Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಲ್ಲಿ ಇನ್ಮುಂದೆ ಗೂಗಲ್‌ನ ಈ ವಿಶೇಷ ಫೀಚರ್ಸ್ ಲಭ್ಯ ಇಲ್ಲ!

ಸ್ಯಾಮ್‌ಸಂಗ್ (Samsung) ತನ್ನದೇ ಆದ ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಗಮನ ಸೆಳೆಯುತ್ತದೆ. ಈ ಡಿವೈಸ್‌ಗಳು ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿದ್ದು, ಈ ನಡುವೆ ಸ್ಯಾಮ್‌ಸಂಗ್‌ ಹೊಸ ನಿರ್ಧಾರವನ್ನು ಪ್ರಕಟಿಸಿದೆ.

ಹೌದು, ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಟಿವಿಗಳ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರ ಪ್ರಕಟಿಸಿದ್ದು, ಸ್ಮಾರ್ಟ್‌ಟಿವಿ ಬಳಕೆದಾರರು ಅರೆ ಕ್ಷಣ ಶಾಕ್‌ ಆಗುವಂತೆ ಆಗಿದೆ. ಆದರೆ ಇದೇ ಮತ್ತೊಂದು ವಿಚಾರವನ್ನೂ ಸಹ ಹೇಳಿದೆ ಹಾಗಿದ್ರೆ, ಸ್ಯಾಮ್‌ಸಂಗ್‌ ಯಾಕೆ ಈ ನಿರ್ಧಾರ ಮಾಡಿದೆ?, ಸ್ಮಾರ್ಟ್‌ಟಿವಿಗಳಲ್ಲಿ ಇನ್ಮುಂದೆ ಈಗ ಇರುವ ಫೀಚರ್ಸ್‌ ಬದಲಿಗೆ ಮತ್ಯಾವ ಫೀಚರ್ಸ್ ಲಭ್ಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌  ಟಿವಿಗಳಲ್ಲಿ ಇನ್ಮುಂದೆ ಗೂಗಲ್‌ನ ಈ ವಿಶೇಷ ಫೀಚರ್ಸ್ ಲಭ್ಯ ಇಲ್ಲ!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ: ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಟಿವಿಗಳಿಂದ (Samsung Smart TV) ಗೂಗಲ್ ಅಸಿಸ್ಟೆಂಟ್ ಫೀಚರ್ಸ್‌ (Google Assistant Features) ಅನ್ನು ಹೊರಹಾಕುತ್ತಿದೆ. ಇದರೊಂದಿಗೆ ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸಲು ಬಳಕೆದಾರರನ್ನು ಪ್ರೇರೇಪಿಸುತ್ತಿದೆ. ಅಂದರೆ, ಸ್ಯಾಮ್‌ಸಂಗ್‌ ಇನ್ಮುಂದೆ ಬಿಕ್ಸ್ಬಿ ಮತ್ತು ಅಮೆಜಾನ್‌ ಅಲೆಕ್ಸಾ ಜೊತೆಗೆ ಡೀಫಾಲ್ಟ್ ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ನೀಡಲಿದೆ ಎಂದು ತಿಳಿದುಬಂದಿದೆ.

ಈವರೆಗೂ ಸಹ ಗೂಗಲ್‌ ಅಸಸಿಸ್ಟೆಂಟ್‌ ಬಳಕೆದಾರರ ಗೂಗಲ್‌ ಖಾತೆಗೆ ಲಿಂಕ್ ಮಾಡುವುದು, ಸೇವೆಗಳನ್ನು ಪ್ರವೇಶಿಸುವುದು, ನೈಜ-ಸಮಯದ ಡೇಟಾ, ಉತ್ತರಗಳು ಮತ್ತು ಧ್ವನಿ ಆಜ್ಞೆಗಳೊಂದಿಗೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡುವ ಪ್ರಯೋಜನಗಳನ್ನು ನೀಡುತ್ತಿತ್ತು. ಆದರೆ, ಇನ್ಮುಂದೆ ಟಿವಿ ಮೂಲ ಮಾಡಲಾಗುತ್ತಿದ್ದ ಈ ಎಲ್ಲಾ ಕಾರ್ಯಕ್ಕೆ ಬ್ರೇಕ್‌ ಹಾಕುವಂತೆ ಆಗಿದೆ.

