Home
ಸುದ್ದಿಜಾಲ

Samsung: ವಿಂಟರ್ ಫೆಸ್ಟ್... ಸ್ಯಾಮ್‌ಸಂಗ್‌ S ಸರಣಿ 5G ಫೋನ್‌ಗಳ ಮೇಲೆ 50% ರಿಯಾಯಿತಿ

ಸ್ಯಾಮ್‌ಸಂಗ್‌ (Samsung) ಫೋನ್‌ಗಳಿಗೆ ಭಾರತದಲ್ಲಿ ಬಹಳ ಬೇಡಿಕೆ ಇದೆ. ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ಭದ್ರತಾ ಫೀಚರ್ಸ್‌ಗೆ ಮಾರು ಹೋಗಿರುವ ಗ್ರಾಹಕರು ಹೊಸ ಹೊಸ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್‌ ಅಗುತ್ತಿದ್ದಾರೆ. ಅದರಂತೆ ಈಗ ಎಸ್‌ ಸರಣಿಯ ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ವಿಂಟರ್ ಫೆಸ್ಟ್ ಭಾಗವಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಮತ್ತು S21 FE 5G (Samsung Galaxy S22 5G, S21 FE 5G) ಅನ್ನು 50% ಕ್ಕಿಂತ ಹೆಚ್ಚಿನ ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಆಕರ್ಷಕ ಬ್ಯಾಂಕ್ ರಿಯಾಯಿತಿಗಳನ್ನೂ ಸಹ ಈ ವೇಳೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಸೇಲ್‌ ಅನ್ನು ಎಲ್ಲಿ ಆಯೋಜನೆ ಮಾಡಲಾಗಿದೆ?, ಇವುಗಳ ಆಫರ್ ಬೆಲೆ ಎಷ್ಟು? ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿಂಟರ್ ಫೆಸ್ಟ್... ಸ್ಯಾಮ್‌ಸಂಗ್‌ S ಸರಣಿ 5G ಫೋನ್‌ಗಳ ಮೇಲೆ 50% ರಿಯಾಯಿತಿ

ವಿಂಟರ್ ಫೆಸ್ಟ್ ಸೇಲ್‌: ಫ್ಲಿಪ್‌ಕಾರ್ಟ್‌ನಲ್ಲಿ ವಿಂಟರ್ ಫೆಸ್ಟ್ (Flipkart Winter Fest) ಪ್ರಾರಂಭವಾಗಿದೆ. ಡಿಸೆಂಬರ್ 31 ರವರೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿಯ 5G ಫೋನ್‌ಗಳಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇಯರ್ ಎಂಡ್ ಸೇಲ್ ಮತ್ತು ಸೂಪರ್ ವ್ಯಾಲ್ಯೂ ಡೇಸ್‌ನಲ್ಲಿ ನೀವು ರಿಯಾಯಿತಿಯಲ್ಲಿ ಫೋನ್‌ಗಳನ್ನು ಖರೀದಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಈ ವಿಶೇಷ ಸೇಲ್‌ ಪ್ರಯೋಜನ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ 21FE 5G: 128 GB ಇಂಟರ್‌ ಸ್ಟೋರೇಜ್‌ ಮತ್ತು 8 GB RAM ಹೊಂದಿರುವ ಈ ಫೋನ್ 69,999 ರೂ. ಗಳ ರಿಯಾಯಿತಿ ಪಡೆದು 32,999 ಗಳ ಬೆಲೆಗೆ ಕಾಣಿಸಿಕೊಂಡಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ವ್ಯವಹಾರದಲ್ಲಿ 10% ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದ್ದು, ವಿನಿಮಯ ಕೊಡುಗೆಯೊಂದಿಗೆ, ನೀವು ಈ ಫೋನ್ ಅನ್ನು 25,350 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ವಿಂಟರ್ ಫೆಸ್ಟ್... ಸ್ಯಾಮ್‌ಸಂಗ್‌ S ಸರಣಿ 5G ಫೋನ್‌ಗಳ ಮೇಲೆ 50% ರಿಯಾಯಿತಿ

ಇನ್ನು ಈ ವಿಶೇಷ ಫೋನ್ 6.4 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್ಪ್ಲೇಯನ್ನು ಹೊಂದಿದ್ದು, ಎರಡು 12 ಮೆಗಾಪಿಕ್ಸೆಲ್ ಮತ್ತು ಒಂದು 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಇದಕ್ಕಾಗಿ OIS, ಅಥವಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್‌ ನೀಡಲಾಗಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ಬಲ ಪಡೆದಿದ್ದು, 4500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S225G: ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 56% ರಿಯಾಯಿತಿ ಪಡೆದಿದೆ. ಅಂದರೆ 85,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 36,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 8 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಬ್ಯಾಂಕ್ ಕೊಡುಗೆಯಲ್ಲಿ ನಿಮಗೆ 10% ಹೆಚ್ಚುವರಿ ರಿಯಾಯಿತಿ ಸಹ ಸಿಗಲಿದೆ. ಇದರೊಂದಿಗೆ ವಿನಿಮಯ ಆಫರ್ ಮೂಲಕ 25,550 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ವಿಂಟರ್ ಫೆಸ್ಟ್... ಸ್ಯಾಮ್‌ಸಂಗ್‌ S ಸರಣಿ 5G ಫೋನ್‌ಗಳ ಮೇಲೆ 50% ರಿಯಾಯಿತಿ

ಈ ಸ್ಮಾರ್ಟ್‌ಫೋನ್‌ನ ಕೆಲವು ಮಾದರಿಗಳಲ್ಲಿ ನೀವು 3,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಫೋನ್‌ 6.1 ಇಂಚಿನ ಪುಲ್‌ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದರ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 3700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 8 ಜನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Samsung smartphones get best discount in Flipkart and Samsung Galaxy S22 5G and S21 FE 5G are available at over 50% off as part of Winter Fest in flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+