Home
ಸುದ್ದಿಜಾಲ

Samsung: ಗುಡ್‌ ನ್ಯೂಸ್... ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿವೆ ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್!

ಸ್ಯಾಮ್‌ಸಂಗ್ (Samsung) ತನ್ನದೇ ಆದ ಭಿನ್ನ ಫೀಚರ್ಸ್‌ ಇರುವ ಸಾಕಷ್ಟು ಡಿವೈಸ್‌ಗಳನ್ನು ಜಾಗತಿಕವಾಗಿ ಅನಾವರಣ ಮಾಡಿದೆ, ಮಾಡುತ್ತಿದೆ. ಈ ಕಾರಣಕ್ಕೆ ಟೆಕ್‌ ದೈತ್ಯ ಎನಿಸಿಕೊಂಡಿದ್ದು, ಈ ಬೆಳವಣಿಗೆ ನಡುವೆ ಭಾರತೀಯರೆಲ್ಲರೂ ಸಂತಸಪಡುವ ಸುದ್ದಿಯೊಂದನ್ನು ನೀಡಿದೆ.

ಹೌದು, ಎಲ್ಲಾ ಟೆಕ್‌ ಪ್ರಮುಖರಿಗೆ ಭಾರತ ಇದೀಗ ಉತ್ತಮವಾದ ಸ್ಥಳವಾಗಿ ಮಾರ್ಪಡುತ್ತಿದೆ. ಈ ಕಾರಣಕ್ಕೆ ಇಲ್ಲಿಯೇ ತಮ್ಮ ಡಿವೈಸ್‌ಗಳನ್ನು ತಯಾರು ಮಾಡುವ ಕೆಲಸ ಮಾಡುತ್ತಿವೆ. ಅದರಲ್ಲೂ ಆಪಲ್‌ ಈ ವಿಷಯದಲ್ಲಿ ತುಂಬಾ ಮುಂದಿದೆ. ಈ ಸಂತಸದ ವಿಷಯದ ಜೊತೆಗೆ ಸ್ಯಾಮ್‌ಸಂಗ್‌ ಇನ್ಮುಂದೆ ಭಾರತದಲ್ಲೇ ಲ್ಯಾಪ್‌ಟಾಪ್‌ಗಳನ್ನು ತಯಾರು ಮಾಡಲಿದೆ. ಈ ಮೂಲಕ ಮೇಡ್ ಇನ್‌ ಇಂಡಿಯಾ ಲ್ಯಾಪ್‌ಟಾಪ್‌ಗಳು (Made in India laptop) ಜಾಗತಿಕವಾಗಿ ಸದ್ದು ಮಾಡಲಿವೆ. ಹಾಗಿದ್ರೆ, ಈ ಏನಿದು ಹೊಸ ವಿಷಯ?, ಈ ಸಂಬಂಧ ಸ್ಯಾಮ್‌ಸಂಗ್‌ನ ಅಧಿಕಾರಿಗಳು ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿವೆ ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್!

ಮೇಡ್‌ ಇನ್‌ ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್: ಭಾರತದಲ್ಲಿ ತಯಾರಿಸಿದ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S 24 (Samsung Galaxy S 24) ರವಾನೆಯನ್ನು ಈಗಾಗಲೇ ಆರಂಭ ಮಾಡಿರುವ ಕೊರಿಯಾದ ಎಲೆಕ್ಟ್ರಾನಿಕ್ಸ್ ಮೇಜರ್ ಸ್ಯಾಮ್‌ಸಂಗ್, ಈ ವರ್ಷ ದೇಶದ ನೋಯ್ಡಾ ಕಾರ್ಖಾನೆಯಲ್ಲಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಮುಂದಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಲ್ಯಾಪ್‌ಟಾಪ್ ತಯಾರಿಕೆಯ ಸಂಬಂಧ ಎಲ್ಲಾ ಕೆಲಸಗಳು ಪ್ರಗತಿಯಲ್ಲಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಮತ್ತು ಮೊಬೈಲ್ ಎಕ್ಸ್‌ಪೀರಿಯನ್ಸ್ (MX) ಬಿಸಿನೆಸ್ ಮುಖ್ಯಸ್ಥ ಟಿ ಎಂ ರೋಹ್ ತಿಳಿಸಿದ್ದು, ನಾವು ಈ ವರ್ಷ ನೋಯ್ಡಾ ಕಾರ್ಖಾನೆಯಲ್ಲಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲಿದ್ದೇವೆ. ಈ ಸಂಬಂಧ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದಾರೆ.

ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿವೆ ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್!

