ನಿಮ್ಮ ಬಳಿ ಹಳೆಯ ಸ್ಯಾಮ್‌ಸಂಗ್ ಫೋನ್ ಇದ್ರೆ, ದಯವಿಟ್ಟು ಇಲ್ಲಿ ಗಮನಿಸಿ!
ಜನಪ್ರಿಯ ಸ್ಯಾಮ್‌ಸಂಗ್ ಮೊಬೈಲ್ ಸಂಸ್ಥೆಯು ದೇಶದಲ್ಲಿನ ಗ್ರಾಹಕರಿಗೆ ಹೊಸ 'Upgrade to Awesome' ಲಾಯಲ್ಟಿ ಪ್ರೋಗ್ರಾಂ ಅನ್ನು ಘೋಷಿಸಿದೆ. ಸದ್ಯ ಬಳಕೆಯಲ್ಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೊಬೈಲ್ ಬಳಕೆದಾರರಿಗೆ ಕೈಗೆಟುಕುವ ಕೆಲವು ಅತ್ಯುತ್ತಮ ಪ್ರಯೋಜನ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಲು ಈ ಸ್ಪೆಷಲ್ ಯೋಜನೆ ಅನ್ನು ರೂಪಿಸಲಾಗಿದೆ.
ಅಂದಹಾಗೆ ಸಂಸ್ಥೆಯ ಈ ಯೋಜನೆಯಲ್ಲಿ, ಸ್ಯಾಮ್‌ಸಂಗ್ ಬಳಕೆದಾರರು ತಮ್ಮ 2020 ರ ಹಿಂದಿನ ಗ್ಯಾಲಕ್ಸಿ ಫೋನ್‌ಗಳಿಂದ ಇತ್ತೀಚಿನ ಗ್ಯಾಲಕ್ಸಿ A ಸರಣಿಯ 5G ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡುವುದರಿಂದ ಕೆಲವು ಅತ್ಯಾಕರ್ಷಕ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಸ್ಯಾಮ್‌ಸಂಗ್‌ನ ಈ ಯೋಜನೆಯಲ್ಲಿ ಗ್ಯಾಲಕ್ಸಿ A54 5G, ಗ್ಯಾಲಕ್ಸಿ A34 5G, ಗ್ಯಾಲಕ್ಸಿ A23 5G, ಗ್ಯಾಲಕ್ಸಿ A14 5G ಸೇರಿದಂತೆ ಸ್ಯಾಮ್‌ಸಂಗ್ ಕಂಪನಿಯ ಜನಪ್ರಿಯ ಮೊಬೈಲ್‌ಗಳಲ್ಲಿ ಈ ಕೊಡುಗೆ ಅನ್ವಯವಾಗಲಿದೆ.
ಹಾಗೆಯೇ ಸ್ಯಾಮ್‌ಸಂಗ್ ಈ ಯೋಜನೆಯಡಿಯಲ್ಲಿ, ಬಳಕೆದಾರರು ತಮ್ಮ 2020 ರ ಹಿಂದಿನ ಗ್ಯಾಲಕ್ಸಿ ಫೋನ್‌ಗಳಿಂದ ಹೊಸ ಮಾದರಿಯ ಗ್ಯಾಲಕ್ಸಿ A54 5G, ಗ್ಯಾಲಕ್ಸಿ A34 5G, ಗ್ಯಾಲಕ್ಸಿ A23 5G, ಮತ್ತು ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡುವ ಗ್ರಾಹಕರು ಉಚಿತವಾಗಿ ಸ್ಯಾಮ್‌ಸಂಗ್ ಕೇರ್+ ಸ್ಕ್ರೀನ್ ಪ್ರೊಟೆಕ್ಷನ್ ಪ್ಯಾಕ್ ಪಡೆಯುತ್ತಾರೆ. ಹಾಗೆಯೇ ಕ್ಯಾಶ್‌ಬ್ಯಾಕ್ ಸೌಲಭ್ಯ ಸಹ ದೊರೆಯಲಿದೆ.

ಈ ಯೋಜನೆಯಲ್ಲಿ ಗ್ಯಾಲಕ್ಸಿ A14 5G ಫೋನಿನ 4GB RAM + 64GB ಸ್ಟೋರೇಜ್ ವೇರಿಯಂಟ್ ಅನ್ನು 14,499ರೂ.ಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನಿನ ಮೂಲ ಬೆಲೆ 18,449ರೂ. ಆಗಿದೆ. ಇನ್ನು ಖರೀದಿದಾರರಿಗೆ ಇಎಮ್‌ಐ ಆಯ್ಕೆಗಳು 973ರೂ. ಬೆಲೆಯಿಂದ ಪ್ರಾರಂಭವಾಗುತ್ತವೆ.
ಅದೇ ರೀತಿ, ಗ್ಯಾಲಕ್ಸಿ A23 5G ಫೋನಿನ 6GB RAM + 128GB ಸ್ಟೋರೇಜ್ ವೇರಿಯಂಟ್ 18,999ರೂ.ಗೆ ಲಭ್ಯವಿದೆ. ಇಎಮ್‌ಐ ಆಯ್ಕೆಗಳು 1,407ರೂ. ದರದಿಂದ ಲಭ್ಯವಾಗಲಿದೆ.

ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನಿನ 8GB RAM +128GB ವೇರಿಯಂಟ್ 25999ರೂ.ಗೆ ಪಡೆದುಕೊಳ್ಳಬಹುದಾಗಿದ್ದು, ಇದರ ಮೂಲ ಬೆಲೆ 35,499ರೂ. ಆಗಿದೆ. ಇನ್ನು ಈ ಫೋನ್ ತಿಂಗಳಿಗೆ 1,485 ರೂ. ಗಳ ಇಎಮ್‌ಐ ಸೌಲಭ್ಯದಲ್ಲಿ ಲಭ್ಯವಾಗಲಿದೆ. ಹಾಗೆಯೇ ಗ್ಯಾಲಕ್ಸಿ A54 5G ಮೊಬೈಲ್ 8GB RAM + 128GB ವೇರಿಯಂಟ್ ಅನ್ನು 33,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಇಎಮ್‌ಐ ಆಯ್ಕೆಗಳು 1,883ರೂ. ಗಳಿಂದ ಶುರುವಾಗುತ್ತವೆ.
ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A ಸರಣಿಯ ಗ್ಯಾಲಕ್ಸಿ A54 5G, ಗ್ಯಾಲಕ್ಸಿ A34 5G, ಗ್ಯಾಲಕ್ಸಿ A23 5G, ಮತ್ತು ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 13 ಓಎಸ್ ನಲ್ಲಿ ಕೆಲಸ ನಿರ್ವಹಿಸುತ್ತವೆ. ಅದೇ ರೀತಿ ಈ ಫೋನ್‌ಗಳು 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿವೆ.
ಖರೀದಿದಾರರು ತಮ್ಮ ಹಳೆಯ ಫೋನಿನಲ್ಲಿರುವ ಮೈ ಗ್ಯಾಲಕ್ಸಿ ಅಪ್ಲಿಕೇಶನ್‌ನಲ್ಲಿ ಕೋಡ್ ಅನ್ನು ರಚಿಸುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಆಫರ್ ಅನ್ನು ವ್ಯಾಲಿಡೆಟ್ ಮಾಡಲು ಮೊಬೈಲ್ ಸಂಖ್ಯೆ ಮತ್ತು ಫೋನ್‌ನ IMEI ನಂಬರ್ ಜೊತೆಗೆ ಕೂಪನ್ ಕೋಡ್ ಅನ್ನು ಹೊಸ ಫೋನಿನಲ್ಲಿ ನಮೂದಿಸಬೇಕು.
ಆ ಬಳಿಕ ಸ್ಯಾಮ್‌ಸಂಗ್ ಕೇರ್+ (Samsung Care+) ಸೇವೆ ಅನ್ನು 48 ಗಂಟೆಗಳ ಒಳಗೆ ಸಕ್ರಿಯ ಮಾಡಲಾಗುತ್ತದೆ. ಅರ್ಹ ಬಳಕೆದಾರರಿಗಾಗಿ ಆಪ್ ಆಫರ್‌ನ ಸೌಲಭ್ಯಗಳ ಬಗ್ಗೆ ಮಾಹಿತಿವುಳ್ಳ ಬ್ಯಾನರ್ ಅನ್ನು ಸ್ಯಾಮ್‌ಸಂಗ್ ಸಂಸ್ಥೆಯು ಪ್ರದರ್ಶಿಸುತ್ತದೆ.


Click it and Unblock the Notifications








