Home
ಸುದ್ದಿಜಾಲ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

By Ashwath

ಹೈದರಾಬಾದ್‌ ಮೂಲದ ಮಣಿಪಾಲ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌‌‌ನ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಮೈಕ್ರೋಸಾಫ್ಟ್‌‌ ಆಡಳಿತ ಮಂಡಳಿಯ ಸಭೆಯಲ್ಲಿ ಸತ್ಯ ನಾದೆಳ್ಲ ಹೆಸರನ್ನು ಸರ್ವಾ‌ನುಮತದೊಂದಿಗೆ ಅಂಗೀಕರಿಸಿ ಅಧಿಕೃತವಾಗಿ ಪ್ರಕಟಿಸಲಾಯಿತು.

ನಾದೆಳ್ಲ ಅವರಿಗೆ ಈ ಹಿಂದೆ 6,75,000 ಡಾಲರ್‌ ವೇತನವನ್ನು ನೀಡುತ್ತಿದ್ದ ಮೈಕ್ರೋಸಾಫ್ಟ್‌‌ ಈಗ ಸಿಇಒ ಆಗಿ ನೇಮಕ ಮಾಡಿದ ಬಳಿಕ ಮೊದಲ ವರ್ಷ‌ಕ್ಕೆ 1.2 ದಶಲಕ್ಷ ಡಾಲರ್‌ ಮೂಲ ವೇತನ ನಿಗದಿ ಪಡಿಸಿದೆ.

ಕಂಪೆನಿಯ 38 ವರ್ಷದ ಇತಿಹಾಸದಲ್ಲಿ ಮೈಕ್ರೋಸಾಫ್ಟ್‌ನ್ನು ಇದುವರೆಗೆ ಎರಡು ಸಿಇಒಗಳು ಮುನ್ನಡೆಸಿದ್ದರು. ಎರಡನೇ ಸಿಇಒ ಸ್ಟೀವ್‌ ಬಾಲ್ಮರ್‌ ಕಳೆದ ಅಗಸ್ಟ್‌‌ ತಿಂಗಳಿನಲ್ಲಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ ಮೈಕ್ರೋಸಾಫ್ಟ್‌ ಸಿಇಒ ಪಟ್ಟಕ್ಕಾಗಿ ಸೂಕ್ತ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿತ್ತು.ಕಳೆದ ವಾರವೇ ಸತ್ಯ ನಾದೆಳ್ಲ ಹೆಸರನ್ನು ಮೈಕ್ರೋಸಾಫ್ಟ್‌‌‌ ಅಂತಿಮಗೊಳಿಸಿದ್ದರೂ ಅಧಿಕೃತವಾಗಿ ಪ್ರಕಟಿಸಿರಲಿಲ್ಲ.ಈಗ ಮೈಕ್ರೋಸಾಫ್ಟ್‌ ಅಧಿಕೃತವಾಗಿ ಪ್ರಕಟಿಸಿದ್ದು ಹಾಲಿ ಸಿಇಒ ಸ್ವೀವ್‌ ಬಲ್ಮರ್‌ ಅಗಸ್ಟ್‌ನಲ್ಲಿ ನಿವೃತ್ತರಾಗಲಿದ್ದು ಆ ಬಳಿಕ ಮೈಕ್ರೋಸಾಫ್ಟ್‌ನ್ನು ಮುನ್ನಡೆಸುವ ಜವಾಬ್ದಾರಿ ಸತ್ಯ ನಾದೆಳ್ಲ ವಹಿಸಲಿದ್ದಾರೆ.

ಮೈಕ್ರೋಸಾಫ್ಟ್‌ ಹಾಲೀ ಅಧ್ಯಕ್ಷ ಬಿಲ್‌ ಗೇಟ್ಸ್‌ ಅವರನ್ನು ಮೈಕ್ರೋಸಾಫ್ಟ್‌‌ನ ಅಧ್ಯಕ್ಷ ಸ್ಥಾನದಿಂದ ಇಳಿಸಲಾಗಿದ್ದು ಈ ಹುದ್ದೆಗೆ ಡಬ್ಲ್ಯೂ ಥಾಂಪ್ಸನ್ ಅವರನ್ನು ನೇಮಿಸಿದೆ. ಬಿಲ್‌‌ಗೇಟ್ಸ್‌ ಅವರಿಗೆ ತಾಂತ್ರಿಕ ಸಲಹಗಾರನೆಂಬ ಹೊಸ ಹುದ್ದೆಯನ್ನು ನೀಡಲಾಗಿದೆ.

