2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

|

ಒಂದು ಕಾಲದಲ್ಲಿ ಲೈಫ್‌ಟೈಮ್ ಉಚಿತ ವ್ಯಾಲಿಡಿಟಿ ಆಫರ್ ನೀಡುವುದಾಗಿ ಹೇಳಿಕೊಂಡಿದ್ದ ಬಹುತೇಕ ಟೆಲಿಕಾಂ ಕಂಪನಿಗಳು, ಈಗ ಪ್ರತಿ ಕಡಿಮೆ ಬಳಕೆ ಸಿಮ್‌ಗೆ ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಕರೆ ಮಾಡುವ, ಎಸ್‌ಎಂಎಸ್‌ ಕಳುಹಿಸುವ ತರಹದ ಒಳ ಹಾಗೂ ಹೊರಹೋಗುವ ಸೇವೆಗಳನ್ನು ನೀಡುವುದಾಗಿ ಹೇಳುತ್ತಿವೆ. ಜೊತೆಗೆ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ.!

ಏರ್‌ಟೆಲ್‌ನಂಥಹ ಜನಪ್ರಿಯ ಕಂಪನಿಯೇ ತನ್ನ ಲೈಫ್ಟೈಮ್ ಗ್ರಾಹಕರಿಗೆ 2029ರವರೆಗೆ ವ್ಯಾಲಿಡಿಟಿ ಎಂದು ಘೋಷಿಸಿತ್ತು. ಆದರೆ, ಈಗ ಅದಕ್ಕೆ ದಿಢೀರ್‌ ಆಗಿ ಕೊಕ್ ನೀಡಿದೆ. ಈಗ ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇವೆಲ್ಲವೂ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಟೆಲಿಕಾಂ ಕಂಪೆನಿಗಳ ಚಾಣಾಕ್ಷ ತಂತ್ರಗಳಾಗಿವೆ.

2029ರ ವರೆಗೂ ವ್ಯಾಲಿಡಿಟಿ ನೀಡಿದ್ದ 'ಏರ್‌ಟೆಲ್' ಮೋಸ ಮಾಡಿದ್ದು ಹೇಗೆ?

ಇವೆಲ್ಲವೂ ಕಾನೂನು ಉಲ್ಲಂಘನೆಯಾಗಿ ಕಂಡುಬಂದರೂ ದೂರ ಸಂಪರ್ಕ ಇಲಾಖೆ ಕ್ರಮ ತೆಗೆದುಕೊಳ್ಳದೇ ಇರುವುದನ್ನು ನಾವು ನೋಡುತ್ತಿದ್ದೇವೆ. ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಟೆಲಿಕಾಂ ಕಂಪೆನಿಗಳು ಹಿಂತೆಗೆದುಕೊಂಡಿರುವುದು ಹೇಗೆ?, ವ್ಯಾಲಿಡಿಟಿ ಅವಧಿ ಮುಗಿಯುವುದಕ್ಕೆ ಮುನ್ನ ಸಿಮ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಟ್ರಾಯ್ ಹೇಳಿದ್ದ ನಿಯಮವನ್ನು ಟೆಲಿಕಾಂ ಕಂಪೆನಿಗಳು ಮೀರುತ್ತಿರುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಕೆಲ ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದೆ.!

ಈಗ ಮೊಬೈಲ್‌ ಕಂಪನಿಗಳು ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ. ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಒಳ ಹಾಗೂ ಹೊರ ಹೋಗುವ ನಿಯಮವನ್ನು ತೆಗೆದುಕೊಂಡಿವೆ. ಒಂದೊಮ್ಮೆ ಡಿಯಾಕ್ಟೀವ್ ಆದ ಸಿಮ್ ಅನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳ ಕ್ರಮ ಬದಲಾಗಿದ್ದು ಏಕೆ?

ಟೆಲಿಕಾಂ ಕಂಪೆನಿಗಳಿಗೆ ಲಾಭ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳು ತಮ್ಮ ಪರಿಸ್ಥಿತಿಯನ್ನು ಅವಲೋಕಿಸಿವೆ. ಜಿಯೋ ಬಂದ ನಂತರ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಅತ್ಯಂತ ಕಡಿಮೆ ಕಂದಾಯ ಸಂಗ್ರಹವಾಗುತ್ತಿರುವುದು ಅವುಗಳಿಗೆ ತಲೆಕೆಡಿಸಿದಂತಿದೆ. ಹಾಗಾಗಿ, ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಅವುಗಳು ಚಾಣಾಕ್ಷ ತಂತ್ರವನ್ನೇ ಹೆಣೆದಿದ್ದು, ಮೊತ್ತಮೊದಲಾಗಿ ತನ್ನ ಲೈಫ್ಟೈಮ್ ವ್ಯಾಲಿಡಿಟಿಯ ಭರವಸೆಯನ್ನು ಹಿಂತೆಗೆದುಕೊಂಡಿವೆ.

