ಸ್ಯಾಮ್‌ಸಂಗ್ ನಿಯೋ QLED 4K,8K 2023 ಟಿವಿ ಲಾಂಚ್: ಅಬ್ಬಬ್ಬಾ...ಫೀಚರ್ಸ್‌ಗೆ ಫಿದಾ ಆಗ್ತೀರಾ!
ಸ್ಯಾಮ್‌ಸಂಗ್ ಭಾರತದಲ್ಲಿ 4K ಮತ್ತು 8K ಮಾದರಿಗಳನ್ನು ಒಳಗೊಂಡಂತೆ ನಿಯೋ QLED ಟಿವಿಗಳ 2023 ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ನಿಯೋ QLED TV 2023 ಶ್ರೇಣಿಯನ್ನು ಮೊದಲು CES 2023 ರಲ್ಲಿ ಘೋಷಣೆ ಮಾಡಲಾಗಿತ್ತು. ಈ ಸ್ಮಾರ್ಟ್‌ಟಿವಿಗಳು 50 ಇಂಚುಗಳಿಂದ 98 ಇಂಚಿನವರೆಗಿನ ಗಾತ್ರದಲ್ಲಿ ಕಾಣಿಸಿಕೊಂಡಿವೆ.
ಹೌದು, ಸ್ಯಾಮ್‌ಸಂಗ್ ಇದೀಗ ನಿಯೋ QLED ಟಿವಿ 2023 ಶ್ರೇಣಿಯನ್ನು ಲಾಂಚ್ ಮಾಡಿದ್ದು, ಈ ಟಿವಿಗಳು ಇನ್ಫಿನಿಟಿ ಸ್ಕ್ರೀನ್ ಮತ್ತು ಇನ್ಫಿನಿಟಿ ಒನ್ ವಿನ್ಯಾಸವನ್ನು ಪಡೆದುಕೊಂಡಿವೆ. ಹಾಗೆಯೇ ಎಡ್ಜ್-ಟು-ಎಡ್ಜ್ 8K ವೀಕ್ಷಣೆಯ ಅನುಭವವನ್ನು ಈ ಮೂಲಕ ಪಡೆದುಕೊಳ್ಳಬಹುದು. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ನಿಯೋ QLED ಟಿವಿ 2023 ಶ್ರೇಣಿ ಸ್ಮಾರ್ಟ್‌ಟಿವಿಗಳ ಫೀಚರ್ಸ್: ಈ ಸ್ಮಾರ್ಟ್‌ಟಿವಿಗಳು ವಿವಿಧ ಗಾತ್ರದಲ್ಲಿ ಕಂಡುಬಂದಿದ್ದು, 8K ನಿಯೋ QLED ಟಿವಿಗಳ ಶ್ರೇಣಿಯು ಮಿನಿ-ಎಲ್‌ಇಡಿ ಬ್ಯಾಕ್‌ಲಿಟ್ ಪ್ಯಾನೆಲ್‌ನೊಂದಿಗೆ ಕಂಡುಬಂದಿವೆ. ಜೊತೆಗೆ 4,000 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಹೊಂದಿದ್ದು, ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 14-ಬಿಟ್ ಪ್ರೊಸೆಸಿಂಗ್, 8K AI ಅಪ್‌ಸ್ಕೇಲಿಂಗ್ ಮತ್ತು ಶೇಪ್ ಅಡಾಪ್ಟಿವ್ ಲೈಟ್ ಅಲ್ಗಾರಿದಮ್‌ಗಳನ್ನು ಸಕ್ರಿಯಗೊಳಿಸುತ್ತದೆ.
ಇನ್ನು ಈ ಟಿವಿಗಳು ಸ್ಲಿಮ್ ಫ್ರೇಮ್ ಅನ್ನು ಹೊಂದಿದ್ದು, ಇದರೊಂದಿಗೆ ಲಗತ್ತಿಸಬಹುದಾದ ಒನ್ ಕನೆಕ್ಟ್ ಬಾಕ್ಸ್ ಅನ್ನು ಟಿವಿಯ ಹಿಂಭಾಗದಲ್ಲಿ ಇರಿಸಲು ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಅಚ್ಚುಕಟ್ಟಾದ ಟಿವಿ ವೀಕ್ಷಣೆ ಸಾಧ್ಯವಾಗುತ್ತದೆ. ಜೊತೆಗೆ ಹೆಚ್‌ಡಿಆರ್ ರಿಮಾಸ್ಟರಿಂಗ್ ಫೀಚರ್ಸ್ ಅನ್ನು ಪಡೆದುಕೊಂಡಿದ್ದು. ಎಸ್‌ಡಿಆರ್ ವಿಷಯವನ್ನು ಹೆಚ್‌ಡಿಆರ್ ಆಗಿ ಪರಿವರ್ತಿಸುತ್ತದೆ. ಇದರೊಂದಿಗೆ ಚಿತ್ರದ ಹೊಳಪು, ಬಣ್ಣ ಮತ್ತು ಕ್ರಿಯಾತ್ಮಕ ಶ್ರೇಣಿಯನ್ನು ಈ ತಂತ್ರಜ್ಞಾನ ಸುಧಾರಿಸುತ್ತದೆ.

