'ಮೊಬೈಲ್ ಆಪ್' ಮೂಲಕ ಸರ್ಕಾರಿ ನಿಗದಿತ ದರದಲ್ಲಿ 'ಮರಳು' ಖರೀದಿಸಿ!!

|

ತಂತ್ರಜ್ಞಾನವನ್ನು ಹೇಗೆಲ್ಲಾ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಾಗಾಟಕ್ಕಾಗಿ ಮೊಬೈಲ್ ಆಪ್ ಒಂದನ್ನು ಅಭಿವೃಧ್ಧಿಪಡಿಸಲಾಗಿದೆ. ಮರಳು ಸಾಗಾಟದಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ, ದರಗಳ ಏರಿಳಿತವನ್ನು ತಡೆಗಟ್ಟಿ ಮರಳು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲೆಯಲ್ಲಿ 'ಸ್ಯಾಂಡ್ ಬಜಾರ್' ಎಂಬ ಆಪ್ ಅನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಪ್ರಯೋಗವಾಗಿ 'ಫ್ರಮ್ ಶೋರ್ ಟು ಎವ್ರಿ ಡೋರ್(ನದಿ ದಡದಿಂದ ಮನೆಬಾಗಿಲಿಗೆ) ಎನ್ನುವ ಘೋಷಣೆಯೊಂದಿಗೆ 'ಸ್ಯಾಂಡ್ ಬಜಾರ್ 'ಆಪ್ ರೂಪಿತವಾಗಿದ್ದು, ಈ ಆಪ್ ಮೂಲಕ ಮರಳು ಸಾಗಾಟ ಸುಲಭವಾಗಿ ನಡೆದು ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಮರಳಿಗೆ ನಿಗದಿತ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಈ ಬಗ್ಗೆ ಆಪ್‌ನಲ್ಲಿ ದರದ ಬಗ್ಗೆ ಮಾಹಿತಿ ಇರುವುದರಿಂದ ಇದರಿಂದ ಜನಸಾಮಾನ್ಯರಿಂದ ದುಬಾರಿ ವಸೂಲಿ ತಪ್ಪಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

'ಮೊಬೈಲ್ ಆಪ್' ಮೂಲಕ ಸರ್ಕಾರಿ ನಿಗದಿತ ದರದಲ್ಲಿ 'ಮರಳು' ಖರೀದಿಸಿ!!

ಮರಳು ಬೇಕಾದ ಗ್ರಾಹಕರು ಸ್ಯಾಂಡ್ ಬಜಾರ್ ಆಪ್ ಡೌನ್ಲೋಡ್ ಮಾಡಬೇಕು. ಬಳಿಕ ಗ್ರಾಹಕರ ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು. ಗ್ರಾಹಕನ ಆಧಾರ್ ನಂಬರ್ ನಮೂದಿಸಿ ಹತ್ತಿರವಿರುವ ಮರಳು ದಕ್ಕೆ ಸ್ಥಳವನ್ನು ಟೈಪ್ ಮಾಡಿ ಕಳುಹಿಸಬೇಕು. ಇದಾದ ನಂತರ ಗ್ರಾಹಕರರಿಗೆ ಓಟಿಪಿ ಸಂಖ್ಯೆ ಬರಲಿದೆ. ಆ ಓಟಿಪಿಯನ್ನು ಎಂಟರ್ ಮಾಡಿದರೆ ಮರಳು ಸಾಗಾಟದ ದರ ಸಂದೇಶ ಬರಲಿದೆ. ಮರಳು ಬೇಕೆಂದರೆ ಆ ದರವನ್ನು ಆನ್‌ಲೈನಿನಲ್ಲಿ ಪಾವತಿಸಬೇಕಾಗುತ್ತದೆ.

ಈ ಮೊತ್ತವನ್ನು ಪೇಟಿಎಂ ಆಥವಾ ನೆಟ್‌ಬ್ಯಾಕಿಂಗ್ ಮೂಲಕ ಪಾವತಿಸಬಹುದಾಗಿದ್ದು, ಹಣ ಪಾವತಿಸಿದ ಕೂಡಲೇ ಮೊಬೈಲ್ ಸಂದೇಶ ಬರಲಿದ್ದು ಅದನ್ನು ಹಿಡಿದುಕೊಂಡು ಸಂಬಂಧಪಟ್ಟ ಮರಳು ಧಕ್ಕೆಗೆ ಹೋಗಿ ತೋರಿಸಬೇಕು. ದಕ್ಕೆಗೂ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆ ಮರಳು ಸಾಗಾಟ ನಡೆಯಲಿದೆ. ಇನ್ನು ಬುಕ್ಕಿಂಗ್ ಮಾಹಿತಿ, ಗ್ರಾಹಕರ ಮಾಹಿ ಸೇರಿದಂತೆ ಗೂಗಲ್ ಮ್ಯಾಪ್ ಮೂಲಕ ಮರಳು ಧಕ್ಕೆಯ ವಿವರವೂ ಕೂಡ ಆಪ್‌ನಲ್ಲಿ ಸಿಗಲಿದೆ ಎಂದು ಹೇಳಲಾಗಿದೆ.

'ಮೊಬೈಲ್ ಆಪ್' ಮೂಲಕ ಸರ್ಕಾರಿ ನಿಗದಿತ ದರದಲ್ಲಿ 'ಮರಳು' ಖರೀದಿಸಿ!!

ವಿಶೇಷವೆಂದರೆ, ಈ ಮೊಬೈಲ್ ಆಪ್‌ನಲ್ಲಿ ಆರ್ಡರ್ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವರು ಸಾಗಾಟ ಮಾಡುತ್ತಾರೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದರೆ. ಮರಳು ಲಾರಿಯವರು ಸಾಗಾಟ ಮಾಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್ ಆಪ್ ಮರಳುಗಾರಿಕೆ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

Most Read Articles
Best Mobiles in India

English summary
The district administration is introducing the Sand Bazar app. It will be implemented in Mangaluru CRZ limits at present and later throughout the district.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more