Home
ಸುದ್ದಿಜಾಲ

ಸ್ಯಾಮ್‌ಸಂಗ್‌ T7 ಶೀಲ್ಡ್ SSD ವಿಮರ್ಶೆ: ಅಧಿಕ ಸ್ಟೋರೇಜ್‌, ಗಟ್ಟಿಮುಟ್ಟಾದ ರಚನೆ!

ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸಯ ಎನಿಸಿಕೊಂಡಿದೆ. ಹಾಗೆಯೇ ಕೆಲವು ಉಪಯುಕ್ತ ಆಕ್ಸಸರಿಸ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಸ್ಯಾಮ್‌ಸಂಗ್ T7 ಶೀಲ್ಡ್‌ ಪೋರ್ಟಬಲ್‌ (4TB) SSD ಹಾರ್ಡ್‌ಡಿಸ್ಕ್‌ ಡಿವೈಸ್‌ ಜಬರ್ದಸ್ತ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಗಮನ ಸೆಳೆದಿದೆ.

ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಹಾರ್ಡ್‌ಡಿಸ್ಕ್‌ ಡಿವೈಸ್‌ ಈ ಹಿಂದಿನ 1TB ಮತ್ತು 2TB ಡಿವೈಸ್‌ಗಿಂತ ಸ್ಟೋರೇಜ್‌ನಲ್ಲಿ ಹೆಚ್ಚಳ ಕಂಡಿದೆ. ಅತ್ಯುತ್ತಮ ಬ್ರ್ಯಾಂಡ್‌ ಜೊತೆಗೆ ಅಧಿಕ ಸ್ಟೋರೇಜ್‌ ಬಯಸುವ ಗ್ರಾಹಕರಿಗೆ ಇದು ಪ್ರಮುಖ ಆಕರ್ಷಣೆಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಕಾರ್ಯವೈಖರಿ ಹೇಗಿದೆ? ಇದರ ಫೀಚರ್ಸ್‌ ಏನು? ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ T7 ಶೀಲ್ಡ್ SSD ವಿಮರ್ಶೆ: ಅಧಿಕ ಸ್ಟೋರೇಜ್‌, ಗಟ್ಟಿಮುಟ್ಟಾದ ರಚನೆ!

ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ರಚನೆ ಹಾಗೂ ವಿನ್ಯಾಸ: ಈ ಡಿವೈಸ್‌ ತುಂಬಾ ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಕೇವಲ 98 ಗ್ರಾಂ ತೂಕವಿದೆ. ಹಾಗೆಯೇ ಇದು ಪ್ಲೇಯಿಂಗ್ ಕಾರ್ಡ್‌ನ ಗಾತ್ರದಲ್ಲಿದೆ. ಇದು ಸ್ಟೇಟಸ್ LED ಜೊತೆಗೆ ಒಂದು ತುದಿಯಲ್ಲಿ USB-C 3.2 (Gen 2) ಪೋರ್ಟ್ ಅನ್ನು ಸಹ ಹೊಂದಿದೆ. ಇದು ಶಾಶ್ವತ ರಬ್ಬರೀಕೃತ ಶೆಲ್‌ನಿಂದ ಕವರ್‌ ಆಗಿದೆ. ಇದು ಕೆಳಗೆ ಬೀಳುವುದೂ ಮತ್ತು ಇತರ ಆಘಾತಗಳಿಂದ ಸುರಕ್ಷತೆ ನೀಡುತ್ತದೆ.

ಹಾಗೆಯೇ ಸ್ಯಾಮ್‌ಸಂಗ್‌ನ T7 ಶೀಲ್ಡ್ 4TB ಪೋರ್ಟಬಲ್ SSD ಡಿವೈಸ್‌ ಉತ್ತಮ ಹಿಡಿತ ಪಡೆದಿದ್ದು, ಕೈಯಿಂದ ಜಾರುವ ಸಾಧ್ಯತೆ ತೀರಾ ಕಡಿಮೆ. ಒಟ್ಟಾರೆಯಾಗಿ ಸ್ಯಾಮ್‌ಸಂಗ್‌ T7 ಶೀಲ್ಡ್‌ನ ರಬ್ಬರೀಕೃತ ಶೆಲ್ ನಿಮ್ಮ ಡೇಟಾವನ್ನು ಕಠಿಣ ಪರಿಸ್ಥಿತಿಗಳಲ್ಲಿಯೂ ಸುರಕ್ಷಿತವಾಗಿಡಲು ಹೆಚ್ಚುವರಿ ಡ್ರಾಪ್ ಮತ್ತು ಆಘಾತ ರಕ್ಷಣೆಯನ್ನು ಸೇರಿಸುತ್ತದೆ.

