Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಫೋನ್‌ ಖರೀದಿಗೆ ಮುಂದಾಗಿದ್ದೀರಾ?; ಸ್ವಲ್ಪ ಕಾಯಿರಿ ಹೊಸ ಫೋನ್‌ಗಳು ಲಾಂಚ್‌ ಆಗಲಿವೆ!

ಟೆಕ್‌ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಕಳೆದ ತಿಂಗಳ ಅಂತ್ಯದಲ್ಲಿ ಗ್ಯಾಲಕ್ಸಿ A14 4G ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಭಾರೀ ಮೆಚ್ಚುಗೆ ಗಳಿಸಿದೆ. ಇದರ ಭಾಗವಾಗಿಯೇ ಈಗ ಈ ತಿಂಗಳು A ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲು ವೇದಿಕೆ ರೆಡಿ ಮಾಡಿಕೊಂಡಿದೆ.

ಹೌದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಬಾಳಿಕೆಗೆ ಹೆಸರಾಗಿರುವ ಸ್ಯಾಮ್‌ಸಂಗ್‌ನ ಯಾವುದೇ ಮೊಬೈಲ್‌ಗಳಿಗೂ ಇಂದಿಗೂ ಬೇಡಿಕೆ ಇದೆ. ಈ ಕಾರಣಕ್ಕೆ ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿರುವ ಸ್ಯಾಮ್‌ಸಂಗ್ ಇದೀಗ A ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲಿದ್ದು, ಗ್ರಾಹಕರಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ.

ಸ್ಯಾಮ್‌ಸಂಗ್‌ ಫೋನ್‌ ಖರೀದಿಗೆ ಮುಂದಾಗಿದ್ದೀರಾ?; ಸ್ವಲ್ಪ ಕಾಯಿರಿ...

ಮುಂಬರುವ ಗ್ಯಾಲಕ್ಸಿ A ಸರಣಿಯ ಸ್ಮಾರ್ಟ್‌ಫೋನ್‌ಗಳ ಕುರಿತು ಲೀಕ್ ಮಾಹಿತಿಗಳು ಟೆಕ್‌ ವಲಯದಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಧಾವಿಸಲಿವೆ ಎನ್ನಲಾಗಿದೆ. ಹಾಗೆಯೇ ಟಿಪ್‌ಸ್ಟರ್ ಸ್ಟೀವ್ ಹೆಮ್ಮರ್‌ಸ್ಟಾಫರ್ ಅವರ ವರದಿಯ ಪ್ರಕಾರ ಈ ತಿಂಗಳ ಕೊನೆಯಲ್ಲಿ ಸ್ಯಾಮ್‌ಸಂಗ್ ಈ ಎರಡು ಫೋನ್‌ಗಳನ್ನು ಅಧಿಕೃತಗೊಳಿಸಬಹುದು ಎನ್ನಲಾಗಿದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಅನ್ನು ಈ ತಿಂಗಳು ಮಾರ್ಚ್ 15 ರಂದು ಲಾಂಚ್‌ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಲೀಕ್‌ ಆದ ಮಾಹಿತಿ ಪ್ರಕಾರ ಈ ಹೊಸ ಮುಂಬರುವ ಫೋನ್‌ಗಳು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ ಎಂಬುದರ ಕಡೆ ಕಣ್ಣಾಯಿಸೋಣ.

ಗ್ಯಾಲಕ್ಸಿ A54 5G ನಿರೀಕ್ಷಿತ ಫೀಚರ್ಸ್‌

ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್‌ ರೇಟ್‌ ನೀಡಲಿದೆ ಎನ್ನಲಾಗಿದೆ. ಹಾಗೆಯೇ ಇದರ ಜೊತೆಗೆ ಎಕ್ಸಿನೋಸ್ 1380 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ 5 ಮೂಲಕ ರನ್‌ ಆಗಲಿದೆ ಎಂದು ತಿಳಿದುಬಂದಿದೆ. ಇನ್ನು 8GB RAM ಮತ್ತು 256GB ಇಂಟರ್ನಲ್‌ ಸ್ಟೋರೇಜ್‌ ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಎಂದು ಊಹಿಸಲಾಗಿದೆ.

ಸ್ಯಾಮ್‌ಸಂಗ್‌ ಫೋನ್‌ ಖರೀದಿಗೆ ಮುಂದಾಗಿದ್ದೀರಾ?; ಸ್ವಲ್ಪ ಕಾಯಿರಿ...

ಜೊತೆಗೆ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50MP ಪ್ರಾಥಮಿಕ ಸೆನ್ಸರ್, 12MP ಅಲ್ಟ್ರಾ ವೈಡ್ ಸೆನ್ಸಾರ್ ಹಾಗೂ 5MP ಮ್ಯಾಕ್ರೋ ಸೆನ್ಸರ್‌ ಆಯ್ಕೆಯನ್ನು ಹೊಂದಿರಲಿದ್ದು, ಸೆಲ್ಫಿಗಾಗಿ 32MP ಸೆನ್ಸರ್‌ ಆಯ್ಕೆಯನ್ನು ಪಡೆದುಕೊಂಡಿರಲಿದೆ ಎನ್ನುವ ಮಾತುಗಳು ದೃಢವಾಗಿವೆ.

ಬ್ಯಾಟರಿ ಸಂಬಂಧ ಕೆಲವು ಮಾಹಿತಿಗಳು ಲೀಕ್‌ ಆಗಿದ್ದು, ಅದರಂತೆ ಈ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAH ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಇನ್ನು IP67 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ ಎಂದೂ ಸಹ ಹೇಳಲಾಗುತ್ತಿದೆ.

ಗ್ಯಾಲಕ್ಸಿ A34 5G ಫೋನ್‌ನ ನಿರೀಕ್ಷಿತ ಫೀಚರ್ಸ್‌

ಗ್ಯಾಲಕ್ಸಿ A34 5G ಫೋನ್‌ 6.6 ಇಂಚಿನ ದೊಡ್ಡ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಇದು ಯಾವ ಪ್ರಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವ ಮಾಹಿತಿ ಬಗ್ಗೆ ತಿಳಿದಿಲ್ಲವಾದರೂ 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಸ್ಯಾಮ್‌ಸಂಗ್‌ ಫೋನ್‌ ಖರೀದಿಗೆ ಮುಂದಾಗಿದ್ದೀರಾ?; ಸ್ವಲ್ಪ ಕಾಯಿರಿ...

ಈ ಫೋನ್‌ ಸಹ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿರಲಿದ್ದು, ಅದರಲ್ಲಿ 48MP ಪ್ರಾಥಮಿಕ ಸೆನ್ಸರ್‌, 8MP ಅಲ್ಟ್ರಾ ವೈಡ್ ಸೆನ್ಸರ್‌ ಮತ್ತು 5MP ಮ್ಯಾಕ್ರೋ ಸೆನ್ಸರ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಸೆಲ್ಫಿಗಾಗಿ 13MP ಸೆನ್ಸರ್‌ ಆಯ್ಕೆಯನ್ನು ಹೊಂದಿರಲಿದೆ ಎಂದ ಹೇಳಲಾಗುತ್ತಿದೆ. ಇಷ್ಟೆಲ್ಲಾ ನಿರೀಕ್ಷಿತ ಫೀಚರ್ಸ್‌ಗಳೊಂದಿಗೆ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಪಡೆಯಲಿದೆಯಂತೆ.

Best Mobiles in India

English summary
Samsung is all set to launch Galaxy A54 5G and Galaxy A34 5G new A series smartphones. Know about the leaked features of these phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+