ ಒತ್ತು ನೀಡಿದ್ದರಿಂದ ಈ ಪರಿ ಬೆಳವಣಿಗೆ ಆಗಲು ಸಾಧ್ಯವಾಯಿತು ಎಂದು ಕ್ಯಾನಲಿಸ್‌ನ ಹಿರಿಯ ವಿಶ್ಲೇಷಕ ಸನ್ಯಾಮ್ ಚೌರಾಸಿಯಾ ಈ ವೇಳೆ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ.

ಒಟ್ಟಾರೆ ಮಾರಾಟಗಾರರು ಸಾಮೂಹಿಕ ಮಾರುಕಟ್ಟೆ 5G ಮಾದರಿಗಳನ್ನು ಪರಿಚಯಿಸಿದ್ದರಿಂದ ಪ್ರವೇಶ ಮಟ್ಟದ ವಿಭಾಗವು ಹೆಚ್ಚಿನ ಬೇಡಿಕೆ ಕಂಡಿದೆ ಮತ್ತೊಂದೆಡೆ, ಪ್ರೀಮಿಯಂ ವಿಭಾಗವು ದೃಢವಾದ ಬೆಳವಣಿಗೆಯನ್ನು ಸಹ ದಾಖಲು ಮಾಡಿದ್ದು, ಇದರಲ್ಲಿ ಸ್ಯಾಮ್‌ಸಂಗ್‌ನ S23 ಸರಣಿ (Samsung S23 series) ಮತ್ತು ಆಪಲ್‌ ಐಫೋನ್‌ಗಳು ಅಂದರೆ ಐಫೋನ್‌ 14 ಮತ್ತು 13 ವಿಶೇಷ ರೀತಿಯಲ್ಲಿ ಮಾರಾಟವಾಗಿವೆ ಎಂದು ಹೇಳಿದ್ದಾರೆ.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಅಗ್ರಸ್ಥಾನ!

ಇದೇ ವೇಳೆ ಮಾರುಕಟ್ಟೆಯು ಹೆಚ್‌ಟೆಕ್‌ ನೊಂದಿಗೆ ಕಾರ್ಯತಂತ್ರದ ಜಂಟಿ ಉದ್ಯಮ ಮಾರ್ಗದ ಮೂಲಕ ಹಾನರ್‌ನ ಮರು-ಪ್ರವೇಶಕ್ಕೆ ಸಾಕ್ಷಿಯಾಗಿದೆ. ಪರಿಣಾಮ ಹಾನರ್ 90 ಲಾಂಚ್‌ ಆಗಿದ್ದು, ಟಾಪ್ ಐದು ಬ್ರ್ಯಾಂಡ್‌ಗಳು ವರ್ಷದಿಂದ ವರ್ಷಕ್ಕೆ ಅಲ್ಪ ಮಟ್ಟದಲ್ಲಿ ಕುಸಿತವನ್ನು ಕಾಣುತ್ತಿದ್ದರೂ ಸಹ ಇತರೆ ಕಂಪೆನಿಗಳು ಕೊಂಚ ಚೇತರಿಸಿಕೊಳ್ಳುತ್ತಿವೆ. ಈ ಮೂಲಕ ಒಟ್ಟಾರೆ ಮಾರುಕಟ್ಟೆ ಸಾಗಣೆಯನ್ನು ಸ್ಥಿರಗೊಳಿಸಿವೆ ಎಂದು ಚೌರಾಸಿಯಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

Best Mobiles in India

English summary
Samsung retained its top position in the third quarter (Q3) smartphone market in India. That means it reported 18% market share and 7.9 million units shipped as per the new report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+