ಸ್ಯಾಮ್‌ಸಂಗ್‌  ಟಿವಿಗಳಲ್ಲಿ ಇನ್ಮುಂದೆ ಗೂಗಲ್‌ನ ಈ ವಿಶೇಷ ಫೀಚರ್ಸ್ ಲಭ್ಯ ಇಲ್ಲ!

ಗೂಗಲ್ ಅಸಿಸ್ಟೆಂಟ್ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿರುವ ಫೀಚರ್ಸ್‌ ಆಗಿದೆ. ವಿಶೇಷವಾಗಿ ಇದು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತದೆ. ಆದಾಗ್ಯೂ, ಗೂಗಲ್‌ ನ ಇತ್ತೀಚಿನ ನೀತಿ ಬದಲಾವಣೆಯಿಂದಾಗಿ, ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಟಿವಿಗಳಲ್ಲಿ ಮಾರ್ಚ್ 1, 2024 ರಿಂದ ಗೂಗಲ್‌ ಅಸಿಸ್ಟೆಂಟ್‌ ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಘೋಷಣೆ ಮಾಡಿದೆ.

ಯಾವೆಲ್ಲಾ ಸ್ಮಾರ್ಟ್‌ಟಿವಿಗಳಲ್ಲಿ ಈ ಫೀಚರ್ಸ್‌ ಲಭ್ಯ ಇರುವುದಿಲ್ಲ: ಎಲ್ಲಾ 2022 ಸ್ಮಾರ್ಟ್ ಟಿವಿ ಮಾಡೆಲ್‌ಗಳು, ಎಲ್ಲಾ 2021 ಸ್ಮಾರ್ಟ್ ಟಿವಿ ಮಾಡೆಲ್‌ಗಳು, 2020 8K ಮತ್ತು 4K QLED ಟಿವಿಗಳು, 2020 ಕ್ರಿಸ್ಟಲ್ UHD ಟಿವಿಗಳು ಮತ್ತು 2020 ಲೈಫ್‌ಸ್ಟೈಲ್ ಟಿವಿಗಳಾದ ಫ್ರೇಮ್, ಸೆರಿಫ್, ಟೆರೇಸ್ ಸೇರಿದಂತೆ ಇತರೆ ಸ್ಮಾರ್ಟ್‌ಟಿವಿಗಳಲ್ಲಿ ಈ ವಿಶೇಷ ಫೀಚರ್ಸ್‌ ಲಭ್ಯ ಇರುವುದಿಲ್ಲ.

ಗೂಗಲ್ ಅಸಿಸ್ಟೆಂಟ್ ಬದಲಾಗಿ ಇನ್ಮುಂದೆ ಇದೇ ರೀತಿಯ ಸೇವೆ ಪಡೆಯಲು ಹೊಸ ಫೀಚರ್ಸ್‌ ಬಳಕೆ ಮಾಡಲು ಬಳಕೆದಾರರನ್ನು ಪ್ರೇರೇಪಿಸಲಾಗಿದೆ. ಅದಾಗ್ಯೂ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಸ್ಯಾಮ್‌ಸಂಗ್ ಟಿವಿಗಳು ಕಂಪನಿಯ ಸ್ವಂತ ಫೀಚರ್ಸ್‌ ಸೇರಿದಂತೆ ಬಹು ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲ ಆಯ್ಕೆಗಳನ್ನು ಹೊಂದಿದೆ. ಈ ಕಾರಣಕ್ಕೆ ಗೂಗಲ್ ಅಲ್ಲದೆ ಇದೇ ತರಹದ ಸೇವೆಗಳನ್ನು ಬೇರೆ ರೀತಿಯಲ್ಲಿ ಪಡೆಯಬಹುದಾಗಿದೆ. ಅದರಲ್ಲಿ ಪ್ರಮುಖವಾಗಿರುವುದು ಬಿಕ್ಸ್ಬಿ ಮತ್ತು ಅಮೆಜಾನ್ ಅಲೆಕ್ಸಾ.