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್ ನಿಯಮಗಳು ಹೇಳುವುದು ಏನು?

ಟ್ರಾಯ್‌ನ ನಿಯಮಗಳ ಪ್ರಕಾರವೇ, ಯಾವುದೇ ಒಂದು ಪ್ಲಾನ್ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್ ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ ಎಂದು ಹೇಳುತ್ತದೆ.ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಹಾಗಾಗಿ, ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದೆ.

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಕಾನೂನು ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತಿ?

ಟ್ರಾಯ್‌ ಪ್ರಕಾರ, ಮೂರು ರೀತಿಯ ರೀಚಾರ್ಜ್‌ಗಳಿಗೆ ಟೆಲಿಕಾಂ ಕಂಪೆನಿಗಳಿಗೆ ಅವಕಾಶವಿದೆ. ಯಾವುದೇ ಮೌಲ್ಯವರ್ಧಿತ ಸೇವಾ ರೀಚಾರ್ಜ್‌ ಸೇವೆಯು ದರಪಟ್ಟಿಯನ್ನು ಹಾಗೂ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲೇಬೇಕು. ಆದರೆ, ಬಹುತೇಕ ಕಂಪೆನಿಗಳು 1 ರಿಂದ ಮೂರು ತಿಂಗಳ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸುತ್ತವೆ. ಆರು ತಿಂಗಳ ವ್ಯಾಲಿಡಿಟಿ ಕೊಡದ ಪ್ಲಾನ್ ವೋಚರ್‌ಗಳ ವಿಚಾರದಲ್ಲಿ ಟ್ರಾಯ್‌ ಮಧ್ಯಪ್ರವೇಶಿಸಿ ಗ್ರಾಹಕರ ಪರ ನಿಲ್ಲಬೇಕಿತ್ತು. ಆದರೆ, ಈ ಉಲ್ಲಂಘನೆಗೂ ಟ್ರಾಯ್‌ ಮೌನಸಮ್ಮತವಾಗಿದೆ.

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಲೈಫ್ಟೈಮ್ ಎಂದರೆ ಆರು ತಿಂಗಳು ಮಾತ್ರ!?

ಟ್ರಾಯ್‌ನ ನಿಯಮಗಳ ಪ್ರಕಾರವೇ ಒಂದು ಪ್ಲಾನ್‌ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್‌ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್‌ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ. ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಆದರೆ, ಈಗ ಹೊಸದಾಗಿ ಬರುವವರಿಗೆ ಲೈಫ್ಟೈಮ್‌ ಎಂದರೆ ಆರು ತಿಂಗಳು ಮಾತ್ರ ಎಂಬಂತಾಗಿದೆ.

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಮೂರು ತಿಂಗಳಿಗೆ 20 ರೂ. ಕನ್ನವೇಕೆ?

ಈಗ ಟೆಲಿಕಾಂ ಕಂಪೆನಗಳು ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ತಂದಿವೆ. ಚಾಲನೆಯಲ್ಲಿ ಇಲ್ಲದ ಸಿಮ್‌ನಲ್ಲಿ ಭಾರೀ ಹಣ ಖಾಲಿ ಉಳಿದಿರುವುದನ್ನು ಕಬಳಿಸಲು ಈ ರೀತಿ ಅವುಗಳು ಪ್ಲ್ಯಾನ್ ಮಾಡಿಕೊಂಡಿವೆ. ನಿಮಗೆ ಗೊತ್ತಾ?, ಬಿಲಿಯನ್‌ಗಟ್ಟಲೆ ಹಣ ಹೀಗೆ ಚಾಲ್ತಿಯ ಸಿಮ್‌ಗಳ ಟಾಕ್‌ಟೈಮ್‌ನಲ್ಲಿದೆ. ಇದನ್ನು ಕಬಳಿಸಲು ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಅವುಗಳ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನಹಾಕಲಾಗುತ್ತಿದೆ.

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ರಂಗೋಲಿ ಕೆಳಗೆ ಟೆಲಿಕಾಂ ಕಂಪೆನಿಗಳು!