ಇನ್ನು ಕಂಪನಿಗೆ ಭಾರತವು ಪ್ರಮುಖ ಉತ್ಪಾದನಾ ನೆಲೆಯಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಿವಿಧ ಹಂತಗಳಲ್ಲಿ ಬೆಂಬಲವನ್ನು ಪಡೆದಿದ್ದು, ಭಾರತದಲ್ಲಿ ಉತ್ಪಾದನೆಯನ್ನು ಬಲಪಡಿಸಲು ಕಂಪನಿಯು ಸರ್ಕಾರದೊಂದಿಗೆ ಸಹಕರಿಸುವುದನ್ನು ಮುಂದುವರಿಸುತ್ತದೆ ಜೊತೆಗೆ ನೋಯ್ಡಾ ಸ್ಯಾಮ್‌ಸಂಗ್‌ಗೆ ಬಹಳ ಮುಖ್ಯವಾದ ಉತ್ಪಾದನಾ ನೆಲೆಯಾಗಿದೆ ಎಂದಿದ್ದಾರೆ.

ಇದು ಸ್ಯಾಮ್‌ಸಂಗ್‌ಗೆ ಎರಡನೇ ಅತಿ ದೊಡ್ಡ ಬೇಸ್ ಆಗಿದ್ದು, ಜಾಗತಿಕ ಬೇಡಿಕೆಗೆ ಅನುಗುಣವಾಗಿ ಅದನ್ನು ಅತ್ಯುತ್ತಮವಾಗಿಸಲು ಸ್ಥಾವರದಲ್ಲಿ ಕೆಲವು ಬದಲಾವಣೆಗಳಿರಬಹುದು ಎಂದು ರೋಹ್ ಹೇಳಿದ್ದು, ನೋಯ್ಡಾ ಸ್ಥಾವರವು ಫೀಚರ್ ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಡಿವೈಸ್‌ಗಳು ಮತ್ತು ಟ್ಯಾಬ್ಲೆಟ್‌ಗಳ ತಯಾರಿಕೆಯೊಂದಿಗೆ ಆರಂಭ ಆಗಿದ್ದು, ಈ ವರ್ಷದಿಂದ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತದೆ ಎಂದು ಸಂತಸ ಹೊರಹಾಕಿದರು.

ಇದೇ ವೇಳೆ ಗ್ಯಾಲಕ್ಸಿ S24 ಫೋನ್‌ನಲ್ಲಿನ ಎಐ ಸರ್ವರ್ ಕೊರತೆಯ ಪ್ರಭಾವದ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಮಾರ್ಟ್‌ಫೋನ್ ಕ್ಲೌಡ್-ಆಧಾರಿತ ಎಐ ಮತ್ತು ಆನ್-ಡಿವೈಸ್ ಎಐ ಎರಡನ್ನೂ ಬೆಂಬಲಿಸುತ್ತದೆ. ಡಿವೈಸ್‌ನಲ್ಲಿ ನೀಡಲಾಗಿರುವ ಕೆಲವು ಕ್ಲೌಡ್-ಆಧಾರಿತ ಎಐ ಸಾಮರ್ಥ್ಯಗಳನ್ನು ಮೊಬೈಲ್ ಪರಿಸರಕ್ಕೆ ಕಸ್ಟಮೈಸ್ ಮಾಡಲಾಗಿದೆ. ಅಂದರೆ ಅವುಗಳನ್ನು ಸರಳಗೊಳಿಸಲಾಗಿದೆ. ಜಗತ್ತಿನಲ್ಲಿ ಎಲ್ಲಿಯಾದರೂ, ನೀವು ಹೆಚ್ಚಿನ ವ್ಯತ್ಯಾಸವಿಲ್ಲದೆ ಕ್ಲೌಡ್-ಆಧಾರಿತ ಎಐ ಸಾಮರ್ಥ್ಯಗಳನ್ನು ಆನಂದಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿವೆ ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್!

ಈ ನಡುವೆ ಇತ್ತೀಚೆಗೆ ತನ್ನ ಪ್ರಮುಖ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಕೃತಕ ಬುದ್ಧಿಮತ್ತೆ ಸಾಮರ್ಥ್ಯದ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ಹಾಗೆಯೇ ಭಾರತದಲ್ಲಿ ಜನವರಿ 18 ರಂದು ಪ್ರೀ-ಬುಕಿಂಗ್ ಆರಂಭ ಆಗಿದ್ದು, ಭಾರತದಲ್ಲಿ 2.5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಅನ್ನು ಆರ್ಡರ್ ಮಾಡಿದ್ದಾರೆ ಅದರಂತೆ ಸ್ಯಾಮ್‌ಸಂಗ್ ಭಾರತದಲ್ಲಿ ತಯಾರಿಸಿದ ಗ್ಯಾಲಕ್ಸಿ S24 ಅನ್ನು ಪ್ರೀ-ಬುಕ್ ಮಾಡಿದ್ದ ಗ್ರಾಹಕರಿಗೆ ರವಾನಿಸುವ ಕೆಲಸ ಆರಂಭ ಮಾಡಿದೆ. ಅಷ್ಟೇ ಅಲ್ಲದೆ ಇತರೆ ದೇಶಗಳಿಗೂ ರಪ್ತು ಮಾಡುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

Best Mobiles in India

English summary
Laptops are the most sought devices today and meanwhile Samsung is gearing up to manufacture Made in India laptops.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+