ಸ್ಯಾಮ್‌ಸಂಗ್‌  ಟಿವಿಗಳಲ್ಲಿ ಇನ್ಮುಂದೆ ಗೂಗಲ್‌ನ ಈ ವಿಶೇಷ ಫೀಚರ್ಸ್ ಲಭ್ಯ ಇಲ್ಲ!

ಇನ್ನು ಬಳಕೆದಾರರು ಗೂಗಲ್‌ ಅಸಿಸ್ಟೆಂಟ್‌ ಬಳಸುವುದನ್ನು ಮುಂದುವರಿಸಲು ಬಯಸಿದರೆ, ಗೂಗಲ್‌ಟಿವಿಯೊಂದಿಗೆ ಕ್ರೋಮಾಕಾಸ್ಟ್‌ ಅನ್ನು ಖರೀದಿಸಬಹುದು ಅಥವಾ ಎಲ್‌ಜಿ, ಟಿಸಿಎಲ್‌, ಸೋನಿ ವಿಜಿಯೋ ಅಥವಾ ಹೈಸೆನ್ಸ್ ನಂತಹ ಇತರ ಬ್ರ್ಯಾಂಡ್‌ಗಳ ಸ್ಮಾರ್ಟ್‌ಟಿವಿಗಳನ್ನು ಪರಿಗಣಿಸಬಹುದು. ಇನ್ನು ನೀವು ಹಳೆಯ ಸ್ಯಾಮ್‌ಸಂಗ್‌ ಟಿವಿ ಹೊಂದಿದ್ದರೆ (2020 ಕ್ಕಿಂತ ಮೊದಲು), ನೀವು ಅದನ್ನು ಗೂಗಲ್‌ ಅಸಿಸ್ಟೆಂಟ್ ಇಲ್ಲದೆ ಎಂದಿನಂತೆ ಬಳಕೆ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಟಿವಿಯಲ್ಲಿ ಅಲೆಕ್ಸಾವನ್ನು ಬಳಕೆ ಮಾಡಲು ಹೀಗೆ ಮಾಡಿ: ನಿಮ್ಮ ಸ್ಮಾರ್ಟ್‌ಟಿವಿಯನ್ನು ಮೊದಲು ಅಲೆಕ್ಸಾ ಆಪ್‌ ಅನ್ನು ಓಪನ್‌ ಮಾಡಿ. ನಂತರ ಕ್ಯೂಆರ್‌ ಕೋಡ್ ಅನ್ನು ಬಳಸಿಕೊಂಡು ಸಂಪರ್ಕಿತ ಫೋನ್‌ನಲ್ಲಿ ನಿಮ್ಮ ಅಮೆಜಾನ್‌ ಖಾತೆಗೆ ಸೈನ್ ಇನ್ ಮಾಡಿ ಅಥವಾ ಅಮೆಜಾನ್‌ ಸೈನ್-ಇನ್ ಪುಟಕ್ಕೆ ಹೋಗಿ ಮತ್ತು ನಿಮ್ಮ ಟಿವಿಯಲ್ಲಿ ದೃಢೀಕರಣ ಕೋಡ್ ಅನ್ನು ನಮೂದಿಸಿ.

Best Mobiles in India

English summary
Samsung is removing Google Assistant features from its smart TVs.. It also prompts users to explore alternative options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+