ಸ್ಮಾರ್ಟ್‌ರಿಂಗ್ ಲಾಂಚ್ ಮಾಡಲು ಸಿದ್ಧವಾಗುತ್ತಿದೆ ಸ್ಯಾಮ್‌ಸಂಗ್; ಈ ರಿಂಗ್‌ನಿಂದಾಗುವ ಅನುಕೂಲ ಏನು?
ಆಪಲ್‌ಗೆ (Apple) ಸರಿಸಮನಾಗಿ ನಿಲ್ಲುವ ಮತ್ತೊಂದು ಟೆಕ್ ದೈತ್ಯ ಎಂದರೆ ಸ್ಯಾಮ್‌ಸಂಗ್ (Samsung). ಆಪಲ್ ಈವರೆಗೂ ಪರಿಚಯಿಸಲಾಗದ ಅದೆಷ್ಟೋ ಸ್ಮಾರ್ಟ್‌ಡಿವೈಸ್‌ಗಳನ್ನು ಸ್ಯಾಮ್‌ಸಂಗ್ ಪರಿಚಯಿಸಿದೆ. ಈ ಕಾರಣಕ್ಕೆ ಸ್ಯಾಮ್‌ಸಂಗ್ ಸಹ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದೆ. ಇದರ ನಡುವೆ ಈಗ ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್ (Smart Ring) ಅನಾವರಣಕ್ಕೆ ಮುಂದಾಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2024 ನಲ್ಲಿ ಮೊದಲ ಸ್ಮಾರ್ಟ್ ರಿಂಗ್ ಅನ್ನು ಲಾಂಚ್ ಮಾಡುವ ಸಾಧ್ಯತೆಯಿದೆ. ಈ ಡಿವೈಸ್ ಬಳಕೆದಾರರ ಆರೋಗ್ಯವನ್ನು ಅತ್ಯುತ್ತಮವಾಗಿ ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಈ ಸ್ಮಾರ್ಟ್ ಡಿವೈಸ್‌ನ ಪ್ರಮುಖ ಫೀಚರ್ಸ್‌ಗಳು ಏನಿರಬಹುದು?, ಹಾಗೂ ಬಳಕೆದಾರರಿಗೆ ಇದು ಹೇಗೆ ಸಹಾಯಕ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್: ಈಗಾಗಲೇ ಸ್ಮಾರ್ಟ್‌ವಾಚ್‌ಗಳು ಆರೋಗ್ಯ ಸಂಬಂಧಿ ಮಾಹಿತಿಯನ್ನು ನೀಡುವ ಜೊತೆಗೆ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಆದರೆ ಟೆಕ್ನಾಲಜಿ ಅಭಿವೃದ್ಧಿ ಆದಂತೆಲ್ಲಾ ಹೊಸ ಹೊಸ ಸ್ಮಾರ್ಟ್ ಡಿವೈಸ್‌ಗಳು ಸಹ ಅನಾವರಣ ಆಗುತ್ತಿದ್ದು, ಇದರ ಭಾಗವಾಗಿಯೇ ಈಗ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ರಿಂಗ್ (Samsung SmartRing) ಗುರುತಿಸಿಕೊಳ್ಳಲಿದೆ. ಈಗಾಗಲೇ ಬಳಕೆಯಲ್ಲಿರುವ ಆರೋಗ್ಯ-ಟ್ರ್ಯಾಕಿಂಗ್ ಡಿವೈಸ್‌ಗಳಿಗಿಂತ ಹೆಚ್ಚು ನಿಖರವಾದ ಮಾಹಿತಿ ಈ ರಿಂಗ್‌ನಿಂದ ಲಭ್ಯ ಎಂದು ನಿರೀಕ್ಷೆ ಮಾಡಲಾಗಿದೆ.
