Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಮುಂಬರುವ ಫೋಲ್ಡಬಲ್ ಫೋನ್‌ ನೀವು ಊಹಿಸಲಾಗದ ಅಗ್ಗದ ಬೆಲೆಗೆ?

ಸ್ಮಾರ್ಟ್‌ಫೋನ್‌ (Smartphone) ತಯಾರಿಕಾ ಸಂಸ್ಥೆಗಳಲ್ಲಿ ಉತ್ತಮ ಸ್ಥಾನದಲ್ಲಿರುವ ಸ್ಯಾಮ್‌ಸಂಗ್‌ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಯೋಜಿಸುತ್ತಿದೆ. ಈಗಾಗಲೇ ಭಿನ್ನ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳಿಗೆ ಅಡಿಪಾಯ ಹಾಕಿರುವ ಕೀರ್ತಿ ಈ ಸಂಸ್ಥೆಗೆ ಸಿಕ್ಕಿದ್ದು, ಈ ನಡುವೆ ಅಗ್ಗದ ಬೆಲೆಯಲ್ಲಿ... ಅಲ್ಲ ಅಲ್ಲ ನಾವು ನೀವು ಯೋಚನೆ ಮಾಡಿರುವುದಕ್ಕಿಂತ ಇನ್ನೂ ಅಗ್ಗದ ಬೆಲೆಯಲ್ಲಿ ಈ ಫೋನ್‌ಗಳನ್ನು ಲಾಂಚ್‌ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಹೌದು, ಸಾಮಾನ್ಯವಾಗಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು (Foldable smartphones) ಇಂದು ಮಾರುಕಟ್ಟೆಯಲ್ಲಿ ಆಳುತ್ತಿವೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಈ ಫೋನ್‌ಗಳು ವಿಶೇಷ ಬೇಡಿಕೆ ಪಡೆದಿವೆ. ಈ ನಡುವೆ ಇತರೆ ಸ್ಮಾರ್ಟ್‌ಫೋನ್‌ ಕಂಪೆನಿಗಳು ತೀವ್ರ ಪೈಪೋಟಿಯಲ್ಲಿ ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಫೋಲ್ಡಬಲ್‌ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಆದರೆ, ಇನ್ಮುಂದೆ ಸ್ಯಾಮ್‌ಸಂಗ್‌ (Samsung) ಈ ಎಲ್ಲಾ ಕಂಪೆನಿಗಳನ್ನು ಈ ಒಂದು ಪ್ಲ್ಯಾನ್‌ನಿಂದಲೇ ಹಿಂದಿಕ್ಕಲಿದೆ. ಹಾಗಿದ್ರೆ ಭಾರೀ ಅಗ್ಗದ ಬೆಲೆಗೆ ಲಭ್ಯ ಇರುವ ಫೋಲ್ಡಬಲ್‌ ಫೋನ್‌ ಯಾವುದು?, ಯಾವ ಉದ್ದೇಶಕ್ಕೆ ಸ್ಯಾಮ್‌ಸಂಗ್‌ ಈ ನಿರ್ಧಾರ ಮಾಡುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಮುಂಬರುವ ಫೋಲ್ಡಬಲ್ ಫೋನ್‌ ನೀವು ಊಹಿಸಲಾಗದ ಅಗ್ಗದ ಬೆಲೆಗೆ?

ಅಗ್ಗದ ಬೆಲೆಯ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌: ಸ್ಯಾಮ್‌ಸಂಗ್‌ ಫೋಲ್ಡಬಲ್ ಲೈನ್‌ಅಪ್ (Samsung's foldable lineup) ವಿಭಾಗದಲ್ಲಿ ಈ ವರ್ಷ ಗ್ಯಾಲಕ್ಸಿ Z ಫೋಲ್ಡ್‌ 6 ಮತ್ತು ಫ್ಲಿಪ್‌ 6 ಅನ್ನು (Galaxy Z Fold 6 and Flip 6) ಈ ವರ್ಷದ ಜುಲೈನಲ್ಲಿ ಲಾಂಚ್‌ ಮಾಡಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ನಡುವೆ ಸ್ಯಾಮ್‌ಸಂಗ್ ತನ್ನ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ ಸೇಲ್‌ ಅನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಫೋಲ್ಡ್ 6 ನ ಅಗ್ಗದ ವೇರಿಯಂಟ್‌ ಅನ್ನೂ ಸಹ ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ.

ಸಿಸಾ ಜರ್ನಲ್‌ ಈ ಸಂಬಂಧ ವರದಿ ಮಾಡಿದ್ದು, ವರದಿ ಪ್ರಕಾರ ಸ್ಯಾಮ್‌ಸಂಗ್‌ನ ಪ್ರವೇಶ ಮಟ್ಟದ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಫ್ಲ್ಯಾಗ್‌ಶಿಪ್ ಮಾಡೆಲ್‌ಗೆ ಹೋಲಿಸಿದರೆ ಬಜೆಟ್‌ ಬೆಲೆಗೆ ಅಗತ್ಯ ಇರುವ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎಂದು ಉಲ್ಲೇಖಿಸಿದೆ. ಇದರಿಂದಾಗಿಯೇ ಸ್ಯಾಮ್‌ಸಂಗ್‌ಗೆ ಫೋಲ್ಡಬಲ್ ಫೋನ್‌ ಬೆಲೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಮ್‌ಸಂಗ್‌ನ ಮುಂಬರುವ ಫೋಲ್ಡಬಲ್ ಫೋನ್‌ ನೀವು ಊಹಿಸಲಾಗದ ಅಗ್ಗದ ಬೆಲೆಗೆ?

ಅದರಂತೆ ಕೆಲವು ವರದಿಗಳ ಪ್ರಕಾರ ಈ ಫೋನ್‌ 66,351 ರೂ.ಗಳ ಬೆಲೆ ಹೊಂದಿರಬಹುದು ಎನ್ನಲಾಗಿದೆ. ಈ ಬೆಲೆ ನೋಡಿ ಇದೇನು ಅಗ್ಗದಲ್ಲಿ ಅಗ್ಗವೇ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ, ಗ್ಯಾಲಕ್ಸಿ Z ಫೋಲ್ಡ್‌ 5 (Galaxy Z Fold 5) ಬೆಲೆ 1,49,282 ರೂ.ಗಳು ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಈ ಬೆಲೆ ಹೋಲಿಕೆ ಮಾಡಿದ್ರೆ ಹಾಗೂ ಇತರೆ ಫೋಲ್ಡಬಲ್‌ ಫೋನ್‌ಗಳನ್ನು ಗಮನಿಸಿದ್ರೆ ಇದು ಖಂಡಿತಾ ಅಗ್ಗದ ಬೆಲೆಯಾಗಲಿದೆ. ಆದರೆ ಇದೇ ಅಂತಿಮವಲ್ಲ.

ಇನ್ನು ಮುಂಬರುವ ಅಗ್ಗದ ಫೋನ್‌ ಸ್ಯಾಮ್‌ಸಂಗ್‌ನ ಪ್ರಮುಖ ಫೋಲ್ಡಿಂಗ್ ಫೋನ್‌ಗಳಂತೆಯೇ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಮತ್ತು 12 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಆದಾಗ್ಯೂ, ಇಮೇಜ್ ಗುಣಮಟ್ಟವು Z ಫೋಲ್ಡ್ 6 ಗಿಂತ ಕಡಿಮೆ ಇರಲಿದೆ ಎನ್ನಲಾಗಿದೆ.ಈ ನಡುವೆ ಮತ್ತೊಂದು ಲೀಕ್‌ ಮಾಹಿತಿ ಹೊರಬಿದ್ದಿದ್ದು, ಗ್ಯಾಲಕ್ಸಿ Z ಫೋಲ್ಡ್‌ 6 ಅಲ್ಟ್ರಾ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಇದು ಉತ್ತಮ ಫೀಚರ್ಸ್‌ ಆಯ್ಕೆ ಪಡೆದಿರಲಿದ್ದು ಹೆಚ್ಚು ದುಬಾರಿ ಆವೃತ್ತಿಯಾಗಿರಲಿದೆ.

ಸ್ಯಾಮ್‌ಸಂಗ್‌ನ ಮುಂಬರುವ ಫೋಲ್ಡಬಲ್ ಫೋನ್‌ ನೀವು ಊಹಿಸಲಾಗದ ಅಗ್ಗದ ಬೆಲೆಗೆ?

ಸ್ಯಾಮ್‌ಸಂಗ್‌ ಯಾಕೆ ಅಗ್ಗದ ಬೆಲೆಯ ಈ ಫೋನ್‌ ಪರಿಚಯಿಸಲಿದೆ?: ಸ್ಯಾಮ್‌ಸಂಗ್ ಆರಂಭದಿಂದಲೂ ಫೋಲ್ಡಬಲ್‌ ಮಾಡಬಹುದಾದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಫೋಲ್ಡಬಲ್ ಫೋನ್‌ಗಳ ಅಭಿವೃದ್ಧಿಯಲ್ಲಿ ಇದು ಮುಂಚೂಣಿಯಲ್ಲಿದ್ದು, ಆಶ್ಚರ್ಯವೇನಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವು ಪ್ರಯತ್ನಗಳು ಕುಂಠಿತಗೊಂಡಿದ್ದು, ಫೋಲ್ಡ್ ಲೈನ್‌ಅಪ್ ಸ್ಪರ್ಧೆಯಿಂದ ಕೊಂಚ ಹಿಂದೆ ಸರಿದಿದೆ.

ಈ ಕಾರಣದಿಂದ ಇತರೆ ಸಂಸ್ಥೆಗಳು ಸ್ಯಾಮ್‌ಸಂಗ್‌ ಅನ್ನು ಹಿಂದೆ ತಳ್ಳಿ ಮುಂದೆ ಸಾಗುತ್ತಿವೆ. ಅವುಗಳಲ್ಲಿ ನಾವು ಜಾಗತಿಕವಾಗಿ ಹುವಾವೇ ಹಾಗೂ ಹಾನರ್‌ ಅನ್ನು ಕಾಣಬಹುದಾಗಿದೆ. ಇದರಿಂದಾಗಿಯೇ ಸ್ಯಾಮ್‌ಸಂಗ್‌ ಥಟ್ಟನೇ ತನ್ನ ಜಿಗಿದು ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಅಗ್ಗದ ದರದ ವೇರಿಯಂಟ್‌ ಅನ್ನೂ ಸಹ ಲಾಂಚ್‌ ಮಾಡಲು ಸಜ್ಜಾಗಿದೆ ಎನ್ನಲಾಗಿದೆ. ಇದರಿಂದ ಕಳೆದುಹೋದ ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈ ನಡುವೆ ಮೊಟೊರೊಲಾ ಸಹ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ಫೋನ್‌ ಬೆಲೆ 58,054 ರೂ.ಗಳಿಂದ ಆರಂಭವಾಗಬಹುದು ಎನ್ನಲಾಗಿದೆ. ಈ ಫೋನ್‌ ರೇಜರ್‌ ಪ್ಲಸ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫ್ಲಿಪ್‌ 5 ನಂತಹ ಫೋಲ್ಡಬಲ್‌ ಬೆಲೆಗಳಿಗಿಂತ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಮೊಟೊರೊಲಾ ಫೋನ್‌ ಸಹ ಸ್ಯಾಮ್‌ಸಂಗ್‌ಗೆ ತೀವ್ರ ಪೈಪೋಟಿ ನೀಡಲಿದೆ.

Best Mobiles in India

English summary
Samsung ready to unveil a foldable phone at a very affordable price. It is said that this phone will come with Galaxy Z Fold 6 and Flip 6 phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+