ಸತ್ಯ ನಾದೆಳ್ಲ ಆಯ್ಕೆಯಾದ ಬಳಿಕ ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಬಿಲ್‌ಗೇಟ್ಸ್‌, ಹಾಲಿ ಸಿಇಒ ಸ್ವೀವ್‌ ಬಲ್ಮರ್‌,ಮುಖ್ಯಸ್ಥ ಡಬ್ಲ್ಯೂ ಥಾಂಪ್ಸನ್ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ ಆದ ಮೇಲೆ ಪ್ರಥಮವಾಗಿ ಸಂದರ್ಶನ ನೀಡಿ ತಮ್ಮ ಭವಿಷ್ಯದ ಆಲೋಚನೆಗಳನ್ನು ತಿಳಿಸಿದ್ದಾರೆ. ಮುಂದಿನ ಪುಟದಲ್ಲಿ ಮೈಕ್ರೋಸಾಫ್ಟ್‌ ನಾಯಕರು ಮಾತನಾಡಿದ ವಿಡಿಯೋ ಜೊತೆಗೆ ಸತ್ಯ ನಾದೆಳ್ಲ ಅವರ ಕಿರು ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ ಆದ ಮೇಲೆ ನೀಡಿದ ಪ್ರಥಮ ಸಂದರ್ಶನ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಬಗ್ಗೆ ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಬಿಲ್‌ಗೇಟ್ಸ್‌ ನುಡಿಗಳು

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಬಗ್ಗೆ ಮೈಕ್ರೋಸಾಫ್ಟ್‌ನ ಹಾಲಿ ಸಿಇಒ ಸ್ವೀವ್‌ ಬಲ್ಮರ್‌ ಮಾತು

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಬಗ್ಗೆ ಮೈಕ್ರೋಸಾಫ್ಟ್‌ ಅಧ್ಯಕ್ಷ ಗೆ ಜಾನ್‌ ಥಾಂಪ್ಸನ್ ಮಾತು