ಸೋಲ್ ಆಧಾರಿತ ಗ್ಯಾಜೆಟ್ ತಯಾರಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ರಿಂಗ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗ್ಯಾಲಕ್ಸಿ ಒನ್, ಗ್ಯಾಲಕ್ಸಿ ಪಲ್ಸ್ ಮತ್ತು ಗ್ಯಾಲಕ್ಸಿ ರಿದಮ್ ಸೇರಿದಂತೆ ವದಂತಿಯ ಹೊಸ ಸ್ಮಾರ್ಟ್ ರಿಂಗ್‌ಗಾಗಿ ಸ್ಯಾಮ್‌ಸಂಗ್ ಹೆಸರುಗಳ ಸರಣಿಯನ್ನು ಟ್ರೇಡ್‌ಮಾರ್ಕ್ ಮಾಡಿದೆ ಎಂದು ತಿಳಿದುಬಂದಿದೆ. ಆದರೂ ಸಹ ಕಂಪೆನಿ ಅಧಿಕೃತವಾಗಿ ಈ ಸಂಬಂಧ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಡಚ್ ಪ್ರಕಟಣೆಯ ಪ್ರಕಾರ, ಸ್ಯಾಮ್‌ಸಂಗ್ ಈ ಹಿಂದೆ ಇದೇ ಡಿವೈಸ್‌ಗಾಗಿ ಗ್ಯಾಲಕ್ಸಿ ಇಂಡೆಕ್ಸ್, ಗ್ಯಾಲಕ್ಸಿ ಇನ್‌ಸೈಟ್ ಮತ್ತು ಗ್ಯಾಲಕ್ಸಿ ಸರ್ಕಲ್ ಅನ್ನು ಟ್ರೇಡ್‌ಮಾರ್ಕ್ ಮಾಡಿದೆಯಂತೆ.
ಸ್ಯಾಮ್‌ಸಂಗ್ ತನ್ನ ಮೊದಲ ಸ್ಮಾರ್ಟ್ ರಿಂಗ್ ಅನ್ನು 2024 ರ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಅದನ್ನು ಘೋಷಿಸಬಹುದು ಎಂದು ಸಹ ಹೇಳಲಾಗುತ್ತಿದೆ. ಅದೇ ವೇಳೆ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಸಹ ಅನಾವರಣಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದ್ದು, ಈ ವೇಳೆ ರಿಂಗ್ ಏನಾದರೂ ಲಾಂಚ್ ಆದರೆ ಇದಕ್ಕೆ ಸ್ಟಾರ್ ಮಾನ್ಯತೆ ಸಿಗುವುದು ಪಕ್ಕಾ ಎನಿಸಿದೆ. ಈ ಬಗ್ಗೆ ವೈಬೊದಲ್ಲಿ ಟಿಪ್‌ಸ್ಟರ್ ಐಸ್ ಯೂನಿವರ್ಸ್ ಉಲ್ಲೇಖಿಸಿದೆ.
ಈ ಹಿಂದೆ, ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫೀಸ್ (USPTO) ನಲ್ಲಿಯೂ ಈ ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ. ಅದರ ಪ್ರಕಾರ, ಗ್ಯಾಲಕ್ಸಿ ರಿಂಗ್ ಆರೋಗ್ಯ, ಫಿಟ್‌ನೆಸ್ ಮತ್ತು ನಿದ್ರೆ-ಸಂಬಂಧಿತ ಡೇಟಾವನ್ನು ಸಂಗ್ರಹಿಸುತ್ತದೆ ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಈ ಎಲ್ಲಾ ಮಾಹಿತಿಯನ್ನು ಮೌಲ್ಯಮಾಪನ ಮಾಡುವ ಕಾರ್ಯ ಮಾಡಲಿದೆ ಎಂದು ವದಂತಿ ಇವೆ.
ಇನ್ನು ಬಳಕೆದಾರರ ಆರೋಗ್ಯವನ್ನು ಸದಾ ಟ್ರ್ಯಾಕ್ ಮಾಡುವ ಈ ರಿಂಗ್ ಅಗತ್ಯವಿದ್ದಾಗ ವೈದ್ಯಕೀಯ ಸಲಹೆಯನ್ನು ನೀಡಲು ಬಯೋಮೆಟ್ರಿಕ್ ಮತ್ತು ಶಾರೀರಿಕ ಡೇಟಾ, ಪ್ರಮುಖ ಚಿಹ್ನೆಗಳು ಮತ್ತು ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ರಿಂಗ್ ಒಳಗೆ ಬಹು ಸೆನ್ಸರ್ ಆಯ್ಕೆಯನ್ನು ನೀಡಲಾಗಿದೆ. ಈ ಸುಧಾರಿತ ಸೆನ್ಸರ್‌ಗಳೇ ನಿಖರ ಮಾಹಿತಿಯನ್ನು ನೀಡುತ್ತವೆ.