ಜಿಯೋ ಬಂದ ನಂತರ ಇತರೆ ಟೆಲಿಕಾಂ ಕಂಪೆನಿಗಳು ರಂಗೋಲಿ ಕೆಳಗೆ ತೂರಲು ಶುರು ಮಾಡಿವೆ. ಸಿಮ್ ಖರೀದಿಸಿದ ಸಮಯದಲ್ಲಿ ಸಿಮ್ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಟೆಲಿಕಾಂ ಕಂಪೆನಿಗಳು ಅವುಗಳೆಲ್ಲವನ್ನು ಗಾಳಿಗೆ ತೂರಿವೆ. ಒಂದು ಬಾರಿ ಗ್ರಾಹಕರಿಗೆ ಮಾತು ನೀಡಿರುವ ಸೇವಾ ಕಂಪನಿಗಳು ಸಿಮ್‌ ಡಿಯಾಕ್ಟೀವ್ ಮುಂದಾಗುವುದು ಸಮ್ಮತವಲ್ಲ. ಆದರೆ, ಟ್ರಾಯ್‌ನ ಒಂದು ಅವಕಾಶವನ್ನೇ ಮೊಬೈಲ್‌ ಕಂಪನಿಗಳು ದುರುಪಯೋಗಪಡಿಸಿಕೊಂಡು ಈಗ ಹೊಸ ಸೂತ್ರಗಳನ್ನು ರೂಪಿಸುತ್ತಿವೆ. ಇದಕ್ಕೆ ಬ್ರೇಕ್ ಸಿಗದೇ ಮುಂದುವರೆದಿದೆ.

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಟ್ರಾಯ್‌ನ ಒಂದು ಅವಕಾಶ ಅವಾಂತರಕ್ಕೆ ಕಾರಣ?

ಒಂದು ನಂಬರ್‌ನಿಂದ ಒಳಬರುವ ಕರೆಗಳನ್ನು ಸ್ವೀಕರಿಸಿರುವುದು ಅಥವಾ ಕರೆ ಮಾಡಿರುವುದು ಸಿಮ್ ಚಾಲ್ತಿಯ ಸಂಕೇತ. ಬೇರೆಯವರಿಗೆ ಎಸ್‌ಎಂಎಸ್‌ ಕಳುಹಿಸಿದ್ದನ್ನೂ ಸಹ ಸಿಮ್ ಚಾಲ್ತಿ ಎಂದು ಹೇಳಲಾಗಿದೆ. ಡಾಟಾ ಬಳಕೆ ಮಾಡುತ್ತಿದ್ದರೆ, ಮೌಲ್ಯ ವರ್ಧಿತ ಸೇವೆ ಚಾಲನೆಯಲ್ಲಿದ್ದರೆ ಸಿಮ್ ಅನ್ನು ಅನೂರ್ಜಿತಗೊಳಿಸುವಂತಿಲ್ಲ. ಆದರೆ, ಟ್ರಾಯ್‌ ಇನ್ನೂ ಮುಂದುವರೆದು, ಈ ನಿಯಮಗಳ ಹೊರತಾಗಿ ಸಿಮ್‌ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಘೋಷಿಸಿದೆ. ಇದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗುತ್ತದೆ.

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಪುನರ್ವಿಮರ್ಶೆಗೆ ಮುಂದಾಗದಿದ್ದರೆ ಕಷ್ಟಕಷ್ಟ!

ಆ ಸಮಯದಲ್ಲಿ ಸಿಮ್‌ ಶುಲ್ಕ, ಆಕ್ಟಿವೇಶನ್ ಶುಲ್ಕಗಳನ್ನು ಪಡೆದಿರುವ ಮೊಬೈಲ್ ಕಂಪೆನಿಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿವೆ. ಸಿಮ್ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಟ್ರಾಯ್‌ ಘೋಷಿಸಿ ಒಂದು ರಿತಿಯಲ್ಲಿ ಇಂಗುತಿಂದ ಮಂಗನಂತಾಗಿದೆ. ಇಡೀ ದೇಶದ ಎಲ್ಲ ಮೊಬೈಲ್ ಗ್ರಾಹಕರನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಟ್ರಾಯ್ ತಕ್ಷಣ ಪುನರ್ವಿಮರ್ಶೆಗೆ ಮುಂದಾಗಬೇಕಿದೆ. ಮೂಲ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಟ್ರಾಯ್‌ ನಿರ್ದೇಶನ ನೀಡುವುದನ್ನು ನಾವು ಕಾಯುತ್ತಿದ್ದೇವೆ.!

Best Mobiles in India

English summary
Lifetime validity offer break - Consumer Complaints Court. Should You Recharge Your Prepaid Number Every 28 Days?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X