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಉದ್ಯೋಗಿಯಾಗಿ ನೇಮಕವಾಗಿದ್ದು 1992ರಲ್ಲಿ. ಕಳೆದ 22 ವರ್ಷದಲ್ಲಿ ನಾದೆಳ್ಲ ಮೈಕ್ರೋಸಾಫ್ಟ್‌‌ನ ವಿವಿಧ ಉತ್ಪನ್ನಗಳ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿ ಮೈಕ್ರೋಸಾಫ್ಟ್‌ಗೆ ಲಾಭ ತಂದುಕೊಟ್ಟಿದ್ದಾರೆ.ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಪ್ರತಿಭೆ ಹೆಚ್ಚು ಬೆಳಕಿಗೆ ಬಂದ್ದು ಬಿಂಗ್‌ ಸರ್ಚ್‌‌ ಎಂಜಿನ್‌ನಿಂದ. ಬಿಂಗ್‌ ಸರ್ಚ್‌ ಎಂಜಿನ್‌‌ ಸಂಪೂರ್ಣ‌‌ ಹೊಣೆಗಾರಿಗೆ ನಾದೆಳ್ಲ ಮೇಲಿತ್ತು.2009 ರಲ್ಲಿ ಆರಂಭಗೊಂಡ ಬಿಂಗ್‌ ಸರ್ಚ್‌,1997 ರಿಂದಲೇ ಕಾರ್ಯ‌ನಿರ್ವಹಿಸುತ್ತಿರುವ ಗೂಗಲ್‌ ಸರ್ಚ್‌ ಮುಂದೆ ಏನು ಇಲ್ಲ ಎಂದು ಐಟಿ ತಂತ್ರಜ್ಞರು ವಿಶ್ಲೇಷಿಸಿದ್ದರು.ಆದರೆ ಬಿಂಗ್‌ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಹಿಸಿದ್ದ ನಾಡೆಲ್ಲ ಅದರ ಅಭಿವೃದ್ಧಿ ಶ್ರಮಿಸಿದ್ದರು. ವೆಬ್‌ಸೈಟ್‌ಗಳ ಟ್ರಾಫಿಕ್‌ ಅಧ್ಯಯನ ಮಾಡಿ Rank ನೀಡುವ alexa ತಾಣದ ಪ್ರಕಾರ ಬಿಂಗ್‌ ಪ್ರಸ್ತುತ 23ನೇ ಸ್ಥಾನದಲ್ಲಿದೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮೈಕ್ರೋಸಾಫ್ಟ್‌‌ನ ಡೇಟಾಬೇಸ್‌,ವಿಂಡೋಸ್‌ ಸರ್ವರ್‌, ಡೆವಲಪರ್‍ಸ್‌ ಟೂಲ್ಸ್‌,ಕ್ಲೌಡ್‌‌ ವಿಭಾಗದಲ್ಲಿ ವಿವಿಧ ಹೊಣೆಗಾರಿಕೆಯನ್ನು ಸತ್ಯ ನಾದೆಳ್ಲ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮೈಕ್ರೋಸಾಫ್ಟ್‌ನ ಆಫೀಸ್‌‌ 365 (ಚಂದಾದಾರಿಕೆ ಆಧಾರಿತ ಆನ್‌ಲೈನ್‌ ಆಫೀಸ್‌ ಸೇವೆಯ ಸೂಟ್) ಉತ್ಪನ್ನವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನ ಎಂದು ಮೈಕ್ರೋಸಾಫ್ಟ್‌ ಹೇಳಿಕೊಂಡಿದೆ.ಈ ಆಫೀಸ್‌ 365 ಈ ರೀತಿ ಜನಪ್ರಿಯಗೊಳ್ಳಲು ಕಾರಣಕರ್ತರಾದ ವ್ಯಕ್ತಿ ಸತ್ಯ ನಾದೆಳ್ಲ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮೈಕ್ರೋಸಾಫ್ಟ್‌ನ ಕ್ಲೌಡ್‌ ವಿಭಾಗದ ಉಪಾಧ್ಯಕ್ಷರಾಗಿ ಸತ್ಯ ನಾದೆಳ್ಲ ನೇಮಕವಾಗಿದ್ದು 2011ರಲ್ಲಿ. 2011ರಲ್ಲಿ ಕ್ಲೌಡ್ ವಿಭಾಗದಿಂದ ಮೈಕ್ರೋಸಾಫ್ಟ್‌ 16.6 ದಶಲಕ್ಷ ಡಾಲರ್‌ ಆದಾಯಗಳಿಸಿದ್ದರೆ, ಕಳೆದ ವರ್ಷ‌ 20.3 ದಶಲಕ್ಷ ಡಾಲರ್‌ ಆದಾಯವನ್ನು ಮೈಕ್ರೋಸಾಫ್ಟ್‌ಗಳಿಸಿದೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ನಾದೆಳ್ಲ ಕ್ಲೌಡ್‌ ,ಬಿಂಗ್‌ ವಿಭಾಗವಲ್ಲದೇ ಆನ್‌ಲೈನ್‌ ದೂರವಾಣಿ ಸೇವೆ ನೀಡುವ ಸ್ಕೈಪ್, ಆನ್‌ಲೈನ್‌ ಮಲ್ಟಿಪ್ಲೇಯರ್‌ ಗೇಮಿಂಗ್‌ ಮತ್ತು ಡಿಜಿಟಲ್‌ ಮೀಡಿಯಾ ಸೇವೆಯಾದ ಎಕ್ಸ್‌ಬಾಕ್ಸ್‌ ಲೈವ್‌ ಬಗ್ಗೆ ಚೆನ್ನಾಗಿ ತಿಳಿದಿದ್ದು, ಈ ಜವಾಬ್ದಾರಿ ನೀಡಿದರೂ ಸತ್ಯ ನಾದೆಳ್ಲ ಚೆನ್ನಾಗಿ ನಿರ್ವ‌ಹಿಸಬಲ್ಲರು.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಅಷ್ಟೇ ಅಲ್ಲದೇ ಬಿಲ್‌ ಗೇಟ್ಸ್‌ ಮತ್ತು ಸ್ವೀವ್‌ ಬಲ್ಮರ್‌ ವ್ಯಕ್ತಿತ್ವಗಿಂತ ಭಿನ್ನವಾಗಿದ್ದು ಮೈಕ್ರೋಸಾಫ್ಟ್‌‌ ಹೊಸ ಜೀವ ನೀಡುವ ಸಾಮರ್ಥ್ಯ ಸತ್ಯ ನಾದೆಳ್ಲ ಹೊಂದಿರುವುದರಿಂದ, ಜೊತೆಗೆ ಇದುವರೆಗೆ ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವ‌ಹಿಸಿದ್ದರಿಂದ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಸಿಇಒ ಆಗಿ ಸತ್ಯ ಅವರನ್ನು ನೇಮಿಸಿದೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

