ಶರ್ಟ್ ಕಿಸೆಯಲ್ಲಿಯೇ ಸ್ಯಾಮ್‌ಸಂಗ್ ಫೋನ್ ಸ್ಪೋಟ!..ವಿಡಿಯೋ ನೋಡಿ!!
ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿರುವ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಮತ್ತು ಯೋಟ್ಯೂಬ್‌ನಲ್ಲಿಯೂ ವೈರಲ್ ಆಗಿದೆ.!!
ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿದಂತೆಲ್ಲಾ ಸ್ಮಾರ್ಟ್‌ಫೋನ್ ಸ್ಪೋಟಗೊಳ್ಳುತ್ತಿರುವ ಸುದ್ದಿಯೂ ಹೆಚ್ಚಾಗುತ್ತಿದೆ.!! ಹೌದು, ಗ್ಯಾಲಾಕ್ಸಿ ನೋಟ್ 7 ಫೋನ್ ಸ್ಪೋಟದಿಂದ ಭಾರಿ ಮುಜುಗರಕ್ಕೆ ಒಳಗಾಗಿದ್ದ ಸ್ಯಾಮ್‌ಸಂಗ್ ಕಂಪೆನಿಯ ಮತ್ತೊಂದು ಫೋನ್ ಸ್ಪೋಟವಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.!!
ವ್ಯಕ್ತಿಯೊರ್ವರ ಶರ್ಟ್ ಜೋಬಿನಲ್ಲಿದ್ದ, 2013 ರಲ್ಲಿ ಬಿಡುಗಡೆಯಾದ ಗ್ರಾಂಡ್ ಡ್ಯುಯೋಸ್ ಮಾದರಿಯ ಫೋನ್ ಸ್ಫೋಟಗೊಂಡಿದೆ ಎನ್ನಲಾಗಿದೆ, ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿರುವ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಮತ್ತು ಯೋಟ್ಯೂಬ್‌ನಲ್ಲಿಯೂ ವೈರಲ್ ಆಗಿದೆ.!
!

ಇನ್ನು ಈ ಬಗ್ಗೆ ಸ್ಯಾಮ್‌ಸಂಗ್ ಸ್ಪಷ್ಟನೆ ನೀಡಿದ್ದು, ಸ್ಫೋಟಗೊಂಡ ಫೋನ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.ಬೇರೆ ಕಂಪೆನಿಯ ಬ್ಯಾಟರಿಯನ್ನು ಬಳಕೆ ಮಾಡಿದ್ದರಿಂದ ಈ ಫೋನ್ ಸ್ಫೋಟಗೊಂಡಿದೆ ಎಂದು ತಿಳಿಸಿದೆ. ಮತ್ತು ಕಡಿಮೆ ಬೆಲೆ ಸಿಗುವ ನಕಲಿ ಬಿಡಿಭಾಗಗಳನ್ನು ಬಳಕೆಮಾಡಬೇಡಿ ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಆಪಲ್, ಸ್ಯಾಮ್‌ಸಂಗ್, ಶಿಯೋಮಿ ಹೀಗೆ ಬಹುತೇಕ ಎಲ್ಲಾ ಪ್ರಮುಖ ಕಂಪೆನಿಗಳ ಫೋನ್‌ಗಳು ಸ್ಪೋಟವಾಗುತ್ತಿರುವ ಸುದ್ದಿಗಳು ಹೊರಬರುತ್ತಿದ್ದು, ಸ್ಮಾರ್ಟ್‌ಫೋನ್ ಬಳಕೆಯಲ್ಲಿ ನೀವು ಎಚ್ಚರಿಕೆಯಿಂದ ಇರಬೇಕಾದದ್ದು ಅಗತ್ಯವಾಗಿದೆ.!! ಫೋನ್ ಸ್ಪೋಟಗೊಂಡಿರುವ ವಿಡಿಯೋ ಈ ಕೆಳಗೆ ನೋಡಿ!
ಓದಿರಿ: ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?.ಇಲ್ಲಿ ನೋಡಿ!!


Click it and Unblock the Notifications