ಸ್ಯಾಮ್‌ಸಂಗ್‌ T7 ಶೀಲ್ಡ್ SSD ವಿಮರ್ಶೆ: ಅಧಿಕ ಸ್ಟೋರೇಜ್‌, ಗಟ್ಟಿಮುಟ್ಟಾದ ರಚನೆ!

ಇತರೆ ಫೀಚರ್ಸ್‌ ಏನು: ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಡಿವೈಸ್‌ 3 ಮೀಟರ್ ಡ್ರಾಪ್ ರೆಸಿಸ್ಟೆನ್ಸ್‌ನೊಂದಿಗೆ ಸೌಲಭ್ಯ ಪಡೆದಿದೆ. ಅಲ್ಲದೇ ಇದು IP65 ರೇಟೆಡ್ ನೀರು ಮತ್ತು ಧೂಳಿನ ಪ್ರತಿರೋಧವನ್ನು ಸೌಲಭ್ಯ ಸಹ ಪಡೆದಿದೆ. ಹೀಗಾಗಿ ಈಜುವಾಗ ಈ ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಈ ಸಾಧನ ಸುರಕ್ಷಿತವಲ್ಲ. ಆದರೆ ಮಳೆಗಾಲದಲ್ಲಿ ಈ ಡಿವೈಸ್‌ ಅನ್ನು ಹೊರಗೆ ತೆಗೆದುಕೊಂಡು ಹೋಗಬಹುದು. ಒಟ್ಟಾರೆಯಾಗಿ, ಅದರ ಡ್ರಾಪ್ ರೆಸಿಸ್ಟೆನ್ಸ್ ಮತ್ತು ವಾಟರ್ ರೆಸಿಸ್ಟೆನ್ಸ್ ಟ್ರಿಪ್ ಸಮಯದಲ್ಲಿ ಖಂಡಿತವಾಗಿ ಸೂಕ್ತವಾಗಿ ಬರುತ್ತದೆ.

ಡಿವೈಸ್‌ ಕಾರ್ಯವೈಖರಿ: ಈ ಡಿವೈಸ್ ಪಾಸ್‌ವರ್ಡ್ ರಕ್ಷಣೆಯೊಂದಿಗೆ 256-ಬಿಟ್ AES ಗೂಢಲಿಪೀಕರಣವನ್ನು ಹೊಂದಿದೆ. ಈ ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಅಂತರ್ನಿರ್ಮಿತ ಸಾಫ್ಟ್‌ವೇರ್ ಅನ್ನು ಮೊದಲ ಬಾರಿಗೆ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿದಾಗ ಆಟೋಮ್ಯಾಟಿಕ್‌ ಆಗಿ ಕಾರ್ಯನಿರ್ವಹಿಸುತ್ತದೆ. ಆ ಸಮಯದಲ್ಲಿ ಪಾಸ್‌ವರ್ಡ್ ಸೆಟ್‌ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯು ಐಚ್ಛಿಕ ಆಗಿದೆ. ಆದರೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಉತ್ತಮ ಆಯ್ಕೆ.

ಸ್ಯಾಮ್‌ಸಂಗ್‌ T7 ಶೀಲ್ಡ್ SSD ವಿಮರ್ಶೆ: ಅಧಿಕ ಸ್ಟೋರೇಜ್‌, ಗಟ್ಟಿಮುಟ್ಟಾದ ರಚನೆ!

ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಶೀಲ್ಡ್‌ನಲ್ಲಿರುವ 10Gbps USB-C 3.2 (Gen 2) ಪೋರ್ಟ್ ಇತರ ಸ್ಯಾಮ್‌ಸಂಗ್ ಡ್ರೈವ್‌ಗಳಂತೆಯೇ ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಂದರೆ ಇದು ಓದುವ ಬದಿಯಲ್ಲಿ 1,050MB/s ವೇಗದಲ್ಲಿ ಮತ್ತು ಬರೆಯುವ ಭಾಗದಲ್ಲಿ 1,000MB/s ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಸಣ್ಣ ಫೈಲ್‌ಗಳು ಅಥವಾ ದೊಡ್ಡ ಫೈಲ್‌ಗಳು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ.

ಬೆಲೆ ಮತ್ತು ಲಭ್ಯತೆ : ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ T7 ಶೀಲ್ಡ್‌ 4TB ಪೋರ್ಟಬಲ್‌ SSD ಡಿವೈಸ್‌ ಬೆಲೆಯು 35,000ರೂ. ಆಗಿದೆ. ಹಾಗೆಯೇ ಈ ಡಿವೈಸ್‌ 1TB ಮತ್ತು 2TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯ ಇದೆ. ಇನ್ನು ಈ ಡಿವೈಸ್‌ ಅನ್ನು ಸ್ಯಾಮ್‌ಸಂಗ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮತ್ತು ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್‌ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Samsung T7 Shield 4TB SSD Review: More Storage capacity with Rugged design look; More details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+