ಭಾರತೀಯರೇ ಗುಡ್‌ ಬಾಯ್‌ ಹೇಳಿ GPSಗೆ: ಹಾಯ್‌ ಹೇಳಿ IRNSSಗೆ

By Suneel
|

ಭಾರತೀಯರು ಈಗ ಅಮೇರಿಕದ ಗ್ಲೋಬಲ್‌ ಪೊಸಿಸನಿಂಗ್ ಸಿಸ್ಟಮ್‌ (ಜಿಪಿಎಸ್‌)ಗೆ ಬಾಯ್‌ ಹೇಳುವ ಸಂದರ್ಭ. ಹೌದು ನಾವಿಗೇಷನ್‌ ಸಿಸ್ಟಮ್‌ ಸೇವೆ ಒದಗಿಸುತ್ತಿದ್ದ ಅಮೇರಿಕದ ಜಿಪಿಎಸ್ ಬಳಕೆಯನ್ನು ಕೈಬಿಡುತ್ತಿದೆ ಭಾರತ. ಕಾರಣ ಇನ್ನು ಮುಂದೆ ಭಾರತ ಸ್ಥಳೀಯ ನಾವಿಗೇಷನ್‌ ಸಿಸ್ಟಮ್‌ ಹೊಂದಲಿದೆ. ಅದು ಯಾವುದು ಎಂದು ಈ ಲೇಖನ ಓದಿ ತಿಳಿಯಿರಿ.

ಓದಿರಿ: ಹೊಸ ವರ್ಷಕ್ಕೆ ಕಾಲಿಡುತ್ತಿವೆ ಈ ಆಶ್ಚರ್ಯಕರ ಟೆಕ್ನಾಲಜಿಗಳು

IRNSS- ಇಂಡಿಯನ್‌ ರೀಜನಲ್‌ ನಾವಿಗೇಷನ್‌ ಸೆಟಲೈಟ್‌ ಸಿಸ್ಟಮ್‌

IRNSS- ಇಂಡಿಯನ್‌ ರೀಜನಲ್‌ ನಾವಿಗೇಷನ್‌ ಸೆಟಲೈಟ್‌ ಸಿಸ್ಟಮ್‌

ಭಾರತ ಇಷ್ಟು ದಿನ ಟೈಮ್, ಸ್ಥಳಗಳ ನಾವಿಗೇಷನ್‌ ಮಾಹಿತಿಗಾಗಿ ಅಮೇರಿಕದ ಸ್ಪೇಸ್‌ ಆಧಾರದ ಜಿಪಿಎಸ್‌ ಬಳಸುವ ಬದಲು, ಇನ್ನುಮುಂದೆ ಭಾರತದ ಸ್ಥಳೀಯ ನಾವಿಗೇಷನ್‌ ಉಪಗ್ರಹದ ವ್ಯವಸ್ಥೆಯನ್ನು ಪಡೆಯಲಿದೆ.

ಬೆಂಗಳೂರಿನಲ್ಲಿ ಇಸ್ರೊ ಸಭೆ

ಬೆಂಗಳೂರಿನಲ್ಲಿ ಇಸ್ರೊ ಸಭೆ

ಇಸ್ರೊ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಇದರಲ್ಲಿ ಲೊಕೇಷನ್‌ ಮತ್ತು ನಾವಿಗೇಷನ್‌ಡಿವೈಸ್‌ ಅಭಿವೃದ್ದಿ ಪಡಿಸುವವರು, ಮೊಬೈಲ್‌ ಫೋನ್ ಅಭಿವೃದ್ದಿ ಪಡಿಸುವವರು, ಗ್ಲೋಬಲ್‌ ಮಾಹಿತಿ ವ್ಯವಸ್ಥೆ ತಂತ್ರಜ್ಞಾನ ಅಭಿವೃದ್ದಿಪಡಿಸುವವರು ಸಭೆಯಲ್ಲಿ ಸೇರಲಿದ್ದಾರೆ.

ಇಸ್ರೊ ಸಭೆಯ ಉದ್ದೇಶ

ಇಸ್ರೊ ಸಭೆಯ ಉದ್ದೇಶ

ಬೆಂಗಳೂರಿನಲ್ಲಿ ಕೈಗೊಳ್ಳುವ ಈ ಸಭೆಯಲ್ಲಿ ಅಮೇರಿಕದ ಸ್ಪೇಸ್ ಆಧಾರದ GPS ಬದಲಾಗಿ ಭಾರತದ IRNSS ಟೆಕ್ನಾಲಜಿ ಅನುಕೂಲಗಳ ಬಗ್ಗೆ ತಿಳಿಸಲಿದೆ.

 ಹಿರಿಯ ವಿಜ್ಞಾನಿಗಳು

ಹಿರಿಯ ವಿಜ್ಞಾನಿಗಳು

ಸಭೆಯಲ್ಲಿ ಅಮೆದಾಬಾದ್‌ ಸ್ಪೇಸ್‌ ಅಪ್ಲಿಕೇಶನ್‌ ಕೇಂದ್ರದ ಹಿರಿಯ ವಿಜ್ಞಾನಿಗಳು ಸಹ ಭಾಗವಹಿಸಲಿದ್ದಾರೆ.

 IRNSS

IRNSS

IRNSS ಅಮೇರಿಕದ GPS ಗಿಂತಲೂ ಸಹ ನಿಖರ ವಾಗಿ ಕಾರ್ಯನಿರ್ವಹಿಸಲಿದೆ.

 IRNSS ಸಿಗ್ನಲ್‌

IRNSS ಸಿಗ್ನಲ್‌

ಡಿವೈಸ್‌ಗಳು ಅಮೇರಿಕದ ಜಿಪಿಎಸ್ ಗಿಂತ ಭಿನ್ನವಾಗಿ, IRNSS ನಿಂದ ಎಸ್‌-ಬ್ಯಾಂಡ್‌ ಸಿಗ್ನಲ್‌ಗಳನ್ನು ಸ್ವೀಕರಿಸಲಿವೆ. ಆದ್ದರಿಂದ ಇಸ್ರೊ ಡಿವೈಸ್‌ಗಳಿಗೆ ಹೊಸ ಹಾರ್ಡ್‌ವೇರ್ ಶಿಫಾರಸ್ಸು ಮಾಡಿದೆ.

 7 ಉಪಗ್ರಹಗಳು 2016 ಮಾರ್ಚ್‌ನಲ್ಲಿ ಕಕ್ಷೆಗೆ

7 ಉಪಗ್ರಹಗಳು 2016 ಮಾರ್ಚ್‌ನಲ್ಲಿ ಕಕ್ಷೆಗೆ

ಭಾರತದ 7 ಸ್ಥಳೀಯ ನಾವಿಗೇಷನ್‌ ಉಪಗ್ರಹ ವ್ಯವಸ್ಥೆಗಳು 2016ರ ಮಾರ್ಚ್‌ಗೆ ಕಕ್ಷೆಗೆ ತಲುಪಲಿವೆ ಎಂದು ಇಸ್ರೊ ಹೇಳಿದೆ.

ಸಿಗ್ನಲ್‌ಗಳನ್ನು ಇತರ ದೇಶಗಳಿಗೂ ನೀಡುವ ಉದ್ದೇಶ

ಸಿಗ್ನಲ್‌ಗಳನ್ನು ಇತರ ದೇಶಗಳಿಗೂ ನೀಡುವ ಉದ್ದೇಶ

"ನಾವಿಗೇಷನ್‌ ವ್ಯವಸ್ಥೆಯ ಸಿಗ್ನಲ್‌ಗಳನ್ನು ಇತರ ದೇಶಗಳಿಗೆ ಹಾಗೂ ಇಡಿ ಪ್ರಪಂಚಕ್ಕೆ ನೀಡುವ ಗುರಿಯನ್ನು ಹೊಂದಿರುವುದಾಗಿ" ಇಸ್ರೊ ಅಧ್ಯಕ್ಷರಾದ ಕಿರಣ್‌ ಕುಮಾರ್ ಹೇಳಿದ್ದಾರೆ.

Best Mobiles in India

English summary
It's time we move away from the American Global Positioning System (GPS) and make way for our own desi navigation system — the Indian Regional Navigation Satellite System or IRNSS on our mobile phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X