ನಿಯೋ QLED 8K ಮತ್ತು 4K TV ಶ್ರೇಣಿಯನ್ನು ಪ್ಯಾಂಟೋನ್ ನಿಂದ ಮೌಲ್ಯೀಕರಿಸಲಾಗಿದ್ದು, ಈ ಟಿವಿಗಳು 2,030 ಪ್ಯಾಂಟೋನ್ ಬಣ್ಣಗಳನ್ನು ಮತ್ತು 100 ಕ್ಕೂ ಹೆಚ್ಚು ಛಾಯೆಗಳ ಸ್ಕಿನ್ ಟೋನ್ ಅನ್ನು ನಿಖರವಾಗಿ ಪ್ರತಿನಿಧಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಹಾಗೆಯೇ ಕ್ಯೂ ಸಿಂಫನಿ 3.0 ಅನ್ನು ಒಳಗೊಂಡಿದ್ದು, ಇದು ಟಿವಿ ಮತ್ತು ಸೌಂಡ್‌ಬಾರ್ ಸ್ಪೀಕರ್‌ಗಳನ್ನು ಏಕಕಾಲದಲ್ಲಿ ಒಟ್ಟಿಗೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ನೀವು ಸರೌಂಡ್ ಸೌಂಡ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಪಂಚದ ಮೊದಲ ವಾಯರ್‌ಲೆಸ್ ಡಾಲ್ಬಿ ಅಟ್ಮಾಸ್: ಈ ಸ್ಮಾರ್ಟ್‌ಟಿವಿಗಳು ಪ್ರಪಂಚದ ಮೊದಲ ವಾಯರ್‌ಲೆಸ್ ಡಾಲ್ಬಿ ಅಟ್ಮಾಸ್ ಮತ್ತು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊನೊಂದಿಗೆ ಪ್ಯಾಕ್ ಆಗಿದ್ದು, ಇದು ಟಿವಿಯ ಎಲ್ಲಾ ಕೋನಗಳಿಂದ ಆಕ್ಷನ್-ಟ್ರ್ಯಾಕಿಂಗ್ ಧ್ವನಿಯನ್ನು ಉತ್ಪಾದಿಸುತ್ತದೆ. ಇದಲ್ಲದೆ ಅಡಾಪ್ಟಿವ್ ಸೌಂಡ್ ಪ್ರೊ ನಿಮ್ಮ ಕೋಣೆಯ ಗುಣಲಕ್ಷಣಗಳು ಮತ್ತು ಆಡಿಯೊ ಕಂಟೆಂಟ್ ಅನ್ನು ಪರಿಗಣಿಸಿ ಧ್ವನಿ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
ಇದರೊಂದಿಗೆ ಇನ್‌ಬಿಲ್ಟ್ ಐಒಟಿ ಹಬ್ ಅನ್ನು ಹೊಂದಿದ್ದು, ಕಾಮ್ ಆನ್‌ಬೋರ್ಡಿಂಗ್ ಫೀಚರ್ಸ್ ಪಡೆದುಕೊಂಡಿವೆ. ಈ ಕಾಮ್ ಆನ್‌ಬೋರ್ಡಿಂಗ್ ಫೀಚರ್ಸ್ ಸ್ಯಾಮ್‌ಸಂಗ್ ಮತ್ತು ಥರ್ಡ್-ಪಾರ್ಟಿ ಟೂಲ್ಸ್ ಮತ್ತು IoT ಡಿವೈಸ್‌ಗಳ ಸುಲಭ ಕಂಟ್ರೋಲ್‌ಗಾಗಿ ಮನಬಂದಂತೆ ಸಿಂಕ್ ಮಾಡಲು ಅನುಕೂಲ ಮಾಡಿಕೊಡಲಿದ್ದು, ಈ ಮೂಲಕ ಬಳಕೆದಾರರು ಕೇವಲ ಟಿವಿಯನ್ನು ಟಿವಿಯಾಗಿ ಬಳಕೆ ಮಾಡದೆ ಇತರೆ ವಿಷಯಗಳಿಗೂ ಬಳಕೆ ಮಾಡಿಕೊಳ್ಳಬಹುದಾಗಿದೆ.
