ಬಾಗಲಕೋಟೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸ್ಪೋಟ!!..ಏನಿದು ಸ್ಯಾಮ್‌ಸಂಗ್ ಕಥೆ?

Written By:

ಸ್ಯಾಮ್‌ಸಂಗ್ 7 ಸ್ಮಾರ್ಟ್‌ಫೋನ್ ಸ್ಪೋಟಗೊಂಡು ಎಲ್ಲಡೆಯೂ ಆತಂಕ ಸೃಷ್ಟಿಯಾಗಿದ್ದು, ಎಲ್ಲರಿಗೂ ಗೊತ್ತು. ಆದರೆ, ಇದೀಗ ಗ್ಯಾಲಾಕ್ಸಿ 4 ಸ್ಮಾರ್ಟ್‌ಫೋನ್ ಸ್ಪೋಟಗೊಂಡು ಯುವಕನೋರ್ವನು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.!!

ಹೌದು, ಸಿದ್ದಪ್ಪ ಅನಗವಾಡಿ (24) ಎಂಬಾತ ಗಾಯಾಗೊಂಡಿರುವವರು. ಫುಲ್ ಚಾರ್ಜ್‌ ಮಾಡಿದ್ದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 4 ಸ್ಮಾರ್ಟ್‌ಫೋನ್ ಅನ್ನು ಸಿದ್ದಪ್ಪ ಅನಗವಾಡಿ ಜೀನ್ಸ್ ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದ ಸಮಯದಲ್ಲಿ ಸ್ಮಾರ್ಟ್‌ಫೋನ್ ಸ್ಫೋಟವಾಗಿದೆ ಎಂದು ವರದಿಯಾಗಿದೆ!!

ಬಾಗಲಕೋಟೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸ್ಪೋಟ!!.ಏನಿದು ಸ್ಯಾಮ್‌ಸಂಗ್ ಕಥೆ?

ಫ್ಲಿಪ್‌ಕಾರ್ಟ್‌ನಿಂದ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"! ಏನಿದು ಬಿಗ್ ಆಫರ್‌ ಗೊತ್ತಾ?

ಗಾಯಾಳು ಸಿದ್ದಪ್ಪ ಅನಗವಾಡಿಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಪೊಟದಿಂದ ಅವರ ತೊಡೆಭಾಗದಲ್ಲಿ ಹೆಚ್ಚು ಗಾಯವಾಗಿದೆ ಎಂದು ಹೇಳಲಾಗಿದೆ. ಸಿದ್ದಪ್ಪ ಅನಗವಾಡಿ ಎರಡು ವಷ೯ಗಳ ಹಿಂದೆ ಸ್ಯಾಮಸಂಗ್‌ ಗ್ಯಾಲಾಕ್ಸಿ 4 ಸ್ಮಾರ್ಟ್‌ಫೋನ್ ಖರೀದಿಸಿದ್ದರು ಎನ್ನಲಾಗಿದೆ.

ಬಾಗಲಕೋಟೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸ್ಪೋಟ!!.ಏನಿದು ಸ್ಯಾಮ್‌ಸಂಗ್ ಕಥೆ?

ಇನ್ನು ಇತ್ತೀಚಿಗಷ್ಟೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 7 ಸ್ಮಾರ್ಟ್‌ಫೋನ್ ಎಲ್ಲೆಡೆಯೂ ಸ್ಪೋಟಗೊಂಡಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿದ್ದು, ಇದೀಗ ಸ್ಯಾಮ್‌ಸಂಗ್‌ನ ಮತ್ತೊಂದು ಸ್ಮಾರ್ಟ್‌ಫೋನ್ ಸ್ಪೋಟಗೊಂಡು ಎಲ್ಲರಲ್ಲಿಯೂ ಭಯದ ಭೀತಿ ಮೂಡಿದೆ.

English summary
samsung smartphone blasts and a person injured in bagalkot. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot