ಭಾರತೀಯರಿಗೆ ಒಲಿಯುತ್ತಾ ಮೈಕ್ರೋಸಾಫ್ಟ್‌ ಸಿಇಒ ಪಟ್ಟ?

By Ashwath
|

ಸಿಇಒ ಸ್ವೀವ್‌ ಬಾಲ್ಮರ್‌‌ ನಿವೃತ್ತಿ ಹಿನ್ನೆಲೆಯಲ್ಲಿ,ಈ ಹುದ್ದೆಗೆ ಮೈಕ್ರೋಸಾಫ್ಟ್‌ ಈಗ ಶೋಧ ಆರಂಭಿಸಿದ್ದು, ಇಬ್ಬರು ಭಾರತೀಯ ವ್ಯಕ್ತಿಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.ಮಣಿಪಾಲದಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದ ಸತ್ಯ ನಾಡೆಲ್ಲಾ, ಮತ್ತು ಗೂಗಲ್‌ ಪ್ಲಸ್‌ನ ಯಶಸ್ಸಿನ ಹಿಂದಿರುವ ವ್ಯಕ್ತಿ, ವಿಕ್‌ ಗುಂಡತ್ರಾ ಹೆಸರುಗಳು ಟಾಪ್‌ ಪಟ್ಟಿಯಲ್ಲಿದೆ.

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ 2000ರ ಜನವರಿಯಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಲ್‌ ಗೇಟ್ಸ್‌ ನಂತರ ಮೈಕ್ರೋಸಾಫ್ಟ್‌ ಕಾರ್ಯ‌ನಿರ್ವ‌ಹಣಾಧಿಕಾರಿ ಪಟ್ಟ ಸ್ಟೀವ್‌ ಬಾಲ್ಮರ್‌ಗೆ ಲಭಿಸಿತ್ತು. ಬಿಲ್‌ ಗೇಟ್ಸ್‌ ಹೊರನಡೆದಾಗ ಮೈಕ್ರೋಸಾಫ್ಟ್‌ ಕಂಪನಿ 38 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ ಕಳೆದ 13 ವರ್ಷಗಳಲ್ಲಿ ಕಂಪನಿಯ ಮೌಲ್ಯ 17 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಕಂಪೆನಿಯ 38 ವರ್ಷದ ಇತಿಹಾಸದಲ್ಲಿ ಮೈಕ್ರೋಸಾಫ್ಟ್‌ನ್ನು ಇದುವರೆಗೆ ಎರಡು ಸಿಇಒಗಳು ಮುನ್ನಡೆಸಿದ್ದರು. ಈಗ ಎರಡನೇ ಸಿಇಒ ಸ್ಟೀವ್‌ ಬಾಲ್ಮರ್‌ ಕಳೆದ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದರು. ಈಗ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿ ಮೂರನೇ ಸಿಇಒ ನೇಮಕಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಪಟ್ಟವನ್ನು ಏರುವ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಐವರು ಮೈಕ್ರೋಸಾಫ್ಟ್‌ ಉದ್ಯೋಗಿಗಳು ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಗಳ ಮಾಹಿತಿ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಟಾಪ್‌ ಐಟಿ ಕಂಪೆನಿಗಳ ಹಿಂದಿರುವ ಭಾರತೀಯರು

