Samsung: ಸ್ಯಾಮ್‌ಸಂಗ್‌ನ ಈ ವಿಶೇಷ ಫೋನ್‌ಗೆ 7 ವರ್ಷಗಳ ಈ ಸೌಲಭ್ಯ ಲಭ್ಯ?
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ (Samsung smartphone) ವಿಶೇಷ ಬೇಡಿಕೆ ಇದೆ. ಅದರಲ್ಲೂ ಆಪಲ್‌ನೊಂದಿಗೆ ನೇರವಾಗಿ ಸೆಣಸುವ ಬ್ರ್ಯಾಂಡ್‌ಗಳಲ್ಲಿ ಇದು ಪ್ರಮುಖವಾಗಿದೆ. ಈ ಬೆಳವಣಿಗೆ ನಡುವೆ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಈ ಮೂಲಕ ಇನ್ನಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ಹೌದು, ಸ್ಯಾಮ್‌ಸಂಗ್ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳ ಮೂಲಕ ಬಳಕೆದಾರರಿಗೆ ವಿಶೇಷ ಸೇವೆ ನೀಡುತ್ತಲೇ ಬಂದಿದೆ. ಅದರಂತೆ ಈಗ ಈ ಹೊಸ ಫೋನ್ ಅನ್ನು ಯಾರೆಲ್ಲಾ ಖರೀದಿ ಮಾಡಲಿದ್ದಾರೋ ಅವರು ಏಳು ವರ್ಷದ ವರೆಗೆ ಆಂಡ್ರಾಯ್ಡ್ ನವೀಕರಣ (Android update) ಸೌಲಭ್ಯ ಪಡೆಯಬಹುದಾಗಿದೆ. ಹಾಗಿದ್ರೆ, ಯಾವ ಫೋನ್ ಮೇಲೆ ಈ ಆಫರ್?, ಇದರ ಫೀಚರ್ಸ್ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಳು ವರ್ಷಗಳ ವರೆಗೆ ನವೀಕರಣ: ಸ್ಯಾಮ್‌ಸಂಗ್ ಜನವರಿ 17 ರಂದು ಅಂದರೆ ನಾಳೆ ತನ್ನ ಅನ್ಪ್ಯಾಕ್ ಈವೆಂಟ್‌ನಲ್ಲಿ ಗ್ಯಾಲಕ್ಸಿ S24 ಸರಣಿಯನ್ನು (Galaxy S24 series) ಲಾಂಚ್ ಮಾಡಲಿದೆ. ಈ ಫೋನ್ ಲಾಂಚ್ ಆಗುವ ಮುನ್ನವೇ ವಿಶೇಷ ಫೀಚರ್ಸ್ ಆಯ್ಕೆ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಈ ಬೆಳವಣಿಗೆ ನಡುವೆ ಮತ್ತೊಂದು ಖುಷಿ ವಿಚಾರ ತಿಳಿದುಬಂದಿದ್ದು, ಇತ್ತೀಚಿನ ವರದಿಯ ಪ್ರಕಾರ ಗ್ಯಾಲಕ್ಸಿ S24 ಸರಣಿಯು ಏಳು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು (Software update) ಪಡೆಯುತ್ತದೆ ಎನ್ನಲಾಗಿದೆ.
