SBI ಗ್ರಾಹಕರು ಇನ್ಮುಂದೆ ಹಣ ಡ್ರಾ ಮಾಡಲು ಎಟಿಎಂ ಕಾರ್ಡ್ ಬಳಸುವ ಅಗತ್ಯವೇ ಇಲ್ಲ!
ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ ಹಲವಾರು ಗ್ರಾಹಕರನ್ನು ಹೊಂದಿದ್ದು, ಬಹುಪಾಲು ಎಲ್ಲಾ ವ್ಯವಹಾರವನ್ನೂ ಡಿಜಿಟಲೀಕರಣ ಮಾಡುತ್ತಾ ಬರುತ್ತಿದೆ. ಅದರಂತೆ ಈಗ ಎಸ್‌ಬಿಐ ತನ್ನ ಅಧಿಕೃತ ಆಪ್ ಅನ್ನು ನವೀಕರಣ ಮಾಡಿದ್ದು, ಈ ಮೂಲಕ ಎಟಿಎಂ ಕಾರ್ಡ್ ಅಂದರೆ ಡೆಬಿಟ್ ಕಾರ್ಡ್ ಇಲ್ಲದೆಯೂ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಹೌದು, ಈ ಸೌಲಭ್ಯ ಖಂಡಿತಾ ಅದೆಷ್ಟೋ ಗ್ರಾಹಕರಿಗೆ ಉಪಯೋಗ ಆಗಲಿದೆ. ಅದರಲ್ಲೂ ಬ್ಯಾಂಕಿಂಗ್ ಸೇವೆಗಳೆಲ್ಲಾ ಡಿಜಿಟಲೀಕರಣ ಆಗುತ್ತಿರುವ ಬೆನ್ನಲ್ಲೇ ಎಸ್‌ಬಿಐ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಈ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಹಾಗಿದ್ರೆ, ಎಟಿಎಂ ಇಲ್ಲದೆ ಹಣ ಡ್ರಾ ಮಾಡಿಕೊಳ್ಳುವುದು ಹೇಗೆ, ಆಪ್‌ನಲ್ಲಿ ಕಂಡುಬಂದಿರುವ ಹೊಸ ಸೌಲಭ್ಯಗಳೇನು ಎಂದು ತಿಳಿಯೋಣ ಬನ್ನಿ.

SBI YONO ಆಪ್ ನವೀಕರಣ: ಎಲ್ಲಾ ಬ್ಯಾಂಕ್‌ಗಳೂ ಸಹ ಈಗ ಆಪ್‌ಗಳ ಸೌಲಭ್ಯ ಪಡೆದುಕೊಂಡಿದ್ದು, ಇವುಗಳ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಸರಳ ಮಾಡಿಕೊಂಡಿವೆ. ಅದರಲ್ಲೂ ಯುಪಿಐ ಪಾವತಿಗಳಂತೂ ದಾಖಲೆ ಮೀರಿ ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಇದೀಗ ಎಸ್‌ಬಿಐ ಯೋನೋ ಆಪ್‌ನಲ್ಲಿ ನವೀಕರಣ ಆಗಿದ್ದು, ಡೆಬಿಟ್ ಕಾರ್ಡ್ ಬಳಕೆ ಇಲ್ಲದೆ ಎಟಿಎಂ ಯಂತ್ರದ ಮೂಲಕ ಸುಲಭವಾಗಿ ಹಣ ಹಿಂಪಡೆಯಲು ಹೊಸ ಯುಪಿಐ ಫೀಚರ್ಸ್ ಅನ್ನು ನೀಡುತ್ತಿದೆ.
