Home
ಸುದ್ದಿಜಾಲ

Samsung: ಸ್ಮಾರ್ಟ್‌ಫೋನ್‌ ಬ್ಯಾಟರಿ ರಕ್ಷಣೆಗಾಗಿ ಹೊಸ ಕ್ರಾಂತಿಗೆ ಮುಂದಾದ ಸ್ಯಾಮ್‌ಸಂಗ್; ಈ ಫೋನ್‌ಗಳಲ್ಲಿ ಲಭ್ಯ...

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಬ್ಯಾಟರಿಗಳು (Batteries) ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ. ಅದರಲ್ಲೂ ವಿಶೇ‍ಷ ತಂತ್ರಜ್ಞಾನದೊಂದಿಗೆ ನೂತನ ಬ್ಯಾಟರಿಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ನೀಡಲಾಗುತ್ತಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ ಬ್ಯಾಟರಿ ರಕ್ಷಣೆ ಸಂಬಂಧ ಸ್ಯಾಮ್‌ಸಂಗ್ (Samsung) ಹೊಸ ಕ್ರಾಂತಿಗೆ ಮುಂದಾಗಿದೆ.

ಹೌದು, ಸ್ಮಾರ್ಟ್‌ಫೋನ್ ತಯಾರಿಕಾ ಕ್ಷೇತ್ರದ ದೈತ್ಯ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿನ ಬ್ಯಾಟರಿಗಳ ಜೀವಿತಾವಧಿಯನ್ನು ರಕ್ಷಿಸುವ ಮತ್ತು ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಫೀಚರ್ಸ್‌ ಪರಿಚಯಿಸಲು ಎಲ್ಲಾ ತಯಾರಿ ನಡೆಸಿದೆ. ಹಾಗಿದ್ರೆ, ಸ್ಯಾಮ್‌ಸಂಗ್‌ನ ಈ ಹೊಸ ನಿರ್ಧಾರ ಏನು?, ಬ್ಯಾಟರಿ ರಕ್ಷಣೆಯನ್ನು ಈ ಮೂಲಕ ಯಾವ ರೀತಿ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಬ್ಯಾಟರಿ ರಕ್ಷಣೆಗಾಗಿ ಹೊಸ ಕ್ರಾಂತಿಗೆ ಮುಂದಾದ ಸ್ಯಾಮ್‌ಸಂಗ್...

ಬ್ಯಾಟರಿ ರಕ್ಷಣೆ ಸಂಬಂಧ ಸ್ಯಾಮ್‌ಸಂಗ್‌ನಿಂದ ಹೊಸ ನಿರ್ಧಾರ: ಈಗಾಗಲೇ ಆಪಲ್‌ನ ಐಫೋನ್‌ಗಳು ಬ್ಯಾಟರಿ ಆರೋಗ್ಯ ಮತ್ತು ಜೀವಿತಾವಧಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಆದರೆ, ಈಗ ಸ್ಯಾಮ್‌ಸಂಗ್‌ ಸಹ ಇದೇ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಸ್ಯಾಮ್‌ಸಂಗ್‌ನ ಹೊಸ ಬ್ಯಾಟರಿ ರಕ್ಷಣೆ ಫೀಚರ್ಸ್ ಭವಿಷ್ಯದಲ್ಲಿ ಆಂಡ್ರಾಯ್ಡ್‌ 14 ಚಾಲನೆಯಲ್ಲಿರುವ ಎಲ್ಲಾ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಿಗೆ ಬರಲಿದೆ ಎಂದು ತಿಳಿದುಬಂದಿದೆ. ಇದು ಒನ್‌ UI 6.1 ರ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಕಂಡುಬರುವ ಹೊಸ ಬ್ಯಾಟರಿ ರಕ್ಷಣೆ ವಿಭಾಗದಲ್ಲಿ ಈ ಫೀಚರ್ಸ್‌ ಅನ್ನು ಕಾಣಬಹುದು ಎಂದು ತಿಳಿಸಲಾಗಿದೆ.

ಗಮನಿಸಬೇಕಾದ ಮಾಹಿತಿ ಏನೆಂದರೆ ಸ್ಯಾಮ್‌ಸಂಗ್ ಅಧಿಕೃತವಾಗಿ ಹೊಸ ಬ್ಯಾಟರಿ ರಕ್ಷಣೆ ಫೀಚರ್ಸ್‌ ಅನ್ನು ವಿವರಿಸಿಲ್ಲ. ಸೋರಿಕೆಯಾದ ವರದಿಗಳ ಪ್ರಕಾರ, ಮುಂದಿನ ತಿಂಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಬಿಡುಗಡೆಯಲ್ಲಿ ಸ್ಯಾಮ್‌ಸಂಗ್ ಈ ಫೀಚರ್ಸ್‌ ಅನ್ನು ಬಹಿರಂಗಪಡಿಸುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಈ ವಿಶೇಷ ಫೀಚರ್ಸ್‌ ಆಯ್ಕೆ ಪಡೆದು ಮೊದಲ ಆಂಡ್ರಾಯ್ಡ್‌ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ.

ಸ್ಮಾರ್ಟ್‌ಫೋನ್‌ ಬ್ಯಾಟರಿ ರಕ್ಷಣೆಗಾಗಿ ಹೊಸ ಕ್ರಾಂತಿಗೆ ಮುಂದಾದ ಸ್ಯಾಮ್‌ಸಂಗ್...

ಇನ್ನು ಗ್ಯಾಲಕ್ಸಿ S24 ಸರಣಿಯ ಫೋನ್‌ಗಳಲ್ಲಿ ಈ ಹೊಸ ಫೀಚರ್ಸ್‌ಗೆ ಎಂಟ್ರಿಯಾಗಲು ಆಕ್ಟಿವಿಟಿ ಲಾಂಚರ್‌(Activity Launcher) ಆಪ್‌ಗೆ ಭೇಟಿ ನೀಡಬೇಕಿದೆ. ಇದರಲ್ಲಿ ಪ್ರಮುಖವಾಗಿ ಬ್ಯಾಟರಿ ಪ್ರೊಟೆಕ್ಷನ್‌ಆಕ್ಟಿವಿಟಿ (Battery ProtectionActivity) ಎಂಬ ಆಯ್ಕೆ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಕ್ಲಿಕ್‌ ಮಾಡುವ ಮೂಲಕ ಆನ್‌ ಮಾಡಬೇಕಿದೆ.

ಈ ಆಕ್ಟಿವಿಟಿ ಪ್ರಾರಂಭವಾದಾಗ, ಹೊಸ ಮೆನು ಕಾಣಿಸಿಕೊಳ್ಳುತ್ತದೆ. ಫೀಚರ್ಸ್‌ ಅನ್ನು ಟಾಗಲ್ ಮಾಡಲು ಮತ್ತು ಮೂರು ಹಂತದ ರಕ್ಷಣೆಯನ್ನು ಆಯ್ಕೆ ಮಾಡಲು ಇದು ಬಳಕೆದಾರರನ್ನು ಅನುಮತಿಸುತ್ತದೆ. ಈ ಮೂರು ಹಂತಗಳೆಂದರೆ ಬೇಸಿಕ್‌ ಪ್ರೊಟೆಕ್ಷನ್‌, ಅಡಾಪ್ಟಿವ್ ಪ್ರೊಟೆಕ್ಷನ್‌ ಮತ್ತು ಮ್ಯಾಕ್ಸಿಮಮ್‌ ಪ್ರೊಟೆಕ್ಷನ್‌ (Basic Protection, Adaptive Protection, Maximum Protection).

ಬೇಸಿಕ್‌ ಪ್ರೊಟೆಕ್ಷನ್‌ ಎಂದರೇನು?: ಈ ವಿಭಾಗದಲ್ಲಿ ಡಿವೈಸ್‌ 100% ಚಾರ್ಜ್‌ ಆಗುವುದನ್ನು ತಡೆಯಲಿದ್ದು, ಕನಿಷ್ಠ 95 ಪ್ರತಿಶತ ಚಾರ್ಜ್ ಆಗುವ ಹಾಗೆ ಮಾಡುತ್ತದೆ.
ಅಡಾಪ್ಟಿವ್ ಪ್ರೊಟೆಕ್ಷನ್: ವೇಗದ ಚಾರ್ಜಿಂಗ್ ಅನ್ನು ಶೇಕಡಾ 80 ರಷ್ಟು ನಿಯಂತ್ರಣ ಮಾಡುತ್ತದೆ. ಬಳಕೆದಾರರ ಫೋನ್ ಬಳಕೆಯ ಆಧಾರದ ಮೇಲೆ 100 ಶೇಕಡಕ್ಕೆ ಚಾರ್ಜ್ ಮಾಡಲು ಮುಂದಾಗುತ್ತದೆ. ಈಗಾಗಲೇ ಈ ಸೌಲಭ್ಯ ಗೂಗಲ್‌ ಪಿಕ್ಸೆಲ್‌ ಫೋನ್‌ಗಳಲ್ಲಿ ಕಂಡುಬಂದಿದೆ.
ಮ್ಯಾಕ್ಸಿಮಮ್‌ ಪ್ರೊಟೆಕ್ಷನ್: ಈ ವಿಭಾಗದಲ್ಲಿ 80 ಪ್ರತಿಶತದಷ್ಟು ಮಾತ್ರ ಚಾರ್ಜ್‌ ಆಗುವ ಹಾಗೆ ಮಾಡುತ್ತದೆ. ಈ ಮೂಲಕ ಬ್ಯಾಟರಿಯ ದೀರ್ಘ ಬಾಳಿಕೆಗೆ ಕೊಡುಗೆ ನೀಡುತ್ತದೆ.

ಸ್ಮಾರ್ಟ್‌ಫೋನ್‌ ಬ್ಯಾಟರಿ ರಕ್ಷಣೆಗಾಗಿ ಹೊಸ ಕ್ರಾಂತಿಗೆ ಮುಂದಾದ ಸ್ಯಾಮ್‌ಸಂಗ್...

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಸ್ಯಾಮ್‌ಸಂಗ್ ಮಾತ್ರವಲ್ಲದೇ ಗೂಗಲ್ (Google) ಸಹ ಬ್ಯಾಟರಿ ರಕ್ಷಣೆಗಾಗಿ ಕೆಲವು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಬ್ಯಾಟರಿಯ ಆರೋಗ್ಯವನ್ನು ಪರೀಕ್ಷಿಸಲು ಅವಕಾಶ ನೀಡುವ ರೀತಿಯಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಹೊಸ ಓಎಸ್‌ ಅಪ್‌ಡೇಟ್‌ನೊಂದಿಗೆ ಗೂಗಲ್ ಈ ನವೀಕರಣವನ್ನು ತರಲಿದೆ ಎಂದು ವರದಿಗಳು ಸೂಚಿಸುತ್ತವೆ.

Best Mobiles in India

English summary
Samsung is all set to introduce new features aimed at protecting the battery life of its smartphones and enhancing the performance of the smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+