1967ರಲ್ಲಿ ಹೈದರಾಬಾದ್‌‌ನಲ್ಲಿ ಜನಿಸಿದ ಸತ್ಯ ನಾದೆಳ್ಲ ಮಣಿಪಾಲದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌‌ನಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ.ನಂತರ ಹೆಚ್ಚಿನ ಆಧ್ಯಯನಕ್ಕೆ ಅಮೆರಿಕ್ಕೆ ತೆರಳಿದ ಸತ್ಯ ನಾದೆಳ್ಲ ಕಂಪ್ಯೂಟರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು Wisconsin-Milwaukee ವಿವಿ ಮತ್ತು ಚಿಕಾಗೋ ವಿವಿಯಿಂದ ಎಂಬಿಎ ಪದವಿಯನ್ನು ಗಳಿಸಿದ್ದಾರೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ತಮ್ಮ ಆರಂಭಿಕ ಉದ್ಯೋಗವನ್ನು ಪ್ರಸ್ತುತ ಒರೆಕಲ್‌ ಮಾಲೀಕತ್ವದ
ಸನ್‌ ಮೈಕ್ರೋಸಾಫ್ಟ್‌ನಲ್ಲಿ ಆರಂಭಿಸಿ ಮೈಕ್ರೋಸಾಫ್ಟ್‌ನ್ನು1992ರಲ್ಲಿ ಸೇರಿಕೊಂಡರು.ಬಳಿಕ ವಿವಿಧ ಹುದ್ದೆ ಜವಾಬ್ದಾರಿಯನ್ನು ನಿಭಾಯಿಸಿ ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

 ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಮಣಿಪಾಲದಲ್ಲಿ ಕಲಿತ ಸತ್ಯ ನಾದೆಳ್ಲ ಮೈಕ್ರೋಸಾಫ್ಟ್‌ ಸಿಇಒ

ಸತ್ಯ ನಾದೆಳ್ಲ ಈ ರೀತಿ ಬೆಳೆಯಲು ಅವರ ಕುಟುಂಬವು ಕಾರಣ ಎಂದು ಹೇಳಬಹುದು.ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ನಾದೆಳ್ಲ ಅವರ ತಂದೆ ಕೇಂದ್ರ ಸರ್ಕಾರದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಮನಮೋಹನ್‌ ಸಿಂಗ್‌ ಮುಖ್ಯಸ್ಥರಾಗಿರುವ ಯೋಜನಾ ಆಯೋಗದ ಸದಸ್ಯರಾಗಿ 2004-2009ರವರೆಗೆ ಕೆಲಸಮಾಡಿದ್ದಾರೆ.ತನ್ನ ಬಾಲ್ಯದ ಶಾಲಾ ಗೆಳತಿಯನ್ನು ನಾದೆಳ್ಲ ವಿವಾಹವಾಗಿದ್ದು ಮೂರು ಮಕ್ಕಳ ತಂದೆಯಾಗಿದ್ದಾರೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+