ಇಷ್ಟೆಲ್ಲಾ ವಿಶೇಷ ಫೀಚರ್ಸ್‌ನೊಂದಿಗೆ ಈ ಟಿವಿಗಳು ಸ್ಮಾರ್ಟ್ ಹಬ್, ಸ್ಯಾಮ್‌ಸಂಗ್ ಟಿವಿ ಪ್ಲಸ್ ಮತ್ತು ವಾಯ್ಸ್ ಕಮಾಂಡ್ ಬಿಕ್ಸ್‌ಬಿ ಮತ್ತು ಅಲೆಕ್ಸಾ ಸೌಲಭ್ಯವನ್ನು ಹೊಂದಿದ್ದು, ನಾಕ್ಸ್ ವಾಲ್ಟ್ ಹಾರ್ಡ್‌ವೇರ್ ಚಿಪ್ ಸಂಪರ್ಕಿತ ಡಿವೈಸ್‌ಗಳಿಂದ ಎಲ್ಲಾ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಈ ಮೂಲಕ ನಿಮಗೆ ಉತ್ತಮ ಸುರಕ್ಷತೆಯನ್ನು ಸಹ ಈ ಸ್ಮಾರ್ಟ್‌ಟಿವಿಗಳು ಖಾತ್ರಿಗೊಳಿಸುತ್ತವೆ.
ವಿಡಿಯೋ ಕರೆಯಲ್ಲಿಯೂ ಅತ್ಯುತ್ತಮ ಅನುಭವ: ಇನ್ನು ಸ್ಲಿಮ್‌ಫಿಟ್ ಕ್ಯಾಮ್ ಬಳಕೆದಾರರಿಗೆ ತಮ್ಮ ಟಿವಿಯನ್ನು ಗೂಗಲ್ ಮೀಟ್‌ನೊಂದಿಗೆ ವಿಡಿಯೋ ಕರೆ ಸೌಲಭ್ಯವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಮಲ್ಟಿ ವ್ಯೂ ಫೀಚರ್ಸ್‌ನೊಂದಿಗೆ ಬಳಕೆದಾರರು ಏಕಕಾಲದಲ್ಲಿ ನಾಲ್ಕು ವಿಭಿನ್ನ ಮೂಲಗಳಿಂದ ಕಂಟೆಂಟ್ ಅನ್ನು ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ ಮೋಷನ್ ಎಕ್ಸ್‌ಸೆಲೇಟರ್ ಟರ್ಬೊ ಪ್ರೊ ತಂತ್ರಜ್ಞಾನದೊಂದಿಗೆ ಇವು ಕಾಣಿಸಿಕೊಂಡಿವೆ.

ಸ್ಯಾಮ್‌ಸಂಗ್ ನಿಯೋ QLED 8K,4Kಬೆಲೆ ಹಾಗೂ ಲಭ್ಯತೆ: ಈ ಸರಣಿಯಲ್ಲಿ 8K ಮತ್ತು 4K ಮಾದರಿಗಳನ್ನು ಒಳಗೊಂಡಿದ್ದು, ಇದರಲ್ಲಿ 65ಇಂಚುಗಳಿಂದ 98ಇಂಚಿನ ಗಾತ್ರದಲ್ಲಿ ಬರುವ 8Kಮಾಡೆಲ್‌ಗಳ ಬೆಲೆ 3,14,990ರೂ.ಗಳಿಂದ ಆರಂಭ ಆಗುತ್ತದೆ. ಹಾಗೆಯೇ 4K ಮಾದರಿಯಲ್ಲಿ 50ಇಂಚುಗಳಿಂದ 85ಇಂಚುಗಳ ಗಾತ್ರ ಹೊಂದಿರುವ ಟಿವಿಗಳ ಬೆಲೆ 1,41,990 ರೂ.ಗಳಿಂದ ಆರಂಭ ಆಗುತ್ತದೆ. ಈ ಟಿವಿಗಳನ್ನು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್, ರಿಟೇಲರ್ ಸ್ಟೋರ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.
ಮೇ 25, 2023 ರ ಮೊದಲು ಆಯ್ದ ಟಿವಿ ಖರೀದಿದಾರರಿಗೆ 99,990 ರೂ. ಗಳ ಮೌಲ್ಯದ ಉಚಿತ ಸ್ಯಾಮ್‌ಸಂಗ್ ಸೌಂಡ್‌ಬಾರ್ HW-Q990 ಅನ್ನು ನೀಡಲಾಗುತ್ತದೆ. ಹಾಗೆಯೇ ನಿಯೋ QLED 4K ಟಿವಿಗಳನ್ನು ಖರೀದಿಸುವವರು 44,990 ರೂ. ಗಳ ಮೌಲ್ಯದ ಉಚಿತ ಸ್ಯಾಮ್‌ಸಂಗ್ ಸೌಂಡ್‌ಬಾರ್ HW-Q800 ಅನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