ಈಗ ಬಳಕೆ ಮಾಡುವ ಯುಪಿಐ ಲಕ್ಷಾಂತರ ಭಾರತೀಯರಿಗೆ ತನ್ನದೇ ಆದ ಸೇವೆ ನೀಡುತ್ತಿದೆ. ಈ ಮೂಲಕ ಜನರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯ ಇಲ್ಲದೆಯೇ ಸರಳ ಟ್ಯಾಪ್‌ನೊಂದಿಗೆ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಅಂದರೆ ತರಕಾರಿ ಮಾರುವವರಿಂದ ಹಿಡಿದು ದೊಡ್ಡ ಮಾಲ್‌ನವರೆಗೆ ಎಲ್ಲರೂ ಈ ಯುಪಿಐ ಪಾವತಿ ಮೇಲೆ ಅವಲಂಬನೆ ಆಗಿದ್ದು, ಸಾಕಷ್ಟು ಸಹಕಾರಿಯಾಗಿದೆ.
ಅದರಂತೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈಗ ಯೋನೋ ಅಪ್ಲಿಕೇಶನ್‌ನಲ್ಲಿ ಕೆಲವು ಯುಪಿಐ ಫೀಚರ್ಸ್‌ಗಳನ್ನು ಆಡ್ ಮಾಡಿದ್ದು, ಈ ಮೂಲಕ ನಗದು ಹಿಂಪಡೆಯಲು ಹೆಚ್ಚು ಅನುಕೂಲಕರ ಮಾರ್ಗವನ್ನು ನೀಡಲಾಗಿದೆ. ಇನ್ನು ಯೋನೋ ಆಪ್‌ನ ನವೀಕರಿಸಿದ ಆವೃತ್ತಿಯು ಇತರ ಬ್ಯಾಂಕ್‌ಗಳ ಗ್ರಾಹಕರಿಗೆ ಯೋನೋ ಪ್ರಯಾಣವನ್ನು ಪ್ರಾರಂಭಿಸಲು ಅಧಿಕಾರ ನೀಡುತ್ತದೆ. ಆ ಮೂಲಕ ನಿರಂತರವಾಗಿ ಬೆಳೆಯುತ್ತಿರುವ ಎಸ್‌ಬಿಐ ಕುಟುಂಬದ ಭಾಗವಾಗಲು ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇನ್ನು ನವೀಕರಿಸಿದ ಯೋನೋ ಆಪ್ ಮೂಲಕ ಬಳಕೆದಾರರು ಸ್ಕ್ಯಾನ್ ಮತ್ತು ಪೇ, ಸಂಪರ್ಕಗಳ ಮೂಲಕ ಪಾವತಿ ಮಾಡುವ ಮತ್ತು ಹಣವನ್ನು ವಿನಂತಿಸುವ ಸೌಲಭ್ಯ ಸಹ ಪಡೆದುಕೊಳ್ಳಬಹುದಾಗಿದ್ದು, ಎಲ್ಲಕ್ಕಿಂತ ಮಿಗಿಲಾಗ ಎಟಿಎಂನಿಂದ ಹಣವನ್ನು ಹಿಂಪಡೆಯಲು ಡೆಬಿಟ್ ಕಾರ್ಡ್ ಅನ್ನು ನೀವು ಇನ್ನು ಮುಂದೆ ಜೊತೆಗೇ ತೆಗೆದುಕೊಂಡು ಹೋಗುವ ಅವಶ್ಯಕತೆಯೇ ಇರುವುದಿಲ್ಲ.
ಏನಿದು ಹೊಸ ಫೀಚರ್ಸ್?: ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ICCW) ಎಂಬ ಫೀಚರ್ಸ್ ಯುಪಿಐ ಪಾವತಿ ಬೆಂಬಲದೊಂದಿಗೆ ಭಾರತದ ಎಲ್ಲಾ ಎಟಿಎಂಗಳ ಲಭ್ಯ ಇರಲಿದೆ. ಈ ಸೇವೆಯನ್ನು ಪಡೆಯಲು ಇಚ್ಚಿಸುವ ಗ್ರಾಹಕರು ನೋಂದಾಯಿತ ಯುಪಿಐ ಐಡಿ ಮತ್ತು ಯೋನೋ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಕೆ ಮಾಡುತ್ತಿರಬೇಕು. ಇದರಿಂದ ಸುಲಭವಾಗಿ ನಿಮ್ಮ ಹಣಕಾಸು ವ್ಯವಹಾರ ನಡೆಸಬಹುದು.