ಅಷ್ಟೇ ಅಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್‌ನ ಕೆಲವು ಸಂಭಾವ್ಯ ವಿನ್ಯಾಸಗಳ ಬಗ್ಗೆಯೂ ಮಾಹಿತಿ ತಿಳಿದುಬಂದಿದೆ. ಅಂದರೆ ಇದು ಲೋಹೀಯ ಫಿನಿಶ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ನಿಖರ ಮಾಹಿತಿ ಇಲ್ಲ. ಈ ನಡುವೆ ಸ್ಯಾಮ್‌ಸಂಗ್‌ನ ಪ್ರತಿಸ್ಪರ್ಧಿ ಆಪಲ್ ಕೂಡ ಸ್ಮಾರ್ಟ್ ರಿಂಗ್ ಅನ್ನು ಪ್ರಾರಂಭಿಸುವ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ ಆಪಲ್ ಇತ್ತೀಚೆಗೆ ರಿಂಗ್ ಇನ್‌ಪುಟ್ ಡಿವೈಸ್ ವಿತ್ ಪ್ರೆಶರ್-ಸೆನ್ಸಿಟಿವ್ ಇನ್‌ಪುಟ್ ಎಂಬ ಶೀರ್ಷಿಕೆಯ ಪೇಟೆಂಟ್ ಅನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದುಬಂದಿದೆ. ಇದು ಸ್ಮಾರ್ಟ್ ರಿಂಗ್‌ಗಾಗಿ ನವೀನ ಫೀಚರ್ಸ್‌ಗಳನ್ನು ಸೂಚಿಸುತ್ತದೆ. ಈ ವದಂತಿ ಏನಾದರೂ ಸತ್ಯವಾದರೆ ಆಪಲ್ ಹಾಗೂ ಸ್ಯಾಮ್‌ಸಂಗ್ ನಡುವೆ ತೀವ್ರ ರೀತಿಯಲ್ಲಿ ಹೋರಾಟ ನಡೆಯುವುದು ಖಚಿತ.
ಆಪಲ್ ಸ್ಮಾರ್ಟ್ ರಿಂಗ್ ಪೇಟೆಂಟ್‌ಗಳಿಗಿಂತ ಭಿನ್ನವಾಗಿ, ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫೀಸ್ (USPTO) ನಲ್ಲಿ ಸಲ್ಲಿಸಿದ ಈ ಪೇಟೆಂಟ್ ರಿಂಗ್-ಆಕಾರದ ಡಿವೈಸ್‌ನ ಆಂತರಿಕ ಕಾರ್ಯನಿರ್ವಹಣೆಯನ್ನು ವಿವರಿಸಿದೆ. ಇದು ನೋಟಿಫಿಕೇಶನ್ ಟ್ಯಾಪ್‌ಗಳನ್ನು ತಲುಪಿಸಲು ಮಾತ್ರವಲ್ಲದೆ ಅದರ ಹೊರಭಾಗದ ಮೇಲೆ ಕಂಟ್ರೋಲ್ ಹೊಂದುವಂತೆ ವಿನ್ಯಾಸ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇದರ ನಡುವೆ ಬೋಟ್ ಹಾಗೂ ನಾಯ್ಸ್ ಸಹ ಸ್ಮಾರ್ಟ್ ರಿಂಗ್‌ಗಳ ವಿಭಾಗದಲ್ಲಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ, ಬೋಟ್ ತನ್ನ ಮೊದಲ ಸ್ಮಾರ್ಟ್ ರಿಂಗ್ ಅನ್ನು ಹಲವಾರು ಆರೋಗ್ಯ-ಟ್ರ್ಯಾಕಿಂಗ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಒಂದು ಲೋಹೀಯ ಬೆಳ್ಳಿಯ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಭಾರತದಲ್ಲಿ ಇದರ ಬೆಲೆ 8,999 ರೂ. ಗಳಾಗಿದೆ.


Click it and Unblock the Notifications