ಇನ್ನು ಸ್ಯಾಮ್‌ಸಂಗ್‌ನ ಪ್ರಮುಖ ಪ್ರತಿಸ್ಪರ್ಧಿ ಆಗಿರುವ ಗೂಗಲ್ ತನ್ನ ಪಿಕ್ಸೆಲ್ 8 (Google Pixel 8) ನಲ್ಲಿ ಏಳು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಘೋಷಣೆ ಮಾಡಿದ್ದು, ಇದಕ್ಕೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಸ್ಯಾಮ್‌ಸಂಗ್ ಸಹ ಈ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ. ಅಲ್ಲದೆ ಯುರೋಪಿಯನ್ ಮಾರುಕಟ್ಟೆಗಾಗಿ ಗ್ಯಾಲಕ್ಸಿ S24 ನ ಪ್ರಿ-ಆರ್ಡರ್ ಪ್ಲ್ಯಾನ್‌ಗಳು ಮತ್ತು ವಿಶೇಷ ಬಣ್ಣದ ಆಯ್ಕೆಗಳು ಸಹ ಲಭ್ಯ ಇರಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಕೆಲವು ವರದಿಗಳನ್ನು ನಂಬುವುದಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಶ್ರೇಣಿಯನ್ನು ಏಳು ವರ್ಷಗಳ ಸಾಫ್ಟ್‌ವೇರ್ ಬೆಂಬಲದೊಂದಿಗೆ ನೀಡಲಿದೆ ಎನ್ನಲಾಗಿದೆ. ಇದು ಪೂರ್ಣ ಆಂಡ್ರಾಯ್ಡ್ ಮತ್ತು ಒನ್ ಯುಐ ನವೀಕರಣಗಳಾಗಿರುತ್ತದೆ ಎಂದು ತಿಳಿದುಬಂದಿದೆ. ಈ ಮೊದಲು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿಗಾಗಿ (Samsung Galaxy S23 series) ನಾಲ್ಕು ಆಂಡ್ರಾಯ್ಡ್ ಪೀಳಿಗೆಯ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುವ ಮೂಲಕ ಬಹಳ ಸದ್ದು ಮಾಡಿತ್ತು.
ಮೊದಲೇ ತಿಳಿಸಿದಂತೆ ಯುರೋಪ್‌ನಲ್ಲಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾದ (Galaxy S24, Galaxy S24+ and Galaxy S24 Ultra) ಬಣ್ಣ ಆಯ್ಕೆಗಳು ಮತ್ತು ಪೂರ್ವ-ಆರ್ಡರ್ ಪ್ಲ್ಯಾನ್‌ಗಳು ಬಹಿರಂಗವಾಗಿವೆ. ಗ್ಯಾಲಕ್ಸಿ S24 ಅಲ್ಟ್ರಾವನ್ನು ಮೂರು ವಿಶೇಷ ಬಣ್ಣಗಳಲ್ಲಿ ಅಂದರೆ ಟೈಟಾನಿಯಂ ಗ್ರೀನ್, ಟೈಟಾನಿಯಂ ಬ್ಲೂ ಮತ್ತು ಟೈಟಾನಿಯಂ ಆರೆಂಜ್ ಬಣ್ಣದಲ್ಲಿ ನೀಡಲಾಗುತ್ತದೆ ಎಂದು ತಿಳಿದುಬಂದಿದ್ದು, ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ಜೇಡ್ ಗ್ರೀನ್, ನೀಲಮಣಿ ಬ್ಲೂ ಬಣ್ಣದ ಆಯ್ಕೆಯಲ್ಲಿ ಕಂಡುಬರಲಿದೆ ಎಂದು ಹೇಳಲಾಗಿದೆ.

ಇನ್ನು ಲಾಂಚ್ ಆಫರ್ ಅನ್ನೂ ಸಹ ನೀಡಲಾಗುತ್ತದೆ ಎಂದು ತಿಳಿದುಬಂದಿದ್ದು, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಗ್ಯಾಲಕ್ಸಿ S24 ಅನ್ನು ಹೆಚ್ಚಿನ ಸ್ಟೋರೇಜ್ ಆಯ್ಕೆಯಲ್ಲಿ ನೀಡುತ್ತದೆ ಎನ್ನಲಾಗಿದೆ. ಅಂದರೆ ಖರೀದಿದಾರರು 128GB ಸ್ಟೋರೇಜ್ ವೇರಿಯಂಟ್ ಆರ್ಡರ್ ಮಾಡಿದರೆ, ಅದೇ ಬೆಲೆಗೆ 256GB ವೇರಿಯಂಟ್ ಅನ್ನು ನೀಡುತ್ತದೆ. ಹಾಗೆಯೇ 256GB ವೇರಿಯಂಟ್ ಫೋನ್ ಆರ್ಡರ್ ಮಾಡಿದ್ರೆ 512GB ಸ್ಟೋರೇಜ್ ಇರುವ ಫೋನ್ ಪಡೆಯಬಹುದಾಗಿದೆ.


Click it and Unblock the Notifications