ಇದನ್ನು ಬಳಕೆ ಮಾಡುವುದು ಹೇಗೆ?: ಸಾಮಾನ್ಯವಾಗಿ ಈ ಹಿಂದೆಯೂ ಎಟಿಎಮ್ ಕಾರ್ಡ್ ಬಳಕೆ ಮಾಡದೆಯೂ ಸಹ ಹಣವನ್ನು ಹಿಂಪಡೆಯುವ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಈಗ ಯುಪಿಐ ಆಧಾರಿತವಾಗಿ ಎಟಿಎಮ್‌ನಲ್ಲಿ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದ್ದು. ಇದಕ್ಕಾಗಿ ನೀವು ಮೊದಲು ಎಸ್‌ಬಿಐ ಆಪ್ ಓಪನ್ ಮಾಡಬೇಕಿದೆ. ನಂತರ ಅದರಲ್ಲಿ ನಗದು ಹಿಂತೆಗೆದುಕೊಳ್ಳುವಿಕೆ (Cash Withdrawal) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ಇದಾದ ನಂತರದಲ್ಲಿ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ಎಂಟ್ರಿ ಮಾಡಿ ಮತ್ತು ಆದ್ಯತೆಯ ಎಟಿಎಂ ಅನ್ನು ಆಯ್ಕೆ ಮಾಡಿ. ಇದಾದ ಬಳಿಕ ಕ್ಯೂ ಆರ್ ಕೋಡ್ ಅನ್ನು ರಚಿಸಲಾಗುತ್ತದೆ. ಅಪ್ಲಿಕೇಶನ್‌ನಿಂದ ರಚಿಸಲಾದ ಈ ಕ್ಯೂಆರ್ ಕೋಡ್ ಅನ್ನು ಎಟಿಎಂನಲ್ಲಿ ಸ್ಕ್ಯಾನ್ ಮಾಡಿ. ಒಮ್ಮೆ ನೀವು ಅದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಯುಪಿಐ ಐಡಿ ಮತ್ತು ಪಿನ್ ಅನ್ನು ನಮೂದಿಸಲು ಎಟಿಎಂ ನಿಮ್ಮನ್ನು ಕೇಳುತ್ತದೆ. ನೀವು ಪಿನ್ ನಮೂದಿಸಿದ ನಂತರ ಎಟಿಎಂ ವಿನಂತಿಸಿದ ಹಣವನ್ನು ನಿಮಗೆ ನೀಡುತ್ತದೆ.
ಪಿನ್ ಯಾಕೆ ನಮೂದು ಮಾಡಬೇಕು?: ಇಷ್ಟೆಲ್ಲಾ ಮಾಡಿದ ಮೇಲೂ ಪಿನ್ ಯಾಕೆ ನಮೂದು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಬ್ಯಾಂಕ್ ಅಗತ್ಯವಾಗಿ ಹೆಚ್ಚಿನ ಭದ್ರತಾ ಫೀಚರ್ಸ್ ಅನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿಯೇ ಪಿನ್ ಅನ್ನು ನಮೂದಿಸಲು ಸೂಚಿಸುತ್ತದೆ. ಇಲ್ಲವಾದರೆ ಸ್ಲ್ಯಾಮರ್‌ಗಳಿಗೆ ಮೋಸ ಮಾಡಲು ಅನುವು ಮಾಡಿಕೊಟ್ಟಂತೆ. ಅದರಲ್ಲೂ ಈ ಸೌಲಭ್ಯವು ಶೋಲ್ಡರ್ ಸರ್ಫಿಂಗ್ ಅಥವಾ ಕಾರ್ಡ್ ಕ್ಲೋನಿಂಗ್‌ಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ.


Click it and Unblock the Notifications








