Subscribe to Gizbot

ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?

Written By:

ಕಡಿಮೆ ದರದಲ್ಲಿ ಇಂಟರ್‌ನೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳಿಂದಾಗಿ ದೇಶದಲ್ಲಿ ಆನ್‌ಲೈನ್ ವ್ಯವಹಾರ ಬಹು ವೇಗವಾಗಿ ಬೆಳೆಯುತ್ತಿದೆ.ಇಂದು ಸಣ್ಣ ವ್ಯಾಪಾರಸ್ಥರು ಸಹ ಆನ್‌ಲೈನ್ ಮೂಲಕ ವ್ಯವಹಾರಿಸುವದಕ್ಕೆ ಆರಂಭಿಸುತ್ತಿದ್ದಾರೆ. ಹಾಗಾಗಿ, ಇವರಿಗೆ ಅನುಕೂಲವಾಗುವಂತೆ ಗೂಗಲ್ ಡಿಜಿಟಲ್ ಅನ್‍ಲಾಕ್ಡ್ ಮೂಲಕ ಡಿಜಿಟಲ್ ಕೌಶಲ್ಯ ತರಬೇತಿ ಕಾರ್ಯಕ್ರಮ ನೀಡುತ್ತಿದೆ.!!

ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?

ಹೌದು, ಗೂಗಲ್ ಡಿಜಿಟಲ್ ಅನ್‍ಲಾಕ್ಡ್ ಮೂಲಕ ಯಾರ ಬೇಕಾದರೂ ಅತ್ಯಂತ ಸುಲಭ ಮತ್ತು ಸರಳರೀತಿಯಲ್ಲಿ ಡಿಜಿಟಲ್ ಕೌಶಲ್ಯವನ್ನು ಪಡೆಯಬಹುದಾಗಿದ್ದು, ಅಂತರ್ಜಾಲ ತಾಣ ಆರಂಭಿಸುವುದು ಮತ್ತು ಗ್ರಾಹಕರನ್ನು ಮೊಬೈಲ್ ಸಂಪರ್ಕಿಸುವುದು ಸೇರಿದಂತೆ ಹಲವು ಮಾರ್ಗದರ್ಶನವನ್ನು ಗೂಗಲ್ ಡಿಜಿಟಲ್ ಅನ್‍ಲಾಕ್ಡ್ ಮೂಲಕ ತಿಳಿಸಿಕೊಡಲಾಗುತ್ತಿದೆ.!!

ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?

ಈಗಾಗಲೇ, ಆನ್‌ಲೈನ್‌ನಲ್ಲಿ ಡಿಜಿಟಲ್ ಕೌಶಲ್ಯ ತರಬೇತಿಯ 90 ವಿಡಿಯೊ ಟ್ಯುಟೋರಿಯಲ್‍ಗಳು ಹಾಗೂ ಗೂಗಲ್ ಸಿದ್ಧಪಡಿಸಿರುವ ವಿಶೇಷ ಪಾಠಗಳು ಉಚಿತವಾಗಿ ಲಭ್ಯವಿದ್ದು, ಮುಂದಿನ 3 ವರ್ಷಗಳಲ್ಲಿ ಆಫ್‌ಲೈನ್ ಮೂಲಕವೂ ತರಬೇತಿ ನೀಡಲು ಗೂಗಲ್ ಉದ್ದೇಶಿಸಿದೆ. ದೇಶದ 40 ನಗರಗಳಲ್ಲಿ 5,000 ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಎಫ್‍ಐಸಿಸಿಐ ಸಹಭಾಗಿತ್ವದಲ್ಲಿ ಗೂಗಲ್ ಆಯೋಜಿಸುತ್ತಿದೆ.!!

ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?

ಡಿಜಿಟಲ್ ಮಾರುಕಟ್ಟೆ ಕೌಶಗಳನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಿಕೊಡುವಂತಹ ವಿನೂತನವಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಆಪ್ ಸಹ ಬಿಡುಗಡೆಯಾಗುತ್ತಿದ್ದು, ನೀವು ಸಹ ಡಿಜಿಟಲ್ ಕೌಶಲ್ಯವನ್ನು ಹೊಂದಲು ಬಯಸಿದರೆ https://business.google.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ನಿಮ್ಮದೇ ಡಿಜಿಟಲ್ ವ್ಯವಹಾರ ಪ್ರಾರಂಭಿಸಿ.!!

ಓದಿರಿ: 3G ಮತ್ತು 2G ಗ್ರಾಹಕರಿಗೆ ಇದೀಗ ಹಬ್ಬ!.ಕೂಡಲೇ BSNL ಸಿಮ್ ಖರೀದಿಸಿ!!

English summary
Make your digital analytics data work for you.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot