ಶೀಘ್ರವೇ ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K ಟಿವಿ ಲಾಂಚ್; ಪ್ರಿ-ರಿಸರ್ವ್ VIP ಪಾಸ್‌ನಲ್ಲಿ ಭಾರೀ ಆಫರ್!
ಸ್ಯಾಮ್‌ಸಂಗ್ ಫೋನ್‌ಗಳಿಗೆ ಹೇಗೆ ಜನಪ್ರಿಯತೆ ಇದೆಯೋ ಅದೇ ರೀತಿ ಸ್ಮಾರ್ಟ್‌ಟಿವಿಗಳಿಗೂ ಭರ್ಜರಿ ಬೇಡಿಕೆ ಇದೆ. ಈ ಬೇಡಿಕೆ ಈಡೇರಿಸುವ ಭಾಗವಾಗಿಯೇ ಸ್ಯಾಮ್‌ಸಂಗ್ ಸುಧಾರಿತ ಫೀಚರ್ಸ್ ನೊಂದಿಗೆ ಹೊಸ ಸ್ಮಾರ್ಟ್‌ಟಿವಿ ಅನಾವರಣ ಮಾಡಲಿದೆ. ಈ ಟಿವಿಗಳನ್ನು ಮೂರು ವೇರಿಯಂಟ್‌ನಲ್ಲಿ ಲಭ್ಯ ಇವೆ.
ಹೌದು, ಸ್ಯಾಮ್‌ಸಂಗ್ ಕಳೆದ ವಾರವಷ್ಟೇ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ(Unpacked event) ಹಲವಾರು ಹೊಸ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡಿ ಬಹಳ ಸದ್ದು ಮಾಡಿತ್ತು. ಅದರಲ್ಲಿ ಗ್ಯಾಲಕ್ಸಿ ವಾಚ್ 6 ಸರಣಿ ಮತ್ತು ಗ್ಯಾಲಕ್ಸಿ ಟ್ಯಾಬ್ S9 ಸರಣಿಗಳು ಸಹ ಸೇರಿದ್ದವು. ಈ ನಡುವೆ ಭಾರತದಲ್ಲಿ ತನ್ನ ಪ್ರೀಮಿಯಂ ಸ್ಮಾರ್ಟ್ ಟಿವಿ ಶ್ರೇಣಿಯನ್ನು ವಿಸ್ತರಣೆ ಮಾಡಲು ಸ್ಯಾಮ್‌ಸಂಗ್ ಸಿದ್ಧವಾಗಿದ್ದು, ತನ್ನ ಹೊಸ ಕ್ರಿಸ್ಟಲ್ ವಿಷನ್ 4K ಟಿವಿ ಸರಣಿಯ ಬಿಡುಗಡೆಯನ್ನು ಅಧಿಕೃತವಾಗಿ ಖಚಿತಪಡಿಸಲು ಫ್ಲಿಪ್‌ಕಾರ್ಟ್‌ನಲ್ಲಿ ಮಿನಿ-ಸೈಟ್ ಅನ್ನು ರಚಿಸಿದೆ.

ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K ಟಿವಿ ಫೀಚರ್ಸ್: ಇನ್ನು ಈ ಟಿವಿಗಳ(Samsung Crystal Vision 4K TV) ಫೀಚರ್ಸ್ ಬಗ್ಗೆ ಪ್ರಮುಖ ಸೈಟ್‌ಗಳು ಮಾಹಿತಿ ನೀಡಿದ್ದು, ಅದರಂತೆ ಆಟೋಮ್ಯಾಟಿಕ್ ಬ್ರೈಟ್‌ನೆಸ್ ಸೆಟಪ್ ಸೆನ್ಸರ್ ಹೊಂದಿರಲಿದೆಯಂತೆ. ಜೊತೆಗೆ ಸುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ವೀಕ್ಷಣೆಯನ್ನು ಅತ್ಯುತ್ತಮವಾಗಿಸಲು ಈ ಫೀಚರ್ಸ್ ಸಹಾಯ ಮಾಡಲಿದೆ. ಇದಕ್ಕಾಗಿ ಏಳು ಹಂತಗಳಲ್ಲಿ ಹೊಳಪನ್ನು ಇದು ಹೊಂದಿಸುತ್ತದೆ. ಅಷ್ಟು ಮಾತ್ರವಲ್ಲದೆ ಟಿವಿಯು ಕ್ಯಾಮರಾಗೆ ಕನೆಕ್ಟ್ ಆಗಿದ್ದರೆ ಯಾರಾದರೂ ಅನಧಿಕೃತವಾಗಿ ಮನೆಗೆ ಎಂಟ್ರಿ ಕೊಟ್ಟರೆ ಎಚ್ಚರಿಕೆ ಸಹ ನೀಡುತ್ತದಂತೆ.
ಇದರೊಂದಿಗೆ ಸ್ಮಾರ್ಟ್ ಥಿಂಗ್ಸ್ ಫೀಚರ್ಸ್ (Smart Things Features) ಆಯ್ಕೆ ನೀಡಲಾಗಿದ್ದು, ಇನ್‌ಬಿಲ್ಟ್ ಹಬ್ ಮೂಲಕ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳನ್ನು ನಿಯಂತ್ರಿ ಕಂಟ್ರೋಲ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಈ ವರ್ಕ್‌ಸ್ಪೇಸ್ ಫೀಚರ್ಸ್ ಬಳಕೆದಾರರು ತಮ್ಮ ಪಿಸಿ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಟಿವಿಯಲ್ಲಿಯೇ ವೀಕ್ಷಣೆ ಮಾಡಬಹುದು. ಈ ಟಿವಿ ಪ್ಲಸ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು, ಹಲವಾರು ಚಲನಚಿತ್ರಗಳೊಂದಿಗೆ 200+ ಚಾನಲ್‌ಗ ಆಯ್ಕೆ ನೀಡುತ್ತದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಮೂರು ಸೈಡ್ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಗೂಗಲ್ ಮೀಟ್ (Google Meet) ಅನ್ನೂ ಸಹ ಬೆಂಬಲಿಸಿವೆ ಎಂದು ತಿಳಿದುಬಂದಿದೆ. ಸುಧಾರಿತ ವೀಕ್ಷಣೆಯ ಅನುಭವಕ್ಕಾಗಿ 4K ಅಪ್‌ಸ್ಕೇಲಿಂಗ್, HDR 10+ ಮತ್ತು ವ್ಯಾಪಕ ಶ್ರೇಣಿಯ ಬಣ್ಣಗಳನ್ನು ಸಕ್ರಿಯಗೊಳಿಸುವ ಪರ್‌ಕಲರ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಕಾಂಟ್ರಾಸ್ಟ್ ಎನ್‌ಹಾನ್ಸರ್‌ನಂತಹ ಫೀಚರ್ಸ್ ಸಹ ವಿಶೇಷ ಎನಿಸಿದೆ.
ಉಳಿದಂತೆ ಮೋಷನ್ ಎಕ್ಸ್‌ಸೆಲೇಟರ್ (Motion Accelerator) ಸರಾಗವಾದ ಚಿತ್ರಗಳಿಗಾಗಿ ಫ್ರೇಮ್‌ಗಳನ್ನು ಅಂದಾಜು ಮಾಡಲಿದ್ದು, ಇದು ಎಲ್ಲವನ್ನೂ ಸರಿದೂಗಿಸುವ ಕೆಲಸ ಮಾಡುತ್ತದೆ. ಇದರ ಜೊತೆಗೆ ಆಟೋ ಲೋ ಲೇಟೆನ್ಸಿ ಮೋಡ್ (ALLM) ಅನ್ನು ಸಹ ಬೆಂಬಲಿಸಲಿದ್ದು, ಟಿವಿ ರನ್ ಆಗುವಾಗ ಮಸುಕು ಮತ್ತು ಇನ್‌ಪುಟ್ ಲ್ಯಾಗ್ ಅನ್ನು ಕಡಿಮೆ ಮಾಡಲು ಹಾಗೂ ಉತ್ತಮ ಗೇಮಿಂಗ್ ಅನುಭವಕ್ಕಾಗಿ ಇದು ಆಪ್ಟಿಮೈಜ್ ಮಾಡುತ್ತದೆ.
ಹೊಸ ಸ್ಮಾರ್ಟ್‌ಟಿವಿಗಳು ಯಾವಾಗ ಲಾಂಚ್: ಕಂಪೆನಿಯ ಹೊಸ ಟಿವಿ ಲೈನ್‌ಅಪ್ ಭಾರತದಲ್ಲಿ ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ ಎಂದು ಫ್ಲಿಪ್‌ಕಾರ್ಟ್ ಪೇಜ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸ್ಯಾಮ್‌ಸಂಗ್‌ನ ಕ್ರಿಸ್ಟಲ್ ವಿಷನ್ 4K ಟಿವಿ ಶ್ರೇಣಿಯು ಮೂರು ವಿಭಿನ್ನ ಡಿಸ್‌ಪ್ಲೇ ಗಾತ್ರಗಳನ್ನು ಹೊಂದಿದ್ದು, ಅದರಲ್ಲಿ 43, 55 ಹಾಗೂ 65 ಇಂಚಿನ ಟಿವಿಗಳ ಆಯ್ಕೆ ನೀಡಲಾಗಿದೆ.
ಇನ್ನು ಈ ಸ್ಮಾರ್ಟ್‌ಟಿವಿಗಳು ಬಹು ಸೆನ್ಸರ್‌ಗಳು ಮತ್ತು ಇನ್‌ಬಿಲ್ಟ್ IoT ಫೀಚರ್ಸ್‌ನೊಂದಿಗೆ ಬರಲಿವೆ ಎನ್ನಲಾಗಿದ್ದು, ಈ ನಡುವೆ ಈ ಟಿವಿಗಳಿಗೆ ಇನ್ನೂ ಬೆಲೆ ನಿಗದಿ ಮಾಡಿಲ್ಲವಾದರೂ ಪ್ರಿ-ರಿಸರ್ವ್ ವಿಐಪಿ ಪಾಸ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಈ ಪಾಸ್ ಖರೀದಿಸುವ ಗ್ರಾಹಕರು ಲಭ್ಯವಿರುವಾಗ ವಿವಿಧ ಗಾತ್ರದ ಟಿವಿಗಳನ್ನು ಖರೀದಿಸುವಾಗ ವಿವಿಧ ರೀತಿಯಲ್ಲಿ ಡಿಸ್ಕೌಂಟ್ ಪಡೆಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.

ಪ್ರಿ-ರಿಸರ್ವ್ ವಿಐಪಿ ಪಾಸ್ ಬೆಲೆ ಎಷ್ಟು?: ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K ಟಿವಿಗೆ ಪ್ರಿ-ರಿಸರ್ವ್ ವಿಐಪಿ ಪಾಸ್‌ನ ಬೆಲೆ 500ರೂ.ಗಳಾಗಿದೆ. ವಿಐಪಿ ಪಾಸ್‌ನೊಂದಿಗೆ ಗ್ರಾಹಕರು 43 ಇಂಚಿನ ಟಿವಿಯಲ್ಲಿ1,000ರೂ.ಗಳ ರಿಯಾಯಿತಿ ಪಡೆಯಬಹುದು. ಹಾಗೆಯೇ 55 ಇಂಚಿನ ಟಿವಿಯಲ್ಲಿ 2,000ರೂ, 65 ಇಂಚಿನ ಟಿವಿಯಲ್ಲಿ 3,000ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ಅಷ್ಟು ಮಾತ್ರವಲ್ಲದೆ ಪ್ರಿ-ರಿಸರ್ವ್ ವಿಐಪಿ ಪಾಸ್ ಅನ್ನು ಖರೀದಿಸುವ ಗ್ರಾಹಕರು ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ ಟಿವಿಯೊಂದಿಗೆ 8,900ರೂ. ಬೆಲೆ ಬಾಳುವ ಸ್ಯಾಮ್‌ಸಂಗ್ ವೆಬ್‌ಕ್ಯಾಮ್ ಅನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ. ಈ ಡಿವೈಸ್ ಅನ್ನು ಮೀಟಿಂಗ್, ಕರೆ ಹಾಗೂ ಇನ್ನಿತರೆ ಸೌಲಭ್ಯಗಳಿಗೆ ಇದನ್ನು ಬಳಕೆ ಮಾಡಿಕೊಳ್ಳಬಹುದು.ಈ ಪ್ರಿ ಬುಕ್ಕಿಂಗ್ ಕೊಡುಗೆಗಳು ಆಗಸ್ಟ್ 4 ರಿಂದ ಆಗಸ್ಟ್ 31 ರವರೆಗೆ ಮಾನ್ಯವಾಗಿರುತ್ತವೆ.


Click it and Unblock the Notifications