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


14 ವರ್ಷ‌ಗಳ ಕಾಲ ಸಿಸ್ಕೋದಲ್ಲಿ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿದ್ದ ಟೋನಿ ಬೇಟ್ಸ್‌ ಪ್ರಸ್ತುತ ಮೈಕ್ರೋಸಾಫ್ಟ್ ಮೆಸೇಂಜಿಗ್‌ ಮತ್ತು ವೀಡಿಯೋ ಕರೆ ಮಾಡಬಹುದಾದ ಸ್ಕೈಪ್‌ ಅಧ್ಯಕ್ಷರಾಗಿ ಕಾರ್ಯನಿರ್ವ‌ಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ಮೈಕ್ರೋಸಾಫ್ಟ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕೆಲಸ ನಿರ್ವ‌ಹಿಸುವುದರ ಜೊತಗೆ,ವಿಂಡೋಸ್‌‌ ಫೋನ್‌ ಆಪರೇಟಿಂಗ್‌ ಸಿಸ್ಟಂ,ಎಕ್ಸ್‌ಬಾಕ್ಸ್‌‌ ಗೇಮ್‌ ಕನ್ಸೋಲ್‌‌ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ವಾಲ್‌ಮಾರ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದ, ಕೆವಿನ್‌ ಟರ್ನರ್‌ ಕಳೆದ ಎಂಟು ವರ್ಷ‌ಗಳಿಂದ ಮೈಕ್ರೋಸಾಫ್ಟ್‌ನ ಮುಖ್ಯ ಆಪರೇಟಿಂಗ್‌ ಅಧಿಕಾರಿಯಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ಮೈಕ್ರೋಸಾಫ್ಟ್‌ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌‌, ವಿಂಡೋಸ್‌ ಮಾರ್ಕೆ‌ಟಿಂಗ್‌,ಮತ್ತು ಔಟ್‌ಲುಕ್‌.ಕಾಂನ ಅಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ಹೈದರಾಬಾದ್‌‌ನವರಾದ ಸತ್ಯ, ಮಣಿಪಾಲ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡಿದ್ದಾರೆ. ಸನ್‌ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಅವರು 1992ರಲ್ಲಿ ಮೈಕ್ರೋಸಾಫ್ಟ್ ಸೇರಿಕೊಂಡಿದ್ದರು. ಪ್ರಸ್ತುತ ಮೈಕ್ರೋಸಾಫ್ಟ್‌‌ ಕ್ಲೌಡ್‌ ಮತ್ತು ಎಂಟರ್‌ಪ್ರೈಸ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ಮುಂಬೈ ಐಐಟಿಯ ಪದವಿಧರ ವಿಕ್‌ ಗುಂಡತ್ರಾ ಗೂಗಲ್‌ ಸೇರುವ ಮೊದಲು ಮೈಕ್ರೋಸಾಫ್ಟ್‌ ಜನರಲ್‌ ಮ್ಯಾನೇಜರ್‌ ಆಗಿ ಕಾರ್ಯ‌ನಿರ್ವ‌ಹಿಸಿದ್ದರು. 2007ರಲ್ಲಿ ಗೂಗಲ್‌ ಸೇರಿಕೊಂಡಿದ್ದ ಗುಂಡತ್ರಾ ಸದ್ಯ ಗೂಗಲ್‌ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ‌ನಿರ್ವ‌ಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?

ಮೈಕ್ರೋಸಾಫ್ಟ್‌ ಸಿಇಒ ಪಟ್ಟ ಯಾರಿಗೆ ಒಲಿಯುತ್ತದೆ?


ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಸದ್ಯ ಅಧ್ಯಕ್ಷರಾಗಿರುವ ಬಿಲ್‌ ಗೇಟ್ಸ್‌ 2000ರ ಜನವರಿಯಲ್ಲಿ ಬಿಲ್‌ ಗೇಟ್ಸ್‌ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದರು. ನಂತರ ಸಮಾಜಿಕ ಸೇವೆಯಲ್ಲಿ ಬಿಲ್‌ ಗೇಟ್ಸ್‌‌ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಈಗ ಮೈಕ್ರೋಸಾಫ್ಟ್‌‌ ಅನೇಕ ಮಂದಿ ಉದ್ಯೋಗಿಗಳು ಬಿಲ್‌ ಗೇಟ್ಸ್‌ ಪುನಃ ಅಧಿಕಾರವನ್ನೇರಲಿ ಎನ್ನುವ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಬಿಲ್‌ ಗೇಟ್ಸ್‌ ಪುನಃ ಸಿಇಒ ಪಟ್ಟವನ್ನು ಏರಿದರೂ ಆಶ್ಚರ್ಯ‌ವೆನಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X